Sunday, June 29, 2014

ಬುದ್ದ ಬಿಸಿಲೂರಿನವನು

ಗದ್ಯಭಾಗ -5
ಬುದ್ಧ ಬಿಸಿಲೂರಿನವನು

ನಾಗತೀಹಳ್ಳಿ ಚಂದ್ರಶೇಖರ : ಮಂಡ್ಯಾಜಿಲ್ಲೆ ನಾಗಮಂಡಲ ತಾಲ್ಲೂಕಿನ ನಾಗತಿಹಳ್ಳಿಯಲ್ಲಿ ಜನಿಸಿದರು.  ಬಹುಮುಖವ್ಯಕ್ತಿತ್ವದ ಇವರು ಸಾಹಿತ್ಯ , ರಂಗಭೂಮಿ, ಪ್ರವಾಸ, ಚಲನಚಿತ್ರಕ್ಷೇತ್ರಗಳಲ್ಲಿ ದುಡಿದಿದ್ದಾರೆ.

ಸಂದರ್ಭದೊಡನೆ ವಿವರಿಸಿ
೧. ಈ ಬಿಸಿಲೇ ಗೌತಮನನ್ನು ಸಂನ್ಯಾಸಕ್ಕೆ ದೂಡಿರಬೇಕು.
ಈ ಮಾತನ್ನು ನಾಗತಿಹಳ್ಳಿ ಚಂದ್ರಶೇಖರ ಅವರ ಬುದ್ಧ ಬಿಸಿಲೂರಿನವನು ಎಂಬ ಪ್ರವಾಸಕಥನದಿಂದ ಆರಿಸಲಾಗಿದೆ.  ಲುಂಬಿನಿಯ ಬಿಸಿಲ ಝಳದ ಅನುಭವ ಪಡೆದ ಲೇಖಕರ ಮಗಳುಸಿಹಿ ಈ ಮಾತನ್ನು ಲೇಖಕರಿಗೆ ಹೇಳಿದಳು.

ಬುದ್ಧನ ಜಮ್ಮಸ್ಥಳವಾದ ಲುಂಬಿನಿಯು ಪರ್ವತದ ಶಿಖರಾಗ್ರದಲ್ಲಿರುವ ತಂಪನೆಯಗ್ರಾಮ ಎಂದು ತಪ್ಪಾಗಿ ಭಾವಿಸಿದ್ದಲ್ಲದೆ, ಇಂತಹ ತಂಪಾದ ಗ್ರಾಮದಲ್ಲಿ ಬುದ್ಧ ಬೆಳೆದಿಂಗಳಂತೆ ಅವತರಿಸಿರಬೇಕೆಂದು ತಿಳಿದಿದ್ದರು.  ಆದರೆ ಆ ಪ್ರದೇಶದ ಬಿಸಿಯ ಅನುಭವಾಗುತ್ತಲೇ ಲೇಖಕರ ಮಗಳು ಸಿಹಿ ಈ ಬಿಸಿಲೇ ಗೌತಮನನ್ನು ಸನ್ಯಾಸಕ್ಕೆ ದೂಡಿರಬೇಕು ಎಂದು ಹೇಳುತ್ತಾಳೆ. ಲೇಖಕರಿಗೆ ಲುಂಬಿನಿಯ ಬಿಸಿಲು ಮಗಳಮಾತು ನಿಜ ಎನಿಸುವಂತೆ ಹೆಚ್ಚೇ ಇತ್ತು.

