ಏಕೀ ಪರದಾಟ
ಅನ್ನಕ್ಕೋ
ಹೊನ್ನಿಗೋ
ಹೆಸರಿಗೋ ಬಸರಿಗೋ
ಬಂದೆಯಾಶ್ಯಾಮ
ಬೆಂದೆದೆಗೆ
ತಂಪು ತಂದೆಯಾ ಶ್ಯಾಮ
ನಿಂದೆಯಾ
ಶ್ಯಾಮ ಕಣ್ಣಬಿಂಬದಲಿ
ಕುಂತೆಯಾರಾಮ
ಬಲಭೀಮ ಹೃದಯ ಮಂದಿರದಲಿ
*ಮುರಳಿಯ
ಆಲಾಪ*
ಕೃಷ್ಣಾ
ನೀನಿಲ್ಲದೆ
ನನ್ನೊಳಗೆ
ಜೀವ ಸಂಚಾರ ಹೇಗೆ
ನಾದ
ಹೊಮ್ಮುವುದಾದರೂ ಹೇಗೆ
ನಿನ್ನುಸಿರು
ನನ್ನೊಳಗೆ ತುಂಬಿದಾಗ
ನಾದೋಪಾಸನೆ
ಅಲ್ಲವೇ
ನನ್ನೊಳಗಿನ
ಹೊರಗಿನ
ಕಲ್ಮಶವ
ಕಳೆವವನೇ
ಹೃಷೀಕೇಶ
ಊದು
ಪಾಂಚಜನ್ಯ
ಎಣ್ಣೆ
ತೀರಿದ ಬಳಿಕ
ಹಣತೆ
ಉರಿದಿತ್ತಾದರೂ ಏಕೆ
ಬತ್ತಿಯ
ಬೂದಿ ಮಾಡಲೆಂದೇ
ಬೀಜದೊಳಗೆ
ಕಾಡು
ಹನಿಯೊಳಗೆ
ಸಾಗರ
ಎನ್ನೊಳಗೆ
ನೀನು
ಬಲವಂತದ
ಸನ್ಯಾಸ
ಹಸಿರೆಲೆಯ
ಕಿತ್ತಂತೆ,
ಒಣ ಎಲೆ
ಉದುರಿದರೆ
ನೋವಿಲ್ಲ
ಎಲ್ಲ ನಿರಾಳ
ಬಿತ್ತಿದ
ಬೀಜ ಹೂವಾಗಲು
ಕಾಲಬೇಕು,
ಕಾಯಬೇಕು
ಈ ಕೂಡಲೇ
ಹೂವಾಗಬೇಕೆಂದರೆ
ಕಾಗದದಹೂವಾದರೂ
ಸಾಕು
ನನ್ನೆಡೆಗೆ
ಅನುಕಂಪದಿ
ಒಂದು ಕ್ಷಣ
ನೀ ನೋಡಿದೆ
ನನ್ನ ಹೃದಯ
ನಿನ್ನೆದೆಯ ಲಯವನ್ನೇ
ನುಡಿಸತೊಡಗಿತ್ತು
ಸಕಲವನ್ನೇ
ಆವರಿಸಿದ ನಿನ್ನ ಕಣ್ಣಜ್ಯೋತಿ
ಅಗಾಧಸಾಗರದ
ಮುತ್ತುಗಳ ರಾಶಿಯನ್ನೆ ಎಸೆದಿದೆ
ನನ್ನ ಮುಂದೆ
ತಾಳಲಾರೆ ಪಡೆದುದ ಹೇಳದೆ ಇರಲಾದೆ
ಪ್ರತಿಯೊಂದು
ಮುಂಜಾವು
ಎನ್ನನೆಚ್ಚರಿಸುವಾಗ
ಹೇಳುತ್ತದೆ
ಇಂದು ನೀ
ಸಂತಸದಿಂದಿರು
ಕಲಿ-ನಲಿ-ಹಂಚು-ಕಸಿದು
ತಿನ್ನಬೇಡ
ಇರುವೆಯಿಂದಲೂ
ಕೂಡಾ!
ಉಡುಗೊರೆಯ
ಜೀವನವ
ಹಾಳುಮಾಡದೆ
ದಿನವ ಕಳೆ
ನಾಳೆ ಮತ್ತೆ
ಸಿಗೋಣ
No comments:
Post a Comment