Sunday, June 29, 2014

ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ

ಗದ್ಯ ಪಾಠ 8
ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ
ಸಿ.ಎಚ್. ಹನುಮಂತರಾಯ

ಸಿ.ಎಚ್ ಹನುಮಂತರಾಯ  ಇವರು ಬೆಂಗಳೂರು ಗ್ರಾಮಾಂತರಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕ ಬೆಳವಂಗಲದ ರೈತ ಕುಟುಂಬದಲ್ಲಿ ಜನಿಸಿದರು. ಕನ್ನಡ ನಾಡು ನುಡಿಯ ಬಗ್ಗೆ ಪ್ರೀತಿ ಕಾಳಜಿ ಇಟ್ಟುಕೊಂಡಿರುವ ಇವರು ವಿವೇಕಾನಂದ ಕಾನೂನು ಕಾಲೇಜಿನ ಪ್ರಾಧ್ಯಾಪಕರಾಗಿ , ವಕೀಲೀ ವೃತ್ತಿಯನ್ನು ಮಾಡುತ್ತಿರುವರು. ವಕೀಲರೊಬ್ಬರ ವಗೈರೆಗಳು ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಗಡಿಬಿಡಿಯ ಬಾಳಿನಲ್ಲಿ ಕೈಗಾರೀಕರಣ , ಖಾಸಗೀಕರಣ ಕಂಪ್ಯೂಟರೀಕರಣ, ಜಾಗತೀಕರಣಗಳು ಮನುಷ್ಯನನ್ನು ಬಿಗಿದಪ್ಪಿವೆ. ಮಾನವೀಯತೆಯ ಮೂಲಜಲವು ಬತ್ತಿಹೋಗುತ್ತಿರುವ ಅಪಾಯ ಎದುರಾಗಿದೆ. ಅಂತಃಕರಣವಿಲ್ಲದ ಬದುಕು ಮರುಭೂಮಿಯಾಗುತ್ತಿದೆ. ದೇಶ ಸಂಸ್ಕೃತಿಯನ್ನು ಜಾಗತೀಕರಣದ ಭೂತ ಮುಕ್ಕುತ್ತಿದೆ. ಭೂಮಿಯನ್ನೇ ನಂಬಿಕೊಂಡಿದ್ದ ರೈತರು ಖಾಸಗಿಕರಣದ ಸಂಕೋಲೆಯಲ್ಲಿ ಸಿಲುಕಿ ತೊಳಲುತ್ತಿದ್ದಾರೆ. ಭೂಮಿತಾಯಿಯ ಮಕ್ಕಳು ಅನಾಥರಾಗಿ ಬದುಕುತ್ತಿದ್ದಾರೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕ ನಿರ್ಮಾಣವಾಗುತ್ತಿದೆ.

ಸಂದರ್ಭದೊಡನೆ ವಿವರಿಸಿ.
. ಬೆಳೆಯಲಿ ಬೆಳೆಯದಿರಲಿ ತೆರಿಗೆ ಕಡ್ಡಾಯವಾಯಿತು.
ಈ ವಾಕ್ಯವನ್ನು ಸಿ.ಎಚ್. ಹನುಂತರಾಯರು ಬರೆದಿರುವ  ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ ಎಂಬ ಲೇಖನದಿಂದ ಆರಿಸಲಾಗಿದೆ.
ನಮ್ಮ ಭಾರತ ದೇಶದಲ್ಲಿ ೧೮೫೭ರಲ್ಲಿ ಸಿಪಾಯಿ ದಂಗೆ ಸ್ಫೋಟಗೊಳ್ಳುವುದಕ್ಕೆ ಕ್ರಾಂತಿಕಾರಕ ವಾತಾವರಣವನ್ನುಚಳುವಳಿಗಳ ಮೂಲಕ ರೈತರು ನಿರ್ಮಿಸಿದ್ದರು.
ರೈತರ ಹಳೆಯ ತೆರಿಗೆ ಪದ್ಧತಿ ಪ್ರಕಾರ ಬೆಳೆದ ಬೆಳೆಯಲ್ಲಿ ಒಂದಷ್ಟು ಭಾಗವನ್ನು ಕೊಡಬೇಕೆನ್ನುವ ನಿಯಮವಿತ್ತು. ಬರ ಬಂದು ಬೆಳೆ ಬಾರದಿದ್ದರೂ ಆ ವರ್ಷವೂ ತೆರಿಗೆ ಪಾವತಿಸಬೇಕಾಗಿತ್ತುಬೆಳೆ  ಬೆಳೆಯಲಿ ಬೆಳೆಯಾಗದಿರಲಿ ತೆರಿಗೆ ಕಡ್ಡಾಯವಾಗಿತ್ತು. ತೆರಿಗೆ ಪಾವತಿಸದ ರೈತನ ಜಮೀನನ್ನು ಬ್ರಿಟಿಷರಿಂದ ನೇಮಕಗೊಂಡ ಜಮೀನುದಾರ ಮಟ್ಟುಗೋಲು ಹಾಕಿಕೊಳ್ಳುತ್ತಿದ್ದ. ಇದರಿಂದಾಗಿ ರೈತರು ಸಾಲಮಾಡಿಯಾದರೂ ತೆರಿಗೆ ಸಲ್ಲಿಸಿ ತಮ್ಮ ಭೂಮಿ ಉಳಿಸಿಕೊಳ್ಳಬೇಕಾಗಿತ್ತು.

