Sunday, June 29, 2014

ನಿರಾಕರಣೆ

ಗದ್ಯ   - ನಿರಾಕರಣೆ
ಡಾ. ವೀಣಾ ಶಾಂತೇಶ್ವರ

ಬಾಗಲಕೋಟೆಯವರು, ಇಂಗ್ಲೀಷ್ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತಿಹೊಂದಿದ ಇವರು  ನಡೆದದ್ದೇ ದಾರಿ- ಸಮಗ್ರ ಕಥಾಸಂಕಲನ, ಗಂಡಸರು ಎಂಬ ಕಾದಂಬರಿ, ಹಾಗೂ ಅನೇಕ ವಿಮರ್ಶಾಕೃತಿಗಳು , ಅನೇಕ ಸಂಪಾದಿತ ಕೃತಿಗಳು, ಅನುವಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಅನೇಕ ಸಣ್ಣ ಕಥೆಗಳು ಅನ್ಯಭಾಷೆಗಳಿಗೆ ಅನುವಾದವಾಗಿವೆ.

ಸಂದರ್ಭದೊಡನೆ ವಿವರಿಸಿ.
. ತಾನು ಅನುಭವಿಸಿದ ಯಾತನೆಗೆ ಎಣೆಯುಂಟೆ?
ಮೇಲಿನ ವಾಕ್ಯವನ್ನು ಡಾ. ವೀಣಾ ಶಾಂತೇಶ್ವರ ಬರೆದಿರುವ ನಿರಾಕರಣೆ ಎಂಬ ಕಥೆಯಿಂದ ಆರಿಸಲಾಗಿದೆ. ಶಕುಂತಲೆ ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾಳೆ.
ದುಷ್ಯಂತ ಮಹಾರಾಜನು ಶಕುಂತಲೆಯನ್ನು ತನ್ನೊಂದಿಗೆ ಕರೆದೊಯ್ಯಲು ಆಶ್ರಮಕ್ಕೆ ಬಂದಿದ್ದಾನೆ ಎಂಬುದನ್ನು ತಿಳಿದು, ಬಂದಿರುವವನು ನಿಜಕ್ಕೂ ದುಷ್ಯಂತನೋ ಅಥವಾ ಅಲ್ಲವೋ? ಹಿಂದೆ ರಾಜಸಭೆಯಲ್ಲಿ ದುಷ್ಯಂತನಿಂದ ತಿರಸ್ಕೃತಳಾದ ನಾನು ಹಗಲು ರಾತ್ರಿಗಳೆನ್ನದೆ ಅಪಮಾನದ ಅಗ್ನಿಕುಂಡದಲ್ಲಿ ಬೇಯುತ್ತಿರುವ ನಾನು ಇಲ್ಲಿಯವರೆಗೂ ಅನುಭವಿಸಿದ ಯಾತನೆಗೆ ಎಣೆಯುಂಟೆ ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾಳೆ.

. ನಾನು ಪಶ್ಚಾತಾಪದ ಬೆಂಕಿಯಲ್ಲಿ ಬೆಂದಿರುವೆ.
ಮೇಲಿನ ವಾಕ್ಯವನ್ನು ಡಾ. ವೀಣಾ ಶಾಂತೇಶ್ವರ ಬರೆದಿರುವ ನಿರಾಕರಣೆ ಎಂಬ ಕಥೆಯಿಂದ ಆರಿಸಲಾಗಿದೆ. ಶಕುಂತಲೆ ತನ್ನೊಳಗೇ ತಾನು ದುಷ್ಯಂತನು ತನ್ನನ್ನು ಕುರಿತು ಹೀಗೆ ಹೇಳುತ್ತಿದ್ದಾನೆ ಎಂದು ಭಾವಿಸುತ್ತಾಳೆ
ದುಷ್ಯಂತ ಮಹಾರಾಜನು ನನ್ನನ್ನು ತನ್ನೊಂದಿಗೆ ಕರೆದೊಯ್ಯಲು ಆಶ್ರಮಕ್ಕೆ ಬಂದಿದ್ದಾನೆ ಎಂಬ ವಿಚಾರವನ್ನು  ತಿಳಿದು, ಅಂದು ಅರಮನೆಯಲ್ಲಿ ಅಷ್ಟೋಂದು ನಿಷ್ಟುರವಾಗಿ ತನ್ನನ್ನು ಹೊರಗಟ್ಟಿದ ಈ ಮನುಷ್ಯ ಇಂದು ನನ್ನೆದುರು ವಿನೀತನಾಗಿ ಮೊಳಕಾಲೂರಿ ನಾನಂದು ಯಾವುದೋ ಬುದ್ಧಿಮಾಂದ್ಯಕ್ಕೊಳಗಾಗಿ ನಿನ್ನನ್ನು ತಿರಸ್ಕರಿಸಿದೆ. ನನ್ನನ್ನು ಕ್ಷಮಿಸು. ನನ್ನದು ಮಹಾಪರಾಧವಾಯಿತು. ನಾನು ಪಶ್ಚಾತಾಪದ ಬೆಂಕಿಯಿಂದ ಬೆಂದಿರುವೆ ಈಗ ನೀನು ನನ್ನನ್ನು ಸ್ವೀಕರಿಸುವ ಗಳಿಗೆ ಬಂದಿದೆ ಎಂದು ನುಡಿಯುತ್ತಿದ್ದಾನೆ  ಎಂದು ಹೇಳಿಕೊಳ್ಳುವಳು.

