ಪದ್ಯಭಾಗ 12
ಸುನಾಮಿಯ ಹಾಡು : ಡಾ ಎಚ್. ಎಲ್. ಪುಷ್ಪ
ಸಾರಾಂಶ : ಮನುಷ್ಯ ತನ್ನ ಬುದ್ಧಿಶಕ್ತಿಯನ್ನು ಬಳಸಿ ಎಷ್ಟೇ ಬಲಿಷ್ಠವಾಗಿ
ಆಧುನಿಕಪ್ರಪಂಚವನ್ನು ನಿರ್ಮಿಸಿದ್ದರೂ ಪ್ರಕೃತಿಯ ಮುಂದೆ ಅದು ನಿಲ್ಲಲಾರದು. ಪ್ರಕೃತಿಯು
ಎಲ್ಲವನ್ನೂ ಕಬಳಿಸಿ ನಾಮಾವಶೇಷವೂ ಉಳಿಯದಂತೆ ಮಾಡಬಲ್ಲುದು. ಅಲ್ಲದೆ ಮಾನವನು ಬೆಳೆಸಿಕೊಂಡಿರುವ
ಮತಗಳೆಂಬ ಮೌಢ್ಯಗಳನ್ನೂ ಬಿಟ್ಟು ಮತ್ತೆ ಶಿಲಾಯುಗದ ಜನರಂತೆ ಬದುಕನ್ನು ಅರಸುತ್ತಾ ಗ್ರಹಗಳ ನಡುವೆ ಅಲೆಯುತ್ತಾ ಬಾಳಬೇಕಾಗುತ್ತದೆ.
ಒಮ್ಮೆ ಸುನಾಮಿ ಎಂಬ ರಕ್ಕಸ ಅಲೆಗಳು ಜಗತ್ತನ್ನು ನುಂಗುತ್ತಾ ಮುಂದೆ ಮುಂದೆ ಬರುವುದು ನಮಗೆ
ಮೊಸಳೆ ನೀರೊಳಗೆ ಸ್ವಲ್ಪ ಸ್ವಲ್ಪವೇ ಕಂಡು ಕಾಣದಂತೆ ಕಂಡದ್ದು ಸ್ವಲ್ಪ ಕಾಣದ್ದು ಅಪಾರ. Tip of a iceberg ಎಂಬಂತೆ
. ಎಲ್ಲ ಜೀವಜಾಲವನ್ನು ತನ್ನೊಳಗೆ ಅಡಗಿಸಿಕೊಳ್ಳುತ್ತಾ ನುಗ್ಗಿಬರುವುದನ್ನು ಜಲಪ್ರಳಯ ಎಂದು
ಕರೆಯುತ್ತಾ ಇದು ಪಾಪದ ಕೊಡ ತುಂಬಿದಂತಹ ಜಲಪ್ರಳಯ ಎಂದಿದ್ದಾರೆ. ಜೀವಿಗಳ ಪಾಪದ ಕೊಡ
ತುಂಬಿದಾಗಲೇ ಈ ಎಲ್ಲ ರೀತಿಯ ಬದಲಾವಣೆ ಆಗುವುದು
ಎಂಬುದು ಕವಿಯತ್ರಿಯ ಆಶಯವಾಗಿದೆ.
ಕುದಿವ ಕಡಲು ತನ್ನೊಳಗೆ ಅಡಗಿದ್ದ ಎಲ್ಲಜೀವಜಾಲವನ್ನು ಹೊರಕ್ಕೆ ಉಗಿಯುತ್ತಾ,
ಮಾನವಕುಲವನ್ನೆಲ್ಲಾ ನುಂಗುತ್ತಿದೆ. ಕಡಲ ಒಡಲ ಒಳಗೆ ಸತ್ತವರ ಸತ್ತೆ ಹೊರಗೆ ಬೀಳುತ್ತಿದೆ.
ಹವಳದ್ವೀಪಗಳಾಗಲಿ , ಮುತ್ತು ನಿರ್ಮಾಣಕೇಂದ್ರಗಳಾಗಲೀ ಈ ಮಹಾ ಪ್ರಳಯದಿಂದ ಮಾಯವಾಗಿವೆ.