.ಶವಗಳನ್ನು ನಾಯಿ ನರಿಗಳು ತಿನ್ನುತ್ತಿದ್ದವು.
ವಾಕ್ಯವನ್ನು ಸಿ.ಎಚ್. ಹನುಂತರಾಯರು ಬರೆದಿರುವ  ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ ಎಂಬ ಲೇಖನದಿಂದ ಆರಿಸಲಾಗಿದೆ.
ರೈತರ ಮೇಲೆ ತೆರಿಗೆ ಹಾಕುತ್ತಿದ್ದುದರಿಂದ ಸಾಲಮಾಡುತ್ತಿದ್ದರು ಸಾಲ ನೀಡಿದ ಸಾಹುಕಾರ ಕೂಡ ಸಿಕ್ಕಾಪಟ್ಟೆ ಬಡ್ಡಿಹಾಕಿ ಸುಲಿಯುತ್ತಿದ್ದ. ಇದರ ಪರಿಣಾಮ ೧೫೦೦ ರಿಂದ ೧೮೫೭ರವರೆಗೆ ಅನೇಕ ಬರಗಳನ್ನು ಅನುಭವಿಸಬೇಕಾಯಿತು. ರೈತರು ಎರೆಮಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಂಡ ಸುದ್ಧಿಗಳೂ ಹರಡಿದವು. ಹಸಿವಿನಿಂದ ಸಾಯುವ ರೈತರ ದೇಹಗಳನ್ನು ಅಂತ್ಯಕ್ರಿಯೆ ಮಾಡಲು ಆಗದಂಥ ಸ್ಥಿತಿ ಉಂಟಾಗಿತ್ತು. ಶವಗಳನ್ನು ನಾಯಿ ನರಿಗಳು ತಿನ್ನುತ್ತಿದ್ದವು. ಎಲ್ಲೆಂದರಲ್ಲಿ ಮಾನವ ಅಸ್ತಿಪಂಜರಗಳು ಬಿದ್ದಿರುತ್ತಿದ್ದವು.

. ಸ್ವಾತಂತ್ರ್ಯಕ್ಕಾಗಿ ಸೆಣೆಸಿದ ಸಾಮಾನ್ಯರೈತರ ಬದುಕು ದುಸ್ತರವಾಯಿತು
ಈ ವಾಕ್ಯವನ್ನು ಸಿ.ಎಚ್. ಹನುಂತರಾಯರು ಬರೆದಿರುವ  ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ ಎಂಬ ಲೇಖನದಿಂದ ಆರಿಸಲಾಗಿದೆ.
ಸ್ವಾತಂತ್ರ್ಯ ವು ರೈತರ ಕೈಗೆ ಸಿಗದೆ ಬಂಡವಾಳ ಶಾಹೀಗಳ ಕೈಗೆ ಸಿಕ್ಕಿತು. ಜಮೀನ್ದಾರಿ ಪದ್ಧತಿಯನ್ನು ಹಾಗೆಯೇ ಉಳಿಸಿಕೊಳ್ಳಲಾಯಿತು. ದೊಡ್ಡದೊಡ್ಡ ಕಾರ್ಖಾನೆಗಳ ಮಾಲೀಕರು ತಮ್ಮ ಇಂಡಸ್ಟ್ರೀಗಳ ಕಚ್ಚಾಮಾಲಿಗೆ ಬೇಕೆಂದು ಲಕ್ಷಾಂತರ ಎಕರೆ ಜಮೀನುಗಳನ್ನು ಲಪಟಾಯಿಸಿದರು ಇದರಿಂದ ಸ್ವಾತಂತ್ರ್ಯಕ್ಕಾಗಿ ಸೆಣೆಸಿದ ಸಾಮಾನ್ಯರೈತರ ಬದುಕು ದುಸ್ತರವಾಯಿತು. ಸ್ವಾತಂತ್ರನಂತರ ಭಾರತದ ರೈತರು ಹಳೆಯ ಜಮೀನುದಾರರು ಮತ್ತು ಬಂಡವಾಳಶಾಹೀ ಜಮೀನ್ದಾರರು ಇಬ್ಬರಿಂದಲೂ ಶೋಷಣೆಗೆ ಒಳಗಾಗಬೇಕಾಯಿತು.



. ರೋಗ ನಿರೋಧಕ ಶಕ್ತಿಯೇ ಇರಲಿಲ್ಲ
ಈ ವಾಕ್ಯವನ್ನು ಸಿ.ಎಚ್. ಹನುಂತರಾಯರು ಬರೆದಿರುವ  ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ ಎಂಬ ಲೇಖನದಿಂದ ಆರಿಸಲಾಗಿದೆ. ಈವಾಕ್ಯವನ್ನು ಲೇಖಕರು ನಮ್ಮ ದೇಶದ ಸಾಮ್ರಾಜ್ಯ ಶಾಹಿಗಳು ಸಸ್ಯಹಾರಿಗಳಾಗಿ ಪರಿವರ್ತಿಸಿದ ಸಂದರ್ಭಗಳಲ್ಲಿ ಈ ಮಾತನ್ನು ತಿಳಿಸಿದ್ದಾರೆ. ಈವಾಕ್ಯವು ಮುಕ್ತ ಮಾರುಕಟ್ಟೆಯಲ್ಲಿ ದಿಗ್ವಿಜಯ ಸಾಧಿಸಲು ಸಾಮ್ರಾಜ್ಯಶಾಹಿಗಳು ಸಸ್ಯಹಾರಿ ದನಗಳನ್ನೂ ಸಹ ಮಾಂಸಹಾರಿಗಳಾಗಿ ಪರಿವರ್ತಿಸಿದರು. ಹಲವಾರು ರಸಾಯನಿಕಗಳಿಂದ ಕೂಡಿದ ಆಹಾರ ನೀಡಿ ಕುರಿಗಳನ್ನು ದಿಡೀರ್ ಬೆಳವಣಿಗೆಗೆ ಒಳಪಡಿಸುವ ಪ್ರಯೋಗ ನಡೆಸಿದರು.ಅಕಾಲಿಕವಾಗಿ ಬಾತುಕೊಂಡು ಕೊಬ್ಬಿ ಬೆಳೆದ ಕುರಿಗಳು ನೋಡಲು ಮಾತ್ರ ಗೂಳಿಗಳಂತೆ ಕಾಣುತ್ತವೆ. ಆದರೆ ಇವುಗಳಿಗೆ ರೋಗ ನಿರೋಧಕ ಶಕ್ತಿಯೇ ಇರಲಿಲ್ಲ. ವಿಚಿತ್ರರೋಗಗಳಿಗೆ ಬಲಿಯಾಗಿ ಸಾಯುತ್ತಿದ್ದವು

. ಹೋಟಲ್ ಗಳು ಆರೋಗ್ಯ ಪ್ರಿಯರ ತಿರಸ್ಕಾರಕ್ಕೆ ಗುರಿಯಾಗಿದ್ದವು.
ಈ ವಾಕ್ಯವನ್ನು ಸಿ.ಎಚ್. ಹನುಂತರಾಯರು ಬರೆದಿರುವ  ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ ಎಂಬ ಲೇಖನದಿಂದ ಆರಿಸಲಾಗಿದೆ.

ಈವಾಕ್ಯವನ್ನು ಲೇಖಕರು ಭಾರತದ ಜಾಗತೀಕರಣ ಸಂದರ್ಭದಲ್ಲಿ ಆದ ಪರಿಣಾಮದ ಬಗ್ಗೆ ತಿಳಿಸುವಾಗ ಈ ಮಾತನ್ನು ಹೇಳಿದ್ದಾರೆ.

ನಮ್ಮ ದೇಶಕ್ಕೆ ಖಾದ್ಯತಯಾರಿಕಾ ಕಂಪನಿಗಳು ಹೋಟಲ್‍ಗಳು ಧಾಳಿ ಇಟ್ಟಾಗ ವಿದೇಶಗಳಲ್ಲಿ ಈ ಹೋಟಲ್‍ಗಳು ಆರೊಗ್ಯಪ್ರಿಯರ ತಿರಸ್ಕಾರಕ್ಕೆ ಗುರಿಯಾಗಿದ್ದವು. ಅಮೇರಿಕಾದ ಸಂಸತ್ತು  ಇಂತಹ ಹೋಟಲ್‍‍ಗಳು ತಯಾರಿಸುವ ಖಾದ್ಯಗಳ ಗುಣಮಟ್ಟ ಪರೀಕ್ಷಿಸಲು ಸಮಿತಿಯೊಂದನ್ನು ರಚಿಸಿದರು. ಈ ಕಂಪನಿಗಳು ಖಾದ್ಯತಯಾರಿಕೆಗೆ ಬಳಸುವ ಕುರಿ ಕೋಳಿಗಳಿಗೆ ವಿಶೇಷ ರಾಸಾಯನಿಕಗಳ ಆಹಾರ ತಿನ್ನಿಸಿ ಬೆಳೆಸಲಾಗುತ್ತಿದ್ದ ಅಂಶ ಬೆಳಕಿಗೆ ಬಂದಿತು.




ಒಂದು ವಾಕ್ಯದಲ್ಲಿ ಉತ್ತರಿಸಿ.
. ಲೇಖಕರು ಸಿಪಾಯಿದಂಗೆಯನ್ನು ಏನೆಂದು ಕರೆದಿದ್ದಾರೆ?
ಲೇಖಕರು ಸಿಪಾಯಿದಂಗೆಯನ್ನು ರೈತರ ದಂಗೆ ಎಂದು ಕರೆದಿದ್ದಾರೆ.

. ರೈತರು ಯಾವ ತೆರಿಗೆಯನ್ನು ಪಾವತಿಸಬೇಕಾಯಿತು?
ರೈತರು ಹಳೆಯ ತೆರಿಗೆ ಪದ್ಧತಿಯ ಪ್ರಕಾರ ಬೆಳೇದ ಬೆಳೆಯಲ್ಲಿ ಒಂದಷ್ಟು ಭಾಗವನ್ನು  ತೆರಿಗೆಯಂತೆ  ಪಾವತಿಸಬೇಕಾಯಿತು

. ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಕಟ್ಟಬಾರದೆಂದು ಯಾರು ಹೇಳಿದರು?
ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಕಟ್ಟಬಾರದೆಂದು ಗಾಂಧೀಜಿಯವರು ಹೇಳಿದರು.

. ರೈತರ ಬದಲಿಗೆ ಸ್ವಾತಂತ್ರವು ಯಾರ ಕೈಗೆ ಸಿಕ್ಕಿತು?
ರೈತರ ಬದಲಿಗೆ ಸ್ವಾತಂತ್ರವು ಬಂಡವಾಳ ಶಾಹಿಗಳ ಕೈಗೆ ಸಿಕ್ಕಿತು.

. ಶ್ರೀಮಂತ ರೈತರ ಉದಯಕ್ಕೆ ಯಾವುದು ಸಹಾಯಕವಾಯಿತು?
ಶ್ರೀಮಂತ ರೈತರ ಉದಯಕ್ಕೆ ಹಸಿರುಕ್ರಾಂತಿ ಸಹಾಯಕವಾಯಿತು

. ವಸಹಾತು ದೇಶಗಳಲ್ಲಿ ಯಾವರೀತಿಯ ಚಳುವಳಿ ಹುಟ್ಟಿಕೊಂಡವು?
ವಸಹಾತು ದೇಶಗಳಲ್ಲಿ ದೇಶೀಯ ವಿಮೋಚನಾ ಚಳುವಳಿಗಳು ಹುಟ್ಟಿಕೊಂಡವು

. ಜಂಕ್ ಫುಡ್ ಹೋಟೆಲ್‍ಗಳೆಂದು ಹೀಯಾಳಿಸಿದವರು ಯಾರು?
ಜಂಕ್ ಫುಡ್ ಹೋಟೆಲ್‍ಗಳೆಂದು ಹೀಯಾಳಿಸಿದವರು ಅಮೇರಿಕನ್ನರು.







ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.

. ರೈತರನ್ನು ಶೋಷಣೆ ಮಾಡಿದವರು ಯಾರು?
ಭಾರತದ ಹಳೆಯ ಜಮೀನ್ದಾರರು, ಮತ್ತು ಬಂಡವಾಳಶಾಹೀ ಜಮೀನ್ದಾರರು ರೈತರನ್ನು ಶೋಷಣೆಗೆ ಒಳಪಡಿಸಿದರು. ಅಲ್ಲದೆ ದೊಡ್ಡ ದೊಡ್ಡ ಕಾರ್ಖಾನೆ ಮಾಲೀಕರು ಕಚ್ಚವಸ್ತುಗಳಿಗಾಗಿ ಬೇಕೇಂದು ಲಕ್ಷಾಂತರ ಎಕರೆ ಜಮೀನುಗಳನ್ನು ವಶಪಡಿಸಿಕೊಂಡು ಶೋಷಿಸಿದರು.

. ರೈತ ಚಳುವಳಿಗಳು ಎಲ್ಲೆಲ್ಲಿ ನಡೆದವು?
ಕರ್ನಾಟಕದಲ್ಲಿ ಕಗೋಡು ರೈತ ಹೋರಾಟವು, ದಾಂಡೇಲಿಯಲ್ಲಿ ಹಳಿಯಾಳ ರೈತ ಹೋರಾಟವು, ನರಗುಂದ ಮತ್ತು ಶಿವಮೊಗ್ಗದಲ್ಲಿ ರೈತ ಚಳುವಳಿ ನಡೆಯಿತು. ಮದ್ಯಮ ಮತ್ತು ಶ್ರೀಮಂತ ರೈತರ ಬೇಡಿಕೆಗಳನ್ನು ಪ್ರಧಾನವಾಗಿರಿಸಿಕೊಂಡ ರೈತ ಹೋರಾಟಗಳು ಹೆಚ್ಚಾಗ ತೊಡಗಿದ್ದವು ಈ ಚಳುವಳಿಗಳು ಸರಕಾರಗಳನ್ನು ನಡುಗಿಸತೊಡಗಿದ್ದವು.

. ಸಾಲ ಕೇಳಲುಹೋದ ಬಡರಾಷ್ಟ್ರಗಳ ಮೇಲೆ ವಿಧಿಸಿದ ನಿರ್ಬಂಧಗಳಾವುವು?
ಸಾಲ ಕೇಳಲು ಹೋದ ಬಡರಾಷ್ಟ್ರಗಳಿಗೆಹತ್ತು ಹಲವು ಷರತ್ತುಗಳನ್ನು ವಿಧಿಸತೊಡಗಿದವು. ಬಡರಾಷ್ಟ್ರಗಳ ಯೋಜನೆಗಳಿಗೆ ಮಾರ್ಗದಾರ್ಶಿಯಾಗತೊಡಗಿದವು. ಮಹಿಳೆ ಮತ್ತು ಶಿಶುಕಲ್ಯಾಣ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣಗಳಂಥ ಯೋಜನೆಗಳಿಗಾಗಿ ಹಣ ವ್ಯಯಿಸಬಾರದೆನ್ನುವ ನಿರ್ಬಂಧಗಳನ್ನು  ಹೇರಲಾಯಿತು.ಬಡರಾಷ್ಟ್ರಗಳು ಅನುತ್ಪಾದಕವಾಗಿಯೇ ಮುಂದುವರೆದು ಕೇವಲ ಖರೀದಿದಾರರಾಗಿ ಇರಬೇಕೆನ್ನುವುದು ಸಾಮ್ರಾಜ್ಯ ಶಾಹೀಗಳ ಇರಾದೆಯಾಗಿತ್ತು.






. ಕೃಷೀ ಜಮೀನನ್ನು ಯಾರು ಖರೀದಿಸುವಂತಿರಲಿಲ್ಲ?
ಕರ್ನಾಟಕ ರಾಜ್ಯ ಭೂ ಸುಧಾರಣಾ ಕಾಯ್ದೆಯ ಪ್ರಕಾರ ರೈತ ಅಥವಾ ರೈತ ಕೂಲಿಕಾರರಲ್ಲದವರು ಕೃಷಿ ಜಮೀನುಗಳನ್ನು ಖರೀದಿಸುವಂತಿರಲಿಲ್ಲ. ವ್ಯಾಪಾರಿಗಳು , ಸಾಲ ಲೇವಾದೇವಿಗಾರರು ಸರಕಾರಕ್ಕೆ ಆದಾಯ ತೆರಿಗೆ ವಂಚಿಸಲು ಜಮೀನುಗಳನ್ನು ಖರೀದಿಸಿ, ತಮ್ಮ ವ್ಯಾಪಾರಿ ಮುಲದಿಂದ ಬಂದ ಆದಾಯವನ್ನು ಕೃಷೀ ಮೂಲದಿಂದ ಬಂದ ಆದಾಯವೆಂದು ತೋರಿಸುತ್ತಿದ್ದರು.

. ರಾಸಾಯನಿಕಗಳನ್ನು ತಿಂದು ಬೆಳೆಯುವ ಪ್ರಾಣಿಗಳಿಗೆ ಯಾವ ರೋಗಗಳು ಬರುತ್ತವೆ?
 ರಾಸಾಯನಿಕಗಳನ್ನು ತಿಂದು ಬೆಳೆಯುವ ಹಂತದಲ್ಲಿಯೇ ಈ ಪ್ರಾಣಿಗಳಿಗೆ ಕ್ಯಾನ್ಸರ್, ಲುಕೋಸಿನ್, ಹಂದಿಜ್ವರ ಮೊದಲಾದ ರೋಗಗಳು ಬರುತ್ತವೆ. ಈ ರೋಗಗಳನ್ನು ತಡೆಗಟ್ಟಲಿಕ್ಕಾಗಿ ಬಳಸುವ ಮಾರಣಾಂತಕ ರೋಗನಿರೋಧಕ ಔಷಧಿಗಳನ್ನು ಬಳಸಲಾಗುತ್ತದೆ. ರಾಸಾಯನಿಕಗಳು ಪ್ರಾಣಿಗಳ ದೇಹದಲ್ಲಿಯೇ ಹಾಳಾಗದೆ ಇದ್ದು. ಖಾದ್ಯಗಳ ಮೂಲಕ ಮಾನವ ದೇಹಗಳಿಗೆ ರವಾನೆಗೊಳ್ಳುತ್ತವೆ.

ಐದಾರು ವಾಕ್ಯಗಳಲ್ಲಿ ಉತ್ತರಿಸಿ.
.ಸಿಪಾಯಿ ದಂಗೆಯನ್ನು ರೈತರ ದಂಗೆಯೆಂದು ಲೇಖಕರು ಏಕೆ ಕರೆದಿದ್ದಾರೆ?
ನಮ್ಮದೇಶದಲ್ಲಿ ೧೯೮೭ರ ಸಿಪಾಯಿದಂಗೆಯನ್ನು ಲೇಖಕರು ರೈತರ ದಂಗೆ ಎಂದೇ ಕರೆದಿದ್ದಾರೆಸಿಪಾಯಿದಂಗೆ ಸ್ಫೋಟಗೊಳ್ಳುವುದಕ್ಕೆ ಕ್ರಾಂತಿಕಾರಕ ವಾತಾವರಣವನ್ನು ರೈತರು ತಮ್ಮ ಚಳುವಳಿಗಳ ಮೂಲಕ ಸೃಷ್ಟಿಮಾಡಿದ್ದರು. ಬ್ರಿಟೀಷರು ರೈತರಿಂದ ತೆರಿಗೆಯನ್ನು ವಸೂಲಿಮಾಡುತ್ತಿದ್ದರು. ಅದಕ್ಕೆ ಪ್ರತಿಯಾಗಿ ಯಾವ ಅನುಕೂಲತೆಗಳನ್ನೂ ಒದಗಿಸುತ್ತಿರಲಿಲ್ಲ. ಕೆರೆ, ಬಾವಿಗಳ ರಕ್ಷಣೆ, ನಿರ್ಮಾಣಕಾರ್ಯಗಳು ನಿಂತುಹೋಗಿದ್ದವು. ರೈತರು ಹಳೇಯ ಪದ್ಧತಿಪ್ರಕಾರ ತೆರಿಗೆ ಪಾವತಿಸಬೇಕಾದರೆ ತುಂಬಾ ಕಷ್ಟವಾಗುತ್ತಿತ್ತು. ಬೆಳೆ ಬೆಳೆಯಲಿ ಬೆಳೆಯಾಗದಿರಲಿ ತೆರಿಗೆ ಕಡ್ಡಾಯವಾಗಿತ್ತು. ಈ ರೀತಿ ಬ್ರಿಟಿಷರ ವಿರುದ್ಧ ಹೋರಾಟಮಾಡಿ ತಮ್ಮ ಜಮೀನನ್ನು ಉಳಿಸಿಕೊಳ್ಳಲು ರೈತರು ಸಾಲ ಮಾಡಬೇಕಾಯಿತು.



. ಹತ್ತೊಂಬತ್ತನೆ ಶತಮಾನದಲ್ಲುಂಟಾದ ಬರದ ಪರಿಣಾಮಗಳೇನು?
ಹತ್ತೊಂಬತ್ತನೆ ಶತಮಾನದಲ್ಲುಂಟಾದ ಬರವು ಮಾನವ ನಿರ್ಮಿತ ಬರ ಎಂದು ಹೆಸರಾಯಿತು.
ಕೆಲರೈತರು ಕೃಷಿ ಮಾಡದೆ ಎರೆಮಣ್ಣನ್ನು ತಿಂದು ಹೊಟ್ಟೆತುಂಬಿಸಿಕೊಳ್ಳುತ್ತಿದ್ದರು. ಇದರಿಂದ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಯಿತು ರೈತರ ದೇಹಗಳನ್ನು ಅಂತ್ಯಕ್ರಿಯೆ ಮಾಡಲು ಆಗದಂತಹ ಸ್ಥಿತಿ ಉಂಟಾಯಿತು. ಶವಗಳನ್ನು ನಾಯಿ-ನರಿಗಳು ತಿನ್ನುತ್ತಿದ್ದವು.
ಎಲ್ಲಿನೋಡಿದರೂ ಮಾನವ ಅಸ್ತಿಪಂಜರಗಳು ಬಿದ್ದಿರುತ್ತಿದ್ದವು. ಹೈದರಾಬಾದ್-ಕರ್ನಾಟಕ ಪ್ರದೇಶಗಳಲ್ಲಿ ದೋಂಗಿ ಬರ ಎಂದ್ದು ಕರೆದರು. ಬ್ರಿಟೀಷರ ದರೋಡೆಕೋರನೀತಿಗಳ ವಿರುದ್ಧ ಎಲ್ಲಾ ಕಡೆ ರೈತರು ಸಿಡಿದೆದ್ದರುರೈತರಮೇಲೆ ಗುಂಡುಹಾರಿಸಲು ಸೈನಿಕರಿಗೆ ತಿಳಿಸಲಾಯಿತು. ಭಾರತೀನ ಸೈನಿಕರು ನಿರಾಕರಿಸಿದರು. ಇದರಿಂದಾಗಿ ರೈತರು ಹಾಗೂ ಭಾರತೀಯ ಸೈನಿಕರ ನಡುವೆ ಸ್ನೇಹ ಉಂಟಾಯಿತು.

. ರೈತ ಚಳುವಳಿಗಳ ಬಗ್ಗೆ ಬರೆಯಿರಿ.
ಭಾರತದಲ್ಲಿ ಸಾಮ್ರಾಜ್ಯಶಾಹಿಗಳು ಮತ್ತು ಬಂಡವಾಳ ಶಾಹಿಗಳು ಬಡರೈತರ ಮೇಲೆ ದೌರ್ಜನ್ಯ, ಶೋಷಣೆಮಾಡುತ್ತಿದ್ದರು. ಇದರಿಂದ ಸಹಿಸಿಕೊಳ್ಳಲಾರದೆ ರೈತರು ಎಪ್ಪತ್ತರ ದಶಕದಲ್ಲಿ ಭುಗಿಲೇಳತೊಡಗಿದರು. ರೈತರು ಸರಕಾರಗಳನ್ನು ನಡುಗಿಸತೊಡಗಿದರು. ಕಾಗೋಡು ರೈತ ಹೋರಾಟ ಅಭೂತಪೂರ‍್ವ ನೆಲೆಗಟ್ಟನ್ನು ಒದಗಿಸಿಕೊಟ್ಟಿತು. ದಾಂಡೇಲಿಯಲ್ಲಿ ಹಳಿಯಾಳ ರೈತ ಹೋರಾಟವು ನಡೆಯಿತು. ನರಗುಂದ ಮತ್ತು ಶಿವಮೊಗ್ಗ ರೈತ ಚಳುವಳಿಗಳು ನಡೆದವು ಇದೇರೀತಿ ವಸಹಾತು ದೇಶಗಳಲ್ಲಿ ದೇಶೀಯ ವಿಮೋಚನಾ ಚಳುವಳಿಗಳು ಹುಟ್ಟಿಕೊಂಡವು.








. ಭೂ ಸುಧಾರಣಾ ಕಾಯ್ದೆ ಎಂದರೇನು? ಅದರ ಪರಿಣಾಮಗಳೇನು?
ಕರ್ನಾಟಕ ರಾಜ್ಯ ಭೂಸುಧಾರಣಾ ಕಾಯಿದೆಯ ಪ್ರಕಾರ ರೈತ ಕೂಲಿಕಾರರಲ್ಲದವರು ಕೃಷಿ ಜಮೀನುಗಳನ್ನು ಖರೀದಿಸುವಂತಿಲ್ಲ. ಆದರೆ ಹಲವಾರು ವ್ಯಾಪಾರಿಗಳು ಸಾಲಲೇವಾದೇವಿದಾರರು, ಸರಕಾರಕ್ಕೆ ಆದಾಯ ತೆರಿಗೆ  ವಂಚಿಸಲು ಜಮೀನುಗಳನ್ನು ಖರೀದಿಸಿ  ತಮ್ಮ ವ್ಯಾಪಾರಿ ಮೂಲದಿಂದ ಬಂದ ಆದಾಯವನ್ನು ಕೃಷೀ ಮೂಲದಿಂದ ಬಂದ ಆದಾಯವೆಂದು ತೋರಿಸುವ ಪ್ರಕರಣಗಳೂ ಇವೆ. ಭೂಮಿ ರೈತನಿಗೆ ಉತ್ಪಾದನಾ ಸಾಧನ ಮಾತ್ರವಲ್ಲ ಅವನ ಬದುಕೂ ಆಗಿದೆರೈತನ ಬದುಕಿನ ವ್ಯವಸ್ಥೆಯಮೇಲೆ ನಡೆದ ಧಾಳಿ ಇದಾಗಿದೆ.

. ನಮ್ಮ ಆರೋಗ್ಯದ ಮೇಲೆ ವಿದೇಶೀ ಹೋಟೆಲ್‍ಗಳು ನಡೆಸಿದ ದಾಳಿಗಳೇನು?
ಜಾಗತೀಕರಣದ ಅಂಗವಾಗಿ ನಮ್ಮದೇಶಕ್ಕೆ ಖಾದ್ಯತಯಾರಿಕಾ ಕಂಪನಿಗಳು, ಹೋಟಲ್‍ಗಳು ಧಾಳಿಯಿಟ್ಟವು. ವಿದೇಶಗಳಲ್ಲಿ ಈ ಹೋಟಲ್‍ಗಳು ಆರೋಗ್ಯಪ್ರಿಯರ ತಿರಸ್ಕಾರಕ್ಕೆ ಗುರಿಯಾಗಿದ್ದವು. ಅಮೇರಿಕಾದ ಸಂಸತ್ತು ಇಂತಹ ಹೋಟಲ್ ಗಳು ತಯಾರಿಸುವ ಖಾದ್ಯಗಳ ಗುಣಮಟ್ಟ ಪರೀಕ್ಷಿಸಲು ಸಮಿತಿಯೊಂದನ್ನು ರಚಿಸಿತು. ಈ ಕಂಪನಿಗಳು ಖಾದ್ಯತಯಾರಿಕೆಗೆ ಬಳಸುವ ಕುರಿ ಕೋಳಿಗಳಿಗೆ ವಿಶೇಷ ರಾಸಾಯನಿಕಗಳ ಆಹಾರ ತಿನ್ನಿಸಿ ಬೆಳೆಸಲಾಗುತ್ತಿದ್ದ ಅಂಶ ಬೆಳಕಿಗೆ ಬಂದಿತು. ಈ ರೀತಿ ಬೆಳೆಸುವ ಪ್ರಾಣಿಗಳ ಮಾಂಸ ಹೆಚ್ಚು ರುಚಿಕರವಾಗಲೆಂದು ಮತ್ತು ದಿಡೀರ್ ಉಬ್ಬಿ ಬೆಳೆಯಲೆಂದು  ಅಪಾಯಕಾರಿ ರಾಸಾಯನಿಕಗಳನ್ನು ಬಳಸುತ್ತಿದ್ದರು. ಎಷ್ಟೇ ಬೇಯಿಸಿದರೂ ಪ್ರಾಣಿಗಳ ದೇಹದಲ್ಲಿ ಉಳಿಯುತ್ತಿದ್ದ ರಾಸಾಯನಿಕಗಳು ಖಾದ್ಯಗಳ ಮೂಲಕ ಮಾನವನ ದೇಹ ಸೇರುತ್ತಿತ್ತು. ಇಂತಹ ಪ್ರಾಣಿಗಳನ್ನು ತಿನ್ನುವುದರಿಂದ ಕರುಳಿನ ಕ್ಯಾನ್ಸರ್, ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಲೈಂಗಿಕ ಬದಲಾವಣೆಗಳು , ನಪುಂಸಕತ್ವ, ಮಕ್ಕಳಲ್ಲಿ ಅಕಾಲಿಕ ಹರಯ ಬರುವಿಕೆ, ಮೊದಲಾದ ಸಮಸ್ಯೆಗಳು ತಲೆದೋರತೊಡಗಿತು. ತಮ್ಮ ದೇಶದಲ್ಲಿ ತಾತ್ಸಾರಕ್ಕೆ ಒಳಗಾಗಿದ್ದರೂ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ತಮ್ಮ ಶಾಖೆಗಳನ್ನು ತೆಗೆದು ಲಾಭಮಾಡಿಕೊಳ್ಳುತಿವೆ.

~~~ಓಂ~~~

1 comment:

  1. ಪಗೆಯಂ ಬಾಲಕನೆಂಬರೇ

    ಭಾವಾರ್ಥ

    ReplyDelete