. ನಮಗಿದು ಅಭ್ಯುದಯ ಕಾಲ ಮಹಾಸುದಿನ.
ಮೇಲಿನ ವಾಕ್ಯವನ್ನು ಡಾ. ವೀಣಾ ಶಾಂತೇಶ್ವರ ಬರೆದಿರುವ ನಿರಾಕರಣೆ ಎಂಬ ಕಥೆಯಿಂದ ಆರಿಸಲಾಗಿದೆ. ಶಕುಂತಲೆ ತನ್ನಷ್ಟಕ್ಕೆ ತಾನೇ ದುಷ್ಯಂತ ಹೀಗೆ ಹೇಳುತ್ತಾನೆ ಎಂದು ಕಲ್ಪಿಸಿಕೊಳ್ಳುತ್ತಾಳೆ. ಪಶ್ಚಾತಾಪದಿಂದ ದುಷ್ಯಂತನು ನನ್ನ ಅಪರಾಧವನ್ನು ಕ್ಷಮಿಸು ಎಂದು ಹೇಳುತ್ತಾ ದೇವಿ, ಕುಮಾರ ಭರತನನ್ನು ಎತ್ತಿಕೋ , ನಾವೆಲ್ಲರೂ ಕೂಡಿ ಪೂಜ್ಯಮಾರೀಚರ ದರ್ಶನ ಪಡೆಯೋಣ ಎಂದಾಗ ಶಕುಂತಲೆಯು ನನ್ನ ಪೂಜೆ , ತಪಸ್ಸುಗಳ ಫಲ ಸಿಕ್ಕಿತು. ಮಹಾರಾಜ ಬಂದಿದ್ದಾನೆ. ಎಂದು ಸಂತೋಷಿಸಲೇ ಅಥವಾ ಅವರ ಹಿಂದೆ ಹೋಗಲು ಲಜ್ಜೆಪಡಲೇ ಎಂದು ಯೋಚಿಸುತ್ತಿರುವಾಗ ದುಷ್ಯಂತ ಏನು ನಾಚಿಕೆಯೇ ನಮಗಿಂದು ಅಭ್ಯುದಯಕಾಲ ಮಹಾಸುದಿನ ಎಂದು ಹೇಳುವನೆಂದು ಕಲ್ಪಿಸಿಕೊಳ್ಳುತ್ತಾಳೆ.

. ಅಮ್ಮಾ, ಈತ ನಿಜವಾಗಿಯೂ ಮಹಾರಾಜ ದುಷ್ಯಂತನೇ! ಈತನೇ ನನ್ನ ತಂದೆಯೇ?
ಮೇಲಿನ ವಾಕ್ಯವನ್ನು ಡಾ. ವೀಣಾ ಶಾಂತೇಶ್ವರ ಬರೆದಿರುವ ನಿರಾಕರಣೆ ಎಂಬ ಕಥೆಯಿಂದ ಆರಿಸಲಾಗಿದೆ. ಮಾತನ್ನು ಭರತನು ತನ್ನ ತಾಯಿಯಾದ ಶಕುಂತಲೆಗೆ ಹೇಳುತ್ತಾನೆ.

ದುಷ್ಯಂತನು  ಆಶ್ರಮಕ್ಕೆ ಬಂದು ತಾನು ಮಾಡಿದ ಅಪರಾಧಕ್ಕೆ ಕ್ಷಮೆಕೇಳಿ ಭರತನೊಂದಿಗೆ ಮಾರೀಚರರ ದರ್ಶನ ಪಡೆಯೋಣ ಎಂದು ಕೇಳಿದಾಗಮೊದಲು ನಾರಿಯ ಮಧುರಭಾವನೆಗಳನ್ನು ಎಗ್ಗಿಲ್ಲದೆ ಹೊಸಕಿಹಾಕುವ ನಂತರ ಬಂದು ಕ್ಷಮೆ ಕೇಳುವ , ಆಕೆ ಕ್ಷಮಿಸಿಯೇ ಕ್ಷಮಿಸುತ್ತಾಳೆ ಎಂಬ ಖಚಿತ ನಂಬಿಕೆ ಹೊಂದಿರುವ ಇಂತಹ ಗಂಡಸಿಗೆ ದಿಕ್ಕಾರ ಎಂದು ಮನದಲ್ಲಿ ಹೇಳಿಕೊಳ್ಳುವಾಗ ಮಗ ಭರತನು ತಾಯಿ ಶಕುಂತಲೆಬಳಿ ಬಂದು ಹೀಗೆ ಕೇಳುತ್ತಾನೆ.



. ನಾನು ತಾಯಿಯ ಕರ್ತವ್ಯ ನಿರ್ವಹಿಸಲೇಬೇಕು.
ಮೇಲಿನ ವಾಕ್ಯವನ್ನು ಡಾ. ವೀಣಾ ಶಾಂತೇಶ್ವರ ಬರೆದಿರುವ ನಿರಾಕರಣೆ ಎಂಬ ಕಥೆಯಿಂದ ಆರಿಸಲಾಗಿದೆ. ಶಕುಂತಲೆ ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾಳೆ.
ಆಶ್ರಮಕ್ಕೆ ಬಂದ ದುಷ್ಯಂತನ ಜೊತೆಗೆ ಅರಮನೆಗೆ ಹೋಗುವುದೋ , ಬೇಡವೋ ಎಂಬ ಗೊಂದಲದಲ್ಲಿದ್ದ ಶಕುಂತಲೆಗೆ  ದುಷ್ಯಂತನು ಮಗನೊಂದಿಗೆ ನನ್ನ ಪ್ರೀತಿಯ ಕುಮಾರ ದುಷ್ಯಂತನ ವಂಶೋದ್ಧಾರಕ, ಪುರುವಂಶದ ಉತ್ತರಾಧಿಕಾರಿ ಎಂಬ ಮಾತುಗಳು ಹೇಳುವುದನ್ನು ಕೇಳಿ ಈಗ ಹೇಗೆ ಮಹಾರಾಜನನ್ನು ಧಿಕ್ಕರಿಸಲಿ, ನಾನು ಕೇವಲ ಹಿಂದೆ ತಿರಸ್ಕೃತಳಾದ, ಈಗ ಜಾಗೃತಳಾದ ಹೆಣ್ಣು ಮಾತ್ರವಲ್ಲ ತಾನೀಗ ಒಬ್ಬ ಮಗನ ತಾಯಿ, ಮಗನ ಅಭಿವೃದ್ಧಿಯೇ ನನ್ನ ಕರ್ತವ್ಯ. ನನ್ನ ತಾಯಿ ನನ್ನನ್ನು ತ್ಯಜಿಸಿ ಮಾಡಿದ ಕರ್ತವ್ಯಲೋಪವನ್ನು ನಾನು ಎಸಗಬಾರದುಎಂದು ಮನದೊಳಗೆ ಹೇಳಿಕೊಳ್ಳುತ್ತಾಳೆ.

. ನೀನಿನ್ನು ನನ್ನನ್ನು ಕ್ಷಮಿಸಲಿಲ್ಲವೇ
ಮೇಲಿನ ವಾಕ್ಯವನ್ನು ಡಾ. ವೀಣಾ ಶಾಂತೇಶ್ವರ ಬರೆದಿರುವ ನಿರಾಕರಣೆ ಎಂಬ ಕಥೆಯಿಂದ ಆರಿಸಲಾಗಿದೆ. ದುಷ್ಯಂತನು ಶಕುಂತಲೆಯನ್ನು ಕುರಿತು ಹೇಳುತ್ತಾನೆ.
ಶಕುಂತಲೆ ಮತ್ತು ಭರತರನ್ನು ಕರೆದೊಯ್ಯುತ್ತಿರುವಾಗ ಶಕುಂತಲೆಯೊಡನೆ ದೇವಿ ಇಂದು ನಾನು ಶಾಂತನಾಗಿದ್ದೇನೆ. ನಾನು ಪರಮಸುಖಿ ಎಂಬ ಮಾತುಗಳನ್ನಾಡುತ್ತಾನೆ. ಆದರೆ ಮಹಾರಾಜನು ಶಕುಂತಲೆಯ ಮುಗ್ಧಮನಸ್ಸನ್ನು ಹೊಸಕಿಹಾಕಿದ್ದುಆ ಭಾವನೆಗಳು ಮತ್ತೆ ಮೂಡಿಬರಲಾರವು. ಶಕುಂತಲೆಯ ಆತ್ಮಸಮ್ಮಾನಕ್ಕೆ ಮಾಯಲಾರದ ಗಾಯವಾಗಿ ಮೊದಲಿನಂತೆ ಮತ್ತೆಂದು ಆಗಲಾರಳು ಎಂಬ ಯೋಚನೆಯಲ್ಲಿ ಮುಳುಗಿ. ಕಡೆಗೆ ರಾಜನೊಂದಿಗೆ ನಾನು ನಿನ್ನೊಂದಿಗೆ ಬಂದಿರುವುದು ಕುಮಾರ ಭರತನ ಶ್ರೇಯಸ್ಸಿಗಾಗಿಮಾತ್ರ ಆತನ ವಿದ್ಯಾಭ್ಯಾಸ, ತರಬೇತಿ, ಸರಿಯಾಗಿ ನಡೆಯಬೇಕು ಎಂಬ ಹಂಬಲದಿಂದ. ಅವನ ಕೀರ್ತಿ ಎಲ್ಲೆಡೆ ಹಬ್ಬುವಂತಾಗಬೇಕು ಹಾಗೆ ಬೆಳೆಸುವ ಕಾರಣದಿಂದ ಮಾತ್ರ ಇಲ್ಲಿದ್ದೇನೆ ಎಂದಾಗ ದುಷ್ಯಂತನು ಈ ಮೇಲಿನ ಮಾತನ್ನು ಹೇಳುತ್ತಾನೆ.