೨. ಇನ್ನು ಮುಂದೆ ಅನಗತ್ಯವಾಗಿ ಕೋಪಿಸಿಕೊಳ್ಳುವುದಿಲ್ಲ.
ಈ ಮಾತನ್ನು ನಾಗತಿಹಳ್ಳಿ ಚಂದ್ರಶೇಖರ ಅವರ ಬುದ್ಧ ಬಿಸಿಲೂರಿನವನು ಎಂಬ ಪ್ರವಾಸಕಥನದಿಂದ ಆರಿಸಲಾಗಿದೆ.
ಗೌತಮನ ಹುಟ್ಟೂರು ಲುಂಬಿನಿ. ಅಲ್ಲಿನ ಮಾಯಾದೇವಿದೇವಾಲಯಕ್ಕೆ ಲೇಖಕರು ಹೋಗಿದ್ದಾಗ ಅಲ್ಲಿ ಎಲ್ಲರೂ ಧ್ಯಾನ ಮಾಡಲು ಕುಳಿತಿದ್ದರು. ಲೇಖಕರ ಮಗಳು ಕನಸು ಯಾವುದಾದರೊಂದು ದೌರ್ಬಲ್ಯವನ್ನು , ದುರ್ಗಣವನ್ನು ಇಲ್ಲಿ ಬಿಟ್ಟುಬಿಡುವುದು ಉಚಿತ. ಇದು ಗೌತಮ ಜನಿಸಿದ ಪವಿತ್ರವಾದ ಜಾಗ ಏನಾದರೂ ಶಪಥಮಾಡು ಎಂದಾಗ ಈ ಮೇಲಿನಂತೆ ಲೇಖಕರು ಶಪಥ ಮಾಡುತ್ತಾರೆ.

೩. ಗವಾಕ್ಷಿಯಿಂದ ಮಗನನ್ನು ಕೂಗಿರಬಹುದು
ಈ ಮಾತನ್ನು ನಾಗತಿಹಳ್ಳಿ ಚಂದ್ರಶೇಖರ ಅವರ ಬುದ್ಧ ಬಿಸಿಲೂರಿನವನು ಎಂಬ ಪ್ರವಾಸಕಥನದಿಂದ ಆರಿಸಲಾಗಿದೆ.
ಲುಂಬಿನಿಯಿಂದ ಇಪ್ಪತ್ತೇಳು ಕಿಲೋಮೀಟರ್ ದೂರದಲ್ಲಿ ಕಪಿಲವಸ್ತು ಇದೆ. ಕಪಿಲವಸ್ತುವಿನಲ್ಲಿರುವ ವಿಶಾಲ ಉದ್ಯಾನವನದಲ್ಲಿ ಶುದ್ಧೋದನನ ಅರಮನೆ ಇತ್ತುಎಂದು ಹೇಳಲಾಗುತ್ತದೆ. ಅಲ್ಲಿರುವ ಮುರುಕು ಇಟ್ಟಿಗೆಗೋಡೆಗಳ ಮೇಲಿ ಕುಳಿತು ಮಕ್ಕಳೊಂದಿಗೆ ಚರ್ಚಿಸುವಾಗ ಬಹುಷಃ ಈ ಸ್ಥಳದಲ್ಲಿ ಗೌತಮ ಆಟವಾಡಿರಬಹುದು, ಇದು ಗೌತಮ ಮತ್ತು ಯಶೋಧರೆಯ ಕೋಣೆ ಇರಬಹುದುಮಾಯಾದೇವಿ ತನ್ನ ಮಗನನ್ನು ಈ ಗವಾಕ್ಷಿಯಿಂದ ಕೂಗಿ ಕರೆದಿರಬಹುದು.  ಎಂದೆಲ್ಲಾ ಊಹೆಮಾಡುತ್ತಿದ್ದರು.

೪.ಬುದ್ಧನೇ ಇಲ್ಲದ ಅರಮನೆಗೊಬ್ಬ ಗಾರ್ಡು!
ಈ ಮಾತನ್ನು ನಾಗತಿಹಳ್ಳಿ ಚಂದ್ರಶೇಖರ ಅವರ ಬುದ್ಧ ಬಿಸಿಲೂರಿನವನು ಎಂಬ ಪ್ರವಾಸಕಥನದಿಂದ ಆರಿಸಲಾಗಿದೆ.
ಕಪಿಲವಸ್ತುವಿನ ಅರಮನೆ ಇದ್ದ ಉದ್ಯಾನದಲ್ಲಿ ಬಹಳಷ್ಟುಸಮಯ ಅಲ್ಲಿನ ಮುರುಕು ಇಟ್ಟಿಗೆಗಳನ್ನು ನೋಡುತ್ತಾ ಕಲ್ಪನೆಯ ಅರಮನೆಯ ಕಟ್ಟಿಕೊಂಡು ಮಹಾವಿನಿಷ್ಕ್ರಮಣ ದ್ವಾರವು ಪೂರ್ವಕ್ಕಿದೆ . ಆ ದ್ವಾರದಿಂದಲೇ  ಗೌತಮನು ಮಧ್ಯರಾತ್ರಿಯಲ್ಲಿ ನಿರ್ಗಮಿಸಿದನೆಂದು ಪ್ರತೀತಿ.  ಹೀಗೆ ಅರಮನೆ ನೋಡುತ್ತಾ ಹೊರಬಂದರೆ ಅಲ್ಲಿದ್ದ ಗಾರ್ಡು ಕಾಫಿಗೇನಾದ್ರೂ ಕೊಡ್ರೀ ಎಂದು ಕೇಳಿದಾಗ ವಾಸ್ತವಕ್ಕೆ ಬಂದ ಲೇಖಕರು ಈ ಮೇಲಿನ ಮಾತನ್ನು ಹೇಳಿಕೊಳ್ಳುತ್ತಾರೆ.

