Friday, April 27, 2018

ಎತ್ತ ಸಾಗುತ್ತಿದೆ ದೇಶ
ಇವನ ತುಳಿದು
ಅವನ ಕೊಂದು
ಮತ್ಯಾರನೋ ಓಲೈಸಿ ,
ಇನ್ಯಾರಿಗೋ ಸೆರಗುಹಾಸಿ
ಜಾತಿ -ಮತ -ಭಾಷೆ -ಪಂಥಗಳ 

ನೆಲೆಗಟ್ಟಲ್ಲಿ ಒಗ್ಗೂಡಿ
ದೇಶ- ಧರ್ಮ -ಸಂಸ್ಕೃತಿಯ ಮೇಲೆತ್ತುವ 

ಮಾತುಗಳನಾಡುತ್ತಾ,
ಬೆನ್ನಲ್ಲೇಚೂರಿಹಾಕುತ್ತಾ
ಆಸ್ತಿಕ-ನಾಸ್ತಿಕ ಓಟುಗಳ 

ಬಾಚಿಕೊಳ್ಳುತ್ತಾ
ಸಿಕ್ಕಿದ್ದೆಲ್ಲವ ನೆಕ್ಕುತ್ತ
ಹುರಿದು ಮುಕ್ಕುತ್ತ 
ದ್ವೇಷ ಕಾರುತ್ತ 

ವೇಗದ ಬದುಕ ಸಾಗಿಸುತ್ತಾ 
ಭೂತಾಯಿಯ 

ಬೆತ್ತಲ ಮಾಡುತ್ತಾ ತಾನೂ ಬೆತ್ತಲಾಗುತ್ತಾ...

No comments:

Post a Comment