. ಹೆಣ್ಣಾಗಿ ನಾನು ಆತ್ಮಸಾಕ್ಷಿಗೆ ವಿರುದ್ಧವಾಗಿ ವರ್ತಿಸಲಾರೆ.
ಮೇಲಿನ ವಾಕ್ಯವನ್ನು ಡಾ. ವೀಣಾ ಶಾಂತೇಶ್ವರ ಬರೆದಿರುವ ನಿರಾಕರಣೆ ಎಂಬ ಕಥೆಯಿಂದ ಆರಿಸಲಾಗಿದೆ. ಶಕುಂತಲೆ ದುಷ್ಯಂತನಿಗೆ ಹೇಳುತ್ತಾಳೆ.
ಮುನಿಗಳ ಶಾಪದಂತಹ ಬಾಹ್ಯ ಕಾರಣಗಳಿಂದ, ಉಂಗುರವು ಕಳೆದುಹೋಯಿತು ಎಂಬ ಕ್ಷುಲ್ಲಕ ಕಾರಣದಿಂದ ಒಬ್ಬ ಗಂಡಸು ಹೆಣ್ಣನ್ನು ದೂರ ಮಾಡುವುದಾದರೆ ಆ ಪ್ರೀತಿ ಅರ್ಥವಿಲ್ಲ. ಅಥವನ್ನು ಕೂಡಲು ನನ್ನ ಆತ್ಮಸಮ್ಮಾನ ಒಪ್ಪುವುದಿಲ್ಲ. ಹೆಣ್ಣಾಗಿ ನಾನು ಆತ್ಮಸಾಕ್ಷಿಗೆ ವಿರುದ್ಧವಾಗಿ ವರ್ತಿಸಲಾರೆ. ಎಂದು ಖಂಡಿತವಾಗಿ ಹೇಳುತ್ತಾಳೆ.

ಒಂದು ವಾಕ್ಯದಲ್ಲಿ ಉತ್ತರಿಸಿ.
. ರಕ್ಷಾ ಕರಂಡವು ಯಾರ ಕೈಯಿಂದ ಕೆಳಗೆ ಬಿದ್ದಿತು?
ಭರತನ ಕೈಯಿಂದ ರಕ್ಷಾಕರಂಡವು ಬಿದ್ದಿತು .

. ಭರತನ ತಂದೆಯ ಹೆಸರೇನು?
ಭರತನ ತಂದೆಯ ಹೆಸರು ದುಷ್ಯಂತ

. ಶಕುಂತಲೆಯ ತಾಯಿಯ ಹೆಸರೇನು?
ಶಕುಂತಲೆಯ ತಾಯಿಯ ಹೆಸರು ಮೇನಕೆ

. ಯಾರ ಶ್ರೇಯಸ್ಸಿಗಾಗಿ ಶಕುಂತಲೆ ಅರಮನೆಗೆ ಬಂದಿದ್ದಾಳೆ?
ಭರತಕುಮಾರನ ಶ್ರೇಯಸ್ಸಿಗಾಗಿ ಅರಮನೆಗೆ ಬಂದಿದ್ದಾಳೆ.

. ಶಕುಂತಲೆಯ ಅಂತಃಪುರದಿಂದ ದುಶ್ಯಂತ ಹೊರನಡೆದುದು ಹೇಗೆ?
ಶಕುಂತಲೆಯ ಅಂತಃಪುರದಿಂದ ದುಶ್ಯಂತ ಭಾರವಾದ ಹೆಜ್ಜೆಗಳನ್ನಿಡುತ್ತ ನಿಧಾನವಾಗಿ ಹೊರನಡೆದ.

ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
. ಆರ್ಯಪುತ್ರ ಬಂದಿದ್ದಾನೆ ಎಂದಾಗ ಶಕುಂತಲೆಯ ಪ್ರತಿಕ್ರಿಯೆಯೇನು?
ಹೌದೆ? ನಿಜವಾಗಿಯೂ ಆರ್ಯಪುತ್ರನಾದ ದುಷ್ಯಂತನು ಬಂದಿದ್ದಾನೆಯೇ? ಆರ್ಯಪುತ್ರ ಬಂದಿದ್ದಾನೆ ಎಂದು ಕೇಳಲು ಕಾತರಿಸಿದ ಕ್ಷಣ. ಅದೆಷ್ಟುಸಲ ಈ ಕ್ಷಣ ಕಲ್ಪಿಸಿಕೊಂಡು ನಿರೀಕ್ಷೆಯ ನೋವನ್ನು ಸಹಿಸುವ ಶಕ್ತಿ ಪಡೆದಿದ್ದಿಲ್ಲ. ಈಗಲೂ ಇದು ಬರೀ ಕಲ್ಪನೆಯಾಗಿರಬಹುದೇಎಂದು ಪ್ರತಿಕ್ರಿಯಿಸಿದಳು.

. ಅಪರಾಜಿತ ಬಳ್ಳಿಯ ಗುಣಯಾವುದು?
ಅಪರಾಜಿತ ಬಳ್ಳಿಯ ಗುಣವೇನೆಂದರೆ ತಾಯಿ-ತಂದೆಯ ಹೊರತು ಬೇರೆ ಯಾರಾದರೂ ಮುಟ್ಟಿದರೆ ಅದು ಹಾವಾಗಿ ಕಚ್ಚಿಬಿಡುತ್ತದೆ. ಶಕುಂತಲೆಯ ಮಗನಾದ ಭರತನಿಗೆ ಜಾತಕರ್ಮದ ಸಮಯದಲ್ಲಿ ಪೂಜ್ಯ ಮಾರೀಚರು ಅಪರಾಜಿತ ಬಳ್ಳಿಯನ್ನು ಭರತನಿಗೆ ಕಟ್ಟಿದ್ದರು.

. ಶಕುಂತಲೆಯ ಬದುಕು ಏನಾಗಿದೆ ಎಂದು ಯೋಚಿಸುತ್ತಾಳೆ?
ಶಕುಂತಲೆ ತನ್ನಬದುಕು ಒಂದು ಅಗ್ನಿಕುಂಡವಾಗಿದೆ, ಬೆಂಗಾಡಾಗಿದೆ, ದಾವಾನಲವಾಗಿದೆ, ಬತ್ತಿಹೋದ ಸಮುದ್ರವೂ ಆಗಿದೆ. ಇಂತಹ ನಾನು ದುಷ್ಯಂತನನ್ನು ಸ್ವೀಕರಿಸಬೇಕಂತೆ, ಏನಿದು ವಿಧಿಯ ಕ್ರೂರ ಅಪಹಾಸ್ಯ ಎಂದು ಯೋಚಿಸುತ್ತಾಳೆ.

. ಶಕುಂತಲೆ ಕಂಚಿನ ಧ್ವನಿಯಿಂದ ದುಷ್ಯಂತನಿಗೆ ಹೇಳಿದ್ದೇನು?
ಮಹಾರಾಜನು ಶಕುಂತಲೆಯ ಮುಗ್ಧಮನಸ್ಸನ್ನು ಹೊಸಕಿಹಾಕಿದ್ದುಆ ಭಾವನೆಗಳು ಮತ್ತೆ ಮೂಡಿಬರಲಾರವು. ಶಕುಂತಲೆಯ ಆತ್ಮಸಮ್ಮಾನಕ್ಕೆ ಮಾಯಲಾರದ ಗಾಯವಾಗಿ ಮೊದಲಿನಂತೆ ಮತ್ತೆಂದು ಆಗಲಾರಳು ಎಂಬ ಯೋಚನೆಯಲ್ಲಿ ಮುಳುಗಿದ್ದಾಗ ದುಷ್ಯಂತ ಏನು ಯೋಚಿಸುತ್ತಿರುವೆ ದೇವಿ ಎಂದೊಡನೆ ನಿಲ್ಲು ಮಹಾರಾಜನಾನು ನಿನ್ನೊಂದಿಗೆ ಬಂದಿರುವುದು ಕುಮಾರ ಭರತನ ಶ್ರೇಯಸ್ಸಿಗಾಗಿ ಮಾತ್ರ . . .ಎಂದು ಕಂಚಿನ ಧ್ವನಿಯಿಂದ ನುಡಿದಳು.

. ಅರಮನೆಗೆ ಯಾವ ಕಾರಣಕ್ಕಾಗಿ ಬಂದಿದ್ದೇನೆಂದು ಶಕುಂತಲೆ ಹೇಳುತ್ತಾಳೆ?
ಮಹಾರಾಜ! ನಾನು ನಿನ್ನೊಂದಿಗೆ ಬಂದಿರುವುದು ಕುಮಾರ ಭರತನ ಶ್ರೇಯಸ್ಸಿಗಾಗಿ ಮಾತ್ರ . ಆತನ ವಿದ್ಯಾಭ್ಯಾಸ, ತರಬೇತಿ, ಸರಿಯಾಗಿ ನಡೆಯಬೇಕು ಎಂಬ ಹಂಬಲದಿಂದ. ಅವನ ಕೀರ್ತಿ ಎಲ್ಲೆಡೆ ಹಬ್ಬುವಂತಾಗಬೇಕು ಹಾಗೆ ಬೆಳೆಸುವ ಕಾರಣದಿಂದ ಮಾತ್ರ ಇಲ್ಲಿದ್ದೇನೆ

. ದುಷ್ಯಂತರಾಜನು ಶಕುಂತಲೆಯ ಅಂತಃಪುರದಿಂದ ಹೊರನಡೆದಾಗ ಆತನ ಮನಸ್ಥಿತಿ ಹೇಗಿತ್ತು?
ದುಷ್ಯಂತರಾಜನು ಶಕುಂತಲೆಯ ಅಂತಃಪುರದಿಂದ ಬಹಳವಾಗಿ ದುಃಖಿತನಾಗಿ ಪಶ್ಚಾತಾಪದಿಂದ ಕೂಡಿದ್ದು ಭಾರವಾದ ಹೆಜ್ಜೆಗಳನ್ನಿಡುತ್ತ ಹೊರನಡೆದನು.

ಐದಾರು ವಾಕ್ಯಗಳಲ್ಲಿ ಉತ್ತರಿಸಿ.
. ಶಕುಂತಲೆ ತನ್ನ ಬದುಕನ್ನು ಅರ್ಥೈಸಿಕೊಂಡದ್ದು ಹೇಗೆ ತಿಳಿಸಿ.
ದುಷ್ಯಂತ ಮಹಾರಾಜನು ಆಶ್ರಮಕ್ಕೆ ಬಂದು ಆಕೆಯ ಎದುರಿಗೆ ಅಂದು ನಾನು ನನ್ನ ಅರಮನೆಯಿಂದ ನಿನ್ನನ್ನು ನಿಷ್ಟುರವಾಗಿ ಹೊರಗಟ್ಟಿದೆ. ನನ್ನಿಂದ ಮಹಾ ಅಪರಾಧವಾಗಿದೆ. ನನ್ನನ್ನು ಕ್ಷಮಿಸು. ನಾನೀಗ ಪಶ್ಚಾತಾಪದ ಬೆಂಕಿಯಲ್ಲಿ ಬೆಂದಿರುವೆನು ಎಂದು ಕ್ಷಮೆಯಾಚಿಸಿದ ಹಾಗೆ ಭಾಸವಾದಾಗ ಅಪರಾಧ, ಪಶ್ಚಾತಾಪ, ಕ್ಷಮೆ ಈ ಪದಗಳಿಗೆ ನನ್ನ ದೃಷ್ಟಿಯಲ್ಲಿಯಾವ ಅರ್ಥವೂ ಉಳಿದಿಲ್ಲ. ನೂರು ಆಸೆ ಹೊತ್ತು ನಿನ್ನೆಡೆ ಬಂದಿದ್ದ ನನ್ನನ್ನು ನೀನು ಎಂದು ತಿರಸ್ಕರಿಸಿದೆಯೋ, ಜೀವನದ ಬಹುಪಾಲು ಮಧುರ ಭಾವನೆಗಳೆಲ್ಲ ಆ ದಿನವೇ ಸತ್ತುಹೋದವು.. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ನನ್ನ ಬದುಕು ಅಗ್ನಿಕುಂಡವಾಗಿದೆ. ಬೆಂಗಾಡಾಗಿದೆ. ದಾವಾನಲವಾಗಿದೆ. ಬತ್ತಿಹೋದ ಸಮುದ್ರವೂ ಆಗಿದೆ. . ಇಂತಹ ನಾನು ಈತನನ್ನು ಸ್ವೀಕರಿಸಬೇಕಂತೆ ಏನಿದು ವಿಧಿಯ ಕ್ರೂರ ಅಪಹಾಸ್ಯ ಎಂದು ತನ್ನ ಬದುಕನ್ನು ಅರ್ಥೈಸಿಕೊಂಡಳು.

. ದುಷ್ಯಂತ ಶಕುಂತಲೆಯ ನಡುವೆ ಅಂತಃಪುರದಲ್ಲಿ ನಡೆದ ಮಾತುಗಳನ್ನು ವಿವರಿಸಿ.
ಸುಮಾರು ವರ್ಷಗಳನಂತರ ಅರಮನೆಗೆ ಕರೆದುಕೊಂಡು ಹೋದ ದುಷ್ಯಂತನು ದೇವಿ ಇಂದು ನಾನು ಪರಮ ಸುಖಿ, ವರ್ಷಗಳ ಕಾಲ ತಪಿಸಿರುವ ನನ್ನ ಮನಸ್ಸನ್ನು  ಶಾಂತಗೊಳಿಸುವುದಿಲ್ಲವೇ ಎಂದಾಗ , ಮನದಲ್ಲೇ ಇಲ್ಲ ಮಹಾರಾಜ ವರ್ಷಗಳ ಕಾಲ ತಪಿಸಿರುವ ನಿನ್ನ ಮನ ಶಾಂತವಾಗಬಹುದುಹಳೆಯದನ್ನೆಲ್ಲ ಮರೆತು ನೀನು ತುಂಬು ಉತ್ಸಾಹದಿಂದ ಹೊಸ ಜೀವನ ಮಾಡಬಹುದು ಆದರೆ ನೀನು ಗಾಸಿಗೊಳಿಸಿದ ನನ್ನ ಒಳಗು ಮತ್ತೆ ಚೇತರಿಸಲಾರದು ನೀನು ಹೊಸಕಿಹಾಕಿದ ಭಾವನೆಗಳು ಮತ್ತೆ ಚಿಗುರಲಾರವು ಎಂದು ಚಿಂತಿಸುತ್ತಿದ್ದ ಶಕುಂತಲೆ ಬಳಿಗೆ ಮಹಾರಾಜ ಬಂದಾಗ ನಿಲ್ಲು ಮಹಾರಾಜ ಎಂದು ತಡೆಯುತ್ತಳೆನಾನು ನಿನ್ನೊಡನೆ ಅರಮನೆಗೆ ಬಂದಿದ್ದು ಭರತಕುಮಾರನ ಶ್ರೇಯಸ್ಸಿಗೊಸ್ಕರ ಆತನ ವಿದ್ಯಾಭ್ಯಾಸ, ತರಬೇತಿ ಸರಿಯಾಗಿ ನಡೆಯಬೇಕು  ಎಂಬ ಹಂಬಲದಿಂದ ಎಂದು ಹೇಳುತ್ತಾಳೆ. ನೀನಿನ್ನು ನನ್ನನ್ನು ಕ್ಷಮಿಸಲಿಲ್ಲವೇ ಎಂದು ಕೇಳಿದಾಗ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವ ಸಂದರ್ಭದಲ್ಲಿ ಮಾತ್ರ ಕ್ಷಮೆಗೆ ಅರ್ಥವಿದೆ ನಿನಗೆ ಸಮಾಧಾನವಾಗುವಿದ್ದರೆ ಕ್ಷಮಿಸಿದ್ದೇನೆ ಎಂದು ಹೇಳುತ್ತಾಳೆ

ಮಹಾರಾಜನು ನನ್ನ ತಪ್ಪಿಗಾಗಿ ಶಿಕ್ಷೆಕೊಡಲೆಂದು ಹೀಗೆ ಮಾಡುತ್ತಿದ್ದೀಯಾ ಅಥವಾ ಇದು ಪ್ರತಿರೋಧವೋ ಎಂದಾಗ, ನಿನಗೆ ಶಿಕ್ಷೆಕೊಡುವಷ್ಟು ಕಠಿಣ ಮನಸ್ಸಿನವಳಾಗಲಿ ಪ್ರತಿರೋಧ ಮಾಡುವಷ್ಟು ಸಣ್ಣ ಮನಸ್ಸಿನವಳಾಗಲಿ ಅಲ್ಲ ದಯವಿಟ್ಟು ವಿವರಣೆ ಕೇಳಬೇಡ ಎಂದು ಹೇಳಿದಳು.

. ದುಷ್ಯಂತನನ್ನು ನಿರಾಕರಿಸಲು ಶಕುಂತಲೆ ಕೊಡುವ ಕಾರಣಗಳೇನು?
ದುಷ್ಯಂತ ಮಹಾರಾಜನು ಕಣ್ವಾಶ್ರಮದಲ್ಲಿದ್ದ ಶಕುಂತಲೆಯನ್ನು ಗಾಂಧರ್ವವಿವಾಹವಾಗಿ ನೆನಪಿನ ಕಾಣಿಕೆಯಾಗಿ ಉಂಗುರವನ್ನು ಕೊಟ್ಟಿರುತ್ತಾನೆ. ಆದರೆ ಕಾರಣಾಂತರಗಳಿಂದ ಉಂಗುರ ಕಳೆದುಕೊಂಡ ಶಕುಂತಲೆಯನ್ನು ರಾಜಸಭೆಯಿಂದ ದುಷ್ಯಂತನು ತಿರಸ್ಕರಿಸುತ್ತಾನೆ. ಇದರಿಂದ ಹತಾಶಳಾದ ಶಕುಂತಲೆ ಆಶ್ರಮಕ್ಕೆ ತೆರಳಿ ಪೂಜೆ , ತಪಸ್ಸುಗಳನ್ನು ಮಾಡತೊಡಗಿದಳು. ಕಾಲಾನಂತರ ತನ್ನ ತಪ್ಪನ್ನು ಅರಿತ ದುಷ್ಯಂತನು ಶಕುಂತಲಾಶ್ರಮಕ್ಕೆ ಬಂದು ನನ್ನ ತಪ್ಪನ್ನು ಮನ್ನಿಸು ನನ್ನಿಂದ ಮಹಾ ಅಪರಾಧವಾಗಿದೆ. ಕುಮಾರ ಭರತನನ್ನು ನನ್ನ ಉತ್ತರಾಧಿಕಾರಿಯಾಗಿ ಮಾಡುತ್ತೇನೆ. ಎಂದಾಗ ಅವಳು ಭರತ ಶ್ರೇಯಸ್ಸಿಗೋಸ್ಕರ ಮಾತ್ರವೇ ಹೊರತು ಶಾಪದಂತಹ ಬಾಹ್ಯಕಾರಣಗಳಿಂದ ಉಂಗುರವು ಕಳೆದುಹೋಯಿತೆಂಬ ಕ್ಷುಲ್ಲಕ ಕಾರಣದಿಂದ ಒಬ್ಬ ಗಂಡಸು ಹೆಣ್ಣನ್ನು ದೂರ ಮಾಡುವುದಾದರೆ ಆ ಪ್ರೀತಿಗೆ ಅರ್ಥವಿಲ್ಲ ಅಂಥವರನ್ನು ಕೂಡಲು ನನ್ನ ಆತ್ಮಸಮ್ಮಾನ ಒಪ್ಪುವುದಿಲ್ಲ ಹೆಣ್ಣಾಗಿ ಆತ್ಮಸಾಕ್ಷಿಗೆ ವಿರುದ್ಧವಾಗಿ ವರ್ತಿಸಲಾರೆ. ಎಂದು ದುಷ್ಯಂತನನ್ನು ನಿರಾಕರಿಸಿದಳು.

. ನಿರಾಕರಣೆ ಕಥೆಯಲ್ಲಿ ಬರುವ ಶಕುಂತಲೆ ವ್ಯಕ್ತಿತ್ವವನ್ನು ವಿವರಿಸಿ.
ಲೇಖಕಿ ಸ್ತ್ರೀವಾದಿ ನೆಲೆಯಲ್ಲಿ ಹೆಣ್ಣು ಹೇಗೆ ನೇರವಾಗಿ ತನ್ನ ಸ್ವಂತಿಕೆಯನ್ನು ಮೆರೆದಿದ್ದಾಳೆ ಎಂಬುದನ್ನು ಬಹು ಮನೋಜ್ಞವಾಗಿ ವಿವರಿಸುತ್ತಾರೆ. ಶಕುಂತಲೆಯ ಚರಿತ್ರೆಯು ವಾಸ್ತವಿಕ ನೆಲೆಯಲ್ಲಿ ಬರೆದ ಅಪರೂಪದ ಕವಿತೆಯಾಗಿದ್ದು ಗಾಂಧರ್ವ ವಿವಾಹದಿಂದ ದುಷ್ಯಂತನನ್ನು ಮದುವೆಯಾಗಿ ಉಂಗುರವನ್ನು ನೆನಪಿನ ಕಾಣಿಕೆಯಾಗಿ ಪಡೆಯುತ್ತಾಳೆಕಾರಣಾಂತರಗಳಿಂದ ಉಂಗುರವನ್ನು ಕಳೆದುಕೊಂಡ ಆಕೆ ದುಷ್ಯಂತನಿಂದ ತಿರಸ್ಕೃತಳಾಗಿ ಕುಪಿತಗೊಂಡು ಆಶ್ರಮಕ್ಕೆ ಮರಳಿ ಗಾಢ ಚಿಂತೆಯಲ್ಲಿ ಮುಳುಗಿ, ತಪಸ್ವಿನಿಯಾಗುತ್ತಾಳೆ. ತನ್ನ ತಪ್ಪನ್ನು ಅರಿತ ದುಷ್ಯಂತ ಪಶ್ಚಾತಾಪದಿಂದ ಕ್ಷಮೆಯಾಚಿಸಿ ಮಗನಾದ ಭರತನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡುತ್ತೇನೆ ಎಂದಾಗ ಮಗನಶ್ರೇಯಸ್ಸಿಗಾಗಿ ಅರಮನೆಗೆ ಬಂದಳು. ಸಮಾಜದಲ್ಲಿ ಗಂಡು ತಪ್ಪು ಮಾಡಿದರೆ ಪರಿಗಣಿಸುವುದಿಲ್ಲಶಾಪದ ಪ್ರಯುಕ್ತ ನಾನು ಮರೆತು ಹೋದೆನು , ಅದರಿಂದಾಗಿ ತಿರಸ್ಕರಿಸಿದೆ ಎಂಬ ನಿಮ್ಮ ಮಾತಿಗೆ ಅರ್ಥವಿಲ್ಲ. ನಿಮ್ಮಂಥವರನ್ನು ಕೂಡಲು ನನ್ನ ಮನಸ್ಸು ಒಪ್ಪುವುದಿಲ್ಲ ಎಂದಳು.

. ಪುರುಷ ಸಮಾಜದ ಬಗ್ಗೆ ಶಕುಂತಲೆಯ ನಿಲುವೇನು?
ಪುರಾಣ ಪುರುಷನಾದ ಪುರುಕುಲದ ಅರಸನಾದ ದುಷ್ಯಂತನು ಶಕುಂತಲೆಯನ್ನು ಗಾಂಧರ್ವ ವಿವಾಹವಾಗಿ ಕಾಲಾಂತರದಲ್ಲಿ ಶಾಪನಿಮಿತ್ತ ಹಾಗೂ ಉಂಗುರವನ್ನು ಕಳೆದುಕೊಂಡಿದ್ದಾಳೆಂಬ ಕಾರಣಗಳಿಂದ ಆಕೆಯನ್ನು ರಾಜಸಭೆಯಲ್ಲಿ ತಿರಸ್ಕರಿಸಿರುತ್ತಾನೆ. ಮತ್ತು ತನ್ನ ತಪ್ಪಿನ ಅರಿವಾಗಿ ಆಕೆಯನ್ನು , ತನ್ನ ಮಗುವನ್ನು ಆಸ್ಥಾನಕ್ಕೆ ಆಮಂತ್ರಿಸುತ್ತಾನೆ. ಶಕುಂತಲೆಯಲ್ಲಿ ಕ್ಷಮೆಯಾಚಿಸುತ್ತಾನೆ. ಆಗ ಶಕುಂತಲೆ ನಾನು ಈ ಅರಮನೆಗೆ ಬರಲು ಒಪಿರುವುದು ಕೇವಲ ಭರತನ ಶ್ರೇಯಸ್ಸಿಗಾಗಿಯೇ ಹೊರತು ಮತ್ತಾವ ಉದ್ದೇಶದಿಂದಲ್ಲ. ಗಂಡಸು ತಾನು ಮಾಡಿದ ತಪ್ಪಿನಿಂದ ಪಾರಾಗಲು ದೂರುಗಳನ್ನು ಅನುಸರಿಸುತ್ತಾನೆ. ತನ್ನ ಅನುಚಿತ ವರ್ತನೆಯಿಂದ ಬೇರೆಯವರ ಮೆಚ್ಚುಗೆಯ ಸುಲಭಮಾರ್ಗಗಳನ್ನು ಅನುಸರಿಸಿ ಹೊರ ಬರುತ್ತಾನೆ. ಈ ಪುರುಷರ ತಪ್ಪುಗಳನ್ನು ಸಮಾಜವು ಗಂಭಿರವಾಗಿ ನಿರಾಕರಿಸುವುದಿಲ್ಲ ಅ ಗಂಡಿಗೂ ಅದು ಅಪಮಾನಕರ ಎನಿಸುವುದಿಲ್ಲ. ಮುನಿಗಳ ಶಾಪ , ಉಂಗುರವು ಕಳದು ಹೋಗಿತ್ತು ಎಂಬ ಕ್ಷುಲ್ಲಕ ನೆಪದಿಂದ ಒಬ್ಬ ಗಂಡಸು  ಹೆಣ್ಣನ್ನುದೂರ ಮಾಡುವುದಾದರೆ ಆ ಪ್ರೀತಿಗೆ ಅರ್ಥವಿಲ್ಲ. ಅಂಥವನನ್ನು ಕೂಡಲು ನನ್ನ ಆತ್ಮ ಸುಮ್ಮನೆ ಒಪ್ಪುವುದಿಲ್ಲ.  ಹೆಣ್ಣಾಗಿ ಆತ್ಮಸಾಕ್ಷಿಗೆ ವಿರುದ್ಧವಾಗಿ ಮೌನವಾಗಿರಲಾರೆ . ಎಂಬ ಧೃಢ ನಿಲುವು ತೋರುತ್ತಾ ಪುರುಷ ಸಮಾಜವನ್ನೇ ವಿರೋಧಿಸುತ್ತಾಳೆ.  

*****ಓಂ*****

No comments:

Post a Comment