Tuesday, September 2, 2014

sanskruth sambhashane



ಅಭ್ಯಾಸ ೧
ಭವತಃ ನಾಮ ಕಿಮ್ ?
ನಿಮ್ಮ ಹೆಸರು ಏನು? (ಪುರುಷರಿಗೆ)
ಭವತ್ಯಾಃ ನಾಮ ಕಿಮ್ ?
ನಿಮ್ಮ ಹೆಸರು ಏನು? ( ಸ್ತ್ರೀಯರಿಗೆ)
ಮಮ ನಾಮ
ನನ್ನ ಹೆಸರು
ಏಷ:
ಇವನು
ಸಃ
ಅವನು
ಏಷಾ
ಇವಳು
೭ 
ಸಾ 
ಅವಳು
ಏತತ್
ಇದು
ತತ್
ಅದು

ಮಮನಾಮ
ಮಮನಾಮ ನರಸಿಂಹಃ / ಮಮನಾಮ ರಮೇಶಃ / ಇದೇರೀತಿ  ಕೃಷ್ಣಃ , ರಾಮಃ , ರಾಘವಃ, ಸೋಮಶರ್ಮಃ , ಮಧುಸೂದನಃ , ವೆಂಕಟೇಶ್ವರಃ,  ನಾಗರಾಜಃ , ಗುರುರಾಜಃ ಎಂದು ಹೇಳಬಹುದು.
ಮಮನಾಮ ಸಾವಿತ್ರೀ/ ಮಮನಾಮ ಭಾರ್ಗವೀ / ಇದೇರೀತಿ , ಲಕ್ಷ್ಮೀ , ದೇವೀ , ಲತಾ , ಸೀತಾ , ರಾಧಾ , ಎಂದು ಹೇಳಬಹುದು.


ಏಷಃ  / ಸಃ
ಏಷಃ ಮಮ ಮಿತ್ರಮ್ ಈತ/ ಇವನು ನನ್ನ ಗೆಳೆಯ/ಮಿತ್ರ
ಇದೇ ರೀತಿ ಏಷಃ ಕೃಷ್ಣಃ , ಏಷಃ ರಾಮಃ , ಏಷಃ ರಾಘವಃ, ಏಷಃ ಸೋಮಶರ್ಮಃ , ಏಷಃ ಮಧುಸೂದನಃ ,
ಏಷಃ ವೆಂಕಟೇಶ್ವರಃ, ಏಷಃ ನಾಗರಾಜಃ , ಏಷಃ ಗುರುರಾಜಃ ಎಂದು ಹೇಳಬಹುದು.
ಸಃ ರಮೇಶಃ ಅವನು ರಮೇಶ
ಇದೇ ರೀತಿ  ಕೃಷ್ಣಃ , ರಾಮಃ , ರಾಘವಃ, ಸೋಮಶರ್ಮಃ , ಮಧುಸೂದನಃ , ವೆಂಕಟೇಶ್ವರಃ,  ನಾಗರಾಜಃ , ಗುರುರಾಜಃ ಎಂದು ಹೇಳಬಹುದು.

ಏಷಾ / ಸಾ
ಏಷಾ ಮಮ ಸಖೀ ಇವಳು ನನ್ನ ಗೆಳತಿ
ಇದೇ ರೀತಿ , ಏಷಾ ಲಕ್ಷ್ಮೀ , ಏಷಾ ದೇವೀ , ಏಷಾ ಲತಾ , ಏಷಾ ಸೀತಾ , ಏಷಾ ರಾಧಾ , ಎಂದು ಹೇಳಬಹುದು.
ಸಾ  ಸರಸ್ವತೀ ಅವಳು ಸರಸ್ವತೀ
ಇದೇ ರೀತಿ , ಸಾ ಲಕ್ಷ್ಮೀ , ಸಾ ದೇವೀ , ಸಾ ಲತಾ , ಸಾ ಸೀತಾ , ಸಾ ರಾಧಾ , ಎಂದು ಹೇಳಬಹುದು.