ಒಂದುವಾಕ್ಯದಲ್ಲಿ ಉತ್ತರಿಸಿ

೧. ಗೌತಮ ಜನಿಸಿದ್ದು ಎಲ್ಲಿ?
ಲುಂಬಿನಿ ವನದಲ್ಲಿ.


೨. ನೇಪಾಳ ವಿಮಾನ ಹೇಗಿತು?
ಮೆಟೆಡಾರ್ ವ್ಯಾನಿಗೆ ಎರಡು ರೆಕ್ಕೆ ಜೋಡಿಸಿದಂತೆ ನೇಪಾಳದ ವಿಮಾನಗಳು ಇದ್ದವು.

೩. ಬುದ್ಧನಿಗೆ ಜ್ಞಾನೋದಯವಾದ ದಿನ ಯಾವುದು?
ವೈಶಾಖ ಶುದ್ಧ ಪೂರ್ಣಿಮೆಯಂದು ಬುದ್ಧನಿಗೆ ಜ್ಞಾನೋದಯವಾಯಿತು

೪. ಮಾಯಾದೇವಿ ದೇವಾಲಯ ಹೇಗಿತ್ತು?
ಬಿಳಿಬಣ್ಣದಿಂದ ಕೂಡಿದ್ದು ಚೌಕಾಕಾರದಲ್ಲಿ ಇರುವ ಮಾಯಾದೇವಿ ದೇವಾಲಯದ ಪರಿಸರ ತುಂಬಾ ಶುಭ್ರವಾಗಿತ್ತು.

೫. ಅಶೋಕನ ಸ್ತಂಭ ಎಲ್ಲಿದೆ?
ಮಾಯಾದೇವಿ ದೇವಾಲಯದ ಬಳಿ ಇರುವ ಉದ್ಯಾನದಲ್ಲಿ ಪುಷ್ಕರಿಣಿಯ ಉತ್ತರ ಬದಿಯಲ್ಲಿದೆ.

೬. ಯಾರ ಪ್ರವಾಸಾನುಭವದಲ್ಲಿ ಲುಂಬಿನಿಯ ಬಗೆಗೆ ವಿವರಗಳಿವೆ?
ಚೀನೀ ಯಾತ್ರಿಕ ಹುಯೆನ್ ತ್ಸಾಂಗ್ ನ ಪ್ರವಾಸಅನುಭವದಲ್ಲೂ ಬುದ್ದನ ಜನ್ಮಸ್ಥಳ ಲುಂಬಿನಿಯ ಬಗ್ಗೆ ಆಧಾರಗಳಿವೆ.

೭. ಕಪಿಲವಸ್ತುವಿನ ಇಂದಿನ ಹೆಸರೇನು?
ಕಪಿಲವಸ್ತುವಿನ ಇಂದಿನ ಹೆಸರು ಲಾರ್ ಕೋಟ್

೮. ಅರಮನೆಯ ಗಾರ್ಡು ಲೇಖಕರನ್ನು ಏನೆಂದು ಕೇಳಿದನು?
ಕಾಫಿಗೇನಾದ್ರು ಕೊಡಿ ಎಂದು ಕೇಳಿದ.

೯. ಲೇಖಕರ ಮನಸ್ಸಿನಲ್ಲಿ ಗಾಢವಾಗಿ ಅಚ್ಚೊತ್ತಿದ್ದು ಯಾವುದು?
ಗೌತಮ ಇಲ್ಲದ ಅರಮನೆ ಮತ್ತು ನಾವೇ ಕಟ್ಟಿಕೊಂಡ ಕಲ್ಪನೆಯ ಅರಮನೆ ಮಾತ್ರ ಎಂದು ಲೇಖಕರು ಹೇಳುತ್ತಾರೆ.
ಎರಡುಮೂರುವಾಕ್ಯಗಳಲ್ಲಿ ಉತ್ತರಿಸಿ
೧. ಮಹಾನ್ ವ್ಯಕ್ತಿಗಳ ದರ್ಶನ ಅರ್ಥವಾಗುವುದು ಹೇಗೆ?
ಮಹಾನ್ ವ್ಯಕ್ತಿಗಳ ದರ್ಶನವನ್ನು , ಆಶಯವನ್ನು ಅರ್ಥಮಾಡಿಕೊಳ್ಳಲು ಅವರ ಕೃತಿಗಳು ನೆರವಾಗುತ್ತವೆ. ಅವರ ಹುಟ್ಟೂರನ್ನು ನೋಡಲೇ ಬೇಕಿಲ್ಲ.

೨. ನೇಪಾಲದ ವೈಮಾನಿಕ ಸಾರಿಗೆ ವ್ಯವಸ್ಥೆ ಹೇಗಿದೆ?
ಪರ್ವತಗಳ ನಾಡಿನಲ್ಲಿ ಊರಿಂದೂರಿಗೆ ರಸ್ತೆಗಳಮೂಲಕ ಹೋಗಲಿಕ್ಕೆ ಹೆಚ್ಚುಸಮಯ ಬೇಕಾಗುವುದು. ಆದ್ದರಿಂದ ನೇಪಾಳಿ ಸರ್ಕಾರ ಪುಟ್ಟ ಊರುಗಳಿಗೆಲ್ಲಾ ಪುಟ್ಟ ಪುಟ್ಟ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ.ಗಂಟೆಗೊಮ್ಮೆ ಟ್ಯಾಕ್ಸಿಗಳಂತೆ ಸಂಚರಿಸುವ ಇವು ಮೆಟೆಡಾರ್ ವ್ಯಾನಿಗೆ ಎರಡು ರೆಕ್ಕೆ ಜೋಡಿಸಿದರೆ ಹೇಗಿರುತ್ತದೋ ಹಾಗೆ ವಿಮಾನಗಳಿವೆ. ೨೫ -೩೦ ಜನ ಪ್ರಯಾಣಿಸಬಲ್ಲ ಈ ವಿಮಾನಗಳ ಪ್ರಯಾಣದರ ಶ್ರೀಸಾಮಾನ್ಯನಿಗೂ ಕೈಗೆಟುಕುವಂತೆ ಇದೆ.

೩. ಗೌತಮನ ಮನೋಲೋಕವನ್ನು ನಿರಂತರವಾಗಿ ದಹಿಸಿದ ಪ್ರಶ್ನೆಗಳು ಯಾವುವು?
ಬದುಕು ಎಂದರೇನು? ಅದರ ಉದ್ದೇಶವೇನು? ರೋಗ, ಮುಪ್ಪು, ಮರಣಗಳನ್ನು ಗೆಲ್ಲುವುದು ಹೇಗೆ? ಮನುಷ್ಯನ ಸಂಕಟಗಳ ಮೂಲ ಯಾವುದು? ಎಂಬ ಪ್ರಶ್ನೆಗಳು ಬುದ್ಧನ ಮನೋಲೋಕವನ್ನು ನಿರಂತರವಾಗಿ ದಹಿಸುತ್ತಿದ್ದ ಪ್ರಶ್ನೆಗಳಾಗಿವೆ.

ಐದಾರುವಾಕ್ಯಗಳಲ್ಲಿ ಉತ್ತರಿಸಿ
೧. ಲುಂಬಿನಿ ಪಯಣದ ಅನುಭವಗಳೇನು?
ಲುಂಬಿನಿಯನ್ನು ತಲುಪಲು ಬಹುದೂರ ಪ್ರಯಾಣ ಮಾಡಬೇಕಿತ್ತು. ಗುಡ್ಡಗಾಡನ್ನು ಇಳಿದು, ಬಟಾಬಯಲನ್ನು ಹಿಡಿದು ಸಾಗಲು ಗಂಟೆಗಟ್ಟಲೆ ಸಮಯ ಬೇಕು. ಏಕೆಂದರೆ ಅದು ಬರೀ ಬೆಟ್ಟಗಳ ತಪ್ಪಲು ನೇಪಾಲ ಸರ್ಕಾರ ವಿಮಾನದ ವ್ಯವಸ್ಥೆ ಕಲ್ಪಿಸಿದೆ. ಹಿಮಪರ್ವತಗಳನ್ನು ತಂಪುಗಾಳಿಯನ್ನು ಮರೆತು ರಣಬಿಸಿಲಿಗೆ ಒಡ್ಡಿಕೊಂಡಾಗ ಸಿಗುವುದು ಲುಂಬಿನಿ. ಭಾರತದ ಗಡಿಯತ್ತ ಇರುವ ಪ್ರದೇಶ. ಲುಂಬಿನಿಯು ಶಿಖರಾಗ್ರದಲ್ಲಿ ತಂಪಾದ ಊರೆಂದು ಲೇಖಕರು ಭಾವಿಸಿದ್ದರು. ಅಲ್ಲಿಗೆ ತಲುಪಿದಮೇಲಷ್ಟೇ ಬುದ್ದ ಬಿಸಿಲೂರಿನವನೆಂದು ಅರಿವಾಯಿತು.

೨. ಗೌತಮನ ಮನಸ್ಸಿನ ಉರಿ ಯಾವ ಬಗೆಯದೆಂದು ಲೇಖಕರು ಊಹಿಸಿದ್ದಾರೆ?
ಬುದ್ಧ ಹುಟ್ಟಿದ್ದು ವೈಶಾಖ ಪೂರ್ಣಿಮೆಯಂದು , ಅವನಿಗೆ ಜ್ಞಾನೋದಯವಾದುದೂ ವೈಶಾಖ ಪೂರ್ಣಿಮೆಯಂದೇ. ವೈ ಶಾಖ? ಎಂದೇ ಭಾವಿಸುವ ಲೇಖಕರು ಶಾಖದ ಪ್ರದೇಶದಲ್ಲಿ ಜನಿಸಿದ ಬುದ್ಧನ ಮನದಲ್ಲಿ ನಿರಂತರವಾಗಿ ಸುಡುತ್ತಿದ್ದ ಪ್ರಶ್ನೆಗಳ ಬಗ್ಗೆ ಇಲ್ಲಿ ಹೇಳುತ್ತಾರೆ. ಬದುಕು ಎಂದರೇನು? ಅದರ ಉದ್ದೇಶವೇನು? ರೋಗ, ಮುಪ್ಪು, ಮರಣಗಳನ್ನು ಗೆಲ್ಲುವುದು ಹೇಗೆ? ಮನುಷ್ಯನ ಸಂಕಟಗಳ ಮೂಲ ಯಾವುದು? ಎಂಬ ಪ್ರಶ್ನೆಗಳು ಸದಾ ಅವನನ್ನು ಸುಡುತ್ತಿದ್ದವು. ತಾನು ರಾಜನಾದರೂ ಇವುಗಳಿಗೆ ಉತ್ತರ ದೊರೆಯದು ಎಂದು ಭಾವಿಸಿದ. ಹಾಗಾಗಿ ಬುದ್ಧ ಏಕಾಂತದ ಸನ್ಯಾಸದ ಹಾದಿ ಹುಡುಕಿಕೊಂಡ ಎಂದು ಊಹಿಸಿದ್ದಾರೆ.

೩. ಮಾಯಾದೇವಿ ದೇವಾಲಯದ ಪರಿಸರ ಹೇಗಿತ್ತು?
ಮಾಯಾದೇವಿ ದೇವಾಲಯವು ಶ್ವೇತವರ್ಣದಿಂದ ಕೂಡಿದ್ದು ಚೌಕಾಕಾರವಾಗಿದೆ. ಅಲ್ಲಿನ ಪರಿಸರ ತುಂಬಾ ಶುಭ್ರವಾಗಿದ್ದು. ಅಲ್ಲಿ ಆರಾಧನೆ ,ಅರ್ಚನೆ ಆಚರಣೆಗಳ ಕಂದಾಚಾರವಿರಲಿಲ್ಲ. ಇಚ್ಛೆಇದ್ದವರು ತಂಪು ಹಾಸಿನ ಮೇಲೆ ಕುಳಿತು ಧ್ಯಾನ ಮಾಡಬಹುದಿತ್ತು.  ಅಲ್ಲೇ ಗೌತಮ ಜನಿಸಿದ ಸ್ಥಳ ವೆಂದು ಸೂಚಿಸಲು ಹಸಿರು ಬಣ್ಣದ ಪಾಚಿಕಟ್ಟಿದ್ದ ಕಲ್ಲನ್ನು ತೋರುತ್ತಾರೆ. ಚರಿತ್ರೆ-ಪುರಾಣಗಳಿಗೆ ಆ ಕಲ್ಲು ಸಾಕ್ಷಿ ಎಂಬಂತೆ ಇತ್ತು. ಅಶೋಕ ಈ ಸ್ಥಳಕ್ಕೆ ಬಂದಿದ್ದ ಎಂದುಅಲ್ಲೇ ನಿಲ್ಲಿಸಲಾದ ಅಶೋಕ ಸ್ಥಂಭ ಸಾರುತ್ತಿತ್ತು.

೪. ಕಪಿಲವಸ್ತುವಿನಲ್ಲಿ ಲೇಖಕರ ನಿರಾಸೆಗೆ ಕಾರಣವೇನು?
ಕಪಿಲವಸ್ತುವಿನಿಂದಹೊರಟು ಅನೇಕಾನೇಕ ಪ್ರಾಚೀನ ಸ್ಮಾರಕಗಳನ್ನು ನೋಡುತ್ತಾ ಹೋದರೂ ಗಾಢವಾಗಿ ಲೇಖಕರ ಮನದಲ್ಲಿ ಅಚ್ಚೊತ್ತಿದ್ದು ಗೌತಮ ಇಲ್ಲದ ಅರಮನೆ. ನಾವೇ ಕಟ್ಟಿಕೊಂಡ ಕಲ್ಪನೆಯ ಅರಮನೆ ಮಾತ್ರ. ಬೌದ್ಧಧರ್ಮವು ಪ್ರಚಲಿತವಾಗಿರುವ ಲುಂಬಿನಿಯಲ್ಲಿ ಪೈಪೋಟಿಯಿಂದ ಅದ್ದೂರಿಯಾದ ಮೊನಾಸ್ಟ್ರಿಗಳು ನಿರ್ಮಾಣಗೊಂಡಿವೆ. ಆದರೆ ಕಪಿಲವಸ್ತುವಿನಲ್ಲಿ ಬುದ್ಧನಿಲ್ಲದ ಅರಮನೆ ನಮ್ಮ ಕಲ್ಪನೆಯ ಸುವರ್ಣ ಸೌಧವನ್ನುಕ್ಷಣದಲ್ಲಿ ಕೆಡವಿಹಾಕುತ್ತದೆ. ಆದರೆ ಆ ನಿರಾಶೆಯಲ್ಲೇ ನಮ್ಮದೇ ಭಾವನೆಗಳಿಂದ ಅವನ ಸೌಧವನ್ನು ಕಟ್ಟಿಕೊಂಡೆವು ಎನ್ನುತ್ತಾರೆ.

೫. ಇಟ್ಟಿಗೆ ಕಟ್ಟಡಗಳ ಮೇಲೆ ಲೇಖಕರು ಏನೇನು ಚರ್ಚಿಸಿದರು?
ಲೇಖಕರು ಮಡದಿಮಕ್ಕಳೊಂದಿಗೆ ಮೋಟುಗೋಡೆಗಳಷ್ಟೇ ಉಳಿದಿದ್ದ ಬುದ್ದನ ಅರಮನೆಗೆ ಬಂದಾಗ ಅನೇಕ ವಿಚಾರಗಳನ್ನು ಚರ್ಚಿಸಿದರು. ಈ ಜಾಗದಲ್ಲಿ ಬುದ್ಧ ಆಟವಾಡಿರಬಹುದು. ಇಲ್ಲಿ ಊಟಮಾಡಿರಬಹುದು. ಇಲ್ಲಿ ಅವನ ಪಟ್ಟಾಭಿಷೇಕವಾಗಿರಬಹುದು. ಈ ಜಾಗವು ಗೌತಮ ಯಶೋಧರೆಯರ ಕೋಣೆಯಾಗಿರಬಹುದು. ಇಲ್ಲಿ ರಾಹುಲ ಗೆಳೆಯರೊಂದಿಗೆ ಆಟವಾಡಿರಬಹುದು. ಮಾಯಾದೇವಿ ತನ್ನ ಮಗನನ್ನು ಈ ಗವಾಕ್ಷಿಯಲ್ಲಿ ಕರೆದಿರಬಹುದು. ಇದೇ ತಿರುವಿನಲ್ಲಿ ಹಣ್ಣು ಹಣ್ಣು ರೋಗಿಯನ್ನೋ, ಶವಯಾತ್ರೆಯನ್ನೋ ಕಂಡಿರಬಹುದು. ಇಲ್ಲಿಂದಲೇ ಅರಮನೆಯನ್ನು ತೊರೆದು ಹೊರಹೋಗಿರಬಹುದು. ಹೀಗೆ  ಅನೇಕ ವಿಚಾರಗಳನ್ನು ಕಲ್ಪಿಸಿಕೊಂಡು ಚರ್ಚಿಸಿದ್ದಾರೆ.

೬. ಕಪಿಲವಸ್ತುವಿನ ಉದ್ಯಾನವನದ ಬಗ್ಗೆ ಲೇಖಕರು ನೀಡುವ ವಿವರಗಳನ್ನು ಸಂಗ್ರಹಿಸಿರಿ
ಕಪಿಲವಸ್ತು ಈಗ ಲಾರ್ ಕೋಟ್ ಎಂದೇ ಪ್ರಸಿದ್ಧಿ. ಸಾದಾರಣವಾದ ಹಳ್ಳಿ ಲುಂಬಿನಿಯಲ್ಲಿದ್ದಂತೆ ಇಲ್ಲೂ ಒಂದು ವಿಶಾಲವಾದ ಉದ್ಯಾನವನ . ಈ ಉದ್ಯಾನವನದಲ್ಲಿ ಶುದ್ಧೋದನನ ಅರಮನೆ ಇತ್ತೆಂದು ಪ್ರತೀತಿ. ಅದನ್ನು ಹೊಕ್ಕು ಪುಳಕಿತರಾದ ಲೇಖಕರು ಇದು ಗೌತಮನು ಬಾಲ್ಯ - ಯೌವನಗಳನ್ನು ಕಳೆದ ಅಪೂರ್ವ ಜಾಗ ಎನ್ನುತ್ತಾರೆ. ಗೌತಮ ಬುದ್ಧನಾಗುವ ಮೊದಲು ಸಿದ್ಧಿಯ ಅರ್ಥಗಳಿಸಿ ಸಿದ್ಧಾರ್ಥನಾಗುವ ಅರಮನೆಯ ವಿವಿಧ ಪ್ರಾಂಗಣಗಳನ್ನು ಊಹಿಸಿಕೊಳ್ಳಬಹುದಾದ ಇಟ್ಟಿಗೆಯ ಅರಬರೆ ಆಕೃತಿಗಳು ವಿನ್ಯಾಸಗಳು ಸಾವಿರಾರು ವರ್ಷಗಳ ಕತೆ ಹೇಳುತ್ತವೆ.
ಕಾಲ ಅದೆಷ್ಟು ನಿರ್ಗುಣ ಮತ್ತುಕ್ರೂರ ಒಳಿತುಕೆಡಕುಗಳನ್ನು ಸಮನಾಗಿ ಸಮಗೊಳಿಸುತ್ತದೆಯಲ್ಲ. ಎಂದಿದ್ದಾರೆ.



***** ಓಂ*****

9 comments: