*ಅಜ್ಜಿಯ
ಮೌನ*
ನನ್ನಪ್ಪನ
ಅಮ್ಮ ನನ್ನಜ್ಜಿಗೆ ತೊಂಬತ್ತು ವರ್ಷ
ಅವಳನ್ನು
ಕಂಡಾಗಲೆಲ್ಲಾ ಹುಟ್ಟಿತ್ತಿರುತ್ತದೆ
ಮತ್ತೆ ಅದೇ
ಪ್ರಶ್ನೆ, ಅಂದಿನವರೆಲ್ಲಾ ಹೇಗಿದ್ದರು?
ಹೇಗೆ
ಬಾಳಿದ್ದರು, ಬದುಕಿದ್ದರು?
ಅವಳಿಗೆ ಅದು
ಸಹಜ
ನೆನಪಿನ
ಗಣಿಗೆ ಕೈ ಹಾಕಿ ಒಂದೊಂದೇ
ಮುತ್ತುಗಳ
ಎತ್ತುತ್ತಾ ಹೇಳುತ್ತಾಳೆ...
ಅಂದು
ಇಂತಿನಂತಿರಲಿಲ್ಲ
ಹೊಸಗಾಳಿ
ಬೀಸಿರಲಿಲ್ಲ
ಅವರಿದ್ದರು.
ನಮ್ಮದೇ
ಬದುಕು, ಅದೇ ಹೊಲ ಗದ್ದೆ,
ದನ ಕರ,
ಆಗತಾನೇ ಕರೆದ
ಮೊಲೆಹಾಲ
ಹೀರುವ ಮಕ್ಕಳು,
ನಲಿವಿತ್ತು,
ಸೊಗಸಿತ್ತು, ಬೆವರು ಹರಿಸಿದ್ದು
ಕೈಗೆ ಬಂದಾಗ, ನೆಮ್ಮದಿ ತುಂಬಿತ್ತು.
ಇನ್ನೆಂದಿಗೂ
ಸಿಗದಂತಹ ಕನಸು ಕೈ ಗೂಡಿತ್ತು.
ಇನ್ನೂ
ಆಳಕ್ಕೆ ಇಳಿಯುತ್ತಿದ್ದಳೇನೋ...
ಹೊರಕ್ಕೆಳೆದೆ.
ಇಂದೇನಾಗಿದೆ? ಎಂದೆ.
ಕಣ್ಣತೇಜ
ಉಡುಗಿ ಇಂದು
ಎಲ್ಲವೂ
ಇದ್ದೂ ಇಲ್ಲದಂತಾಗಿದೆ.
ಬಯಸಿದ್ದು
ಕೈಗೆಟುಕುತ್ತೆ. ಜಳ್ಳುಕಾಳುನಂತೆ
ಕ್ಷಣದಲ್ಲಿ
ರಸಹೀನವಾಗಿ.
ನನಗೆ
ನಾಲ್ಕು, ನಾಲ್ಕಕ್ಕೆ
ನಾಲ್ಕು
ಸೇರಿ ಎಂಟು ಹೀಗೆ ಬೆಳೆದಿದೆ ನಂಟು
ಬೆಳೆದ
ದಂಟನು ಕಾಣುವಲ್ಲಿ
ಅವರಿಲ್ಲ
ಎಂಬ ಕೊರಗು ಕಾಡುವುದು ಇಂದು
ಎಂದಳು
ಸೀರೆಯಂಚ ಕಣ್ಣಿಗೆ ಒತ್ತುತ್ತಾ
ಮೌನವ
ತಾಳಿದಳು.