Saturday, April 28, 2018

ಬೆನ್ ಯಹೂದ 
ಕೊಟ್ಟಕರೆಗೆ ಜಗತ್ತಿನ 
ಮೂಲೆಮೂಲೆಗಳಲ್ಲಿ 
ಪ್ರತಿಧ್ವನಿ ,
ಇಸ್ರೇಲಿನ ಹಕ್ಕಿ 
ಮರಳಿತು ಗೂಡಿನೆಡೆಗೆ
ಹಳೆಯಹಾಡಿಗೆ 

ಹೊಸರಾಗ 
ಮೂಡಿತ್ತು
 ಚಿಂದಿಗಳಲ್ಲಿ 
ನಿಘಂಟು
ಅರಬರ ಕಪಿಮುಷ್ಟಿಯಲ್ಲಿ 
ನಲುಗಿದ್ದಕ್ಕಿಂತ 
ಸಂಪ್ರದಾಯದ ಬೇಗೆಯಲಿ
 ನವೆದಿತ್ತು ಜೀವ
ಆಸೆಚಿಗುರಿತು
 ಬೀಜಬಲಿಯಿತು
 ಚಿಂತನೆಗೆ ಗರಿಮೂಡಿತ್ತು 
ಡೀರ್ ನೊಂದಿಗೆ
ನೈರಾಶ್ಯದ ಚಂಡಮಾರುತದಲ್ಲೂ 
ಆಶಾದೀಪ ತೇಲಿಬಂದಿತ್ತು
ಸಾಗರದ ತೀರಕ್ಕೆ . 
ಜಗದ ಜನಮಾನಸ ಎಲ್ಲಿದ್ದರೂ ಒಂದೇ ....
ದೇಶ ಭಾಷೆಗೆಂದು ದುಡಿದ 

ಜೀವಿಗಳ ಜೀವಿತವೇ ಪ್ರಶ್ನೆಯಾದಾಗ 
ಜೀವಮುದುಡಿ
ದೀಪ ಆರುತ್ತದೆಯಾದರೂ 

ಪ್ರಯತ್ನ ಹುಸಿಯಾಗಲಿಲ್ಲ 
ಮತ್ತೆಹೊತ್ತಿತ್ತು ಹೀಬ್ರೂಹಣತೆ.

No comments:

Post a Comment