Friday, April 27, 2018



 ಎಲ್ಲಿದ್ದಾನೆ ಗುರು

ಪ್ರಶ್ನೆಬಂದಕಡೆ ತಿರುಗಿದೆ,
ಎಲ್ಲಿದ್ದಾನೆ ಗುರು
ಪ್ರಶ್ನೆ ಮರುಕಳಿಸಿತು

ಉತ್ತರ ಹೇಳುವ ಮೊದಲೇ 
ಮನ ಗುರುವಿನ ಸುತ್ತ 
ತಿರುಗತೊಡಗಿತು.

ಯಾವ ಗುರು
ಯಾರು ಗುರು
ಗುರುತ್ವವಿರುವವನೇ?
ಗುರುವೆಂದು ಹೇಳಿಕೊಳ್ಳುವವನೇ?
ಸ್ಪರ್ಷಮಣಿಯೇ
ಚಿಂತಾಮಣಿಯೇ?
ಕಲ್ಪವೃಕ್ಷ - ಕಾಮಧೇನುವೇ?
ತ್ರಿಮೂರ್ತಿಗಳ ಸಾರಭೂತವೇ?

ಬೆತ್ತಹಿಡಿದವನೇ
ಹಣ್ಣುಹಣ್ಣು ಮುದುಕನೇ?
ದಾರಿತೋರಿದವನೇಅಥವಾ
ತೋರುವೆನೆಂದು ದಿಕ್ಕ ತಪ್ಪಿಸಿದವನೇ?

ಯಾರಿಗೆ ಯಾರು ಗುರು?
ನನಗೆ ನಾನೇ
ನಿನಗೆ ನೀನೇ?
ಮಹಾವೀರಬುದ್ಧನೇ?
ಶಂಕರ – ಮಧ್ವನೇ?
ರಾಮಾನುಜ – ಚಾಣಾಕ್ಯನೇ?
ಬಸವಾದಿ ಪ್ರಮಥರೇಇಲ್ಲಾ
ಪ್ಲೇಟೋ ಅರಿಸ್ಟಾಟರೇ
ಕಾರ್ಲಮಾರ್ಕ್ಸ್ ?
ಲೆನಿನ್-ಸಾವರ್ಕರರೇ?
ಗಾಂಧಿ –ಗೋಳ್ವಲ್ಕರರೇ
ಸಂತ ಮಹಂತರೇ?
ಯಾರುಯಾರು
ಎನ್ನುತ್ತಿರುವಾಗಲೇ 
ಮತ್ತೆ ಕೇಳಿಬಂತು 
ಅದೇ ಪ್ರಶ್ನೆ!
ನಾನೆಂದೆ
ಯಾವ ಗುರು?
ಅವನಂದ 
ಜ್ಯೂಪಿಟರ!
ನೀಲ ಆಗಸದಿ ಕೈಮಾಡಿ
ಹೊಳೆವ 
ಗುರುವನು ತೋರಿ 
ಅಲ್ಲಿ ಎಂದೆ.

No comments:

Post a Comment