ಏತತ್ / ತತ್
ಏತತ್ ಇದು , ಏತತ್  ವಿಮಾನಮ್ ,  ಏತತ್ ಪುಸ್ತಕಮ್ ಇದೇರೀತಿ ಏತತ್ ವಾಹನಮ್ , ಏತತ್ ಪತ್ರಮ್ , ಏತತ್ ವಾತಾಯನಮ್ , ಏತತ್ ದ್ವಾರಮ್, ಏತತ್ ಲೇಖನಮ್ , ಏತತ್ ಭವನಮ್  ಎಂದು ಹೇಳಬಹುದು.
ತತ್ ಅದು , ಇದೇರೀತಿ ತತ್ ವಾಹನಮ್ , ತತ್ ಪತ್ರಮ್ , ತತ್ ವಾತಾಯನಮ್ , ತತ್ ದ್ವಾರಮ್, ತತ್ ಲೇಖನಮ್ , ತತ್ ಭವನಮ್  ಎಂದು ಹೇಳಬಹುದು.



ಭವತಃ ಗ್ರಾಮಃ?
ನಿಮ್ಮ ಗ್ರಾಮ/ಹಳ್ಳಿಯಾವುದು?
ಮಮಗ್ರಾಮ
ನನ್ನ ಗ್ರಾಮ/ಹಳ್ಳಿ
ಭವತಿ (ಸ್ತ್ರೀ)/ಭವಾನ್ (ಪುರುಷ) ಕುತಃ ಆಗತಾಃ
ತಾವು ಎಲ್ಲಿಂದ ಬಂದಿರಿ
ಅಹಂ ಗ್ರಾಮತಃ /ನಗರತಃ ಆಗತವಾನ್
ನಾನು ಹಳ್ಳಿಯಿಂದ/ ನಗರದಿಂದ ಬಂದೆನು
ಭವಾನ್/ಭವತೀ ಕುತ್ರ ಗಚ್ಛತೀ
ನೀವು ಎಲ್ಲಿಗೆ ಹೋಗುತ್ತೀರಿ?
ಭವಾನ್/ಭವತೀ ಕದಾ ಗಚ್ಛತೀ
ನೀವು ಯಾವಾಗ ಹೋಗುತ್ತೀರಿ?
ಕದಾ?
ಯಾವಾಗ?
ಕುತ್ರ?
ಎಲ್ಲಿ?
ಕಿಮರ್ಥಂ?
ಭವಾನ್ ಕಿಮರ್ಥಂ ನಾ ಆಗತವಾನ್?
ಏಕೇ/ ಏತಕ್ಕಾಗಿ?
ನೀವು ಏಕೆ ಬರಲಿಲ್ಲ?
ಕುತಃ?
ಎಲ್ಲಿಂದ?
ಕಿಂ?
ಏನು?
ಕತಿ? ಏತತ್ ಕತಿ ರೂಪ್ಯಕಾನಿ?
ಎಷ್ಟು? ಇದಕ್ಕೆ ಎಷ್ಟು ರೂಪಾಯಿ?
(ಪುರುಷ) ಕಃ?/  (ಸ್ತ್ರೀ) ಕಾ
ಯಾರು?

ಕುತಃ ಎಲ್ಲಿಂದ
(ಪುರುಷರು)    ಅಹಮ್  ಗ್ರಾಮತಃ ಆಗತವಾನ್, ನಗರತಃ ಆಗತವಾನ್, ಮಂದಿರತಃ ಆಗತವಾನ್, ಶಾಲಾತಃ ಆಗತವಾನ್, ಆಪಣತಃ ಆಗತವಾನ್ , ಗೃಹತಃ ಆಗತವಾನ್
(ಸ್ತ್ರೀಯರು) ಅಹಮ್  ಗ್ರಾಮತಃ ಆಗತವತೀ, ನಗರತಃ ಆಗತವತೀ, ಮಂದಿರತಃ ಆಗತವತೀ, ಶಾಲಾತಃ ಆಗತವತೀ, ಆಪಣತಃ ಆಗತವತೀ , ಗೃಹತಃ ಆಗತವತೀ

