ಬೋಳಾಗುತ್ತಿವೆ ಬೆಟ್ಟಗಳು
ಬರಿದಾಗುತ್ತಿವೆ ನದಿಗಳು
ಅಂತೆಯೇ ಮೌಲ್ಯಗಳು
ಭುವಿಯಿಂದ
ಬೆತ್ತಲಾಗುತ್ತಿವೆ ಕಾಡುಗಳು
ಕರಗುತ್ತಿವೆ ಗುಡ್ಡಗಳು
ಅಂತೆಯೇ ಗುಣಗಳು
ಮಾನವನಿಂದ
ಅಳಿವಿನಂಚಿಗೆ ಸೇರಿವೆ
ಜೀವ ಜಾಲಗಳು
ತಿಳಿವಿನಂಚಿಗೆ ತಲುಪಿವೆ
ಮಾನವ ಜೀವಿಗಳು
ಎನ್ನುವ ಭ್ರಮೆಯಿಂದ
ಆಡಿದ್ದಾಗಿದೆ,
ಮಾಡಿದ್ದಾಗಿದೆ,
ಕುಣಿದದ್ದೂ ಆಗಿದೆ,
ಈಗ
ಉಳಿಸಬೇಕಿದೆ
ಮೌಲ್ಯಗಳ,
ಕಾಡುಗಳ,
ನದಿಗಳ
ಅಂತೆಯೇ
ಭುವಿಯ
ಮಾನವನ
ದಾಹದಿಂದ
ಬರಿದಾಗುತ್ತಿವೆ ನದಿಗಳು
ಅಂತೆಯೇ ಮೌಲ್ಯಗಳು
ಭುವಿಯಿಂದ
ಬೆತ್ತಲಾಗುತ್ತಿವೆ ಕಾಡುಗಳು
ಕರಗುತ್ತಿವೆ ಗುಡ್ಡಗಳು
ಅಂತೆಯೇ ಗುಣಗಳು
ಮಾನವನಿಂದ
ಅಳಿವಿನಂಚಿಗೆ ಸೇರಿವೆ
ಜೀವ ಜಾಲಗಳು
ತಿಳಿವಿನಂಚಿಗೆ ತಲುಪಿವೆ
ಮಾನವ ಜೀವಿಗಳು
ಎನ್ನುವ ಭ್ರಮೆಯಿಂದ
ಆಡಿದ್ದಾಗಿದೆ,
ಮಾಡಿದ್ದಾಗಿದೆ,
ಕುಣಿದದ್ದೂ ಆಗಿದೆ,
ಈಗ
ಉಳಿಸಬೇಕಿದೆ
ಮೌಲ್ಯಗಳ,
ಕಾಡುಗಳ,
ನದಿಗಳ
ಅಂತೆಯೇ
ಭುವಿಯ
ಮಾನವನ
ದಾಹದಿಂದ
No comments:
Post a Comment