ಅನುಗಾಲ ನಿನ್ನ ನಾಮವೆನ್ನ
ನಾಲಿಗೆಯಲಿರುವಾಗ
ಕಣ್ಣಿನಲಿ ನಿನ್ನ ರೂಪವೇ
ನಿಂದಿರುವಾಗ
ಮನದೊಳಗೆ ನೀನೆ
ತುಂಬಿರುವಾಗ
ನಿನ್ನವರ ಸಹವಾಸ
ಎನಗಿರುವಾಗ
ಏನಬೇಡಲಿ ಪ್ರಭುವೆ
ಎಲ್ಲವನು ನೀಡಿರುವೆ
ಆದರೂ....
ಬಾಗಿಲಿಗೆ ಬಂದಿಹೆನು
ಸೆರಗೊಡ್ಡಿ ನಿಂದಿಹೆನು
ಕಷ್ಟದಲಿ ಎದೆಗೆಡದಂತೆ ,
ಸುಖದಲ್ಲಿ ಉನ್ಮತ್ತನಾಗದಂತೆ
ಹರಸು ನೀನು ಹೇ ಪ್ರಭುವೆ
ನಾ ಹಾದಿ ಬಿಡದಂತೆ .
ನಾಲಿಗೆಯಲಿರುವಾಗ
ಕಣ್ಣಿನಲಿ ನಿನ್ನ ರೂಪವೇ
ನಿಂದಿರುವಾಗ
ಮನದೊಳಗೆ ನೀನೆ
ತುಂಬಿರುವಾಗ
ನಿನ್ನವರ ಸಹವಾಸ
ಎನಗಿರುವಾಗ
ಏನಬೇಡಲಿ ಪ್ರಭುವೆ
ಎಲ್ಲವನು ನೀಡಿರುವೆ
ಆದರೂ....
ಬಾಗಿಲಿಗೆ ಬಂದಿಹೆನು
ಸೆರಗೊಡ್ಡಿ ನಿಂದಿಹೆನು
ಕಷ್ಟದಲಿ ಎದೆಗೆಡದಂತೆ ,
ಸುಖದಲ್ಲಿ ಉನ್ಮತ್ತನಾಗದಂತೆ
ಹರಸು ನೀನು ಹೇ ಪ್ರಭುವೆ
ನಾ ಹಾದಿ ಬಿಡದಂತೆ .
No comments:
Post a Comment