ಕುತ್ರ ಎಲ್ಲಿಗೆ
(ಸ್ತ್ರೀ/ಪುರುಷರಿಬ್ಬರಿಗೂ)
ಅಹಮ್  ಗ್ರಾಮಮ್ ಗಚ್ಛಾಮಿ , ಅಹಮ್ ನಗರಮ್ ಗಚ್ಛಾಮಿ , ಅಹಮ್ ಮಂದಿರಂ ಗಚ್ಛಾಮಿ ,  ಅಹಮ್ ಆಪಣಂ ಗಚ್ಛಾಮಿ, ಅಹಮ್ ಶಾಲಾಂ ಗಚ್ಛಾಮಿ , ಅಹಮ್ ಗೃಹಂ ಗಚ್ಛಾಮಿ.

ಕದಾ ಯಾವಾಗ
(ಸ್ತ್ರೀ/ಪುರುಷರಿಬ್ಬರಿಗೂ)
ಅಹಂ ಪ್ರಾತಃ ಗಚ್ಛಾಮಿ , ಅಹಂ ಸಾಯಂ ಗಚ್ಛಾಮಿ , ಅಹಂ ಆನಂತರಂ ಗಚ್ಛಾಮಿ , ಅಹಂ ಇದಾನೀಂ ಗಚ್ಛಾಮಿ, ಅಹಂ ಶ್ವಃ ಗಚ್ಛಾಮಿ, ಅಹಂ ಪರಶ್ವಃ ಗಚ್ಛಾಮಿ, ಅಹಂ ಪ್ರಪರಶ್ವಃ ಗಚ್ಛಾಮಿ

ಕಿಂ ಏನು
ಏತತ್ ಕಿಂ ಇದು ಏನು? ಕಿಂ ಏಷಃ ರಮೇಶಃ ವಾ? - ಇವನು ರಮೇಶನೇ?
ಕಿಂ ಏತತ್ ಪನಸ ಫಲಂ ವಾ? ಇದು ಹಲಸಿನಹಣ್ಣೇ?


ಕಃ ಯಾರು? (ಪುರುಷರಿಗೆ)
ಏಷಃ ಕಃ? ಇವನು ಯಾರು?,    ಕಃ ಸುರೇಶಃ ?  ಯಾರು ಸುರೇಶ?


ಕಾ ಯಾರು  (ಸ್ತ್ರೀಯರಿಗೆ)

ಏಷಾ ಕಾ? -  ಇವಳು ಯಾರು?    ಕಾ ಸರಸ್ವತೀ? -  ಯಾರು ಸರಸ್ವತೀ?

ಕತಿ ಎಷ್ಟು
ಏತಸ್ಯ ಮೂಲ್ಯಂ ಕತಿ? ಇದರ ಬೆಲೆ ಎಷ್ಟು?   ಕತಿ ಪತ್ರಿಕಾನಿ ಸಂತಿ ? ಎಷ್ಟು ಪತ್ರಿಕೆಗಳು ಇವೆ?
ಕತಿ ಜನಾಃ ಸಂತಿ ?   ಎಷ್ಟು ಜನರು ಇದ್ದಾರೆ?




ಇದಾನೀಂ
ಈಗ
ಅನಂತರಂ
ಆಮೇಲೆ
ಶ್ವಃ
ನಾಳೆ
ಪರಶ್ವಃ
ನಾಡಿದ್ದು
ಪ್ರ ಪರಶ್ವಃ
ಆಚೆ ನಾಡಿದ್ದು
ಅದ್ಯ
ಇವತ್ತು
ಹ್ಯಃ
ನಿನ್ನೆ
ಪರಹ್ಯಃ
ಮೊನ್ನೆ
ಪ್ರಪರಹ್ಯಃ
ಆಚೆಮೊನ್ನೆ
ತ್ವರಿತಃ
ತಕ್ಷಣ
ಸಂತಿ
ಇವೆ

ಅಸ್ತಿ
ಇದೆ
ಅಹಂ ನಾ ಜಾನಾಮಿ
ನನಗೆ ತಿಳಿದಿಲ್ಲ
ಕಿಮರ್ಥಂ ನ ಭವತಿ
ಏಕೆ ಆಗುವುದಿಲ್ಲ?
ಅಥಃ ಕಿಮ್
ಮತ್ತೇನು?
ನೈವ ಖಲು
ಇಲ್ಲ ಅಲ್ವಾ
ಆಗಚ್ಛತು
ಬನ್ನಿ
ಉಪವಿಷತು
ಕುಳಿತುಕೊಳ್ಳಿ
ಜ್ಞಾತಂ ವಾ
ತಿಳಿಯಿತೇ?
ಕಥಂ ಆಸೀತ್
ಹೇಗಿತ್ತು?
ತದ್ ವಾ ಹ್ಯಃ ಏವ ಸಮಾಪ್ತಂ
ಅದಾ? ನೆನ್ನೆಯೇ ಮುಗಿಯಿತು.
ಇದಾನೀಂ ಏವ
ಈಗತಾನೇ
ಆಮ್ ಇದಾನೀಂ
ಹೌದು ಈಗಲೇ
ಪ್ರಾಪ್ತಂ ಕಿಲ
ಸಿಕ್ಕಿತು ತಾನೇ?
ಕಸ್ಮಿನ್ ಸಮಯೇ
ಯಾವಸಮಯದಲ್ಲಿ?
ಪಂಚವಾದನೇ
ಐದು ಗಂಟೆಗೆ
ಅವಶ್ಯಕಂ ನ ಆಸೀತ್
ಅವಶ್ಯಕತೆ ಇರಲಿಲ್ಲ


ಮಹಾನ್ ಆನಂದಃ
ತುಂಬಾ ಸಂತೋಷ
ಪ್ರಯತ್ನಂ ಕರೋಮಿ
ಪ್ರಯತ್ನ ಮಾಡುತ್ತೇನೆ
ನ ಶಕ್ಯತೇ ಭೋ
ಸಾಧ್ಯವಿಲ್ಲ ಮಾರಾಯಾ
ತಥಾ ನಾ ವದತು
ಹಾಗೆ ಹೇಳಬೇಡಿ
ಕದಾ ದದಾತಿ
ಯಾವಾಗ ಕೊಡುತ್ತೀರಿ
ಅಹಂ ಕಿಂ ಕರೋಮಿ
ನಾನು ಏನು ಮಾಡಲಿ?
ಕತಿ ಜನಾಃ ಸಂತಿ
ಎಷ್ಟು ಜನ ಇದ್ದಾರೆ?
ಪುನಃ ಆಗಚ್ಛತು
ಮತ್ತೆ ಬನ್ನಿ
ಅವಶ್ಯಂ ಆಗಚ್ಛಾಮಿ
ಅವಶ್ಯವಾಗಿ ಬರುತ್ತೇನೆ
ಭವಾನ್/ಭವತಿ ಕಥಂ ಅಸ್ತಿ
ನೀವು ಹೇಗಿದ್ದೀರಿ?
ಗೃಹೇ ಸರ್ವಂ ಕುಶಲಂ ವಾ?
ಮನೆಯಲ್ಲಿ ಎಲ್ಲರೂ ಕ್ಷೇಮವೇ?
ಆಮ್ ಸರ್ವಂ ಕುಶಲಂ
ಹೌದು ಎಲ್ಲರೂ ಚೆನ್ನಾಗಿದ್ದಾರೆ/ ಕ್ಷೇಮ.
ಕಾ ವಾರ್ತಾ?
ಏನು ವಿಶೇಷ?
ಭವಾನೇವ ಶ್ರಾವಯತು
ನೀವೇ ಹೇಳಬೇಕು


ಕಿಂ ಮೇಲನಂ ಬಹು ವಿರಲಂ ಜಾತಮ್?
ಏನಪ್ಪ ಸಿಗೋದು ತುಂಬಾ ಕಡಿಮೆ ಆಗಿದೆ?
ಏನು ನಿಮ್ಮ ಭೇಟಿ ತುಂಬಾ ವಿರಳವಾಗಿದೆ?
ಜಲಂ ಅವಶ್ಯಕಂ ವಾ
ನೀರು ಬೇಕೆ?
ಮಾಸ್ತು / ನೈವ
ಬೇಡ , ಅವಶ್ಯವಿಲ್ಲ
ಕಥಮ್ ಆಗಮನಮ್ ಅಭವತ್
ಹೇಗೆ ಬರೋಣವಾಯಿತು
ಮಾರ್ಗಃ ವಿಸ್ಮೃತಃ ಕಿಮ್?
ದಾರಿ ಮರೆತು ಹೋಯಿತೇ?
ಚಾಯಂ/ಜಲಂ ಪಿಬತಿ ಕಿಮ್
ಟೀ/ನೀರು ಕುಡಿಯುತ್ತೀರಾ?
ನೈವ ಇದಾನೀಮ್ ಏವ ಪೀತ್ವಾ ಆಗಚ್ಛಾಮಿ
ಬೇಡ ಈಗತಾನೇ ಕುಡಿದು ಬಂದೆ.
ಶೈತ್ಯಂ ಅಸ್ತಿ ಸ್ವಲ್ಪಂ ಚಾಯಂ ಪಿಬತು
ಚಳಿಯಿದೆ, ಸ್ವಲ್ಪ ಟೀ ಕುಡಿಯಿರಿ.
ಭವತು ಕಿಂಚಿತ್ ದದಾತು
ಆಗಲಿ ಸ್ವಲ್ಪ ಕೊಡಿ
ಇದಾನೀಂ ಮಯಾ ಗಂತವ್ಯಂ
ನಾನು ಈಗಲೇ ಹೋಗಬೇಕು
ತಿಷ್ಠತು, ಭೋಜನಂ ಕೃತ್ವಾ ಗಚ್ಛತು
ನಿಲ್ಲಿ, ಊಟಮಾಡಿಕೊಂಡು ಹೋಗಿರಿ
ನ ಇದಾನೀಂ ಭೋಜನಂ ನ ಕರೋಮಿ
ಇಲ್ಲ ಈಗ ಊಟ ಮಾಡುವುದಿಲ್ಲ
ನ ಪುನಃ ಕದಾಚಿತ್ ಖಾದಾಮಿ
ಬೇಡ, ಇನ್ನೊಮ್ಮೆ ಯಾವಾಗಲಾದರೂ ಊಟಮಾಡುತ್ತೇನೆ
ಪುನಃ ಕದಾ ಮೇಲಿಷ್ಯಾಮಃ
ಮತ್ತೆ ಯಾವಾಗ ಸೇರೋಣ/ ಭೇಟಿಯಾಗೋಣ




ಭವಾನ್ ಕಿಮ್ ಕಾರ್ಯಂ ಕುರ್ವನ್ ಅಸ್ತಿ?
ನೀವು ಯಾವ ಕೆಲಸ ಮಾಡುತ್ತಿದ್ದೀರಿ
ಅಹಂ ಆಚಾರ್ಯಃ ಅಸ್ಮಿ
ನಾನು ಅಧ್ಯಾಪಕನಾಗಿದ್ದೇನೆ
ಅಹಂ ವೈದ್ಯಃ ಅಸ್ಮಿ
ನಾನು ವೈದ್ಯನಾಗಿದ್ದೇನೆ.
ಅಹಂ ತು ಯಂತ್ರಾಗಾರೆ ಕಾರ್ಯಮ್ ಕರೋಮಿ
ನಾನು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತೇನೆ
ಕೃಪಯಾ ಪುಸ್ತಕಂ ದದಾತು
ದಯಮಾಡಿ ಪುಸ್ತಕವನ್ನು ನೀಡಿರಿ/ಕೊಡಿ
ರಮೇಶಃ ಅಸ್ತಿ ಕಿಮ್?
ರಮೇಶ ಇದ್ದಾನೆಯೇ? / ಇದ್ದಾರೆಯೇ?
ಕಿಮರ್ಥಂ ಏತಾವಾನ್ ವಿಲಂಬಃ
ಏಕೆ ಇಷ್ಟೋಂದು ತಡವಾಯಿತು?
ಕಿಮಪಿ ನ ಭವತಿ
ಏನೂ ಆಗಲ್ಲ
ಸ್ವೀಕರೋತು
ತೆಗೆದುಕೊಳ್ಳಿ/ ಸ್ವೀಕರಿಸಿ
ಭೋಜನಂ ಸಿದ್ಧಂ
ಊಟ ಸಿದ್ಧವಾಗಿದೆ
ಪರಿವೇಷಯತು
ಬಡಿಸಿರಿ
ಪರ್ಯಾಪ್ತಮ್
ಸಾಕು
ಸ್ವಲ್ಪಂ ದದಾತು
ಸ್ವಲ್ಪ ನೀಡಿರಿ
ಅನ್ನಂ
ಅನ್ನ
ರೋಟಿಕಾ
ರೊಟ್ಟಿ
ಶಾಕಂ
ತರಕಾರಿ
ಸೂಪಃ
ತೊವ್ವೆ/ಸಾರು
ಲವಣಂ
ಉಪ್ಪು
ಓದನಂ
ಅನ್ನಂ
ದುಗ್ಧಮ್(ಕ್ಷೀರಂ)
ಹಾಲು
ದಧಿ
ಮೊಸರು
ಪಾಯಸಂ
ಪಾಯಸ
ಮಿಷ್ಟಾನ್ನಮ್
ಸಿಹಿ
ಭೋಜನಮ್ ಬಹು ಸ್ವಾದಿಷ್ಠಂ ಅಸ್ತಿ
ಊಟ ಬಹಳ ರುಚಿಯಾಗಿ ಇದೆ
ಕಿಮ್ ಅಭವತ್
ಏನಾಯಿತು?
ಜ್ವರಃ ಕಾಸಃ ಶಿರೋವೇದನಮ್
ಜ್ವರ, ಕೆಮ್ಮು, ತಲೆನೋವು.



ವೈದ್ಯಂ ದರ್ಶಯತು
ವೈದ್ಯರಿಗೆ ತೋರಿಸಿ
ಔಷಧಂ ಸ್ವೀಕೃತವಾನ್
ಔಷಧಿಯನ್ನು ತೆಗೆದುಕೊಂಡಿದ್ದೇನೆ.
ತತ್ರ ಸಮ್ಯಕ್ ಪಶ್ಯತ್
ಅಲ್ಲಿ ಸರಿಯಾಗಿ ನೋಡಿರಿ
ಸಾ ಕಿಮ್ ಪೃಚ್ಛತಿ
ಅವಳು/ಅವರು ಏನು ಕೇಳಿದ್ದು
ಅಹಂ ಭವಂತಂ ನ ತ್ಯಜಾಮಿ
ನಾನು ನಿಮ್ಮನ್ನು ಬಿಡುವುದಿಲ್ಲ.
ಫಲಂ ತು ಖಾದತು
ಹಣ್ಣಾದರು ತಿನ್ನು
ತಿಷ್ಠತು ಇದಾನೀಮೇವ ದದಾಮಿ
ನಿಲ್ಲು ಈಗಲೇ ಕೊಡುತ್ತೇನೆ.
ಅಹಂ ತಂ ಪ್ರೇಷಯುಷ್ಯಾಮಿ
ನಾನು ಅವರನ್ನು/ಅವನನ್ನು ಕಳುಹಿಸುತ್ತೇನೆ
ಮಾತಾ ವಸ್ತ್ರಂ ಪ್ರಕ್ಷಾಲಯತಿ
ಅಮ್ಮ ಬಟ್ಟೆಗಳನ್ನು ಒಗೆಯುತ್ತಾಳೆ
ಭವಾನ್ ಪ್ರಾತಃ ಕದಾ ಉತ್ತಿಷ್ಠತಿ
ನೀನು/ನೀವು ಬೆಳಗ್ಗೆ ಎಷ್ಟೋತ್ತಿಗೆ ಏಳುತ್ತೀರಿ
ಭವತಃ ನಾಮ ನ ಸ್ಮರಾಮಿ
ನಿಮ್ಮ ಹೆಸರು ನೆನಪಿಗೆ ಬರುತ್ತಿಲ್ಲ

2 comments: