Sunday, June 29, 2014

ಶಾಸ್ತ್ರೀ ಮಾಸ್ತರರು ಮತ್ತವರ ಮಕ್ಕಳು

ಗದ್ಯಭಾಗ -4
ಶಾಸ್ತ್ರೀ ಮಾಸ್ತರ ಮತ್ತವರ ಮಕ್ಕಳು
ಡಾ. ಚೆನ್ನಣ್ಣ ವಾಲಿಕಾರ.

ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ತೀವ್ರವಾಗಿ ಹಚ್ಚಿಕೊಳ್ಳದೆ, ಆಕ್ಷಣಗಳನ್ನು ಇತರರ ಕಷ್ಟಗಳನ್ನು ನಿವಾರಿಸುವಲ್ಲಿ ತೊಡಗಿಕೊಂಡ ಶಾಸ್ತ್ರಿಮಾಸ್ತರ ಪರಿಚಯವನ್ನು ಇಲ್ಲಿ ಮಾಡಿಕೊಡಲಾಗಿದೆ. ಅಕ್ಷರವಂಚಿತ ಮಕ್ಕಳಿಗೆ ಅಕ್ಷರಕಲಿಸುವ ಮಾಸ್ತರರು ತಮ್ಮ ಹೆಂಡತಿ - ಮಕ್ಕಳನ್ನು ಕಳೆದುಕೊಂಡರೂ ಅನಾಥ ಮಕ್ಕಳಿಗಾಗಿ ತಮ್ಮ ಮನೆಯನ್ನೇ ಅನಾಥಾಲಯವನ್ನಾಗಿಸಿ ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳುವ ಪ್ರಸಂಗ ಇಲ್ಲಿ ಕಂಡುಬರುತ್ತದೆ.

ಒಂದುವಾಕ್ಯದಲ್ಲಿ ಉತ್ತರಿಸಿ.
. ಸೇಂಗಾ ಮಾರುವವನ ದಿನದ ಸಂಪಾದನೆ ಎಷ್ಟು?
ಸೇಂಗಾ ಮಾರುವವನ ದಿನದ ಸಂಪಾದನೆ ದಿನಕ್ಕೆ ೫೦ ರಿಂದ ೬೦ ರೂಪಾಯಿಗಳು ಆಗುತ್ತಿತ್ತು.

. ಗಾಡಿ ಶಹಾಬಾದಿಗೆ ಬಂದಾಗ ಸಮಯ ಎಷ್ಟಾಗಿತ್ತು?
ಗಾಡಿ ಶಹಾಬಾದಿಗೆ ಬಂದಾಗ ಸಮಯ ಮಧ್ಯರಾತ್ರಿ ಹನ್ನೆರಡಾಗಿತ್ತು.

. ಶಾಸ್ತ್ರೀ ಮಾಸ್ತರರ ಹೆಂಡತಿ ಹೆಸರೇನು?
ಶಾಸ್ತ್ರೀ ಮಾಸ್ತರರ ಹೆಂಡತಿ ಹೆಸರು ಅಂಬವ್ವ


. ಮಾಸ್ತರರ ಅವಳಿ ಮಕ್ಕಳ ಸಾವು ಹೇಗಾಯಿತು?
ಲಾರಿಕೆಳಗೆ ಸಿಲುಕಿ ಮಾಸ್ತರರ ಅವಳಿ ಮಕ್ಕಳ ಸಾವು ಉಂಟಾಯಿತು.

. ಮಾಸ್ತರರಿಗೆ ಇನ್ನೂ ಎಷ್ಟು ವರ್ಷ ಸೇವೆ ಇತ್ತು?
ಮಾಸ್ತರರಿಗೆ ಇನ್ನೂ ಹತ್ತು ವರ್ಷ ಸೇವೆ ಇತ್ತು.

. ಮಾಸ್ತರರು ಮನೆಯ ಮುಂದೆ ಬರೆಸಿ ಹಾಕಿದ ಬೋರ್ಡು ಯಾವುದು?
ಮಾಸ್ತರರು ಮನೆಯ ಮುಂದೆ ಅನಾಥ ಬಾಲಕರಾಶ್ರಮ ಎಂದು ಬೋರ್ಡ್ ಬರೆಸಿ ಹಾಕಿದರು.

. ನಿರೂಪಕರನ್ನು ರೂಪಿಸಿದ ಶಿಲ್ಪಿ ಯಾರು?
ಶಾಸ್ತ್ರೀ ಮಾಸ್ತರರು ನಿರೂಪಕರನ್ನು ರೂಪಿಸಿದ ಶಿಲ್ಪಿ

ಸಂದರ್ಭ ಸೂಚಿಸಿ. ವಿವರಿಸಿ.
. ನಾನು ಗಡಬಡಿಸಿ ಎದ್ದು ಗಾಡಿ ಹತ್ತಿದೆ.
ಈ ಮಾತನ್ನು ಡಾ. ಚೆನ್ನಣ್ಣ ವಾಲಿಕಾರ ಅವರ ಶಾಸ್ತ್ರೀಮಾಸ್ತರ ಮತ್ತವರ ಮಕ್ಕಳು ಎಂಬ ಲೇಖನದಿಂದ ಆರಿಸಲಾಗಿದೆ. ಈ ಮಾತನ್ನು ಮಾತಿನಲ್ಲಿ  ಗೆಳೆಯನೊಂದಿಗೆ ಹರಟೆಹೊಡೆಯುತ್ತಿದ್ದಾಗ ರೈಲುಗಾಡಿ ಬಂದಾಗ ತಡಬಡಿಸಿ ಎದ್ದೆ. ಎಂದು ಲೇಖಕರು ಹೇಳುತ್ತಾರೆ.    ಶಹಬಾದಿಗೆ ಹೋಗಲು ರೈಲುನಿಲ್ದಾಣಕ್ಕೆ ಬಂದು ರೈಲು ಬರುವುದು ತಡವಾಗುತ್ತದೆ ಎಂದು ತಿಳಿದಾಗ ಲೇಖಕರು ತಮ್ಮ ಬಾಲ್ಯದ ಗೆಳೆಯನಾದ ಶೇಂಗಾ ಮಾರುವವನೊಂದಿಗೆ ರೈಲುಬರುವವರೆಗೂ ಮಾಟನಾಡುತ್ತಾ ಕುಳಿತಿದ್ದರು. ಗಾಡಿ ಬಂದಾಗ ಗಡಬಡಿಸಿ ಎದ್ದುಗಾಡಿ ಹತ್ತಿದರು ಆತ ಗಾಡಿಯೊಳಗೆ ಸೇಂಗಾ ಮಾರುತ್ತಾ ನಡೆದ.

. ನಾನು  ಸಮ್ಮೋಹನಕ್ಕೊಳಗಾದೆ.
ಈ ಮಾತನ್ನು ಡಾ. ಚೆನ್ನಣ್ಣ ವಾಲಿಕಾರ ಅವರ ಶಾಸ್ತ್ರೀಮಾಸ್ತರ ಮತ್ತವರ ಮಕ್ಕಳು ಎಂಬ ಲೇಖನದಿಂದ ಆರಿಸಲಾಗಿದೆ. ಲೇಖಕರು ತಮ್ಮ ಶಾಲೆಯ ಹಳೆನೆನಪುಗಳನ್ನು ನೆನೆಯುತ್ತಾ ಓದುಗರಿಗೆ ಹೇಳುತ್ತಾರೆ.
ಶಹಾಬಾದಿನಲ್ಲಿ ತಾವು ಓದಿದ್ದ ಹಳೆಯ ಶಾಲೆಯ ವರಾಂಡದಲ್ಲಿ ವಿಶ್ರಾಂತಿ ತೆಗೆದುಕೊಂಡು ನಂತರ ಹೋಗೋಣ ಎಂದುಶಾಲೆಯ ಬಳಿ ಬಂದು ವಿಶ್ರಾಂತಿ ತೆಗೆದುಕೊಳ್ಳಲು ಮಲಗಿದರೂ ನಿದ್ದೆ ಬಾರದೆ ಹಿಂದೆ ಆಟ ಆಡಿದ, ಹುಲ್ಲು ಕಿತ್ತಿದ್ದ, ಜೆಂಡಾ ಏರಿಸಿದ ಸ್ಥಳಗಳನ್ನೆಲ್ಲ ನೋಡುತ್ತ ಸಮ್ಮೋಹನಕ್ಕೆ ಒಳಗಾದೆ  ಎಂದು ಹೇಳುತ್ತಾರೆ.

. ನೆನಪುಗಳು ಮಳೆಯಂತೆ ಸುರಿಯತೊಡಗಿದವು.
ಈ ಮಾತನ್ನು ಡಾ. ಚೆನ್ನಣ್ಣ ವಾಲಿಕಾರ ಅವರ ಶಾಸ್ತ್ರೀಮಾಸ್ತರ ಮತ್ತವರ ಮಕ್ಕಳು ಎಂಬ ಲೇಖನದಿಂದ ಆರಿಸಲಾಗಿದೆ.
ಹಳ್ಳಿಯಲ್ಲಿ ಇದ್ದ ಹುಡುಗನನ್ನು ಶಹಬಾದಿಗೆ ಕರೆದುತಂದು ಕಲ್ಲನ್ನು ಕಡೆದು ವಿಗ್ರಹಮಾಡುವಂತೆ ತನ್ನನ್ನು ನಿರ್ಮಿಸಿದ ಗೌರವ ಶಾಸ್ತ್ರಿಮಾಸ್ತರರಿಗೆ ಸಲ್ಲುವುದು ಎಂಬ ವಿಚಾರವನ್ನುಸ್ಮರಿಸಿದಾಗಲೇ ಹಿಂದಿನ ನೆನಪುಗಳೆಲ್ಲಾ ಮಳೆಯಂತೆ ಸುರಿಯತೊಡಗಿದವು ಎಂದು ಲೇಖಕರು ಹೇಳುತ್ತಾ ತಮ್ಮ ಬಾಲ್ಯಜೀವನವನ್ನು ಸ್ಮರಿಸುತ್ತಾರೆ.

. ನಮ್ಮ ಪಾಲಿಗೆ ನಿತ್ಯ ಹಬ್ಬವಾಗಿರುತ್ತಿತ್ತು.
ಈ ಮಾತನ್ನು ಡಾ. ಚೆನ್ನಣ್ಣ ವಾಲಿಕಾರ ಅವರ ಶಾಸ್ತ್ರೀಮಾಸ್ತರ ಮತ್ತವರ ಮಕ್ಕಳು ಎಂಬ ಲೇಖನದಿಂದ ಆರಿಸಲಾಗಿದೆ.
ಬಾಲ್ಯದಲ್ಲಿ ಅಕ್ಕ ಶಾಲೆಗೆ ಕಳುಹಿಸಿದರೂ ಶಾಲೆಗೆ ಚಕ್ಕರ್ ಹಾಕಿ ದನಕಾಯುವ ಹುಡುಗರೊಂದಿಗೆ ರೊಟ್ಟಿಬುತ್ತಿಕಟ್ಟಿಕೊಂಡು , ಹೊಳೆ, ಹಳ್ಳ , ಕೆರೆ, ಬಾವಿ, ಗಿಡ ಮರ ಬೆಟ್ಟ ಗುಡ್ಡ, ಹಣ್ಣು ಹಂಪಲುಗಳ ಮಧ್ಯೆ ಪೀಪಿ ಊದುತ್ತಾ ಕೃಷ್ಣನಂತೆ ಹುಡುಗಿಯರ ಜೊತೆ ಕಣ್ಣು ಮುಚ್ಚಾಲೆ , ಚಕಾರಾಟ, ಕೋಲಂಬಗುಳ್ಳಿ, ಲೋಡಲೋಡ ತಿಮ್ಮಯ್ಯ ಆಟ ಆಡುವುದೆಂದರೆ ಎಲ್ಲಿಲ್ಲದ ಹಿಗ್ಗು, ದನಗಳನ್ನು ಮೇಯಿಸಲು ಎಲ್ಲೋ ಆಡುತ್ತಾ ಸಂಜೆ ಆದಾಗ ಹಾಡುತ್ತಾ ಕುಣಿಯುತ್ತಾ ಮನೆಗೆ ದನವಾಗಿ , ಪಕ್ಷಿಯಾಗಿ ಬರುತ್ತಿರುವಾಗ ಅದು ನಮ್ಮ ಪಾಲಿಗೆ ನಿತ್ಯ ಹಬ್ಬವಾಗಿರುತ್ತಿತ್ತು.

. ನಾಲ್ಕು ಗೋಡೆಗಳ ಕೋಟೆ ಬಂಧನದಲ್ಲಿ ಬಂಧಿಸಿದರು.
ಈ ಮಾತನ್ನು ಡಾ. ಚೆನ್ನಣ್ಣ ವಾಲಿಕಾರ ಅವರ ಶಾಸ್ತ್ರೀಮಾಸ್ತರ ಮತ್ತವರ ಮಕ್ಕಳು ಎಂಬ ಲೇಖನದಿಂದ ಆರಿಸಲಾಗಿದೆ. ಲೇಖಕರು ಹಳ್ಳಿಬಿಟ್ಟು ಶಾಲೆ ಸೇರಿದುದನ್ನು ಇಲ್ಲಿ ವಿವರಿಸಿದ್ದಾರೆ.
ಲೇಖಕರ ಮಾವ ದನಕಾಯುತ್ತಿದ್ದ ಬಾಲಕನಿಗೆ ಶಾಲೆಕಲಿಸುವ ವಿಚಾರ ಶಾಸ್ತ್ರೀಮಾಸ್ತರರಲ್ಲಿ ಹೇಳಿಕೊಂಡಾಗ ಲೇಖಕರ ತಂದೆ ಲೇಖಕರನ್ನು ಹೊಡೆದು ಬಡಿದು ಗೆಳೆಯರು , ದನಕರುಗಳು , ಹೊಳೆ , ಹಳ್ಳ ಗಿಡಮರ , ಬೆಟ್ಟಗುಡ್ಡಗಳಿಂದ ದೂರ ಮಾಡಿ ಊರಿಗೆ ಕರೆದುಕೊಂಡು ಬಂದು ಶಾಲೆಗೆ ಸೇರಿಸಿದರು. ಇಲ್ಲಿಯವರೆಗೆ ಬಯಲೇ ಶಾಲೆಯಾಗಿತ್ತು ಈಗ ನಾಲ್ಕುಗೋಡೆಗಳ ಬಂಧನದಲ್ಲಿ ಇರಿಸಿದ್ದರು ಎಂದಿದ್ದಾರೆ..

. ಅಕ್ಷರ ಮಳೆ ಧಾರಾಕಾರವಾಗಿ ಸುರಿಯ ತೊಡಗಿತು.
ಈ ಮಾತನ್ನು ಡಾ. ಚೆನ್ನಣ್ಣ ವಾಲಿಕಾರ ಅವರ ಶಾಸ್ತ್ರೀಮಾಸ್ತರ ಮತ್ತವರ ಮಕ್ಕಳು ಎಂಬ ಲೇಖನದಿಂದ ಆರಿಸಲಾಗಿದೆ. ಲೇಖಕರು ಅಕ್ಷರ ಕಲಿತದ್ದನ್ನು ಇಲ್ಲಿ ಹೇಳಲಾಗಿದೆ.
ಊರಿನಿಂದ ಬಂದ ಬಾಲಕ ಯಾರೆಷ್ಟೇ ಹೇಳಿದರೂ ಮೂರು  ನಾಲ್ಕು ತಿಂಗಳ ವರೆಗೆ ಒಂದು ಅಕ್ಷರವನ್ನೂ ಕಲಿಯದೆ ಸದಾ ಹಳ್ಳಿಯ ದನಗಳನ್ನು ನೆನೆಯುತ್ತಾ ಕುಳಿತಿರುತ್ತಿದ್ದ. ದಿನಗಳೆದಂತೆ, ಅಂಬವ್ವನವರು ಸಿಹಿ ತಿನಿಸುಗಳ ತಿನಿಸುತ್ತ ಶಾಸ್ತ್ರಿಗಳು ಸಿನೇಮಾ ತೋರಿಸುತ್ತ ಇದ್ದುದು. ಶಾಸ್ತ್ರೀ ಮಾಸ್ತರರ ಮತ್ತು ಅಂಬವ್ವನವರ ಪ್ರೀತಿಯ ಕಡಲಲ್ಲಿ ಮಿಂದ ಮೇಲೆ ಅಕ್ಷರಮಳೆ ಧಾರಾಕಾರವಾಗಿ ಸುರಿಯತೊಡಗಿತು.

. ಅಲ್ಲಿ ಅಳದವರೆ ಪಾಪಿಗಳಾಗಿದ್ದರು.
ಈ ಮಾತನ್ನು ಡಾ. ಚೆನ್ನಣ್ಣ ವಾಲಿಕಾರ ಅವರ ಶಾಸ್ತ್ರೀಮಾಸ್ತರ ಮತ್ತವರ ಮಕ್ಕಳು ಎಂಬ ಲೇಖನದಿಂದ ಆರಿಸಲಾಗಿದೆಶಾಸ್ತ್ರೀಮಾಸ್ತರರ ಮಕ್ಕಳು ಮತ್ತುಹೆಂಡತಿಯ ಅಂತ್ಯಸಂಸ್ಕಾರದ ಸಮಯದಲ್ಲಿ ನಡೆದ ವಿಚಾರವನ್ನು ಇಲ್ಲಿ ನೀಡಲಾಗಿದೆ. ಒಂದು ದಿನ ಶಾಲೆ ಬೇಗ ಬಿಟ್ಟಿದ್ದರಿಂದ ಹುಡುಗರು ತಾವೇ ರೋಡಿನಮೇಲೆ ನಡೆಯುತ್ತಾ ಆಟವಾಡುತ್ತಾ ಬರುತ್ತಿದ್ದರು ತೀವ್ರವಾದ ವೇಗದಿಂದ ಬಂದ ಲಾರಿಯೊಂದು ಮಕ್ಕಳಿಗೆ ಗುದ್ದಿದಾಗ ಕೂಡಲೇ ಅಸ್ಪತ್ರೆಗೆ ಒಯ್ದರೂ ಪ್ರಯೋಜನವಾಗದೆ ಪ್ರಾಣಬಿಟ್ಟವು. ಅಂಬವ್ವ ಮೂರ್ಚೆಹೋದವಳು ಮತ್ತೆ ಏಳಲಿಲ್ಲ ತಾಯಿಯೊಂದಿಗೆ ಎರಡು ಮಕ್ಕಳ ಹೆಣವನ್ನು ಒಂದೇ ಗುಣಿಯಲ್ಲಿ ಮಲಗಿಸಲಾಯಿತುಅಲ್ಲಿ ನರೆದಿದ್ದ ಜನ ಗೋಳುಕರೆಯಿತು. ಅಲ್ಲಿ ಅಳದವರೇ ಪಾಪಿಗಳಾಗಿದ್ದರು

. ನನ್ನ ಹಿರೀಮಗ ಬಂದ, ನನ್ನ ಹಿರೀಮಗ ಬಂದ.
ಈ ಮಾತನ್ನು ಡಾ. ಚೆನ್ನಣ್ಣ ವಾಲಿಕಾರ ಅವರ ಶಾಸ್ತ್ರೀಮಾಸ್ತರ ಮತ್ತವರ ಮಕ್ಕಳು ಎಂಬ ಲೇಖನದಿಂದ ಆರಿಸಲಾಗಿದೆ.
ಲೇಖಕರನ್ನು ಕಂಡ ಶಾಸ್ತ್ರಿಗಳು ಈ ಮಾತನ್ನು ಹೇಳಿದರು.
ಶಾಸ್ತ್ರೀಮಾಸ್ತರರನ್ನು ಕಾಣಲೆಂದು ಅವರ ಅನಾಥ ಬಾಲಕರಾಶ್ರಮಕ್ಕೆ ಲೇಖಕರು ಬಂದಾಗ, ಮಾಸ್ತರರು ತಮ್ಮ ೭೦ನೇ ವಯಸ್ಸಿನಲ್ಲೂ ವರ್ತಮಾನಪತ್ರಿಕೆ ಓದುತ್ತಾ ಕುಳಿತಿದ್ದವರು ಪತ್ರಿಕೆ ಓದುತ್ತಿದ್ದುದನ್ನು ಬಿಟ್ಟು ಲೇಖಕರನ್ನು ಅಪ್ಪಿ ನನ್ನ ಹಿರಿಮಗ ಬಂದಾ ನನ್ನ ಹಿರಿಮಗ ಬಂದಾ ಎಂದು ಅಳತೊಡಗಿದರು. ಬಹಳ ಕಾಲದಿಂದ ಇವರನ್ನು ಕಾಣದೆ ಇದ್ದುದಕ್ಕೆ ಲೇಖಕರೂ ಅವರನ್ನು ಅಪ್ಪಿ ಅಳತೊಡಗಿದ್ದರು.

ಎರಡುಮೂರು ವಾಕ್ಯಗಳಲ್ಲಿ ಉತ್ತರಿಸಿ.
.ತಾವು ಓದಿದ ಹೈಸ್ಕೂಲ್ ನೆನಪು ಬಂದಾಗ ನಿರೂಪಕರಿಗೆ ಏನೆನಿಸಿತು?
ನಿರೂಪಕರು ೮ನೇ ವರ್ಗದಲ್ಲಿದ್ದಾಗ ಭಾಷಣ, ಲೇಖನ, ಭಾವಗೀತೆ ಸ್ಪರ್ಧೆಗಳಲ್ಲಿ ಬಹುಮಾನ ಪಡೆದದ್ದು, ಶಾಲೆಗೆ ಬಂದ ಹಾಸ್ಯಋಷಿ ಬೀಚಿ, ಪ್ರಕೃತಿಕವಿ ಕಾವ್ಯಾನಂದ, ಜಾನಪದ ಗಾರುಡಿಗ ಬೇಂದ್ರೆ ಕಾವ್ಯಮತ್ತು ಜೀವನ ತರಂಗಗಳನ್ನು ಎಬ್ಬಿಸಿದುದು ನೆನಪಾಯಿತು.

. ನಿರೂಪಕರ ಓರೆ ಕೋರೆಗಳನ್ನು ತಿದ್ದಿದ ಗುರುಗಳು ಯಾರು ಯಾರು?
ನಿರೂಪಕರ ಶಾಲೆಯ ದಿನಗಳಲ್ಲಿ ಸೂಡಿ, ಲಾಲ ,ಶೆಟ್ಟಿ, ದೇಶಪಾಂಡೆ ಗುರುಗಳು ಇವರ ಓರೆ ಕೋರೆಗಳನ್ನು ತಿದ್ದಿದರು.

.ನಿರೂಪಕರ ತಂದೆ ಅವರನ್ನು ಯಾರು ಯಾರಿಂದ ಅಗಲಿಸಿ ಊರಿಗೆ ಕರೆತಂದಿದ್ದರು?
ದನ ಕಾಯುತ್ತಿದ್ದ ನಿರೂಪಕರನ್ನು ಅವರ ಗೆಳೆಯರಿಂದ, ಪ್ರೀತಿಯ ದನಗಳಿಂದ, ಪ್ರೀತಿಸಿದ ಹೊಳೆ , ಹಳ್ಳ ,ಗಿಡ, ಮರ, ಬೆಟ್ಟಗುಡ್ಡ, ಹಣ್ಣುಹಂಪಲು, ಬೋರ‍್ಹುಳಗಳಿಂದ ಅಗಲಿಸಿ ಎಳೆದುಕೊಂಡು ಊರಿಗೆ ಬಂದರು.

. ಪ್ರೈಮರಿ ಶಾಲೆ ಸೇರಿದಾಗ ನಿರೂಪಕರನ್ನು ಅಂಬವ್ವ ಹೇಗೆ ನೋಡಿಕೊಳ್ಳುತ್ತಿದ್ದರು?
ಶಾಸ್ತ್ರಿಮಾಸ್ತರರ ಪತ್ನಿ ಅಂಬವ್ವ ಮುಂಜಾನೆ-ಸಂಜೆ ಸಿಹಿಸಿಹಿ ತಿಂಡಿ-ತಿನಿಸುಗಳನ್ನು , ಮಾಡಿದ ಅಡುಗೆಯನ್ನು ತಿನಿಸುತ್ತಾ ಉಣಿಸುತ್ತ ತನ್ನ ಮಕ್ಕಳಂತೆಯೇ ನಿರೂಪಕರನ್ನೂ ನೋಡಿಕೊಳ್ಳುತ್ತಿದ್ದರು.


.ಮಾಸ್ತರರ ಮಕ್ಕಳ ಶವಯಾತ್ರೆಗೆ ಜನ ಹೇಗೆ ಬಂದಿತ್ತು?
ಶಾಸ್ತ್ರಿಮಾಸ್ತರರ ಮಕ್ಕಳು ಅಪಘಾತದಲ್ಲಿ ಮರಣಹೊಂದಿದ ಸುದ್ದಿ ತಿಳಿದಾಗ ಊರಿಗೆ ಊರೇ ಆಸ್ಪತ್ರೆಯಬಳಿ ನರೆದಿತ್ತು. ಅದು ಶವಯಾತ್ರೆಯಾಗಿರದೆ, ದೇವರ ಜಾತ್ರೆಗೆ ಜನ ಸೇರಿದಂತೆ ಇತ್ತು.

. ಅವಳಿ ಮಕ್ಕಳ ಸಾವಿನ ನಂತರ ಮಾಸ್ತರ ಮತ್ತು ಅಂಬವ್ವನ ಸ್ಥಿತಿ ಏನಾಯಿತು?
ಅವಳಿಮಕ್ಕಳ ಸಾವಿನ ಸುದ್ದಿ ಕೇಳಿ ಅಂಬವ್ವ ಮೂರ್ಚೆಹೋದವಳು  ಮೇಲೇಳಲಿಲ್ಲ.
ಶಾಸ್ತ್ರಿ ಮಾಸ್ತರರು ಹುಚ್ಚಾಗಿ ಹೋದರು. ಸಿಡಿಲು ಬಡಿದಂತೆ ಅವರ ಸ್ಥಿತಿಯಾಗಿತ್ತು.
ಆರು ತಿಂಗಳಾದರೂ ಹಾಸಿಗೆ ಹಿಡಿದವರು ನಿವೃತ್ತಿಗೆ ಅರ್ಜಿಹಾಕಿ ಬಾಡಿಗೆ ಮನೆಯಲ್ಲಿಬಾಲಕರ ಅನಾಥಾಶ್ರಮ ಆರಂಭಿಸಿದರು.

. ಮಾಸ್ತರರು ಬಾಡಿಗೆ ಮನೆಯನ್ನು ಹೇಗೆ ಖರೀದಿಸಿದ್ದರು?
ಮಕ್ಕಳ ಸಾವಿನಿಂದ ಬಹಳ ದುಃಖಿತರಾದ ಶಾಸ್ತ್ರಿಮಾಸ್ತರರು ಹೆಂಡತಿ , ಮಕ್ಕಳ ಹೆಸರಿನಲ್ಲಿ ಇಟ್ಟಿದ್ದ ಜೀವವಿಮೆ, ಬ್ಯಾಂಕಿನ ಹಣ, ನಿವೃತ್ತಿಯಿಂದ ಬಂದ ಹಣ ಎಲ್ಲವನ್ನು ಸೇರಿಸಿ, ತಾವಿದ್ದ ಬಾಡಿಗೆ ಮನೆಯನ್ನು ಖರೀದಿ ಮಾಡಿದರು.

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ.
. ನಿರೂಪಕರ ಬಯಲು ಶಾಲೆಯ ಅನುಭವ ಮತ್ತು ನಂತರ ಶಾಲೆಯ ಅನುಭವಗಳು ಹೇಗಿದ್ದವು?
ನಿರೂಪಕರ ಬಾಲ್ಯ ಆರಂಭವಾದದ್ದೇ ಅಕ್ಕನೂರಿನಲ್ಲಿ. ಕೇರಿಯ ಹುಡುಗರು ದನಕಾಯುವವರಾದ್ದರಿಂದ ನಿರೂಪಕರೂ ಶಾಲೆಗೆ ಚಕ್ಕರ್ ಹಾಕಿ ದನಕಾಯುವ ಹುಡುಗರೊಂದಿಗೆ ಪ್ರತಿನಿತ್ಯ ರೊಟ್ಟಿಬುತ್ತಿಯನ್ನು ಕಟ್ಟಿಕೊಂಡು ಹೋಗಿ, ಹೊಳೆ- ಹಳ್ಳ ಕೆರೆ ಬಾವಿ, ಗಿಡಮರ ಬೆಟ್ಟ ಗುಡ್ಡ, ಹಣ್ಣು ಹಂಪಲುಗಳ ಮಧ್ಯೆ ಬೋರ‍್ಹುಳಗಳನ್ನು ಹಿಡಿಯುತ್ತಾ, ಕಣ್ಣಾಮುಚ್ಚಾಲೆ, ಚಕರಾಟ, ಕೋಲಂಬಗುಳ್ಳಿ ಮೊದಲಾದ ಆಟಗಳನ್ನು ಆಡುವುದು ಸಂಜೆಯಾದಾಗ ಹಾಡುತ್ತ ಕುಣಿಯುತ್ತಾ ಮನೆಗೆ ಬರುವುದು ನಿತ್ಯ ಹಬ್ಬದಂತಿತ್ತು. ಇವೆಲ್ಲವನ್ನು ಕಳೆದುಕೊಂಡ ನಿರೂಪಕರಿಗೆ ಬಯಲಶಾಲೆಯಿಂದ ನಾಲ್ಕು ಗೋಡೆಗಳ ಕೋಟೆಯ ಬಂಧನಕ್ಕೆ ಒಳಗಾದ ಅನುಭವ. ಯಾರು ಎಷ್ಟೇ ಹೇಳಿದರೂ ಮೂರು ನಾಲ್ಕು ತಿಂಗಳವರೆಗೆ ಒಂದು ಅಕ್ಷರವನ್ನೂ ಬರೆಯದೇ ಸದಾ ಬಯಲ ಶಾಲೆಯ ಗುಂಗಿನಲ್ಲಿ ಇರುತ್ತಿದ್ದರು

. ಮಾಸ್ತರು ಮತ್ತು ಅಂಬವ್ವರ ಪ್ರೀತಿ ಕಡಲಲ್ಲಿ ಕತೆಗಾರರ ಬಾಲ್ಯ ಹೇಗೆ ಕಳೆಯಿತು?
ಬಯಲಶಾಲೆಯಿಂದ ನಾಲ್ಕುಗೋಡೆಗಳ ಶಾಲೆಗೆ ಬಂದ ನಿರೂಪಕರು ಮೂರುನಾಲ್ಕು ತಿಂಗಳ ವರೆಗೆ ಒಂದಕ್ಷರವನ್ನೂ ಕಲಿಯದೆ ತನ್ನ ಬಯಲಶಾಲೆಯ ಬಳಗವನ್ನೇ ನೆನೆಯುತ್ತಾ ಇದ್ದರು. ದಿನಕಳೆದಂತೆ ಶಾಸ್ತ್ರಿಮಾಸ್ತರರ ಪತ್ನಿ ಅಂಬವ್ವ ಪ್ರೀತಿಯಿಂದ ಸಿಹಿತಿಂಡಿಗಳನ್ನು ಅಡುಗೆಯನ್ನು ಉಣಬಡಿಸುತ್ತಿದ್ದುದು , ಮಾಸ್ತರರ ಸಹವಾಸದಲ್ಲಿ ಅಕ್ಕನೂರಿನ ನೆನಪುಗಳು ಅಳಿಸಿಹೋಗಿ ಅಂಬವ್ವ-ಶಾಸ್ತ್ರಿಮಾಸ್ತರರ ಪ್ರೀತಿಯ ಕಡಲಲ್ಲಿ ಮಿಂದು ಅಕ್ಷರಪ್ರೀತಿಬೆಳೆಸಿಕೊಂಡವರು.ಕೇವಲ ಮೂರು ತಿಂಗಳಲ್ಲಿ ಅಕ್ಷರಾಭ್ಯಾಸ ಮುಗಿಸಿ ಅದೇ ವರ್ಷ ಒಂದನೇ ತರಗತಿ ಪಾಸಾದರು ಅಲ್ಲಿಂದ ಮುಂದೆ ದನಾಕಾಯುವಾಗ ಹತ್ತಿದ್ದ ಅಡವಿಯ ರುಚಿ ಶಾಲೆಯ ಕಡೆಗೆ ತಿರುಗಿತು. ಶಾಸ್ತ್ರಿಮಾಸ್ತರರ ಹಿರಿಯಮಗನಂತೆ ಇದ್ದ ನಿರೂಪಕರು , ಮನೆಯ ಕೆಲಸಗಳಲ್ಲಿ ನೆರವಾಗುತ್ತಾ ಶಾಲೆಗೆ ಹೋಗುತ್ತಿದ್ದರು.

. ಅವಳಿಮಕ್ಕಳ ಸಾವು ಮಾಸ್ತರರ ಬದುಕನ್ನೇ ಬದಲಾಯಿಸಿದ್ದು ಹೇಗೆ?
ಒಂದು ದಿನ ಶಾಲೆ ಬೇಗ ಬಿಟ್ಟಿದ್ದರಿಂದ ಹುಡುಗರು ತಾವೇ ರೋಡಿನಮೇಲೆ ನಡೆಯುತ್ತಾ ಆಟವಾಡುತ್ತಾ ಬರುತ್ತಿದ್ದರು ತೀವ್ರವಾದ ವೇಗದಿಂದ ಬಂದ ಲಾರಿಯೊಂದು ಮಕ್ಕಳಿಗೆ ಗುದ್ದಿದಾಗ ಕೂಡಲೇ ಅಸ್ಪತ್ರೆಗೆ ಒಯ್ದರೂ ಪ್ರಯೋಜನವಾಗದೆ ಪ್ರಾಣಬಿಟ್ಟವು. ಅಂಬವ್ವ ಮೂರ್ಚೆಹೋದವಳು ಮತ್ತೆ ಏಳಲಿಲ್ಲ ಶಾಸ್ತ್ರಿ ಮಾಸ್ತರರು ಹುಚ್ಚಾಗಿ ಹೋದರು. ಸಿಡಿಲು ಬಡಿದಂತೆ ಅವರ ಸ್ಥಿತಿಯಾಗಿತ್ತು. ಆರು ತಿಂಗಳಾದರೂ ಹಾಸಿಗೆ ಹಿಡಿದವರು ಬಹಳವಾಗಿ ಯೋಚಿಸಿ ಇನ್ನೂ ೧೦ವರ್ಷ ಸೇವೆ ಇದ್ದರೂ ನಿವೃತ್ತಿಗೆ ಅರ್ಜಿಹಾಕಿದರು. ಮಕ್ಕಳ ಸಾವಿನಿಂದ ಬಹಳ ದುಃಖಿತರಾದ ಶಾಸ್ತ್ರಿಮಾಸ್ತರರು ಹೆಂಡತಿ , ಮಕ್ಕಳ ಹೆಸರಿನಲ್ಲಿ ಇಟ್ಟಿದ್ದ ಜೀವವಿಮೆ, ಬ್ಯಾಂಕಿನ ಹಣ, ನಿವೃತ್ತಿಯಿಂದ ಬಂದ ಹಣ ಎಲ್ಲವನ್ನು ಸೇರಿಸಿ, ತಾವಿದ್ದ ಬಾಡಿಗೆ ಮನೆಯನ್ನು ಖರೀದಿ ಮಾಡಿದರು.ಮನೆಯ ಮುಂದೆ ಅನಾಥ ಬಾಲಕರಾಶ್ರಮ ಎಂದು ಬೋರ್ಡ್ ಬರೆಸಿ ಹಾಕಿದರು. ಶಾಲೆಗೆ ಓದಲು ಬರುವ ನಿರ್ಗತಿಕ , ಬಡವ , ಅನಾಥ ಮಕ್ಕಳನ್ನು ಸೇರಿಸಿಕೊಂಡು ಅವರ ಊಟ ವಸತಿ, ಬಟ್ಟೆ , ಪುಸ್ತಕಗಳ ಖರ್ಚು ನೋಡಿಕೊಳ್ಳುತ್ತಾ ತಮ್ಮ ಹೆಂಡತಿ ಮಕ್ಕಳ ಸಾವಿನ ನೋವನ್ನು ಮರೆಯತೊಡಗಿದರುಹೀಗೆ ಶಾಸ್ತ್ರಿಮಾಸ್ತರರ ಬದುಕು ಬದಲಾಗಿಹೋಯಿತು.

. ಅನಾಥ ಬಾಲಕರಾಶ್ರಮವನ್ನು ಶಾಸ್ತ್ರಿಮಾಸ್ತರರು ಹೇಗೆ ಪ್ರಾರಂಭಿಸಿದರು?
ಶಾಸ್ತ್ರಿ ಮಾಸ್ತರರು ಹುಚ್ಚಾಗಿ ಹೋದರು. ಸಿಡಿಲು ಬಡಿದಂತೆ ಅವರ ಸ್ಥಿತಿಯಾಗಿತ್ತು. ಆರು ತಿಂಗಳಾದರೂ ಹಾಸಿಗೆ ಹಿಡಿದವರು ಬಹಳವಾಗಿ ಯೋಚಿಸಿ ಇನ್ನೂ ೧೦ವರ್ಷ ಸೇವೆ ಇದ್ದರೂ ನಿವೃತ್ತಿಗೆ ಅರ್ಜಿಹಾಕಿದರು ಮಕ್ಕಳ ಸಾವಿನಿಂದ ಬಹಳ ದುಃಖಿತರಾದ ಶಾಸ್ತ್ರಿಮಾಸ್ತರರು ಹೆಂಡತಿ , ಮಕ್ಕಳ ಹೆಸರಿನಲ್ಲಿ ಇಟ್ಟಿದ್ದ ಜೀವವಿಮೆ, ಬ್ಯಾಂಕಿನ ಹಣ, ನಿವೃತ್ತಿಯಿಂದ ಬಂದ ಹಣ ಎಲ್ಲವನ್ನು ಸೇರಿಸಿ, ತಾವಿದ್ದ ಬಾಡಿಗೆ ಮನೆಯನ್ನು ಖರೀದಿ ಮಾಡಿದರು.ಮನೆಯ ಮುಂದೆ ಅನಾಥ ಬಾಲಕರಾಶ್ರಮ ಎಂದು ಬೋರ್ಡ್ ಬರೆಸಿ ಹಾಕಿದರು. ಶಾಲೆಗೆ ಓದಲು ಬರುವ ನಿರ್ಗತಿಕ , ಬಡವ , ಅನಾಥ ಮಕ್ಕಳನ್ನು ಸೇರಿಸಿಕೊಂಡು ಅವರ ಊಟ ವಸತಿ, ಬಟ್ಟೆ , ಪುಸ್ತಕಗಳ ಖರ್ಚು ನೋಡಿಕೊಳ್ಳುತ್ತಾ ತಮ್ಮ ಹೆಂಡತಿ ಮಕ್ಕಳ ಸಾವಿನ ನೋವನ್ನು ಮರೆಯತೊಡಗಿದರು.

. ಬದಲಾದ ಶಹಬಾದನ್ನು ಲೇಖಕರು ಹೇಗೆ ನಿರೂಪಿಸಿದ್ದಾರೆ?
ಶಾಸ್ತ್ರಿಮಾಸ್ತರರ ಪತ್ರಕಂಡು ಕೂಡಲೇ ಶಹಬಾದಿಗೆ ರೈಲಿನಲ್ಲಿ ಹೊರಟ ನಿರೂಪಕರು ರಾತ್ರಿಒಂದುಗಂಟೆಗೆಲ್ಲ ಶಹಬಾದ್ ತಲುಪಿದ್ದರು. ಅಲ್ಲಿಯೇ ತಾವು ಓದಿದ್ದ ಹೈಸ್ಕೂಲು ನೆನಪಾಗಿ ಅಲ್ಲಿ ಹೋಗಿ ವಿಶ್ರಾಂತಿ ತೆಗೆದುಕೊಂಡರು. ಮುಂಜಾನೆ ಎದ್ದು ಬಾಲಕರ ಅನಾಥಾಶ್ರಮದ ಕಡೆಗೆ ಹೊರಟರು. ಶಹಬಾದ್ ನಗರವು ಎಸಿಸಿ ಸಿಮೆಂಟ್ ಕಂಪನಿ  , ಎಬಿಎಲ್ ಕಂಪನಿ ಜನರಿಂದ ತುಂಬಿಹೋಗಿತ್ತುಊರಿನ ನಾಲ್ಕು ದಿಕ್ಕಿಗೂ ಊರು ಒಂದೊಂದು ಮೈಲಿನವರೆಗೆ ಬೆಳೆದಿತ್ತು. ನೀರು ತುಂಬುವ , ಸಂಡಾಸಿಗೆ ಹೊರಟಿರುವ , ಕೆಲಸಕ್ಕಾಗಿ ಹೊರಟಿರುವ, ಊರಿಗೆಹೋಗುವ ಕಾಯಿಪಲ್ಲೆ ತುಂಬಿಕೊಂಡುಬರುವ ಹೋಟೆಲು ಅಂಗಡಿ ತೆರೆಯುವ ಜನರನ್ನು ನೋಡುತ್ತಾ ಮುಂದೆ ನಡೆದರು , ರಸ್ತೆಯಲ್ಲಿತಮ್ಮೊಂದಿಗೆ ಓದಿದವರಾದರೂ ಕಾಣುವರೋ ಎಂದು ಹುಡುಕುತ್ತಾ ನಡೆದರು ಯಾರೂ ಕಾಣಲಿಲ್ಲ.



. ಶಾಸ್ತ್ರಿಮಾಸ್ತರರ ವ್ಯಕ್ತಿತ್ವವನ್ನು ನಿರೂಪಿಸಿ.
ಶಾಸ್ತ್ರಿಮಾಸ್ತರರು ತಮ್ಮ ಹಿರಿಯಮಗನೋ ಎಂಬಂತೆಯೇ ತಮ್ಮಲ್ಲಿ ಒಬ್ಬನನ್ನಾಗಿ ನಿರೂಪಕರನ್ನು ಕಾಣುತ್ತಿದ್ದರು. ಮೊದಲಬಾರಿಗೆ ಬಯಲಶಾಲೆಯಿಂದ ನಾಲ್ಕುಗೋಡೆಗಳ ಶಾಲೆಗೆ ನಿರೂಪಕರನ್ನು ಕರೆತಂದಾಗ ನಿರೂಪಕರು ಓದದೆಯೇ,ಬರೆಯದೆಯೇ ಇದ್ದಾಗ ಓದು,  ಅಕ್ಷರ ಕಲಿ ಎಂದು ಒತ್ತಾಯಿಸದೆ ತಾವುನೋಡಿದ ಸಿನೆಮಾಗಳನ್ನು ತೋರಿಸುತ್ತಿದ್ದರು. ಶಾಸ್ತ್ರಿಗಳ ಮತ್ತು ಅವರಪತ್ನಿ ಅಂಬವ್ವನವರ ಪ್ರೀತಿಯಕಡಲಲ್ಲಿ ಮಿಂದ ನಿರೂಪಕರಿಗೆ ಅಡವಿರುಚಿ ಕಡಿಮೆಯಾಗಿ ಶಾಲೆಯಕಡೆಗೆ ಮನಸ್ಸು ತಿರುಗುತ್ತದೆ.ನಿರೂಪಕರು ನಾಲ್ಕನೆತರಗತಿ ಪಾಸ್ ಆಗುವಾಗ ಶಾಸ್ತ್ರಿಮಾಸ್ತರರಿಗೆ ಅವಳಿಮಕ್ಕಳಾದುವು ಮನೆಗೆ ಬಂದವರೊಂದಿಗೆಲ್ಲಾ ತಮಗೆ ಮೂರುಮಕ್ಕಳು ಎಂದೇ ಹೇಳುತ್ತಿದ್ದರು. ಮಕ್ಕಳ ಮತ್ತು ಹೆಂಡತಿಯ ಅಕಾಲಿಕ ಮರಣದಿಂದ ಹುಚ್ಚರಂತಾಗಿದ್ದ ಮಾಸ್ತರರು ಆರುತಿಂಗಳವರೆಗೆ ಹಾಸಿಗೆ ಹಿಡಿದವರು ಬಹಳ ಯೋಚಿಸಿ ತಮ್ಮ ಶಿಕ್ಷಕವೃತ್ತಿಗೆ ರಾಜಿನಾಮೆನೀಡಿ, ಹೆಂಡತಿಮಕ್ಕಳ ಅಗಲಿಕೆಯ ನೋವನ್ನು ಮರೆಯಲು ತಾವಿದ್ದ ಬಾಡಿಗೆಮನೆಯನ್ನು ಕೊಂಡುಕೊಂಡು ಅನಾಥ ಬಾಲಕರ ಆಶ್ರಮವನ್ನಾಗಿ ಪರಿವರ್ತಿಸಿದರು. ಅನಾಥಮಕ್ಕಳ ಊಟ,ವಸತಿ, ಬಟ್ಟೆ, ಪುಸ್ತಕಮೊದಲಾದ ಖರ್ಚುಗಳನ್ನು ನೋಡಿಕೊಳ್ಳುತ್ತಾ ನೋವನ್ನು ನಲಿವಾನ್ನಾಗಿಸುತ್ತಾ ಇದ್ದರು. ಶಹಬಾದಿಗೆ ನಿರೂಪಕರು ಬಂದ ಸುದ್ದಿಕೇಳಿ ಪೇಪರ್ ಓದುತ್ತಿದ್ದ ಅವರು ನಿರೂಪಕರನ್ನು ಅಪ್ಪಿ ನನ್ನ ಹಿರಿಮಗಬಂದ ಹಿರಿಮಗ ಬಂದ ಎಂದು ಜೋರಾಗಿ ಅಳತೊಡಗಿದಾಗ ತನ್ನನ್ನು ರೂಪಿಸಿದ ಶಿಲ್ಪಿಯನ್ನು ಇಲ್ಲಿಯವರೆಗೆ ಮರೆತು ಕುಂತಿದ್ದಕ್ಕೆ ನಿರೂಪಕರೂ ಕರಗಿ ಮೋಡವಾಗಿ ಸುರಿಯತೊಡಗಿದರು.
~~~~~~ಓಂ~~~~~~~~~~


2 comments: