Saturday, April 28, 2018



ನನ್ನ ಹಿರಿಯರೊಬ್ಬರು ಹೇಳಿದ ಕಥೆ ನೆನಪಾಗುತ್ತಿದೆ.
ನದೀ ಸ್ನಾನಕ್ಕೆಂದು ಹೋದ ಋಷಿಯೊಬ್ಬ ನದಿಯಲ್ಲಿಳಿದು ಮುಳುಗಬೇಕು ಎನ್ನುವಷ್ಟರಲ್ಲಿ ಎಲ್ಲಿಂದಲೋ ತೇಲಿ ಬಂದ ಚೇಳು ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದುದು ಕಂಡಿತು. ಕೂಡಲೇ ತನ್ನ ಬೊಗಸೆಯಲ್ಲಿ ಅದನ್ನು ಎತ್ತಿ ಕೊಳ್ಳಲು ಕೂಡಲೇ ವಿಷದ ಕೊಂಡಿಯಿಂದ ಆ ಋಷಿಯ ಕೈಗೆ ಕುಟುಕಿತು. ಋಷಿ ನೋವಿನಿಂದ ಚೀರುತ್ತಾ ಕೈಕೊಡವಿದ ಚೇಳು ನೀರಿಗೆ ಬಿದ್ದು ಒದ್ದಾಡುವುದು,  ಋಷಿ ಅದನ್ನು ಎತ್ತಿಕೊಳ್ಳುವುದು, ಅದು ತನ್ನ ಕೊಂಡಿಯಿಂದ ಕುಟುಕುವುದು. ಹೀಗೆಯೇ ಹತ್ತಾರು ಬಾರಿ ಆಯಿತು. ಆದರೂ ಬಿಡದೆ ಋಷಿ ಅದನ್ನು ದಡಮುಟ್ಟಿಸಿದ. ಕೈ ನೀಲಿಗಟ್ಟಿತ್ತು ಅದನ್ನು ಕಂಡ ಯಾತ್ರಿಕ ಪ್ರಶ್ನಿಸುತ್ತಾನೆ " ಮಹಾತ್ಮರೆ ಅದು ಕ್ಷುದ್ರಜೀವ ಅದನ್ನು ಉಳಿಸಲಿಕ್ಕೆ ಏಕೆ ಇಷ್ಟುಕಷ್ಟತೆಗೆದುಕೊಂಡಿರಿ? ಎಂದಾಗ ಆ ಋಷಿ" ಚೇಳು ಸಾವಿನ ದವಡೆಯಲ್ಲಿದ್ದರೂ ತನ್ನ ಹುಟ್ಟುಗುಣವಾದ ಕುಟುಕುವುದನ್ನು ಬಿಡಲಿಲ್ಲ , ನಾನು ಓರ್ವ ಮನುಷ್ಯ, ಮೇಲಾಗಿ ಸಂತ, ಜೀವದಯೆ ನನ್ನ ಕರ್ತವ್ಯ. ಎಂದ.

ಇನ್ನೊಂದು ಕಥೆ ಗುಜರಾತಿನ ತೀರಪ್ರದೇಶದ ರಾಜನೊಬ್ಬನ ಬಳಿ ನಿರಾಶ್ರಿತರ ಗುಂಪೊಂದು ಬಂತು ಅದರ ನಾಯಕ ಇರಲು ಸ್ಥಳ ಬೇಡಿದ. ರಾಜ  ನಮ್ಮಲ್ಲಿ ಅನೇಕ ರೀತಿನೀತಿಗಳನ್ನು ಆಚರಿಸುವ ಜನರಿದ್ದಾರೆ. ಅವರ ಸಂಸ್ಕೃತಿ ಬೇರೆ, ನಿಮ್ಮಸಂಸ್ಕೃತಿ ಬೇರೆ . ಅವರಿಂದ ನಿಮಗೂ, ನಿಮ್ಮಿಂದ ಅವರಿಗೂ ಅಭಿ ಪ್ರಾಯ ಭೇದ  ಬರಬಹುದು. ನಿಮಗೆ ಆಶ್ರಯ ನೀಡುವುದಿಲ್ಲ ಎಂದಾಗ ನಿರಾಶ್ರಿತರ ಮುಖಂಡ ಒಂದು ಲೋಟಹಾಲನ್ನು ಹಾಗೂ ಸಕ್ಕರೆಯನ್ನು ತರಿಸಿ, ಬೆರೆಸಿ, ತೋರಿಸಿ
 ಹಾಲಿನಂತಿರುವ ಈ ದೇಶದಲ್ಲಿ ಸಕ್ಕರೆಯಂತೆ ಸೇರಿಬಾಳುತ್ತೇವೆ ಎಂದು ಮಾತುಕೊಟ್ಟ. ಅಂತೆಯೇ ಅವನ ಗುಂಪು ನಡೆದುಕೊಂಡಿತು. ಆ ಜನಾಂಗವೇ ಪಾರ್ಸಿಜನಾಂಗ.
        ಪಾರ್ಸಿಜನಾಂಗ ಬಾರತದ ಏಳಿಗೆಯಲ್ಲಿ ಹಗಲಿರುಳು ಶ್ರಮಿಸಿರುವುದು ಸ್ತುತ್ಯಾರ್ಹ. ಅದಕ್ಕೆ ಒಂದು ಉದಾಹರಣೆ ಜೆ.ಆರ್.ಡಿ.ಟಾಟಾ. ಹೆಸರೊಂದೇಸಾಕಲ್ಲ ಬೇರೇನೂ ಬೇಕಿಲ್ಲ. ಸಾವಿರಾರು ವರ್ಷಗಳ ಹಿಂದೆ ಇಸ್ರೇಲಿಗರೂ ನಿರಾಶ್ರಿತರಾಗಿ ಬಂದರೂ, ಇದ್ದದ್ದೇ ಗೊತ್ತಾಗಲಿಲ್ಲ.

ಇಂದು ಕಥೆ ಹೊಸರೂಪ ತೆಗೆದುಕೊಳ್ಳುತ್ತಿದೆ. ಸಹಸ್ರಾರು ವರ್ಷಗಳಿಂದ ಗ್ರೀಕರಿಂದ ಹಿಡಿದು ಇಲ್ಲಿಯವರೆಗೆ ನಡೆದದ್ದೆಲ್ಲ ಒಮ್ಮೆ ಅವಲೋಕಿಸಿ; ಮೊಘಲರ ಆಕ್ರಮಣ, ಘಜ್ನಿ, ಘೋರಿಗಳ ಧಾಳಿಗಳು, ಒಂದೇ ಎರಡೇ.  ವ್ಯಾಪಾರಕ್ಕೆಂದು ಬಂದ ಅರಬ್ಬರು ಅವರ ಹಿಂದೆ ತುರುಷ್ಕರು,ಪರ್ಷಿಯನ್ನರು, ಪೋರ್ಚುಗೀಸ್, ಡಚ್, ಫ್ರೆಂಚ್, ಇಂಗ್ಲೀಶರಿಂದಾಗಿ ಅನೇಕ ವೀರಮನೆತನಗಳು ನಾಶಗೊಂಡವು. ಭಾರತೀಯ ಜನತೆ ಬೆಂದು ನೊಂದಿದ್ದಲ್ಲದೇ ಅಂದಿನಿಂದ  ಇವರೆಲ್ಲರ ಅಕ್ರಮ ಸಂತಾನಗಳಿಂದ ನರಳಿ ಒದ್ದಡುತ್ತಿರುವುದಲ್ಲದೆ, ಇವರೆಲ್ಲರ ಕುತಂತ್ರ- ಕುನೀತಿಗಳಿಗಾಗಿ ತನ್ನತನವನ್ನೇ ಕಳೆದುಕೊಳ್ಳುವ ಸ್ಥಿತಿಗೆ ಭಾರತೀಯರು ಬಂದಿದ್ದಾರೆ.
ಮೇಲೆ ಹೇಳಿದ ಋಷಿಯಸ್ಥಾನದಲ್ಲಿ ಭಾರತೀಯರು ನಿಂತಿದ್ದಾರೆ ಚೇಳಿನ ಸ್ಥಾನದಲ್ಲಿ ಐ.ಎಸ್.ಐ.ಎಸ್.  ಮೊದಲಾದ ಉಗ್ರಸಂಘಟನೆಗಳೊಂದಿಗೆ ಸಂಪರ್ಕಹೊಂದಿರುವುದಲ್ಲದೆ ಮಾನವ ಕಳ್ಳಸಾಗಾಣಿಕೆ,ಕೊಲೆ ಸುಲಿಗೆಗಳಲ್ಲಿ ಪರಿಣಿತರಾಗಿರುವ ರೊಹಿಂಗ್ಯಾಮುಸ್ಲಿಂಗಳಿದ್ದಾರೆ.  ರೊಹಿಂಗ್ಯಾಗಳಿಗೆ ಆಶ್ರಯಕೊಡಿ ಎಂದು ಅದೇ ಅಕ್ರಮಸಂತಾನ ಬೊಬ್ಬೆಹೊಡೆಯುತ್ತಿದೆ. ಇಂದು ಜಗತ್ತಿನಲ್ಲಿ ಅನೇಕ ಮುಸ್ಲಿಂರಾಷ್ಟ್ರಗಳಿದ್ದೂ ಭಾರತ ಏಕೆ ಇವರಿಗೆ ಆಸರೆ ನೀಡಬೇಕು? ಅವರೇಕೆ ತಮ್ಮದೇ ಸಹೋದರರಿಗೆ ಆಸರೆ ನೀಡುತ್ತಿಲ್ಲ? ಎಂಬುದು ಅರ್ಥವಾಗುತ್ತಿಲ್ಲ. ಆಸರೆ ಕೊಟ್ಟರೆ ಭಾರತ ಸರ್ವನಾಶವಾಗುವುದು ಖಂಡಿತ ಅಲ್ಲವೇ? ಬಂದರೆ ಪಾರ್ಸಿಗಳಂತೆ, ಇಸ್ರೇಲಿಗಳಂತೆ ಬರಲಿ , ಆದರೆ ವಿಷದ ಸರ್ಪವನ್ನ ಮನೆಯೊಳಗಿಟ್ಟು ಅದು ವಿಶ್ವಾಸಿ ಎಂದು ನಂಬಿಸುತ್ತಿರುವ ಸರ್ಪಗಳ ಬಗ್ಗೆಯೂ ಎಚ್ಚರಿಕೆ ಯಿಂದ ವ್ಯವಹರಿಸುವುದೂ ಮುಖ್ಯ.

No comments:

Post a Comment