Saturday, April 28, 2018

ಹರಿದ ಚಪ್ಪಲಿ ಅಳತೆಮೀರಿದ ಬಟ್ಟೆಧರಿಸಿ
ಸಾಲದ್ದಕ್ಕೆ ಶಾಲೆಬಿಡಿಸಿದ ಮಕ್ಕಳನ್ನ ಜೊತೆಯಲ್ಲಿ 
ಸೇರಿಸಿಕೊಂಡು ಸನಿಕೆ, ಬರಲು, ಕಸದ ಡಬ್ಬಿಯನಿಡಿದು
ಬೀದಿ ಬೀದಿಗಳಲ್ಲಿ ಬಿದ್ದ ಕಸವನ್ನು 
ಹುಡುಕಿತೆಗೆವ ಹಠಮಾರಿಗಳ ದಂಡು !

ಪಾಲೀಶುಮಾಡಿದ ಬೂಟು , ನಡುವಿಗೆ 
ಸೊಂಟಪಟ್ಟಿ , ಹೆಗಲಲಿ 
ಹೊರಟಿದೆ ದೇಶದ ಮೂಲೆಮೂಲೆಗಳಲಿ ಅಡಗಿಹ 
ಶತ್ರುಗಳ ಹುಡುಕಿ ಕೊಲ್ಲುವ ಛಲ 
ಬಿಡದ ತ್ರಿವಿಕ್ರಮರಸೇನೆ 

ಮತ್ತೊಂದೆಡೆ ಪೆನ್ನು ಪುಸ್ತಕಗಳೇ ಉಳಿಸುತ್ತಿಗೆಯಾಗಿ 
ಭವಿಷ್ಯದ ಶಿಲ್ಪಗಳ ಸೃಷ್ಟಿಸುತಿಹ 
ಮನುಕುಲದ ಶಿಲ್ಪಿಗಳು
ಇವರೆಲ್ಲರ ಕಾರ್ಯ ಒಂದೇ ಕ್ರಮಬೇರೆ 
ನೆಲದ ಮಲವ , ಜನರ ಮಾನವ ಗುಡಿಸುವುದು .
ಮಣ್ಣಿನ ಕಂಪನ್ನು ಹರಡುವುದು . ಕನಸ ಬಿತ್ತುವುದು .

No comments:

Post a Comment