ಕಾಲ ಕಾಯುವುದಿಲ್ಲ*
ಓ ಪ್ರಿಯ ಬಂಧು,
ಕಾಯಬೇಡ! , ನೀ ತಡಮಾಡಬೇಡ !
ಯಾವುದಕ್ಕೂ ,
ಕಾಲಕಾಯುವುದಿಲ್ಲ !!
ಕಾಲ ಬರುವಮುನ್ನ ನಿನ್ನ ಕಾಣುವಾಸೆ,
ಓ ಪ್ರಿಯ ಬಂಧು,
ಕಾಯಬೇಡ! , ನೀ ತಡಮಾಡಬೇಡ !
ಯಾವುದಕ್ಕೂ ,
ಕಾಲಕಾಯುವುದಿಲ್ಲ !!
ಕಾಲ ಬರುವಮುನ್ನ ನಿನ್ನ ಕಾಣುವಾಸೆ,
ಕಾಲನೆನ್ನ ಕರೆದೊಯ್ದ ಮೇಲೆ
ನೀ ಬಂದರೇನು ಚೆನ್ನ!!
ನಾ ಮಾಡಿದ ತಪ್ಪುಗಳ
ನಾ ಮಾಡಿದ ತಪ್ಪುಗಳ
ಮನ್ನಿಸುವೆ ನಾ ಮಡಿದ ಮೇಲೇ,
ಇದ್ದಾಗಲೇ ಮನ್ನಿಸಿದ್ದರೆಷ್ಟುಚೆನ್ನ!!!
ನಾ ಹೋದ ಮೇಲೆ
ನಾ ಹೋದ ಮೇಲೆ
ನನ್ನ ಹಾಡಿಹೊಗಳುವೆ,
ಇರುವಾಗ ಏಕೆನ್ನ ತೆಗಳುವೆ?
ನಾ ಹೋದಮೇಲೆ
ನನ್ನೊಡನೆ ಇನ್ನಷ್ಟು ಕಾಲ
ಇರುವಾಗ ಏಕೆನ್ನ ತೆಗಳುವೆ?
ನಾ ಹೋದಮೇಲೆ
ನನ್ನೊಡನೆ ಇನ್ನಷ್ಟು ಕಾಲ
ಇರಬೇಕಿತ್ತು ಎಂದೆಲ್ಲ ಕೊರಗುವೆ,
ಬದುಕಿರುವಾಗ ನನ್ನ ಕಡೆ
ತಿರುಗಿಯೂ ನೋಡದೆ ಹೇಗಿರುವೆ
ಕಾಲ ಬರುವ ಮುನ್ನ
ಕಾಲ ಬರುವ ಮುನ್ನ
ನಿನ್ನ ಕಾಣುವಾಸೆ ಪ್ರಿಯ ಬಂಧು
ಕಾಲ ಕರೆದೊಯ್ದಮೇಲೆ
ನೀ ಬಂದರೇನು ಚೆನ್ನ!!!
No comments:
Post a Comment