Sunday, June 29, 2014

ಹೊಲಿಗೆ ಯಂತ್ರದ ಅಮ್ಮಿ

ಪದ್ಯಭಾಗ 13
ಹೊಲಿಗೆ ಯಂತ್ರದ ಅಮ್ಮಿ -ಅರಿಫ್ ರಾಜಾ
ಸಾರಾಂಶ : ಅಮ್ಮಿ ಹೊಲಿಗೆ ಕೆಲಸ ಮಾಡುತ್ತಾಳೆ , ಮಕ್ಕಳಿಗೆ ರೊಟ್ಟಿಯನ್ನು ತುಂಡು ತುಂಡು ಮಾಡಿಕೊಂಡುವಂತೆ  ಬಟ್ಟೆಗಳನ್ನುಅಳತೆಗೆ ತಕ್ಕಂತೆ ಕತ್ತರಿಸಿ, ಮತ್ತೆ ಅವುಗಳನ್ನು ಹೊಲಿದು ಒಂದು ಮಾಡುತ್ತಾಳೆ ಲೋಕದ ಚಿಂದಿಮನಸುಗಳನ್ನು ಜೋಡಿಸಲೇಂದು ಸೂಜಿಯನ್ನು ಲೋಕದ ವಿಕಾರಗಳನ್ನುಕತ್ತರಿಸಿಹಾಕಲೆಂದು ಕತ್ತರಿಯನ್ನು ಕೈಲಿ ಹಿಡಿದಿದ್ದಾಳೆ ಜಗತ್ತಿನ ದಾರಿ ಸಾಗಲು ಗುಂಡಾದ ಗಾಲಿ ಇದೆ. . ಕಾಲಿನಿಂದ ಹೊಲಿಗೆಯಂತ್ರದ ಪೆಡಲ್ಲು ತುಳಿಯುತ್ತಾ ಚಕ್ರವನ್ನು ತಿರುಗಿಸಿದಾಗಲೆಲ್ಲ ಇತಿಹಾಸ ಒಂದೊಂದು ಸುತ್ತು ತಿರುಗುತ್ತದೆ. ಸಂತೆಯಿಂದ ಕೊಂಡುತಂದ ನಿರಾಕಾರವಾದ ಬಟ್ಟೆಗೆ ಅಮ್ಮಿ ಹೊಸರೂಪನೀಡುತ್ತಾಳೆ. ಆಕಾಶದಂತಹ ಕಡಲಿನಂತಹ ಬಟ್ಟೆಗೆ ನಾನಾವಿಧವಾದ ಆಕಾರ ಕೊಡುವ ಅಮ್ಮಿ ಸೃಷ್ಟಿಕರ್ತೆ. ಜಗತ್ತಿಗೆ ಬಣ್ಣಬಣ್ಣದ ಉಡುಗೆ ತೊಡಿಸುವ ಇವಳು ತೊಡುವುದು ಹಾಲುಬಣ್ಣದ ಬಿಳೀಸೀರೆ.
ಅಪೂರ್ಣವಾದ ಜೀವನವನ್ನು ಹರಿದ ಚಂದ್ರನಂತೆ ಎಂದೂಬಾಳಿನಲ್ಲಿ ಬೆಳಕೆಂಬುದಿಲ್ಲ ಎಂಬುದನ್ನು ತೂತುಬಿದ್ದ ನಕ್ಷತ್ರಎಂಬ ಮಾತಿನಲ್ಲಿಯೂ , ನೆಲೆಯಿಲ್ಲದ ಬದುಕನ್ನು ದಿಕ್ಕುದೆಸೆಯಿಲ್ಲದೆ ಅಲೆವ ಅಲೆಮಾರಿಗಳು ಎಂಬ ಮಾತಿನಲ್ಲಿ, ಕವಿ ಹೇಳುತ್ತಾ ತನಗೂ ಒಂದು ಹಾಸಿಗೆಯನ್ನು ಹೊಲೆದುಕೊಡುವಂತೆ ಬೇಡುತ್ತಾನೆ.
ಇವಳ ಪಾಲಿಗೆ ನಮಾಜ್ಎಂದರೆ ಜುಮ್ಮಾ(ಶುಕ್ರವಾರ), ಈದ್(ಹಬ್ಬ) ಎಂದರೆ ಶಾವಿಗೆ ಪಾಯಸ (ದೂದ್ ಕುರ್ಮಾ) ಹೀಗೆ ಹೊಲಿಗೆಯಂತ್ರದ ಮುಂದೆ ೨೫ವರ್ಷಗಳಕಾಲ ಅಮ್ಮಿ ತನ್ನ ಆರು ಮಕ್ಕಳ ಜೊತೆಗೆ ಗಂಡನನ್ನೂ ಮಗುವಿನಂತೆ ಸಾಕಿದಳು. ಹಗಲು ರಾತ್ರಿ ರಾಟೆ ತಿರುಗಿಸಿ ಕಷ್ಟಪಟ್ಟು ದುಡಿವ ಅಮ್ಮ ಮರುಭೂಮಿಯಲ್ಲಿ ಸಿಗುವ ಓಯಸಿಸ್ ನಂತೆ. ಮಕ್ಕಳಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದಾಳೆ.
ಸಂದರ್ಭ ಸೂಚಿಸಿ ವಿವರಿಸಿ :
೧. ನಿರಾಕಾರಮಾನಕ್ಕೆ ಹೊಲಿಗೆ ಹಾಕಿ ರೂಪು ನೀಡುತ್ತಾಳೆ.
ಈ ಮಾತನ್ನು ಆರೀಫ್ ರಾಜಾ ಅವರ ಹೊಲಿಗೆಯಂತ್ರದ ಅಮ್ಮಿ ಎಂಬ ಕವನದಿಂದ ಆರಿಸಿಕೊಳ್ಳಲಾಗಿದೆ.
ಸಂತೆಯಿಂದ ಕೊಂಡುತಂದ ನಿರಾಕಾರವಾದ ಹಾಗೂ ಆಕಾಶ / ಕಡಲಿನ ಹಾಗೆ ವಿಸ್ತಾರವಾದ ಬಟ್ಟೆಗೆ ಹೊಲಿಗೆ ಹಾಕಿ ರೂಪನೀಡುವ ಅಮ್ಮನನ್ನು ಸೃಷ್ಟಿಕರ್ತೆ ಎಂದು ಕವಿ ಕರೆದಿದ್ದಾನೆ.

೨. ಚಿಂದಿ ಮನಸುಗಳನ್ನು ಜೋಡಿಸಲು ಸೂಜಿ ಇದೆ.
ಈ ಮಾತನ್ನು ಆರೀಫ್ ರಾಜಾ ಅವರ ಹೊಲಿಗೆಯಂತ್ರದ ಅಮ್ಮಿ ಎಂಬ ಕವನದಿಂದ ಆರಿಸಿಕೊಳ್ಳಲಾಗಿದೆ. ಅಮ್ಮಿಯು ಚಿಂದಿಮನಸುಗಳನ್ನು ಜೋಡಿಸಲೆಂದೇ ಸೂಜಿಯನ್ನು, ಲೋಕದ ವಿಕಾರಗಳನ್ನು ಕತ್ತರಿಸಿಹಾಕಲೆಂದೇ ಕತ್ತರಿಯನ್ನು ಹಿಡಿದಿದ್ದಾಳೆ. ಎಂದು ಕವಿ ಹೇಳುತ್ತಾನೆ.

೩.ಅಮ್ಮಿಯಾವಗಲೂ ಧರಿಸುವುದು ಹಾಲು ಬಿಳಿ ಸೀರೆ.
ಈ ಮಾತನ್ನು ಆರೀಫ್ ರಾಜಾ ಅವರ ಹೊಲಿಗೆಯಂತ್ರದ ಅಮ್ಮಿ ಎಂಬ ಕವನದಿಂದ ಆರಿಸಿಕೊಳ್ಳಲಾಗಿದೆ. ಇಡೀ ಜಗತ್ತಿಗೆ ಬಣ್ಣ ಬಣ್ಣದ ಬಟ್ಟೆಗಳನ್ನು ಹೊಲಿದುಕೊಡುವ ಅಮ್ಮ ಸದಾ ಧರಿಸುವುದು ಕೇವಲ ಬಿಳೀಸೀರೆ. ಅವಳ ಸರಳತನವನ್ನು ಕವಿ ಈ ಮಾತಿನಲ್ಲಿ ಹೇಳಿದ್ದಾನೆ.


೪. ನಮಾಜ್ ಎಂದರೆ ಜುಮ್ಮಾ. .. ಈದ್ ಎಂದರೆ ದೂದ್ ಖುರ್ಮಾ
ಈ ಮಾತನ್ನು ಆರೀಫ್ ರಾಜಾ ಅವರ ಹೊಲಿಗೆಯಂತ್ರದ ಅಮ್ಮಿ ಎಂಬ ಕವನದಿಂದ ಆರಿಸಿಕೊಳ್ಳಲಾಗಿದೆ. ಕಟ್ಟಿಕೊಂಡ  ಗಂಡನನ್ನೂ ಮಗುವಿನಂತೆಯೇ ಸಾಕುತ್ತಾ, ಹೊಲಿಗೆಯಂತ್ರದ ಜೊತೆಗೇ ತನ್ನ ಜೀವಮಾನದ ಕಾಲುಭಾಗವನ್ನು ಕಳೆದಿದ್ದಾಳೆ. ಇವಳಿಗೆ ನಮಾಜ್ ಎಂದರೆ ಜುಮ್ಮಾ. .. ಈದ್ ಎಂದರೆ ದೂದ್ ಖುರ್ಮಾ. ಬಡತನದ ಕಾರಣದಿಂದಾಗಿ ನಮಾಜು, ಹಬ್ಬ, ಸಿಹಿ,  ಎಲ್ಲವೂ ಅಪರೂಪವಾಗಿದೆ. ಎಂಬುದನ್ನು ತಿಳಿಸಲು ಈ ಮಾತುಗಳನ್ನು ಕವಿ ಬಳಸಿದ್ದಾರೆ.

೫. ಕರುಳ ಕುಡಿಗಳೆಂದರೆ ಕನಸುಗಣ್ಣು
ಈ ಮಾತನ್ನು ಆರೀಫ್ ರಾಜಾ ಅವರ ಹೊಲಿಗೆಯಂತ್ರದ ಅಮ್ಮಿ ಎಂಬ ಕವನದಿಂದ ಆರಿಸಿಕೊಳ್ಳಲಾಗಿದೆ. ತನ್ನ ಮಕ್ಕಳಿಗೋಸ್ಕರ ಕೈಸೋಲುವವರೆಗೂ ರಾಟೆತಿರುಗಿಸುತ್ತಾ ತನ್ನ ಆರೂ ಮಕ್ಕಳ ಹಸಿವನ್ನು ತೀರಿಸುವ ಅಮ್ಮಿಗೆ ತನ್ನ ಮಕ್ಕಳು ಎಂದರೆ ಕನಸಿನ ಕಣ್ಣುಗಳು ಅವರ ಜೀವನ ಸುಖಮಯವಾಗಿರಲಿ ಮರುಭೂಮಿಯಲ್ಲೂ ಹಸಿರು ಮಣ್ಣು ಸಿಗುವಂತೆ ಸಂತಸದಾಯಕವಾಗಿರಲಿ ಎಂದು ಭಾವಿಸುವವಳು.

ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಅಮ್ಮಿ ಏನನ್ನು ಪಾಲುಮಾಡಿದಂತೆ ಬಟ್ಟೆ ಕತ್ತರಿಸುತ್ತಾಳೆ?
ರೊಟ್ಟಿ ಪಾಲುಮಾಡಿದಂತೆ ಬಟ್ಟೆ ಕತ್ತರಿಸುತ್ತಾಳೆ

೨. ಚಕ್ರ ತಿರುಗಿಸಿದಂತೆ ಉರುಳುವುದು ಯಾವುದು?
ಚಕ್ರ ತಿರುಗಿಸಿದಂತೆ ಇತಿಹಾಸ ಉರುಳುವುದು

೩. ಅಮ್ಮಿ ಯಾವಾಗಲೂ ಏನನ್ನು ಧರಿಸುವಳು?
ಅಮ್ಮಿ ಯಾವಗಲೂ ಧರಿಸುವುದು ಹಾಲು ಬಿಳಿ ಸೀರೆ.

೪. ಅಮ್ಮಿ ಯಾವುದನ್ನು ಕಡಿದು ಹಾಕಲೆಂದು ಕತ್ತರಿ ಹಿಡಿದಿದ್ದಾಳೆ?
ಲೋಕದ ವಿಕಾರಗಳನ್ನು ಕಡಿದು ಹಾಕಲೆಂದು ಕತ್ತರಿ ಹಿಡಿದಿದ್ದಾಳೆ.

೫. ಅಮ್ಮಿ ಜಗತ್ತಿಗೆ ಎಂತಹ ಬಟ್ಟೆಯನ್ನು ತೊಡಿಸುವಳು?
ಬಣ್ಣಬಣ್ಣದ ಬಟ್ಟೆಯನ್ನು ಜಗತ್ತಿಗೆ ತೊಡಿಸುವಳು.

೬. ಮಗುವಿನಂತೆ ಯಾರನ್ನು ಸಾಕಿದಳು?
ಕಟ್ಟಿಕೊಂಡ ಗಂಡನನ್ನು ಮಗುವಿನಂತೆ ಸಾಕಿದಳು.

೭. ಹೊಲಿಗೆ ಯಂತ್ರದ ಜೊತೆಗೆ ಅಮ್ಮಿ ಕಳೆದ ಕಾಲವೆಷ್ಟು?
ಹೊಲಿಗೆ ಯಂತ್ರದ ಜೊತೆಗೆ ಅಮ್ಮಿಕಾಲು ಶತಮಾನಗಳನ್ನು ಕಳೆದಳು.


ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.

೧. ಕತ್ತರಿ ಮತ್ತು ಸೂಜಿಗಳ ಕೆಲಸ ಯಾವುದು?
ಲೋಕದ ವಿಕಾರಗಳನ್ನುಕತ್ತರಿಸಿಹಾಕಲು ಕತ್ತರಿ ಮತ್ತು ಚಿಂದಿ ಮನಸುಗಳನ್ನು ಜೋಡಿಸಲು ಸೂಜಿಯನ್ನು ಹಿಡಿದಿದ್ದಾಳೆ.

೨. ಅಮ್ಮಿಯನ್ನು ಸೃಷ್ಟಿಕರ್ತೆ ಎಂದು ಏಕೆ ಕರೆಯಲಾಗಿದೆ?
ಸಂತೆಯಿಂದ ತಂದ ನಿರಾಕಾರವಾದ ಬಟ್ಟೆಗೆ ಹೊಲಿಗೆ ಹಾಕುತ್ತಾ ನಾನಾನಮೂನೆ ಪಾತ್ರ ನೀಡುವ ಅಮ್ಮಿಯನ್ನು ಲೇಖಕ ಸೃಷ್ಟಿಕರ್ತೆ ಎಂದು ಕರೆದಿದ್ದಾನೆ.

೩. ಅಮ್ಮಿಯ ಬದುಕಿನಲ್ಲಿ ನಿರ್ಜೀವ ಬಟ್ಟೆಗೆ ಪ್ರವೇಶ ಹೇಗಾಯಿತು?
ಸಂತೆಯಿಂದ ನಿರಾಕಾರವಾದ ಬಟ್ಟೆ ಕೊಂಡುತಂದು ಅದಕ್ಕೆ ನಾನಾ ನಮೂನೆಯ ರೂಪಕೊಡುತ್ತಾಳೆ, ಅಮ್ಮಿಯ ಕಣ್ಣು , ಮೂಗು , ಹಣೆ , ರೋಮಗಳಿಂದ ಇಳಿಯುವ ಉಪ್ಪುನೀರಿಂದಲೇ ಈ ನಿಗೂಢಬದುಕಿನೊಳಗೆ ಇಳಿದು ನಿರ್ಜೀವ ಬಟ್ಟೆಗೆ ಜೀವ ಪ್ರವೇಶವಾಗುತ್ತದೆ.

೪. ದಿಕ್ಕು ದೆಸೆಯಿಲ್ಲದೆ ಅಲೆಯುತ್ತಿರುವುವು ಯಾವುವು?
ಚಂದ್ರ , ನಕ್ಷತ್ರ, ತಿರುಗುವ ಗ್ರಹಗಳನ್ನು ಎಂದು ಬುಗುರಿಗಳು, ಉಲ್ಕೆಗಳು, ಧೂಮಕೇತುಗಳನ್ನು ಅಲೆಮಾರಿಗಳು ಎಂದು ಕರೆಯುತ್ತಾನೆ.

೫. ಹಾಸಿಗೆಯನ್ನು ಹೊಲಿದುಕೊಡುವಂತೆ ಅಮ್ಮಿಯನ್ನು ಕೇಳಲು ಕಾರಣವೇನು?
ಚಿಂದಿಯಾದ ಬಟ್ಟೆಯನ್ನು ಜೋಡಿಸಿ ಹೊಲೆಯುವ ಅಮ್ಮಿ
ಚಿಂದಿಯಾದ ಮನಸ್ಸುಗಳನ್ನು ಜೋಡಿಸಲು ಸೂಜಿ ಹಿಡಿದು, ಲೋಕದ ವಿಕಾರಗಳನ್ನು ಕಡಿದು ಕತ್ತರಿಸಿ ಹಾಕಲೆಂದೇ ಕತ್ತರಿಹಿಡಿದು, ನಿದ್ದೆಬಾರದವರಿಗೆ ಒಂದು ಹಾಸಿಗೆಯನ್ನು ಹೊಲಿದು ಕೊಡುತ್ತಾಳೆ.

೬. ಅಮ್ಮಿಯ ಪಾಲಿಗೆ ನಮಾಜ್ ಮತ್ತು ಈದ್ ಎಂದರೆ ಯಾವುವು?
ಕಟ್ಟಿಕೊಂಡ  ಗಂಡನನ್ನೂ ಮಗುವಿನಂತೆಯೇ ಸಾಕುತ್ತಾ, ಹೊಲಿಗೆಯಂತ್ರದ ಜೊತೆಗೇ ತನ್ನ ಜೀವಮಾನದ ಕಾಲುಭಾಗವನ್ನು ಕಳೆದಿದ್ದಾಳೆ ಇವಳಿಗೆ ನಮಾಜ್ ಎಂದರೆ ಜುಮ್ಮಾ. .. ಈದ್ ಎಂದರೆ ದೂದ್ ಖುರ್ಮಾ. ಬಡತನದ ಕಾರಣದಿಂದಾಗಿ ನಮಾಜು, ಹಬ್ಬ, ಸಿಹಿ,  ಎಲ್ಲವೂ ಅಪರೂಪವಾಗಿದೆ. ಎಂಬುದನ್ನು ತಿಳಿಸಲು ಈ ಮಾತುಗಳನ್ನು ಕವಿ ಬಳಸಿದ್ದಾರೆ.




ಐದಾರು ವಾಕ್ಯಗಳಲ್ಲಿ ಉತ್ತರಿಸಿ.

೧. ಅಮ್ಮಿಯ ಹೊಲಿಗೆ ಕೌಶಲ್ಯವು ಕವಿತೆಯಲ್ಲಿ ಹೇಗೆ ಅಭಿವ್ಯಕ್ತಿಗೊಂಡಿದೆ?
ಹೊಲಿಗೆಯಂತ್ರಕ್ಕೂ ಅಮ್ಮಿಗೂ ಅವಿನಾಭಾವ ಸಂಬಂಧ ಅಮ್ಮಿ ರೊಟ್ಟಿಯನ್ನು ಎರಡು ಪಾಲು ಮಾಡಿದಂತೆ ಬಟ್ಟೆಗೆ ಗಡಿಕೊರೆದು ಕತ್ತರಿಸುವಳು ಅನಂತರ ತುಂಡು ತುಂಡುಗಳನ್ನು ಸೇರಿಸಿ ಹೊಲಿದು ಒಂದು ಮಾಡುವಳು. ಮುಖವಾಡ ಒಡೆದು ಬಯಲಾಗಲು ಅವಳ ಒಂದುಕೈಲಿ ಕತ್ತರಿ ಇದೆ. ಲೋಕದ ಮಾನ ಕಾಪಾಡಲು ಇನ್ನೊಂದು ಕೈಲಿ ಸೂಜಿ ಇದೆ. ಎಂದು ವರ್ಣಿಸುತ್ತಾ, ಅಮ್ಮಿಯು ಒಂದುಕಾಲಿನಿಂದ ಪೆಡಲನ್ನು ತುಳಿದಂತೆಲ್ಲ ಇತಿಹಾಸವು ಒಂದು ಸುತ್ತು ಉರುಳಿದಂತೆ, ಸಂತೆಯಲ್ಲಿ ಕೊಂಡುತಂದ ನಿರಾಕಾರ ಬಟ್ಟೆಗೆ ಅಮ್ಮಿ ಆಕಾರ ಕೊಡುತ್ತಾಳೆ, ಬಟ್ಟೆಗೆ ಬಗೆ ಬಗೆಯ ಆಕಾರ ನೀಡುವ ಅಮ್ಮಿಯೂ ಕೂಡ ಸೃಷ್ಟಿಕರ್ತೆ ಎಂದು ಕವಿ ಹೇಳುತ್ತಾನೆ.

೨. ಹೊಲಿಗೆ ಕಾಯಕದ ಮೂಲಕ ಮನೆ ಮತ್ತು ಲೋಕದ ಮಾನವನ್ನು ಅಮ್ಮಿ ಹೇಗೆ ಕಾಪಾಡಿದ್ದಾಳೆ?
ಹೊಲಿಗೆಯ ಕಾಯಕದ ಮೂಲಕ ಅಮ್ಮಿ ಲೋಕದ ಮಾನದ ಜೊತೆಜೊತೆಗೆ ತನ್ನ ಮನೆಯ ಮಾನವನ್ನೂ ಕಾಪಾಡಿದ್ದಾಳೆ.  ಬಣ್ಣಬಣ್ಣದ ಬಟ್ಟೆಗಳನ್ನು ಹೊಲಿದುಕೊಟ್ಟು ಎಲ್ಲರಿಗೂ ವಸ್ತ್ರಗಳನ್ನು ನೀಡಿ ಲೋಕದ ಮಾನ ಕಾಪಾಡಿದ್ದಾಳೆ. ಗಂಡನನ್ನೂ ಕೂಡ ತನ್ನ ಮಕ್ಕಳಂತೆ ಸಾಕುತ್ತಾ ೨೫ವರ್ಷಗಳಿಂದ ತನ್ನ ಮನೆಯ ಮಾನ ಹರಾಜಾಗದಂತೆ ದುಡಿಯುತ್ತಿದ್ದಾಳೆ . ಈ ಮೂಲಕ ತನ್ನ ಮನೆಯ ಮಾನವನ್ನು ಕಾಪಾಡಿಕೊಂಡಿದ್ದಾಳೆ.


೩. ಹಾಸಿಗೆಯನ್ನು ಹೊಲಿದುಕೊಡುವಂತೆ ಅಮ್ಮಿಯನ್ನು ಕೇಳಲು ಕಾರಣಗಳೇನು?
ಕವಿಯು ಅಮ್ಮಿಯನ್ನು ಒಂದು ಹಾಸಿಗೆ ಒಲಿದು ಕೊಡುವಂತೆ ಕೇಳಿದ್ದಾರೆ. ಅವರು ಹೇಳುವಂತೆ ಚಂದ್ರ, ನಕ್ಷತ್ರ ( ಇವೆರಡೂ ಇಸ್ಲಾಂ ಧರ್ಮದ ಸಂಕೇತಗಳು) ಯಾರದೋ ಚಾಟಿಗೆ (ಧರ್ಮಾಂಧರ ದಾಳಿಗೆ) ಶೋಷಣೆಗೆ ಗುರಿಯಾಗಿ ನೆಲೆತಪ್ಪಿವೆ. ಗಿರ‍್ರನೆ ತಿರುಗುವ ಗ್ರಹ ಬುಗುರಿಗಳು ದಿಕ್ಕು ದೆಸೆ ಇಲ್ಲದೆ ಅಲೆಯುವ ಅಲೆಮಾರಿಗಳು ಹೀಗೆ ಅಲೆಮಾರಿಯಾಗಿರುವುದರಿಂದ ನಿದ್ದೆ ಬಾರದ ತನಗೊಂದು ಹಾಸಿಗೆ ಹೊಲಿದುಕೊಡುವಂತೆ ಕೇಳುತ್ತಾರೆ.

೪.ಅಮ್ಮಿಯ ವ್ಯಕ್ತಿತ್ವ ಕವಿತೆಯಲ್ಲಿ ಒಡಮೂಡಿದ ಬಗೆಯನ್ನು ವಿವರಿಸಿ.
ಬಿಳಿವಸ್ತ್ರಧರಿಸಿ, ಸೂಜಿ , ಕತ್ತರಿ ಹಿಡಿದು  ಹೊಲಿಗೆ ಕೆಲಸದಲ್ಲಿ ನಿರತಳಾದ ಅಮ್ಮಿ ಲೋಕದ ಮತ್ತು ಮನೆಯ ಮಾನ ಕಾಯುವ ಕಾಯಕಯೋಗಿಯಾಗಿದ್ದಾಳೆ. ಕಾಲು ಶತಮಾನಗಳನ್ನು ಹೊಲಿಗೆಯಂತ್ರದ ಮುಂದೆ ಕಳೆದಿರುವ ಇವಳು ಎಲ್ಲವನ್ನೂ ಮನದೊಳಗೆ ಅಡಗಿಸಿಟ್ಟುಕೊಂಡು ತನ್ನ ತೋಳು ಸೋಲುವ ತನಕ ದುಡಿಯುತ್ತಾಳೆ. ಗಂಡನನ್ನೂ ತನ್ನ ಮಕ್ಕಳಂತೆಯೇ ಸಾಕಿ ಸಲಹಿದ್ದಾಳೆ. ಕವಿಯ ಪಾಲಿಗೆ ಮರುಭೂಮಿಯಲ್ಲಿ ಸಿಗುವ ಹಸಿರುಭೂಮಿ ಅಮ್ಮಿ.

~~~**ಓಂ**~~~

No comments:

Post a Comment