Sunday, June 29, 2014

ಜ್ಯೋತಿಷ್ಯವು ಅರ್ಥಪೂರ್ಣವೋ? ಅರ್ಥರಹಿತವೋ?

ಗದ್ಯಭಾಗ -3
ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ
ಡಾ. ಎಚ್.ನರಸಿಂಹಯ್ಯ
ಸಂದರ್ಭಸಹಿತ ವಿವರಿಸಿ.
. ರೈಲು ಹೊರಡಲು ಜ್ಯೋತಿಷ್ಯದ ಅನುಮತಿಯನ್ನು ಯಾರೂ ಕೇಳುವುದಿಲ್ಲ.
ವಾಕ್ಯವನ್ನು ಡಾ. ಎಚ್. ನರಸಿಂಹಯ್ಯನವರ ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ ಎಂಬ ಪ್ರಬಂಧದಿಂದ ಆರಿಸಲಾಗಿದೆ. ಲೇಖಕರು ಓದುಗರಿಗೆ ಹೇಳುತ್ತಾರೆ. ಜ್ಯೋತಿಷ್ಯವು  ರಾಹುಕಾಲ , ಗುಳಿಕಕಾಲ ಮತ್ತು ಯಮಗಂಡಕಾಲ ಎಂಬ ಅಂಶಗಳ ಅಡಿಪಾಯದಮೇಲೆ ನಿಂತಿದೆ. ರಾಹುಕೇತುಗಳೇ ಅಸ್ತಿತ್ವದಲ್ಲಿ ಇಲ್ಲದಿರುವಾಗ ರಾಹುಕಾಲ, ಗುಳಿಕಕಾಲಗಳಿಗೆ ಯಾವುದೇ ಅರ್ಥವೂ ಇಲ್ಲ. ಜ್ಯೋತಿಷ್ಯದ ಪ್ರಕಾರ ರಾಹುಕಾಲದಲ್ಲಿ ಹೊರಟ ವಿಮಾನ , ರೈಲು ಬಸ್ಸುಗಳು ಅಪಘಾತಕ್ಕೆ ಒಳಗಾಗಬೇಕು.ಆದರೆ ಲಂಡನ್ , ಚಿಕಾಗೋ, ನ್ಯೂಯಾರ್ಕ್ ನ ವಿಮಾನ ನಿಲ್ದಾಣಗಳಲ್ಲಿ ಯಾವಾಗಲೂ ವಿಮಾನಗಳು ಬಂದು ಹೋಗುತ್ತಿರುತ್ತವೆ. ರೈಲು ಹೊರಡಲು ಜ್ಯೋತಿಷ್ಯದ ಅನುಮತಿಯನ್ನು ಯಾರೂ ಕೇಳುವುದಿಲ್ಲ.

. ಶೇ.೯೦ ಕ್ಕೆ ಹೆಚ್ಚು ಜನರ ಮದುವೆಗಳು ಯಾವುದೇ ಜಾತಕವಿಲ್ಲದೆ ನಡೆಯುತ್ತವೆ.
ವಾಕ್ಯವನ್ನು ಡಾ. ಎಚ್. ನರಸಿಂಹಯ್ಯನವರ ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ ಎಂಬ ಪ್ರಬಂಧದಿಂದ ಆರಿಸಲಾಗಿದೆ. ಲೇಖಕರು ಓದುಗರಿಗೆ ಹೇಳುತ್ತಾರೆ. ಜಾತಕಗಳು ಅತ್ಯಂತ ಸಮರ್ಪಕವಾಗಿ ಕೂಡಿ ಬಂದಿದ್ದನ್ನು ಗಮನಿಸಿಯೇ ಆದ ಎಷ್ಟೋ ಮದುವೆಗಳು ಯಶಸ್ವಿಯಾಗಿ ಇಲ್ಲದೆ ಇರುವುದಕ್ಕೆ ನಿದರ್ಶನಗಳಿವೆ. ಜ್ಯೋತಿಷಿಗಳ ಲೆಕ್ಕಾಚಾರ ಸುಳ್ಳಾಗುತ್ತಿರುವುದು ಬಹಳಷ್ಟುಬಾರಿ ಕಂಡುಬಂದಿದೆ. ಜಗತ್ತಿನಲ್ಲಿಯೇ ಶೇ೯೦ಕ್ಕೆ ಹೆಚ್ಚು ಮದುವೆಗಳು ಯಾವುದೇ ಜಾತಕವಿಲ್ಲದೆಯೇ ನಡೆಯುತ್ತವೆ. ಅವರ ವಿವಾಹಗಳು ಉಳಿದವರಂತೆ ಸುಖ ಅಥವಾ ದುಃಖದಿಂದ  ಕೂಡಿರುತ್ತದೆ.

. ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ
ವಾಕ್ಯವನ್ನು ಡಾ. ಎಚ್. ನರಸಿಂಹಯ್ಯನವರ ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ ಎಂಬ ಪ್ರಬಂಧದಿಂದ ಆರಿಸಲಾಗಿದೆ. ಲೇಖಕರು ಓದುಗರಿಗೆ ಹೇಳುತ್ತಾರೆ. ಜ್ಯೋತಿಷಿಗಳ ಭವಿಷ್ಯವಾಣಿ ಓದಲು ತಮಾಷೆಯಾಗಿರುತ್ತದೆ. ಅವು ಅಡ್ಡಗೋಡೆಯಮೇಲೆ ದೀಪವಿಟ್ಟಂತೆ ಇದ್ದು, ಒಂದಕ್ಕಿಂತ ಹೆಚ್ಚು ಅರ್ಥವನ್ನು ಕೊಡುತ್ತಿರುತ್ತವೆ. ದಿನಪತ್ರಿಕೆಗಳಲ್ಲಿ ವಾರಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಒಂದೇ ಸ್ವರೂಪವನ್ನು ಕಾಣುತ್ತೇವೆ. ಇಬ್ಬರು ಜ್ಯೋತಿಷಿಗಳ ಅಭಿಪ್ರಾಯದಲ್ಲಿ ಕೂಡ ಹೊಂದಿಕೆಯಾಗುವುದಿಲ್ಲ.

. ಜ್ಯೋತಿಷ್ಯ ಒಂದು ವಾಣಿಜ್ಯವಾಗಿದೆ.
ವಾಕ್ಯವನ್ನು ಡಾ. ಎಚ್. ನರಸಿಂಹಯ್ಯನವರ ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ ಎಂಬ ಪ್ರಬಂಧದಿಂದ ಆರಿಸಲಾಗಿದೆ. ಲೇಖಕರು ಓದುಗರಿಗೆ ಹೇಳುತ್ತಾರೆ. ಜೀವನದಲ್ಲಿ ಎಲ್ಲವೂ ಪೂರ್ವ ನಿರ್ಧಾರಿತ ಎಂಬ ವಾದವನ್ನು ಜ್ಯೋತಿಷ್ಯ ತಿಳಿಸುತ್ತದೆ. ಜನ ನಿರಾಶೆಯಲ್ಲಿದ್ದಾಗ, ಸಮಸ್ಯೆಗಳಲ್ಲಿದ್ದಾಗ, ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಗ್ರಹಗಳ ಅನಿಷ್ಟಗತಿಯಿಂದ ಉಂಟಾಗುವ ಘೋರಪರಿಣಾಮಗಳನ್ನು ಜ್ಯೋತಿಷಿಗಳು ತಿಳಿಸುತ್ತಾ ಅಮಂಗಳ ನಿವಾರಣೆಗೆ ಶಾಂತಿ, ಪೂಜೆಗಳಿಂದ ಪರಿಹಾರಸಿಗುತ್ತದೆ ಎಂಬ ಸಾಂತ್ವಾನ ನೀಡುತ್ತಾ ಅದಕ್ಕಾಗಿ ಖರ್ಚಾಗುವ ಹಣದ ಬಗ್ಗೆಯೂ ಹೇಳುತ್ತಾರೆ. ಹೀಗೆ ಮುಗ್ದರನ್ನು ಭಯದಲ್ಲಿರಿಸಿ ಸುಲಿಯುವ ಜ್ಯೋತಿಷ್ಯ ವಾಣಿಜ್ಯವಾಗಿದೆ.

