Sunday, June 29, 2014

ತಲ್ಲಣಿಸದಿರುಕಂಡ್ಯ ತಾಳು ಮನವೆ

ಪದ್ಯಭಾಗ 5
ತಲ್ಲಣಿಸದಿರು ಕಂಡ್ಯ ತಾಳು ಮನವೆ
ಕನಕದಾಸರು. 1509-1607 ಪ್ರಮುಖ ಕೀರ್ತನ ಕಾರರಲ್ಲಿ ಒಬ್ಬರುಹಾವೇರಿ ಜಿಲ್ಲೆ ಬಾಡ ಗ್ರಾಮದಲ್ಲಿ ಜನಿಸಿದರುಕಾಗಿನೆಲೆ ಆದಿಕೇಶವ ಇವರ ಆರಾಧ್ಯದೈವ. ವಿಜಯನಗರದ ಪಾಳೇಗಾರರಾಗಿದ್ದ ಇವರು ವೈರಾಗ್ಯದಿಂದ ಅಧಿಕಾರ ತ್ಯಜಿಸಿ ಸಂತರಾದರು. ಕೀರ್ತನೆ, ಉಗಾಬೋಗಗಳು ,ಮುಡಿಗೆ, ಅಷ್ಟಕಗಳು , ರಾಮಧಾನ್ಯಚರಿತೆ, ನಳಚರಿತ್ರೆ, ಹರಿಭಕ್ತಿಸಾರ, ಮೋಹನತರಂಗಿಣಿ ಮೊದಲಾದ ಕೃತಿಗಳಗಳನ್ನು ರಚಿಸಿದ್ದಾರೆ.  
ಲೋಕದ ಜಂಜಡಗಳಿಗೆ ತಲ್ಲಣಗೊಳ್ಳದೆ ಧೈರ್ಯದಿಂದ ಬಾಳಬೇಕು. ದೈವಶಕ್ತಿಯು ಸಕಲಜೀವಿಗಳನ್ನು  ಹೆತ್ತ ತಾಯಿಯಂತೆ ಸಲಹುವುದು. ಎಂಬುದನ್ನು ಉದಾಹರಣೆಗಳ ಮೂಲಕ ಕನಕದಾಸರು ತಿಳಿಸುತ್ತಾರೆ. ಸುಖಕ್ಕೆ ಹಿಗ್ಗುತ್ತ ಕಷ್ಟಗಳಲ್ಲಿ ಕುಗ್ಗಿಹೋಗುವ , ಚಂಚಲಗೊಳ್ಳುವ ಮನಸ್ಸು ದಾರಿಕಾಣದೆ ತಲ್ಲಣಗೊಳ್ಳುತ್ತದೆ. ಹೀಗೆ ತಲ್ಲಣಗೊಂಡ ಮನಸ್ಸಿಗೆ ನೀಡಿದ ಸಾಂತ್ವಾನ ಈ ಕೀರ್ತನೆಯಾಗಿದೆ.  ಮನುಷ್ಯನಾಗಿ ಹುಟ್ಟಿಬಂದ ಬಳಿಕ ಲೋಕದ ಕಷ್ಟಗಳಿಗೆ ಹೆದರಬಾರದು ತಾಯಿ ತನ್ನ ಮಕ್ಕಳನ್ನು ಸಲಹುವಂತೆ ಭಗವಂತನು ಎಲ್ಲ ಜೀವಿಗಳನ್ನು ಸಲಹುತ್ತಾನೆ. ಎಂಬುದನ್ನು ಹೇಳುತ್ತಾ ಬೆಟ್ಟದಮೇಲೆ ಹುಟ್ಟಿದ ಮರಗಳಿಗೆ ಯಾರೂ ಕಟ್ಟೆಯನ್ನು ಕಟ್ಟಿ ನೀರು ಹಾಯಿಸುವುದಿಲ್ಲ ಆದರೂ ಅವು ಸಮೃದ್ಧಿಯಾಗಿ ಬೆಳೆದಿಲ್ಲವೇ? ಕಾಡಿನಲ್ಲಿ ವಾಸಿಸುವ ಮೃಗಪಕ್ಷಿಗಳಿಗೆ ಅಲ್ಲಲ್ಲಿಯೇ ಆಹಾರ ದೊರಕುವಂತೆ ಮಾಡಿದ್ದು ಭಗವಂತನಲ್ಲದೆ ಬೇರಾರೂ ಅಲ್ಲ. ಹುಟ್ಟಿಸಿದ ದೇವರು ತಾನೇ ಹೊಣೆಗಾರನಾಗಿ ಎಲ್ಲರನ್ನು ಸಲುಹುತ್ತಾನೆ ಇದಕ್ಕೆ ಸಂಶಯ ಬೇಡನವಿಲಿಗೆ ಸುಂದರ ರೂಪವನ್ನು ನೀಡಿದವರು ಯಾರು? ಹವಳಕ್ಕೆ ಕೆಂಪುಬಣ್ಣನೀಡಿದವರು ಯಾರು? ಕಲ್ಲಿನೊಳಗಿರುವ ಕಪ್ಪೆಗೂ ಅಲ್ಲಿಯೇ ಆಹಾರ ದೊರಕುವಂತೆ ಮಾಡಿದವರು ಯಾರು? ಭಗವಂತ ಅಲ್ಲವೇ? ಕಾಗಿನೆಲೆ ಆದಿಕೇಶವ ಎಲ್ಲರನ್ನೂ ಸಲಹುತ್ತಾನೆ ಸಂಶಯ ಪಡದಿರು.
ಸಂದರ್ಭ :
.ಕಟ್ಟೆಯನು ಕಟ್ಟಿ ನೀರೆರೆದವರು ಯಾರೊ
ವಾಕ್ಯವನ್ನು ಕನಕದಾಸರ ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಂಬ ಕೀರ್ತನೆಯಿಂದ ಆರಿಸಿಕೊಳ್ಳಲಾಗಿದೆ. ತಳಮಳಗೊಂಡಿರುವ ಮನವನ್ನು ಸಂತೈಸುವ ಕನಕದಾಸರು, ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷವು ಸೊಗಸಾಗಿ ಬೆಳೆಯಲು ಕಾರಣರಾದವರು ಯಾರು? ಅದಕ್ಕೆ ಕಟ್ಟೆಕಟ್ಟಿ ನೀರು ಎರೆದವರು ಯಾರು? ಜಗದ ಸೃಷ್ಟಿಗೆ ಕಾರಣಕರ್ತನಾದ ಭಗವಂತನೇ ಜವಾಬ್ದಾರಿ ಹೊತ್ತು ನಮ್ಮೆಲ್ಲರನ್ನೂ ಸಹಲುತ್ತಿರುತ್ತಾನೆ. ಹೆದರಬೇಡ ಎಂದು ಹೇಳುವಾಗ ಈ ಮಾತು ಬಂದಿದೆ
. ಪವಳದ ಲತೆಗೆ ಕೆಂಪಿಟ್ಟವರು ಯಾರೊ
ವಾಕ್ಯವನ್ನು ಕನಕದಾಸರ ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಂಬ ಕೀರ್ತನೆಯಿಂದ ಆರಿಸಿಕೊಳ್ಳಲಾಗಿದೆ. ತಳಮಳಗೊಂಡಿರುವ ಮನಸ್ಸಿಗೆ ಸಮಾಧಾನ ಹೇಳುವ ಕನಕದಾಸರು, ನವಿಲಿನ ಸೌಂದರ್ಯಕ್ಕೆ ಕಾರಣನಾದವನು ಯಾರು? ಹವಳಕ್ಕೆ ಕೆಂಪುಬಣ್ಣ ನೀಡಿದಾವರು ಯಾರು? ಸವಿಮಾತನಾಡುವ ಗಿಳಿಗೆ ಹಸಿರು ಬಣ್ಣವ ನೀಡಿದವರು ಯಾರು? ಯಾಕಾಗಿ ಹೆದರುವೆ. ಜಗದ ಸೃಷ್ಟಿಗೆ ಕಾರಣಕರ್ತನಾದ ಭಗವಂತನೇ ಜವಾಬ್ದಾರಿ ಹೊತ್ತು ನಮ್ಮೆಲ್ಲರನ್ನೂ ಸಹಲುತ್ತಿರುತ್ತಾನೆ. ಹೆದರಬೇಡ ಎಂದು ಹೇಳುವಾಗ ಈ ಮಾತು ಬಂದಿದೆ
. ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ
ವಾಕ್ಯವನ್ನು ಕನಕದಾಸರ ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಂಬ ಕೀರ್ತನೆಯಿಂದ ಆರಿಸಿಕೊಳ್ಳಲಾಗಿದೆ. ಬೆಟ್ಟದ ತುದಿಯಲ್ಲಿ ಹುಟ್ಟಿದ ಮರಕ್ಕೆ ನೀರೆರೆದವರು ಯಾರು? ಅಡವಿಯೊಳಗೆ ಇರುವ ಮೃಗಪಕ್ಷಿಗಳಿಗೆ ಆಹಾರವನ್ನು ನೀಡುತ್ತಿರುವವರು ಯಾರು? ನವಿಲು , ಹವಳ, ಗಿಳಿಗಳಿಗೆ ಬಣ್ಣವನ್ನು ಹಚ್ಚಿದವರು ಯಾರು? ಕಲ್ಲಿನಲ್ಲಿ ಅಡಗಿಕುಳಿತ ಕಪ್ಪೆಗೆ ಅಲ್ಲಿಯೇ ಆಹಾರ ನೀಡಿದವರಾರು? ಹೆತ್ತ ಅಮ್ಮನಂತೆ  ಆದಿಕೇಶವನೇ ಎಲ್ಲರನ್ನೂ ಸಲಹುವನು ಸಂಶಯಪಡಬೇಡ ಎಂದು ಕನಕದಾಸರು ನೊಂದ ಮನಸ್ಸಿಗೆ ಸಮಾಧಾನ ಹೇಳುತ್ತಾರೆ.
ಒಂದುವಾಕ್ಯ
. ವೃಕ್ಷವು ಎಲ್ಲಿ ಹುಟ್ಟಿತ್ತು?
ಬೆಟ್ಟದ ತುದಿಯಲ್ಲಿ ವೃಕ್ಷವು ಹುಟ್ಟಿತ್ತು.
. ಮೃಗಪಕ್ಷಿಗಳು ಎಲ್ಲಿ ಆಡುತ್ತಿದ್ದವು?
ಮೃಗಪಕ್ಷಿಗಳು ಅಡವಿಯೊಳಗೆ ಆಡುತ್ತಿದ್ದವು
. ಯಾವ ತೆರದಿ ಸ್ವಾಮಿ ನಮ್ಮನ್ನು ಬಿಡದೆ ರಕ್ಷಿಸುವನು?
ಹೆತ್ತ ತಾಯಿಯ ಹಾಗೆ ಭಗವಂತನು ನಮ್ಮನ್ನು ರಕ್ಷಿಸುವನು
.ಅರಗಿಳಿಗೆ ಯಾವ ಬಣ್ಣವನ್ನು ಬಳಿಯಲಾಗಿದೆ?
ಅರಗಿಳಿಗೆ ಹಸಿರು ಬಣ್ಣವನ್ನು ಬಳಿಯಲಾಗಿದೆ.
. ಕಪ್ಪೆಗಳು ಎಲ್ಲಿ ಹುಟ್ಟಿ ಕೂಗುತ್ತವೆ?
ಕಲ್ಲಿನಲ್ಲಿ ಹುಟ್ಟಿ ಕೂಗುತ್ತವೆ.
ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
. ವೃಕ್ಷವನ್ನು ಆದಿಕೇಶವ ಹೇಗೆ ಸಲಹುತ್ತಾನೆ?
ಹುಟ್ಟಿಸಿದ ದೇವರು ತಾನೇ ಎಲ್ಲಕ್ಕೂ ಹೊಣೆಗಾರನಾಗಿರುವ ಆದಿಕೇಶವನು ಬೆಟ್ಟದ ತುದಿಯಲ್ಲಿ ಹುಟ್ಟಿದ್ದ ವೃಕ್ಷಕ್ಕೆ ಕಟ್ಟೆಯನ್ನು ಕಟ್ಟಿ ನೀರನ್ನು ಎರೆದು ಸಲಹುವವನು.

. ಮೃಗಪಕ್ಷಿಗಳನ್ನು ಸ್ವಾಮಿಯು ಹೇಗೆ ರಕ್ಷಿಸುತ್ತಾನೆ?
ಅಡವಿಯೊಳಗೆ ಆಡುವ ಮೃಗ ಪಕ್ಷಿಗಳಿಗೆಲ್ಲ ಹೆತ್ತ ತಾಯಿಯಂತೆ ಜವಾಬ್ದಾರಿ ಹೊತ್ತು ಅಡಿಗಡಿಗೆ ಆಹಾರವನ್ನು ಇತ್ತು ರಕ್ಷಿಸುತ್ತಾನೆ.

ಐದಾರುವಾಕ್ಯಗಳಲ್ಲಿ ಉತ್ತರಿಸಿ.
. ಎಲ್ಲವನ್ನು ರಕ್ಷಿಸುವ ದೇವರು ನಮ್ಮನ್ನೂ ರಕ್ಷಿಸುತ್ತಾನೆ ಎಂಬುದನ್ನು ದಾಸರು ಹೇಗೆ ಹೇಳಿದ್ದಾರೆ?
ಕನಕದಾಸರ ಪ್ರಕಾರ ಎಲ್ಲವನ್ನು ರಕ್ಷಿಸುವ ದೇವರು ನಮ್ಮನ್ನೂ ಬಿಡದೆ ಸಲಹುತ್ತಾನೆ ಎಂದು ಧೈರ್ಯ ಹೇಳುತ್ತಾ ಬೆಟ್ಟದ ಮೇಲೆ ಹುಟ್ಟಿದ ವೃಕ್ಷಕ್ಕೆ ಕಟ್ಟೆಕಟ್ಟಿ ನೀರು ಎರೆದವರು ಯಾರು? ಅಡವಿಯ ಮೃಗಗಳಿಗೆ ಅಲ್ಲಿಯೇ ಆಹಾರ ಒದಗಿಸವನು ಯಾರು? ಏತಕ್ಕಾಗಿ ಸಂಶಯಗೊಳ್ಳುವೆ ಎಂದು ಮನಕ್ಕೆ ಸಮಾಧಾನ ನೀಡುತ್ತಾರೆ.
. ಕನಕದಾಸರು ತಲ್ಲಣಿಸದಿರು ಮನವೆ ಎನ್ನಲು ಕಾರಣವೇನು?
ಸಮಸ್ಯೆಗಳು ಸಹಜವಾಗಿ ಎಲ್ಲರನ್ನೂ ಕಾಡುತ್ತವೆ ಇಂತಹ ಸಮಯದಲ್ಲಿ ಸಮಾಧಾನದ ಮಾತುಗಳು ಮನಸ್ಸಿಗೆ ಮುದನೀಡುತ್ತವೆ. ಸಮಸ್ಯೆಗೆ ಹೆದರುವುದು ಸರಿಯಲ್ಲ. ಬೆಟ್ಟದ ಮೇಲಿನ ವೃಕ್ಷಕ್ಕೆ ಕಟ್ಟೆ ಕಟ್ಟಿ ನೀರೆರೆದವರು, ಅಡವಿಯ ಜೀವಜಾಲಕ್ಕೆಲ್ಲಾ ಆಹಾರದ ವ್ಯವಸ್ಥೆ ಮಾಡಿದವರು ಯಾರು, ನವಿಲಿಗೆ ಚಿತ್ರಬರೆದದ್ದೇ ಆಗಲಿ ಗಿಳಿಗೆ ಹಸಿರುವರ್ಣ ಬಳಿದವರು ಯಾರು? ಹಾಗಾಗಿ ಯಾವುದೇಸಮಸ್ಯೆಗೆ ಹೆದರದೆ ಏನೇ ಬರಲಿ ಮುನ್ನುಗ್ಗು ಎಂಬ ವಿಚಾರವನ್ನು ಕನದಾಸರು ಹೇಳುತ್ತಾ ಧೈರ್ಯ ನೀಡಿದ್ದಾರೆ.

~~~ಓಂ~~~

3 comments:

  1. ಕನ್ನಡ ಸಾಹಿತ್ಯವನ್ನು ಬೆಳೆಸುತ್ತಿರುವ ಪ್ರಯತ್ನ ಗ್ರೇಟ್

    ReplyDelete
  2. Last question last line first word is has been typed wrong

    ReplyDelete