ತಂದೆ-ತಾಯಂದಿರ ಕಳೆದುಕೊಂಡ ಮಕ್ಕಳದನಿ ಹಕ್ಕಿಗಳ ಪಿಸುಮಾತಾಗಿದೆ ಎಲ್ಲವೂ ಮೀನುಗಾರರ
ಬಲೆಯಂತೆ ಮಾನವರು ಬಲೆಯಲ್ಲಿ ಸಿಲುಕಿದ ಮೀನುಗಳಂತೆ ನೀರಲ್ಲಿ ನರಳುತ್ತ , ಮೇಲೆದ್ದ ಅಲೆಯ ಅಬ್ಬರದ
ಎದುರು ದನಿಕಳೆದುಕೊಂಡು ಜೀವಭಯದ , ನೋವು, ವಿಷಾದ
, ನಶ್ವರತೆಗಳ ಪ್ರತ್ಯಕ್ಷದರ್ಶನಮಾಡುತ್ತಿದೆ.
ದೂರದಲ್ಲೆಲ್ಲೋ ಭೂಮಿ ಕಂಪಿಸಿದರೆ , ಸಮುದ್ರ ಮೇರೆ ಮೀರಿ ಘರ್ಜಿಸಿದರೆ, ಮಾನವನು ಇಟ್ಟಿಗೆಯ
ಮೇಲೆ ಇಟ್ಟಿಗೆ ಇಟ್ಟು ಕಟ್ಟಿದ ಜಾತಿ , ಮತ, ಪಂಥಗಳ ಗುರುತುಗಳಾದ ಗುಡಿ ಮಸೀದಿ,
ಚರ್ಚುಗಳೆಲ್ಲಾಸಾಕ್ಷಿಇಲ್ಲದಂತೆ ನಾಶವಾಗುತ್ತವೆ. (ಮಾನವನಿಂದ ನಿರ್ಮಿತವಾದುದೆಲ್ಲಾ
ಸಮಾಧಿಯಾಗುತ್ತಿದೆ) ಎಲ್ಲ ನಾಶವಾದ ಮೇಲೆ ಉತ್ಖನನ ನಡೆಸುವವರು ಈ ಎಲ್ಲಾ ಅವಶೇಷಗಳ ಸುತ್ತ ಪಿಕಾಸಿ
ಹಿಡಿದು ಎಲ್ಲಿಂದ ಆರಂಭಿಸಬೇಕು ಎಂದು
ನಕ್ಷೆಹುಡುಕುತ್ತಾರೆ.
ಮತ್ತೆ ಉಳಲು, ಬಿತ್ತಲು , ಮನೆಯ ಕಟ್ಟಲು, ಅಲ್ಲದೆ ತೊಟ್ಟಿಲು ತೂಗಲು, ವಾಸ್ಕೋಡಿಗಾಮನಾ ನಾವೆಯೋ, ಟೈಟಾನಿಕ್ ಅವಶೇಷವೋ ಕಾಗದದ
ದೋಣಿಗಳಂತೆ ತೇಲುತ್ತಾ ಮಂಗಳ ಶುಕ್ರ ಗ್ರಹಗಳಲ್ಲಿ
ನಕ್ಷತ್ರಗಳಲ್ಲಿ ಸುರಕ್ಷ ನೆಲೆಗಾಗಿ ಹುಡುಕಾಡುತ್ತಾ ಅಲೆಯಬೇಕಾಗುತ್ತದೆ. ಇತಿಹಾಸದ ಚಕ್ರ
ಹೀಗೆ ಸುತ್ತುತ್ತಲೇ ಇರಬೇಕು . ಶಿಲಾಯುಗದಿಂದ ಶಿಲಾಯುಗಕ್ಕೆ ಕ್ರಮಿಸಲೇಬೇಕು.
ಸಂದರ್ಭ ಸೂಚಿಸಿ ವಿವರಿಸಿ :
೧.ಪಾಪದ ಕೊಡ ತುಂಬಿದ ಜಗಪ್ರಳಯ
ಈ ವಾಕ್ಯವನ್ನು ಸುನಾಮಿಯ ಹಾಡು ಎಂಬ ಪದ್ಯದಿಂದ
ಆರಿಸಿಕೊಳ್ಳಲಾಗಿದೆ. ಈವಾಕ್ಯವನ್ನು ಕವಿಯತ್ರಿ ಡಾ. ಎಚ್.ಎಲ್ ಪುಷ್ಪಾರವರು ಸಮಾಜಕ್ಕೆ
ಹೇಳಿದ್ದಾರೆ. ಈ ಮಾತು ಭೂಮಿಯ ಜಲವು ಎಲ್ಲೆಡೆ ಆವರಿಸಿಕೊಳ್ಳುತ್ತಾ ಭೂಮಿಯನ್ನು ಕಬಳಿಸುತ್ತಾ
ಭೂಮಿಯ ಮೇಲಿನ ಎಲ್ಲ ಜೀವಜಾಲವನ್ನೂ ತನ್ನೊಳಗೆ ಸೆಳೆದುಕೊಳ್ಳುತ್ತದೆ. ಇದನ್ನು ಕವಯಿತ್ರಿ
ಪಾಪದಕೊಡ ತುಂಬಿದ ಜಗಪ್ರಳಯ ಎಂದಿದ್ದಾರೆ. ಜೀವಿಗಳ ಪಾಪದ ಕೊಡ ತುಂಬಿದಾಗಲೇ ಎಲ್ಲ ರೀತಿಯ
ಬದಲಾವಣೆ ಆಗುವುದು ಎಂಬುದು ಕವಿಯತ್ರಿಯ ಆಶಯವಾಗಿದೆ.
೨. ಸತ್ತವರ ಎಲ್ಲ ಸತ್ತೆ ಹೊರಬೀಳುತ್ತಿದೆ.
ಈ ವಾಕ್ಯವನ್ನು ಸುನಾಮಿಯ ಹಾಡು ಎಂಬ ಪದ್ಯದಿಂದ
ಆರಿಸಿಕೊಳ್ಳಲಾಗಿದೆ. ಈವಾಕ್ಯವನ್ನು ಕವಿಯತ್ರಿ ಡಾ. ಎಚ್.ಎಲ್ ಪುಷ್ಪಾರವರು ಸಮಾಜಕ್ಕೆ
ಹೇಳಿದ್ದಾರೆ. ಭೂಮಿಯ ಮೇಲೆ ನೀರು ಹರಿಯುತ್ತಾ ಉಕ್ಕಿ ಸುನಾಮಿ ಅಲೆಗಳಾಗಿ ತನ್ನೊಳಗಿನದೆಲ್ಲವನ್ನು
ಹೊರಕ್ಕೆ ಹಾಕುತ್ತಾ ಹೊರಗಿರುವ ಮಾನವನನ್ನು ತನ್ನೊಳಕ್ಕೆ ಸೆಳೆಯುತ್ತಾ ಮನುಕುಲವನ್ನೇ
ನಾಶಮಾಡುತ್ತ ಇರುವುದನ್ನು ಸತ್ತವರ ಸತ್ತೆ ಹೊರಬೀಳುವುದು ಎಂದು ಹೇಳಿದ್ದಾರೆ.
೩. ಗುಡಿ ಚರ್ಚು ಮಸೀದಿಗಳೆಲ್ಲ ಹಾರಿ
ಹೋಗುತ್ತವೆ.
ಈ ವಾಕ್ಯವನ್ನು ಸುನಾಮಿಯ ಹಾಡು ಎಂಬ ಪದ್ಯದಿಂದ
ಆರಿಸಿಕೊಳ್ಳಲಾಗಿದೆ. ಈವಾಕ್ಯವನ್ನು ಕವಿಯತ್ರಿ ಡಾ. ಎಚ್.ಎಲ್ ಪುಷ್ಪಾರವರು ಸಮಾಜಕ್ಕೆ
ಹೇಳಿದ್ದಾರೆ. ದೂರದಲ್ಲೆಲ್ಲೋ ಭೂಮಿ ಕಂಪಿಸಿದರೆ , ಸಮುದ್ರ ಮೇರೆ ಮೀರಿ ಘರ್ಜಿಸಿದರೆ, ಮಾನವನು
ಇಟ್ಟಿಗೆಯ ಮೇಲೆ ಇಟ್ಟಿಗೆ ಇಟ್ಟು ಕಟ್ಟಿದ ಜಾತಿ , ಮತ, ಪಂಥಗಳ ಗುರುತುಗಳಾದ ಗುಡಿ ಮಸೀದಿ,
ಚರ್ಚುಗಳೆಲ್ಲಾಸಾಕ್ಷಿಇಲ್ಲದಂತೆ ನಾಶವಾಗುತ್ತವೆ.
೪. ಎಲ್ಲಿಂದ ಅಗೆಯ ಬೇಕೆಂದು ನಕಾಶೆ
ಹುಡುಕುತ್ತಾರೆ.
ಈ ವಾಕ್ಯವನ್ನು ಸುನಾಮಿಯ ಹಾಡು ಎಂಬ ಪದ್ಯದಿಂದ
ಆರಿಸಿಕೊಳ್ಳಲಾಗಿದೆ. ಈವಾಕ್ಯವನ್ನು ಕವಿಯತ್ರಿ ಡಾ. ಎಚ್.ಎಲ್ ಪುಷ್ಪಾರವರು ಸಮಾಜಕ್ಕೆ
ಹೇಳಿದ್ದಾರೆ. ಮಾನವನಿಂದ ನಿರ್ಮಿತವಾದುದೆಲ್ಲಾ ಸಮಾಧಿಯಾಗಿ ಎಲ್ಲ ನಾಶವಾದ ಮೇಲೆ ಮತ್ತೆ ಪುನಃ
ನಿರ್ಮಾಣ ಮಾಡಿದಾಗ ಉತ್ಖನನ ನಡೆಸುವವರು ಈ ಎಲ್ಲಾ ಅವಶೇಷಗಳ ಸುತ್ತ ಪಿಕಾಸಿ ಹಿಡಿದು ಎಲ್ಲಿಂದ
ಆರಂಭಿಸಬೇಕು ಎಂದು ನಕ್ಷೆಹುಡುಕುತ್ತಾರೆ.
೫. ಅಣು ಯುಗದಿಂದ ಶಿಲಾಯುಗಕ್ಕೆ.
ಈ ವಾಕ್ಯವನ್ನು ಸುನಾಮಿಯ ಹಾಡು ಎಂಬ ಪದ್ಯದಿಂದ
ಆರಿಸಿಕೊಳ್ಳಲಾಗಿದೆ. ಈವಾಕ್ಯವನ್ನು ಕವಿಯತ್ರಿ ಡಾ. ಎಚ್.ಎಲ್ ಪುಷ್ಪಾರವರು ಸಮಾಜಕ್ಕೆ
ಹೇಳಿದ್ದಾರೆ. ಪ್ರಕೃತಿಯ ಕೋಪಗಳು ಹೆಚ್ಚಾದಾಗ ಮಾನವ ಕುಲವೇ ನಾಶಹೊಂದುತ್ತದೆ. ಆಗ ಮತ್ತೆ ಮಾನವ ಉಳಲು, ಬಿತ್ತಲು ಮನೆಕಟ್ಟಲು ,
ತೊಟ್ಟಿಲು ತೂಗಲು ಸುರಕ್ಷಿತವಾದ ಸ್ಥಳವನ್ನು ಹುಡುಕಲೇಬೇಕು. ಆಗ ಒಂದು ಯುಗದಿಂದ ಇನ್ನೊಂದು ಯುಗಕ್ಕೆ
ಕಾಲಿಡಬೇಕಾಗುತ್ತದೆ. ನ್ಯಾನೋ ಯುಗದಲ್ಲಿರುವ ನಾವು ಮತ್ತೆ ಶಿಲಾಯುಗಕ್ಕೆ ಹೋಗಬೇಕಾಗುತ್ತದೆ.
ಶಿಲಾಯುಗದವರಂತೆ ಜೀವಿಸಬೇಕಾಗುತ್ತದೆ.
ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಭೂಮಿಯೊಳಗಿನ ಯಾವ ತೆರೆ ಸರಿಯುತ್ತದೆ?
ಭೂಮಿಯೊಳಗಿನ ಜಲದ ತೆರೆ ಸರಿಯುತ್ತದೆ.
೨. ಜಲದ ಕಣ್ಣು ತೆರೆದಾಗ ಕುಸಿಯುವುದು ಯಾವುದು?
ಜಲದ ಕಣ್ಣು ತೆರೆದಾಗ ಮಣ್ಣಿನ ಪದರ ಕುಸಿಯುವುದು.
೩. ಜಗ ಪ್ರಳಯ ಯಾವಾಗ ಸಂಭವಿಸುತ್ತದೆ?
ಪಾಪದ ಕೊಡ ತುಂಬಿದಾಗ ಜಗಪ್ರಳಯವು ಸಂಭವಿಸುತ್ತದೆ.
೪. ಮಾಯವಾಗಿರುವ ದ್ವೀಪ ಯಾವುದು?
ಹವಳದ ದ್ವೀಪಗಳು ಮಾಯಾವಾಗಿವೆ.
೫. ಸಾಕ್ಷಿ ಇಲ್ಲದಂತೆ ಹಾರಿ ಹೋಗುತ್ತಿರುವುದು ಯಾವುದು?
ಜನರು ಇಷ್ಟಪಟ್ಟು ಇಟ್ಟಿಗೆ ಇಟ್ಟಿಗೆ ಸೇರಿಸಿ ಕಟ್ಟಿದ ಗುಡಿ ಮಸೀದಿ, ಚರ್ಚ್ ಗಳು.
೬. ಯಾರು ನಕಾಶೆಯನ್ನು ಹುಡುಕುತ್ತಿದ್ದಾರೆ?
ಉತ್ಖನನ ನಡೆಸುವವರು ನಕಾಶೆಯನ್ನು ಹುಡುಕುತ್ತಿದ್ದಾರೆ.
೨-೩ವಾಕ್ಯದಲ್ಲಿಉತ್ತರಿಸಿ.
೧. ಕವಿತೆಯಲ್ಲಿ ಜಗಪ್ರಳಯವನ್ನು ಹೇಗೆ ಕಲ್ಪಿಸಲಾಗಿದೆ?
ಭೂಮಿಯಲ್ಲಿ ಆಗುವ ವಿಕೋಪಗಳು ಕಾಣದ ಹಾಗೆ ಕತ್ತಲೆ ಆವರಿಸಿ, ಮೊಸಳೆಯ ಬಾಯಿಯಂತೆ ಎಲ್ಲಾವನು
ನುಂಗುತ್ತ, ದೈತ್ಯಾಕಾರದ ಅಲೆಗಳೆದ್ದು ಸ್ವಲ್ಪಸ್ವಲ್ಪವಾಗಿಯೇ ಭೂಭಾಗಗಳನ್ನು ತನ್ನ ವಶಮಾಡಿಕೊಳ್ಳುತ್ತಾ ಇರುವುದನ್ನು
ಜಲಪ್ರಳಯ ಎಂದಿದ್ದಾರೆ.
೨.ಅಬ್ಬರದ ಅಲೆಯೆದುರು ದನಿ ಕಳೆದುಕೊಂಡವುಗಳು ಯಾವುವು?
ಸಾಗರದ ಅಬ್ಬರದ ಅಲೆಯೆದುರು ಹಕ್ಕಿಗಳ ಕಲರವ, ಮಕ್ಕಳ ಮಾತು, ಬಲೆಯೊಳಗಿನ ಮೀನು ಮಾತ್ರವಲ್ಲ ಇಡೀ ಮನುಕುಲವೇ ದನಿ
ಕಳೆದುಕೊಂಡಂತಾಗಿದೆ.
೩.ಭೂಮಿ ಕಂಬಿಸಿದಾಗ ಏನಾಯಿತು.
ಭೂಮಿ ಕಂಪಿಸಿದಾಗ, ಸಾಗರ ಎಲ್ಲೆ ಮೀರಿ ಘರ್ಜಿಸಿದಾಗ ಜೀವಜಾಲದೊಂದಿಗೆ ಕಾಲದಿಂದ ಮಾನವನು
ಇಟ್ಟಿಗೆಯ ಮೇಲೆ ಇಟ್ಟಿಗೆ ಇಟ್ಟು ಜೋಡಿಸಿದ್ದ ಮತ, ಧರ್ಮಗಳ ಸಂಕೇತಗಳಾದ ಗುಡಿ ಚರ್ಚು ಮಸೀದಿಗಳು
ಯಾವುದೇ ಸಾಕ್ಷಿ ಇಲ್ಲದಂತೆ ನಾಶಗೊಳ್ಳುತ್ತವೆ.
೪. ಕಾಗದದ ದೋಣಿಗಳಾಗಿ ತೇಲುತ್ತಿರುವುವು ಯಾವುವು?
ಹೊಸ ನೆಲೆಯನ್ನು ಹುಡುಕುತ್ತಾ ಕಾಗದದ ದೋಣಿಗಳಂತೆ ವಾಸ್ಕೋಡಿಗಾಮನ ನಾವೆ, ಟೈಟಾನಿಕ್
ಅವಶೇಷಗಳು ತೇಲುತ್ತಿರುವುವು.
೫.ಮಂಗಳ ಶುಕ್ರಗ್ರಹಗಳನ್ನು ಯಾಕೆ ಹುಡುಕಬೇಕು?
ಭೂಮಿಯು ಪ್ರಕೃತಿವಿಕೋಪಕ್ಕೆ ತುತ್ತಾದಾಗ ಭೂಮಿಯಲ್ಲಿ ಅಳಿದುಳಿದಿರುವ ಮಾನವರು ಉಳಲು ,
ಬಿತ್ತಲು , ಮನೆಕಟ್ಟಲು , ತೊಟ್ಟಿಲು ತೂಗಲು ಸುರಕ್ಷ ನೆಲೆಯನ್ನು ಹುಡುಕಬೇಕಾಗುತ್ತದೆ.
೫-೬ ವಾಕ್ಯಗಳಲ್ಲಿ ಉತ್ತರಿಸಿ.
೧. ಜಲಪ್ರಳಯದ ಪರಿಣಾಮಗಳನ್ನು ಕವಿತೆಯ ಹಿನ್ನೆಲೆಯಲ್ಲಿ ವಿವರಿಸಿ.
ಜಲಪ್ರಳಯವಾದಾಗ ಎಲ್ಲವೂ ಜಲಸಮಾಧಿಯಾಗಿಬಿಡುತ್ತದೆ. ಕುದಿವ ಕಡಲಿನಂತೆ ಕಾಣುವ ಸಾಗರವು
ಜಲಚರಗಳನ್ನೆಲ್ಲ ಹೊರಕ್ಕೆಸೆದು ಮನುಕುಲವನ್ನು
ಒಳಕ್ಕೆ ಎಳೆದುಕೊಳ್ಳುತ್ತದೆ. ಹವಳ-ಮುತ್ತಿನ ದ್ವೀಪಗಳನ್ನು ಮಾಯಮಾಡಿವೆ. ಅಲೆಯ ಅಬ್ಬರದ
ಎದುರಲ್ಲಿ ಎಲ್ಲವೂ ಸೋತು ಸೊರಗುತ್ತದೆ. ಮನೆ ಮಠ ಮಸೀದಿ ಮಂದಿರ ಚರ್ಚುಗಳಲ್ಲವೂ ಹೇಳ
ಹೆಸರಿಲ್ಲದಂತೆ ಸಾಕ್ಷಿಯೇ ಉಳಿಯದಂತೆ ಕೊಚ್ಚಿಹೋಗುತ್ತದೆ. ತನ್ನ ಉಳಿವಿಗಾಗಿ ಮಾನವನು ಮತ್ತೆ
ತನ್ನ ನಾಗರಿಕತೆಯನ್ನು ಕಟ್ಟಿಕೊಳ್ಳಲು ಮಂಗಳ, ಶುಕ್ರ, ಗ್ರಹಗಳನ್ನು ಅವಲಂಬಿಸಬೇಕಾಗುತ್ತದೆ.
ತನ್ನಬದುಕನ್ನು ಶಿಲಾಯುಗದಿಂದ ಆರಂಭಿಸಬೇಕಾದ ಸ್ಥಿತಿಗೆ ಪ್ರಳಯವು ಮಾನವನನ್ನು ದೂಡುತ್ತದೆ.
೨. ಸಾವಿನಲ್ಲಿ ಎಲ್ಲರೂ ಸಮಾನರಾಗುವ ವಿಪರ್ಯಾಸವನ್ನು ಸುನಾಮಿಹಾಡು ಹೇಗೆ ಧ್ವನಿಸುತ್ತದೆ?
ಮಾನವ ತನ್ನ ಬದುಕಿನಲ್ಲಿ ಮನೆ , ಜಾತಿ , ಧರ್ಮ , ಮತ ಎಂದುಕೊಂಡು ಏನೆಲ್ಲಾ ಬೀಗುತ್ತಾನೆ.
ತನ್ನಂತೆ ಇರುವ ಸಹ ಜೀವಿಗಳನ್ನು ದ್ವೇಷಿಸುತ್ತಾ ಬೇಧಭಾವ ತೋರುತ್ತಾ , ತಾರತಮ್ಯದಲ್ಲಿ
ಜೀವಿಸುತ್ತಾನೆ. ಇತರ ಧರ್ಮಗಳನ್ನು ತೆಗಳುತ್ತ ಧರ್ಮಾಂಧನಾಗಿ ಬಾಳುತ್ತಾನೆ. ಅಹಂಕಾರದ
ಪ್ರತೀಕವೆಂಬಂತೆ ಮಹಲುಗಳನ್ನು ಕಟ್ಟಿ ಮೆರೆಯುತ್ತಾನೆ. ಒಮ್ಮೆ ಭೂಕಂಪನವೋ, ಜಲಪ್ರಳಯವೋ
ಸಂಭವಿಸಿದರೆ ಮನುಷ್ಯನಿರ್ಮಿತವಾದುದೆಲ್ಲ ಸರ್ವನಾಶವಾಗಿಬಿಡುತ್ತದೆ. ಸಕಲ ಚರಾಚರಗಳ ಜೊತೆಗೆ
ಮಾನವನೂ ಸಮಾಧಿಯನ್ನು ಹಂಚಿಕೊಳ್ಳಬೇಕಾಗುತ್ತದೆ. ( ಒಂದೇ ಗುಂಡಿಯಲ್ಲಿ ಎಲ್ಲ ಜೀವಿಗಳೊಂದಿಗೆ
ತಾನೂ ಬೀಳಬೇಕಾಗುತ್ತದೆ) ಸಾವಿನಲ್ಲಿ ಎಲ್ಲರೂ ಸಮಾನರು ಎಂಬ ಕವಿವಾಣಿ ಇಲ್ಲಿ ಸ್ಮರಿಸಬಹುದು.
೩. ಪ್ರಕೃತಿಯ ಸರ್ವಶಕ್ತಿಯ ಎದುರು ಮಾನವನ ಶಕ್ತಿ ಸಾಮರ್ಥ್ಯಗಳ ಮಿತಿಯನ್ನು ಕವಿತೆ ಹೇಗೆ
ಸ್ಪಷ್ಟಪಡಿಸುತ್ತದೆ?
ಪ್ರಕೃತಿ ಸರ್ವಶಕ್ತಿವಂತವಾದುದು. ಮಾನವನ ಶಕ್ತಿ ಇದರಮುಂದೆ ತೀರಾ ದುರ್ಬಲವಾದುದು.
ಪ್ರತಿಬಾರಿ ಪ್ರಾಕೃತಿಕ ವಿಕೋಪಗಳನ್ನ ಕಂಡಾಗ ಹೌದು ಎನಿಸಿದರೂ . ಮನುಷ್ಯ ತನ್ನ ದುರಾಸೆ,
ದುರಾಚಾರಗಳಿಂದ ಪ್ರಕೃತಿಯ ವಿರುದ್ಧ ಕತ್ತಿಮಸೆಯುತ್ತಲೇ ಇದ್ದಾನೆ. ಪ್ರಕೃತಿಯ ಮೇಲೆ ಹಿಡಿತ
ಸಾಧಿಸಲು ಪ್ರಯತ್ನಿಸುತ್ತಲೇ ಇದ್ದಾನೆ. ತನ್ನ
ಉಳಿವಿಗೋಸ್ಕರ ಏನೆಲ್ಲಾ ಅನ್ಯಾಯ ಮಾಡುತ್ತಿರುವ ಮಾನವನನ್ನು ತನ್ನ ಪ್ರಾಕೃತಿಕ ವಿಕೋಪಗಳಾದ ಭೂಕಂಪ, ಪ್ರವಾಹ, ಬರ ,
ಅತೀವೃಷ್ಟಿ-ಅನಾವೃಷ್ಟಿ, ಸುನಾಮಿ ಮೊದಲಾದವುಗಳು ನಡುಗಿಸಿ ಬಿಡುತ್ತವೆ. ಪ್ರಕೃತಿಯ ಮುಂದೆ ತಾನೆಷ್ಟರವನು ಎಂಬುದನ್ನು
ಕಂಡುಕೊಳ್ಳುವಂತೆ ಮಾಡುತ್ತವೆ. ಮಾನವನ ಶಕ್ತಿ
ಸಾಮರ್ಥ್ಯಗಳೆಲ್ಲ ಪ್ರಕೃತಿಯ ಮುಂದೆ ಏನೂ ಅಲ್ಲ.
****** ಓಂ*****
No comments:
Post a Comment