. ಸಮಾಜದ ಸುಧಾರಣೆ ಶಿಕ್ಷಣದ ಒಂದು ಉದ್ದೇಶ
ವಾಕ್ಯವನ್ನು ಡಾ. ಎಚ್. ನರಸಿಂಹಯ್ಯನವರ ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ ಎಂಬ ಪ್ರಬಂಧದಿಂದ ಆರಿಸಲಾಗಿದೆ. ಲೇಖಕರು ಓದುಗರಿಗೆ ಹೇಳುತ್ತಾರೆ. ಅಧ್ಯಾಪಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದುದು ಯಾವುದೇ ಶಿಕ್ಷಣ ಕ್ರಮದ ಮುಖ್ಯ ಉದ್ದೇಶವಾಗಬೇಕು. ಪರಿಶೀಲಿಸದೇ, ಪ್ರಶ್ನಿಸದೇ ಯಾವುದನ್ನೂ ಒಪ್ಪಿಕೊಳ್ಳಬಾರದು. ಭಗವದ್ಗೀತೆ, ಕುರಾನ್ , ಬೈಬಲ್ ಯಾವುದೇ ಆಗಿರಲಿ ವೈಜ್ಞಾನಿಕವಾದ ಆಲೋಚನೆಗಳಿಗೆ ತೃಪ್ತಿಯನ್ನು ಉಂಟುಮಾಡಬೇಕು. ಶಿಕ್ಷಣದ ನಿಜವಾದ ಉದ್ದೇಶವೇ ಸಮಾಜಸುಧಾರಣೆಯಾಗಿದೆ. ಆದರೆ ನಮ್ಮ ಶಿಕ್ಷಣ ಅವಿದ್ಯಾವಂತ ಮೂಢನಂಬಿಕೆ ಉಳ್ಳವನನ್ನು ವಿದ್ಯಾವಂತ ಮೂಢನಂಬಿಕೆಯವನನ್ನಾಗಿ ಮಾಡುವುದೇ ಆಗಿದೆ


ಒಂದು   ವಾಕ್ಯದಲ್ಲಿ ಉತ್ತರಿಸಿ.
. ಜ್ಯೋತಿಷ್ಯದ ಉಗಮವು ಎಲ್ಲಿ ಕಂಡು ಬರುತ್ತದೆ?
ಜ್ಯೋತಿಷ್ಯದ ಉಗಮವು ಖಗೋಳಶಾಸ್ತ್ರದಲ್ಲಿ ಕಂಡುಬರುತ್ತದೆ.

. ಯಾವುದು ಹಾಸ್ಯಾಸ್ಪದ ಸಂಗತಿ?
ಮನುಷ್ಯನ ಎಲ್ಲ ಗುಣಗಳನ್ನು ಗ್ರಹಗಳಿಗೆ ಆರೋಪಿಸುವುದು ಹಾಸ್ಯಾಸ್ಪದ.

. ಜಾತಕಗಳನ್ನು ಹೇಗೆ ಬರೆಯಲಾಗುತ್ತದೆ?
ವ್ಯಕ್ತಿಹುಟ್ಟಿದಾಗ ಕಂಡುಬರುವ ಗ್ರಹಗತಿಗಳ ಆಧಾರದಿಂದ ಜಾತಕಗಳನ್ನು ಬರೆಯಲಾಗುತ್ತದೆ.

. ಜ್ಯೋತಿಷಿಗಳ ಭವಿಷ್ಯವಾಣಿ ಓದಲು ಹೇಗಿರುತ್ತದೆ?
ಜ್ಯೋತಿಷಿಗಳ ಭವಿಷ್ಯವಾಣಿ ಓದಲು ತಮಾಷೆಯಾಗಿರುತ್ತದೆ. ಅಲ್ಲದೆ ಅಡ್ಡಗೋಡೆಮೇಲೆ ದೀಪವಿಟ್ಟಂತೆ ಇದ್ದು ಒಂದಕ್ಕಿಂತ ಹೆಚ್ಚಿನ ಅರ್ಥ ಕೊಡುತ್ತಿರುತ್ತವೆ.

. ಜನ ನಿರಾಶೆ, ಸಮಸ್ಯೆಗಳಲ್ಲಿದ್ದಾಗ ಯಾರ ಮೊರೆ ಹೋಗುತ್ತಾರೆ?
ಜನ ನಿರಾಶೆ, ಸಮಸ್ಯೆಗಳಲ್ಲಿದ್ದಾಗ ಜ್ಯೋತಿಷಿಗಳ ಮೊರೆ ಹೋಗುತ್ತಾರೆ

. ಜ್ಯೋತಿಷ್ಯ ಮುಗ್ಧ ಜನರನ್ನು ಹೇಗೆ ಶೋಷಿಸುತ್ತದೆ?
ಜ್ಯೋತಿಷ್ಯ ಮುಗ್ಧ ಜನರನ್ನು ಭಯದಲ್ಲಿರಿಸಿ ಅವರನ್ನು ಶೋಷಿಸುತ್ತದೆ

. ಮೂಢನಂಬಿಕೆಗಳಿಂದ ಉಂಟಾಗುವ ಅಪಾಯ ಎಂಥಹುದು?
ಮೂಢನಂಬಿಕೆಗಳಿಂದ ಸ್ವತಂತ್ರ ಆಲೋಚನೆ ಮತ್ತು ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟಾಗುತ್ತದೆ.

. ವಾಯು, ಜಲ ಮಾಲಿನ್ಯಕ್ಕಿಂತ ಯಾವುದು ಹೆಚ್ಚು ಅಪಾಯಕಾರಿಯಾಗಿರುತ್ತದೆ?
ಮೂಢನಂಬಿಕೆಗಳಿಂದ ಉಂಟಾಗುವ ಪರಿಸರಮಾಲಿನ್ಯ ವಾಯು, ಜಲ ಮಾಲಿನ್ಯಕ್ಕಿಂತ ಹೆಚ್ಚು ಅಪಾಯಕಾರಿಯಾಗಿರುತ್ತದೆ.
ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
. ವಿಜ್ಞಾನದ ಸಿದ್ಧಾಂತಗಳು ಹೇಗೆ ರೂಪುಗೊಳ್ಳುತ್ತವೆ. ?
ವಿಜ್ಞಾನದ ಎಲ್ಲ ಪ್ರಯೋಗಗಳು ತಾತ್ಕಾಲಿಕವಾಗಿದ್ದು , ಅಧಿಕಾರ ಮುಕ್ತವಾಗಿ ಕುರುಡಾಗಿ ಅದು ಮಾತನಾಡುವುದಿಲ್ಲ. ವಿಜ್ಞಾನದ ಎಲ್ಲ ಸಿದ್ಧಾಂತಗಳು , ನಿಯಮಗಳು ಹೊಸ ಸಂಶೋಧನೆಯ ಬೆಳಕಿನಲ್ಲಿ ಪುನರ್ ರಚಿತವಾಗುತ್ತವೆ. ಯಾವುದೇ ವಿಷಯ ವಿಜ್ಞಾನವೆನಿಸಿಕೊಳ್ಳಬೇಕಾದಾರೆ ಅದು ವಸ್ತುನಿಷ್ಠತೆ, ಪುನರಾವೃತ್ತಿಯ ಸಾಮರ್ಥ್ಯ, ದೃಢತೆ, ವಿಶ್ವಮಾನ್ಯತೆ ಈ ಎಲ್ಲಾ ರೀತಿಯ ಅಂಶಗಳನ್ನು ತೃಪ್ತಿಪಡಿಸಬೇಕಾಗುತ್ತದೆ.

. ಜ್ಯೋತಿಷ್ಯದ ಪ್ರಕಾರ ಗ್ರಹಗಳೆಷ್ಟು? ಅವುಗಳು ಯಾವುವು?
ಜ್ಯೋತಿಷ್ಯದ ಪ್ರಕಾರ ಗ್ರಹಗಳು ಒಂಭತ್ತು. ಅವುಗಳೆಂದರೆ ಸೂರ್ಯ, ಚಂದ್ರ , ರಾಹು , ಕೇತು , ಬುಧ, ಶುಕ್ರ , ಮಂಗಳ, ಗುರು, ಮತ್ತು ಶನಿ.

. ರಾಹುಕಾಲ, ಗುಳಿಕಕಾಲ, ಯಮಗಂಡಕಾಲಗಳ ಬಗ್ಗೆ ಲೇಖಕರ ಅಭಿಪ್ರಾಯವೇನು?
ರಾಹುಕೇತುಗಳು ಅಸ್ತಿತ್ವದಲ್ಲೇ ಇಲ್ಲ. ಅವು ಖಗೋಳಶಾಸ್ತ್ರ ಅಥವಾ ಜ್ಯೋತಿಷ್ಯದ ಕಲ್ಪನೆಯ ಕೃತಕ ಬಿಂದುಗಳು. ಅವೇ ಇಲ್ಲದಿರುವಾಗ ರಾಹುಕಾಲ, ಗುಳಿಕಕಾಲಗಳಿಗೆ ಸಹಜವಾಗಿ ಯಾವ ಅರ್ಥವೂ ಇರುವುದಿಲ್ಲ.

. ಬುದ್ಧನು ವಿನಯಪೀಟಿಕಾ ಗ್ರಂಥದಲ್ಲಿ ಯಾರಿಂದ ದೂರವಿರಬೇಕೆಂದು ಎಚ್ಚರಿಸಿದ್ದಾನೆ?
ಬುದ್ಧನು ವಿನಯ ಪೀಟಿಕಾ ಗ್ರಂಥದಲ್ಲಿ ಯಾರು ನಕ್ಷತ್ರಗಳ ಲೆಕ್ಕಾಚಾರದಂತಹ ತಂತ್ರಗಳಿಂದ ಜೀವನ ನಡೆಸುತ್ತಾರೋ ಇವರಿಂದ ದೂರವಿರಬೇಕು. ಎಂದು ಎಚ್ಚರಿಸಿದ್ದಾನೆ.





ಐದು ಆರು ವಾಕ್ಯಗಳಲ್ಲಿ ಉತ್ತರಿಸಿ.

. ಪ್ರಕೃತಿಯ ಘಟನೆಗಳು ಆದಿ ಮಾನವನ ಮನಸ್ಸಿನ ಮೇಲೆ ಉಂಟು ಮಾಡಿದ ಪರಿಣಾಮಗಳೇನು?
ಪ್ರಕೃತಿಯ ಘಟನೆಗಳು ಆದಿಮಾನವನಿಗೆ ಭಯ ಭಕ್ತಿಯನ್ನು ಉಂಟುಮಾಡಿದ್ದು ಅವನ ಬಹುಪಾಲು ನಂಬಿಕೆಗಳು ಈ ಹಿನ್ನೆಲೆಯಲ್ಲಿ ರೂಪುಗೊಂಡವು. ಮಿಂಚು ಗುಡುಗುಗಳು ಅವನಿಗೆ ಸಾಕಷ್ಟು ಭಯವನ್ನು ಉಂಟುಮಾಡಿರಲೇಬೇಕು. ಮಧ್ಯಾಹ್ನದಲ್ಲಿ ಗ್ರಹಣ ನಡೆದಾಗ ಕತ್ತಲು ಮುಸುಕಿದ್ದು ಎಂತಹ ಧೈರ್ಯಶಾಲಿಯಾದ ಆದಿಮಾನವನಿಗೂ ನಡುಕವನ್ನು ಉಂಟುಮಾಡಿರಬೇಕು. ಭೂಕಂಪ ಆವನಿಗೆ ಹೆಚ್ಚಿನ ಭಯವನ್ನು ಉಂಟುಮಾಡಿದ್ದಲ್ಲದೆ ಕನಸು , ರೋಗ, ಸಾವು ಇವೆಲ್ಲ ಅವನಿಗೆ ರಹಸ್ಯವಾಗಿ ಕಾಡಿವೆ.

. ಜ್ಯೋತಿಷ್ಯ ಏಕೆ ವಿಜ್ಞಾನವಾಗಲಾರದು? ವಿವರಿಸಿ
ವಿಜ್ಞಾನದ ಎಲ್ಲ ಪ್ರಯೋಗಗಳು ತಾತ್ಕಾಲಿಕವಾಗಿದ್ದು , ಅಧಿಕಾರ ಮುಕ್ತವಾಗಿ ಕುರುಡಾಗಿ ಅದು ಮಾತನಾಡುವುದಿಲ್ಲ. ವಿಜ್ಞಾನದ ಎಲ್ಲ ಸಿದ್ಧಾಂತಗಳು , ನಿಯಮಗಳು ಹೊಸ ಸಂಶೋಧನೆಯ ಬೆಳಕಿನಲ್ಲಿ ಪುನರ್ ರಚಿತವಾಗುತ್ತವೆ. ಯಾವುದೇ ವಿಷಯ ವಿಜ್ಞಾನವೆನಿಸಿಕೊಳ್ಳಬೇಕಾದಾರೆ ಅದು ವಸ್ತುನಿಷ್ಠತೆ, ಪುನರಾವೃತ್ತಿಯ ಸಾಮರ್ಥ್ಯ, ದೃಢತೆ, ವಿಶ್ವಮಾನ್ಯತೆ ಈ ಎಲ್ಲಾ ರೀತಿಯ ಅಂಶಗಳನ್ನು ತೃಪ್ತಿಪಡಿಸಬೇಕಾಗುತ್ತದೆ. ಆದರೆ ಜ್ಯೋತಿಷಿಗಳು ಯಾವುದೇ ಆಧಾರವಿಲ್ಲದೆ ಪುರಾತನ ನಂಬಿಕೆ, ತಪ್ಪು ಗ್ರಹಿಕೆಗಳನ್ನು ಆಧರಿಸಿ ಪ್ರಯಾಣ , ಮದುವೆ, ಗ್ರಹಸ್ಥಾನದ ಬದಲಾವಣೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾತನಾಡುತ್ತಾರೆ. ಹೀಗೆ ಇವರ ಲೆಕ್ಕಾಚಾರಗಳು ಸುಳ್ಳಾಗಿರುವುದು ಬಹಳಷ್ಟುಸಾರಿ ಕಂಡುಬಂದಿರುವುದರಿಂದ ಜ್ಯೋತಿಷ್ಯ ವಿಜ್ಞಾನವಾಗಲಾರದು.

. ಸ್ವಾಮಿ ವಿವೇಕಾನಂದರು ಜ್ಯೋತಿಷ್ಯದ ಬಗ್ಗೆ ತಾಳಿರುವ ಅಭಿಪ್ರಾಯವೇನು?
ಮನುಷ್ಯನ ಭವಿಷ್ಯದ ನಿರ್ಣಯಕ್ಕೆ ಅವನೇ ಕಾರಣ ಎಂದು ದೃಢವಾಗಿ ನಂಬಿದ್ದ ಸ್ವಾಮಿ ವಿವೇಕಾನಂದರು ಜ್ಯೋತಿಷ್ಯದ ಬಗ್ಗೆ ಕಟುವಾದ ಅಭಿಪ್ರಾಯ ಪಡುತ್ತಾರೆ.ನಕ್ಷತ್ರಗಳ ಪ್ರಭಾವ ನನ್ನ ಮೇಲೆ ಆಗುವುದಾದರೆ ಆಗಲಿ ಅದು ನನ್ನ ಜೀವನದ ಮೇಲೆ ಪ್ರಭಾವ ಬೀರಿದರೆ ಅದಕ್ಕೆ ಯಾವ  ಬೆಲೆಯೂ ಇಲ್ಲ. ಜ್ಯೋತಿಷ್ಯಮತ್ತಿತರ ಸಂಗತಿಗಳು ಸಾಮಾನ್ಯವಾಗಿ ದುರ್ಬಲ ಮನಸ್ಸಿನ ಗುರುತುಗಳು ಇಂತಹವುಗಳು ಬದುಕಿನಲ್ಲಿ ಪ್ರಾಮುಖ್ಯ ಪಡೆದುಕೊಂಡ ಕೂಡಲೆ ವೈದ್ಯರನ್ನು ಕಂಡು ಉತ್ತಮ ಆಹಾರ ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು ಎಂಬುದು ವಿವೇಕಾನಂದರ ಅಭಿಪ್ರಾಯವಾಗಿದೆ.

. ಶಿಕ್ಷಣದ ಮುಖ್ಯ ಉದ್ದೇಶ ಏನಾಗಬೇಕು?
ಅಧ್ಯಾಪಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದುದು ಯಾವುದೇ ಶಿಕ್ಷಣ ಕ್ರಮದ ಮುಖ್ಯ ಉದ್ದೇಶವಾಗಬೇಕು. ಪರಿಶೀಲಿಸದೇ, ಪ್ರಶ್ನಿಸದೇ ಯಾವುದನ್ನೂ ಒಪ್ಪಿಕೊಳ್ಳಬಾರದು. ಭಗವದ್ಗೀತೆ, ಕುರಾನ್ , ಬೈಬಲ್ ಯಾವುದೇ ಆಗಿರಲಿ ವೈಜ್ಞಾನಿಕವಾದ ಆಲೋಚನೆಗಳಿಗೆ ತೃಪ್ತಿಯನ್ನು ಉಂಟುಮಾಡಬೇಕು. ಶಿಕ್ಷಣದ ನಿಜವಾದ ಉದ್ದೇಶವೇ ಸಮಾಜ ಸುಧಾರಣೆಯಾಗಿದೆ. ಆದರೆ ನಮ್ಮ ಶಿಕ್ಷಣ ಅವಿದ್ಯಾವಂತ ಮೂಢನಂಬಿಕೆ ಉಳ್ಳವನನ್ನು ವಿದ್ಯಾವಂತ ಮೂಢನಂಬಿಕೆಯವನನ್ನಾಗಿ ಪರಿವರ್ತಿಸುತ್ತಿದೆ.

. ಜ್ಯೋತಿಷ್ಯವು ಅರ್ಥಪೂರ್ಣವೋ? ಅರ್ಥರಹಿತವೋ? ವಿಶ್ಲೇಷಿಸಿ.
ಪ್ರಾಚೀನ ಜ್ಯೋತಿಷ್ಯದ ಉಗಮದ ವಿಚಾರ ಖಗೋಳಶಾಸ್ತ್ರದಲ್ಲಿ ಕಂಡುಬರುತ್ತದೆ. ವಿಜ್ಞಾನದ ಇತರ ಶಾಖೆಗಳಂತೆ ಖಗೋಳಶಾಸ್ತ್ರ ಸಹ ಹಲವಾರು ತಪ್ಪುಗ್ರಹಿಕೆಗಳನ್ನು ಪಡೆದುಕೊಂಡಿತ್ತು. ಮನುಷ್ಯ ಜೀವನದ ಮೇಲೆ ಗ್ರಹಗಳು ನಕ್ಷತ್ರಗಳು ಪ್ರಭಾವ ಬೀರುತ್ತವೆ ಎಂಬ ನಂಬಿಕೆ ಮೂಡಿನಿಂತಿತ್ತು. ರಾಹುಕಾಲ ಗುಳಿಕಕಾಲ, ಯಮಗಂಡಕಾಲ ಎಂಬ ಅಡಿಪಾಯವನ್ನು ಹೊಂದಿ ರಾಹುಕಾಲದಲ್ಲಿ ಪ್ರಯಾಣವಾಗಲಿ, ಧಾರ್ಮಿಕ ಶುಭಕಾರ್ಯಗಳನ್ನಾಗಲಿ ಮಾಡಬಾರದು  ಎಂಬ ನಂಬಿಕೆ, ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಕಾಣುವ ಸಾವಿನ ಸಂತೆ, ಎಲ್ಲವನ್ನು ವಿಶ್ಲೇಷಿಸಿದಾಗ ಜ್ಯೋತಿಷ್ಯದ ದುರ್ಬಲತೆ ವ್ಯಕ್ತವಾಗುತ್ತದೆ.ಏಕೆಂದರೆ ಸತ್ತವರ ಜಾತಕಗಳಲ್ಲಿ ಸಾವಿನ ಭವಿಷ್ಯ ಇರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸತ್ತವರು ಬಡವರೇ ಆಗಿರುತ್ತಾರೆ. ಈ ಎಲ್ಲಾ ಅಂಶಗಳು ಜ್ಯೋತಿಷ್ಯದ ಟೊಳ್ಳುತನವನ್ನು ವ್ಯಕ್ತಪಡಿಸುತ್ತವೆ. ಜನರನ್ನು ಹೆದರಿಸಿ ಗ್ರಹಗಳ ದೋಷ ಅದರ ನಿವಾರಣೆಗೆ ಶಾಂತಿ ಪೂಜೆ ಮಾಡಿಸಬೇಕುಎಂದೆಲ್ಲ ಸುಲಿಗೆ ಮಾಡುವುದನ್ನು ಕಂಡಾಗ ಜ್ಯೋತಿಷ್ಯ ಅರ್ಥಪೂರ್ಣವೂ ಅಲ್ಲ ಎಂಬ ಅಂಶ ಬೆಳಕಿಗೆ ಬರುತ್ತದೆ.

~~~~ಓಂ~~~~

6 comments: