*ಹೋಗಬೇಕು
ತಡವಾಗುತ್ತಿದೆ*
ಹೋಗಬೇಕು
ತಡವಾಗುತ್ತಿದೆ
ಎಂಬ ಮಾತೇ
ಸದಾ
ಹುಟ್ಟಿನಿಂದ
ಸಾಯೋವರೆಗೂ
ಶಾಲೆ,
ಕಾಲೇಜು, ಕಾರ್ಯಾಲಯಕ್ಕೆ,
ಮತ್ತೊಂದು
ಮಗದೊಂದು ಕೆಲಸ ಕಾರ್ಯಕ್ಕೆ,
ಗೆಳೆಯರ
ಭೇಟಿ, ಸಿನೆಮಾಕ್ಕೆ
ಹೊರೆಟಾಗಲೆಲ್ಲಾ
ಇದೇ ಮಾತೇ
ಹೋಗಬೇಕು ತಡವಾಗುತ್ತಿದೆ.
ಪಾರ್ಕು,
ಸಿನೇಮಾಗಳಲ್ಲಿ,
ಪ್ರಿಯಳ
ತೆಕ್ಕೆಯಲ್ಲಿ
ಮೈ
ಮರೆತಿರುವಾಗ,
ಮನೆ,
ಮನೆಯಾಕೆ ನೆನಪಾಗಿ
ಮತ್ತೆ ಅದೇ
ಮಾತು
ಹೋಗಬೇಕು
ತಡವಾಗುತ್ತಿದೆ
No comments:
Post a Comment