Wednesday, July 9, 2014

ಬದುಕನ್ನು ಪ್ರೀತಿಸಿದ ಸಂತ

ಗದ್ಯ ೬ ಬದುಕನ್ನು ಪ್ರೀತಿಸಿದ ಸಂತ
ಎಚ್.ಆರ್. ರಾಮಕೃಷ್ಣರಾವ್

ಒಂದು ವಾಕ್ಯದ ಪ್ರಶ್ನೆಗಳು
೧. ದೇವರಿಗೆ ಹತ್ತಿರವಾದವರು ಯಾರು?
ಯಾರು ಭಗವಂತನಸೃಷ್ಟಿಯಲ್ಲಿರುವವರೆಲ್ಲ ತನ್ನ ಬಂಧುಗಳು ಎಂದು ತಿಳಿದು,  ಅವರ ಸೇವೆಯನ್ನು ಮಾಡುತ್ತಾರೋ ಅವರೇ ದೇವರಿಗೆ ಹತ್ತಿರವಾದವರು

೨. ಚಿಪ್ ಎಂದರೇನು?
ಅಗತ್ಯ ಮಾಹಿತಿಯನ್ನು ಕ್ರೂಢೀಕರಿಸುವ ಸೂಕ್ಷ್ಮ ಎಲೆಕ್ಟ್ರಾನಿಕ್ ಸಾಧನ.

೩.ಕಲಾಂ ಅವರ ಆತ್ಮಚರಿತ್ರೆಯ ಹೆಸರೇನು?
ಕಲಾಂ ಅವರ ಆತ್ಮಚರಿತ್ರೆಯ ಹೆಸರು “ವಿಂಗ್ಸ್ ಆಫ್ ಫೈರ್”

೪. ಕಲಾಂ ಅವರ ಕ್ರಿಯಾಶೀಲತೆಗೆ ಸಾಕ್ಷಿ ಯಾವುದು?
ಬರಡು ಭೂಮಿಯನ್ನು ಅಂತರಾಷ್ಟ್ರೀಯ ಕ್ಷಿಪಣಿ ಕೇಂದ್ರವನ್ನಾಗಿ ಪರಿವರ್ತನೆ ಮಾಡಿದ್ದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.

೫. ವಿಜ್ಞಾನದ ಅಡಿಪಾಯ ಯಾವುದು?
ವಿಜ್ಞಾನದ ಅಡಿಪಾಯ ಪ್ರಶ್ನೆಮಾಡುವುದು

೬. ಭೂಮಿಯ ಮೇಲಿನ ಮೊದಲ ವಿಜ್ಞಾನಿ ಯಾರು?
ತಂದೆ-ತಾಯಿಗಳನ್ನು ಕೊನೆಯಿಲ್ಲದಷ್ಟು ಪ್ರಶ್ನೆಕೇಳುವ ಮಗುವೇ ಭೂಮಿಯ ಮೇಲಿನ ಮೊದಲ ವಿಜ್ಞಾನಿ

೭. ಕಲಾಂ ಅವರು ರಾಷ್ಟ್ರಪತಿಯ ಸ್ಥಾನಕ್ಕೆ ಆಯ್ಕೆಯಾದ ಸುದ್ಧಿ ತಿಳಿದಾಗ ಅವರು ಎಲ್ಲಿದ್ದರು?
ಕಲಾಂ ಅವರು ರಾಷ್ಟ್ರಪತಿಯ ಸ್ಥಾನಕ್ಕೆ ಆಯ್ಕೆಯಾದ ಸುದ್ಧಿ ತಿಳಿದಾಗ ಅವರು ಚನ್ನೈನಲ್ಲಿ ಇದ್ದರು.

೮.ಕಲಾಂ ಅವರನ್ನುಶಾಲೆಗೆ ಕಳುಹಿಸುವಂತೆ ಪ್ರೇರೇಪಿಸಿದವರು ಯಾರು?
ಕಲಾಂ ಅವರನ್ನುಶಾಲೆಗೆ ಕಳುಹಿಸುವಂತೆ ಪ್ರೇರೇಪಿಸಿದವರು ಶಿವಸುಬ್ರಹ್ಮಣ್ಯ ಅಯ್ಯರ್

೯. ಕಲಾಂ ಅವರು ಯಾವ ವಿಶ್ವ ವಿದ್ಯಾಲಯದಲ್ಲಿ ಸಂದರ್ಶಕ ಪ್ರೊಫೆಸರ್ ಆಗಿದ್ದರು?
ಅಣ್ಣಾದೊರೈ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರೊಫೆಸರ್ ಆಗಿದ್ದರು.


೨-೩ವಾಕ್ಯಗಳಲ್ಲಿ ಉತ್ತರಿಸಿ. (೨ ಅಂಕದ ಪ್ರಶ್ನೆಗಳು)
೧. ಕಲಾಂ ಅವರ ಬದುಕಿನ ಮಂತ್ರ ಯಾವುದು?
ಯಾರು ಭಗವಂತನಸೃಷ್ಟಿಯಲ್ಲಿರುವವರೆಲ್ಲ ತನ್ನ ಬಂಧುಗಳು ಎಂದು ತಿಳಿದು,  ಅವರ ಸೇವೆಯನ್ನು ಮಾಡುತ್ತಾರೋ ಅವರೇ ದೇವರಿಗೆ ಹತ್ತಿರವಾದವರು ಎಂಬುದು ಕಲಾಂ ಅವರ ಬದುಕಿನ ಮಂತ್ರವಾಗಿತ್ತು.

೨. ಕಲಾಂ ಅವರು ತಾವು ಆತ್ಮಕಥೆ ಬರೆದುದು ಏತಕ್ಕಾಗಿ?
ತನ್ನ ಬದುಕು ಯಾರೊಬ್ಬರಿಗೆ ಅನುಕರಣೆಗೆ ಮಾದರಿಯಾಗುತ್ತದೆ ಎಂಬ ಭ್ರಮೆ ತನಗಿಲ್ಲ. ಆದರೆ ಯಾವುದೋ ಮೂಲೆಯಲ್ಲಿರುವ ಊರಿನಲ್ಲಿ ಹುಟ್ಟಿ ಸಾಮಾಜಿಕ ಸೌಲಭ್ಯಗಳಿಂದ ವಂಚಿತನಾದ ಮಗುವಿಗೆ ಅದರಂಥದೇ ಪರಿಸರದಲ್ಲಿದ್ದ ನನ್ನ ಭವಿಷ್ಯ ಅರಳಿದ್ದನ್ನು ಓದಿದಾಗ ಭರವಸೆ ಮೂಡಬಹುದು. ಮತ್ತು ತಾವು ಹಿಂದುಳಿದವರು , ಅಸಮರ್ಥರು ಎಂಬ ಭ್ರಮೆಯಿಂದ ಬಿಡುಗಡೆ ಹೊಂದಬಹುದು. ಎಂಬ ಭಾವನೆಯಿಂದ ಆತ್ಮಕಥೆ ಬರೆದೆ ಎಂದಿದ್ದಾರೆ.

೩. ಕಲಾಂ ಅವರು ಬಂಡೆಗಳ ಬಸಿರಲ್ಲಿ ಕಂಡದ್ದೇನು?
ಹೈದರಾಬಾದ್ ಸಮೀಪದಲ್ಲಿ ಬರಡುಭೂಮಿಯಲ್ಲಿದ್ದ ಬಂಡಗಳ ಬಸಿರಲ್ಲಿ ಶಿವನ ನಿಹಿತ ಶಕ್ತಿಯನ್ನು ಕಂಡರು.  ಕ್ಷಿಪಣಿ ರೂಪದಲ್ಲಿ ಶಕ್ತಿ ಹೊರಬರಲು ಕಂಪಿಸುತ್ತಿರುವುದನ್ನು ಅವರ ಒಳಕಣ್ಣು ನೋಡಿತು.

೪. ವಿ.ಜೆ. ಸುಂದರಮ್ ಸಿಕಂದರಾಬಾದ್ ಶಾಲಾ ಬಾಲಕಿ ಬಗೆಗೆ ಹೇಳಿದ ಹೆಮ್ಮೆಯ ಮಾತುಗಳಾವುವು?
ಸಿಕಂದರಾಬಾದಿನ ಶಾಲಾಬಾಲಕಿ ತಯಾರಿಸಿದ್ದ ಪೃಥ್ವಿಕ್ಷಿಪಣಿಯ ಮಾದರಿ ಚಿತ್ರವನ್ನು ಹಿಡಿದು ಈ ಬಾಲಕಿ ನಮ್ಮ ಕ್ಷಿಪಣಿಯ ಗಾತ್ರ ಕುರಿತು ಒಂದಷ್ಟು ವಿವರ ಕೇಳಿದ್ದಳು ನಾನು ನೀಡಿದ್ದೆ. ನೋಡಿ ಎಂಥಾ ಅದ್ಭುತ ಮಾದರಿ ತಯಾರಿಸಿದ್ದಾಳೆ ಎಂದು ಹೆಮ್ಮೆಯ ಮಾತುಗಳನ್ನಾಡಿದರು.

೫. ಕಲಾಂ ಅವರ ದೃಷ್ಟಿಯಲ್ಲಿ ಕನಸುಗಳು ಏನಾಗುತ್ತವೆ?
 ಕಲಾಂ ಅವರ ದೃಷ್ಟಿಯಲ್ಲಿ ಕನಸುಗಳು ಆಲೋಚನೆಗಳಾಗುತ್ತವೆ. ಆಲೋಚನೆಗಳು ಸೃಜನಾತ್ಮಕ ಕ್ರಿಯೆಗಳಾಗಿ ಪರಿವರ್ತನೆಗೊಳ್ಳುತ್ತವೆ.

೬. ಕಲಾಂ ಮೇಷ್ಟ್ರು ಹೇಳಿದ ಯಶಸ್ಸಿನ ಪಂಚಾಕ್ಷರಿ ಮಂತ್ರ ಯಾವುದು?
ಕಲಾಂ ಮೇಷ್ಟ್ರು ಹೇಳಿದ ಯಶಸ್ಸಿನ ಪಂಚಾಕ್ಷರಿ ಮಂತ್ರ ; ಕುತೂಹಲ , ಆಲೋಚನಾಶಕ್ತಿ , ಜ್ಞಾನ(ಅರಿವು) ಕಷ್ಟಪಟ್ಟು ಕೆಲಸಮಾಡುವುದು, ಮತ್ತು ಗುರಿಸಾಧಿಸುವ ಛಲ.

ಸಂದರ್ಭ ( ಮೂರು ಅಂಕದ ಪ್ರಶ್ನೆಗಳು)
೧. ಭಗವಂತನ ಸೃಷ್ಟಿಯಲ್ಲಿ  ಇರುವವರೆಲ್ಲಾಆತನ ಬಂಧುಗಳೇ.
ಈ ವಾಕ್ಯವನ್ನು ಎಚ್.ಆರ್. ರಾಮಕೃಷ್ಣರಾವ್ ಬರೆದಿರುವ ಬದುಕನ್ನು ಪ್ರೀತಿಸಿದ ಸಂತ ಎಂಬ ಗದ್ಯದಿಂದ ಆರಿಸಲಾಗಿದೆ.
ಅಬ್ದುಲ್ ಕಲಾಮರ ಜೀವನದ ಬಗ್ಗೆ ವಿವರಿಸುವಾಗ ಈ ಮಾತು ಬಂದಿದೆ. ವಿಜ್ಞಾನ ತಂತ್ರಜ್ಞಾನಗಳ ಸಂಕೀರ್ಣ ಪ್ರಪಂಚದಲ್ಲಿ ಅಬ್ದುಲ್ ಕಲಾಂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಯಾವುದೋ ಪ್ರಶಸ್ತಿ, ಪುರಸ್ಕಾರ , ಹಣ, ಅಲ್ಲ ಭಗವಂತನ ಸೃಷ್ಟಿಯಲ್ಲಿರುವವರೆಲ್ಲಾ ಆತನ ಬಂಧುಗಳೇ ಯಾರು ಅವರ ಸೇವೆ ಮಾಡುತ್ತಾರೋ ಅವರೇ ದೇವರಿಗೆ ಹತ್ತಿರವಾದವರು ಎಂಬುದೇ ಇವರ ಬದುಕಿನ ಸೂತ್ರವಾಗಿತ್ತು.

೨. ನೀನು ಯಾವಸ್ಕೂಲಿನಲ್ಲಿ ಓದುತ್ತಿದ್ದೀಯೇ?
ಈ ವಾಕ್ಯವನ್ನು ಎಚ್.ಆರ್. ರಾಮಕೃಷ್ಣರಾವ್ ಬರೆದಿರುವ ಬದುಕನ್ನು ಪ್ರೀತಿಸಿದ ಸಂತ ಎಂಬ ಗದ್ಯದಿಂದ ಆರಿಸಲಾಗಿದೆ. ಸಿಕಂದರಾಬಾದಿನ ಬಾಲಕಿಯೊಬ್ಬಳು ತಯಾರಿಸಿದ್ದ ಪೃಥ್ವಿ ಕ್ಷಿಪಣಿಯ ಮಾದರಿಯ ಚಿತ್ರವನ್ನು ಪತ್ರಿಕೆಯಲ್ಲಿ ಪ್ರಕಟಿಸಿದರು. ಇದನ್ನು ಹೆಮ್ಮೆಯಿಂದ ತಿಳಿಸಿದ ಉಪನಿರ್ದೇಶಕರಿಗೆ ಆ ಹುಡುಗಿಯನ್ನು ಇಲ್ಲಿಗೇಕೆ ಕರೆತರಬಾರದು ಎಂದು ಹೇಳಿ ಎಂದಾಗ ಅವಳನ್ನು ಇಲಾಖೆಯ ಕಾರಿನಲ್ಲಿ ಕರೆಸಿ ನಿಜವಾದ ಪೃಥ್ವಿ ಕ್ಷಿಪಣಿಯನ್ನು ತೋರಿಸಿ ಅವಳೊಡನೆ ಮಾತಾಡುವಾಗ ಈ ಮೇಲಿನ ಮಾತು ಬಂದಿದೆ.

೩. ವಿಜ್ಞಾನದ ಅಡಿಪಾಯವೇ ಪ್ರಶ್ನೆಕೇಳುವುದು.
ಈ ವಾಕ್ಯವನ್ನು ಎಚ್.ಆರ್. ರಾಮಕೃಷ್ಣರಾವ್ ಬರೆದಿರುವ ಬದುಕನ್ನು ಪ್ರೀತಿಸಿದ ಸಂತ ಎಂಬ ಗದ್ಯದಿಂದ ಆರಿಸಲಾಗಿದೆ.
ಈ ಮಾತನ್ನು ಮಕ್ಕಳಿಗೆ ಕಲಾಂ ಹೇಳಿದರು.
ಚನೈನಲ್ಲಿ ಪದ್ಮಶೇಷಾದ್ರಿ ಬಾಲಭವನದ ಪ್ರೌಢಶಾಲೆಯಲ್ಲಿ ಕ್ವಿಜ್ ಕಾರ್ಯಕ್ರಮದಲ್ಲಿ ಕಲಾಂ ಅವರು ಮಕ್ಕಳೊಂದಿಗೆ ಮಾತನಾಡುವಾಗ ಈ ಮಾತು ಬಂತು. ಮಕ್ಕಳಿಗೆ ಪ್ರಶ್ನೆಕೇಳುವಂತೆ ಪ್ರೇರೇಪಿಸುತ್ತಿದ್ದರು.

೪. ಮಗುವೇ ಮೊದಲ ವಿಜ್ಞಾನಿ.
ಈ ವಾಕ್ಯವನ್ನು ಎಚ್.ಆರ್. ರಾಮಕೃಷ್ಣರಾವ್ ಬರೆದಿರುವ ಬದುಕನ್ನು ಪ್ರೀತಿಸಿದ ಸಂತ ಎಂಬ ಗದ್ಯದಿಂದ ಆರಿಸಲಾಗಿದೆ.
ಈ ಮಾತನ್ನು ಮಕ್ಕಳಿಗೆ ಕಲಾಂ ಹೇಳಿದರು.
ಚನೈನಲ್ಲಿ ಪದ್ಮಶೇಷಾದ್ರಿ ಬಾಲಭವನದ ಪ್ರೌಢಶಾಲೆಯಲ್ಲಿ ಕ್ವಿಜ್ ಕಾರ್ಯಕ್ರಮದಲ್ಲಿ ಕಲಾಂ ಅವರು ಮಕ್ಕಳೊಂದಿಗೆ ಮಾತನಾಡುವಾಗ ಒಬ್ಬ ವಿದ್ಯಾರ್ಥಿ ಕಲಾಂ ರನ್ನು ಕುರಿತು ಭೂಮಿಯ ಮೇಲಿನ ಮೊದಲ ವಿಜ್ಞಾನಿ ಯಾರಾಗಿರಬಹುದು ಎಂದು ಪ್ರಶ್ನಿಸುತ್ತಾನೆ ಅದಕ್ಕೆ ಉತ್ತರವಾಗಿ ಈ ಮೇಲಿನ ಮಾತನ್ನು ಹೇಳಿದರು.

೫. ವ್ಯಕ್ತಿಗಿಂತ ರಾಷ್ಟ್ರದೊಡ್ಡದು
ಈ ವಾಕ್ಯವನ್ನು ಎಚ್.ಆರ್. ರಾಮಕೃಷ್ಣರಾವ್ ಬರೆದಿರುವ ಬದುಕನ್ನು ಪ್ರೀತಿಸಿದ ಸಂತ ಎಂಬ ಗದ್ಯದಿಂದ ಆರಿಸಲಾಗಿದೆ.
ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದ ಸುದ್ಧಿ ಬಂದಾಗ ಅವರು ಚನ್ನೈನಲ್ಲಿದ್ದರು,  ಪತ್ರಿಕಾ ಗೋಷ್ಠಿಯನ್ನು ಮಾಧ್ಯಮದವರು ಏರ್ಪಡಿಸಿದ್ದರು. ಮಾಧ್ಯಮದವರು ತಾವು ಸಂದರ್ಶಿಸುತ್ತಿರುವುದು ಒಬ್ಬ ರಾಜಕಾರಣಿಯನ್ನಲ್ಲ ಎಂದು ಮರೆತಂತೆ ಇತ್ತು. ಆ ಸಂದರ್ಭದಲ್ಲಿ ಎಲ್ಲರನ್ನುಉದ್ದೇಶಿಸಿ ಮಾತನಾಡಿದ ಕಲಾಂಭಗವದ್ಗೀತೆಯ ಮಾತುಗಳನ್ನು ಉದ್ಧರಿಸುತ್ತಾ ವ್ಯಕ್ತಿಗಿಂತ ರಾಷ್ಟ್ರದೊಡ್ಡದು ಎಂದು ತಿಳಿಸಿದರು.

೬. ಮಿ. ಪ್ರೆಸಿಡೆಂಟ್ ನಿಮ್ಮ ಯಶಸ್ಸಿನ ಗುಟ್ಟೇನು?
ಈ ವಾಕ್ಯವನ್ನು ಎಚ್.ಆರ್. ರಾಮಕೃಷ್ಣರಾವ್ ಬರೆದಿರುವ ಬದುಕನ್ನು ಪ್ರೀತಿಸಿದ ಸಂತ ಎಂಬ ಗದ್ಯದಿಂದ ಆರಿಸಲಾಗಿದೆ ಕಲಾಂ ಅವರನ್ನು ಭೇಟಿಯಾದ ಮಕ್ಕಳು ಈ ಮೇಲಿನ ಮಾತನ್ನು ಕೇಳಿದಾಗ ಅವರು ಯಶಸ್ಸಿನ ಪಂಚಾಕ್ಷರಿ ಮಂತ್ರ ಎಂದರೆ ಕುತೂಹಲ, ಆಲೋಚನಾಶಕ್ತಿ, ಜ್ಞಾನ, ಕಷ್ಟಪಟ್ಟು ಕೆಲಸಮಾಡುವುದು ಮತ್ತು ಗುರಿಸಾಧಿಸುವ ಛಲ ಎಂದು ನುಡಿದರು.
೭. ಎಲ್ಲ ಮಕ್ಕಳ ಕನಸೂ ಒಂದೇ
ಈ ವಾಕ್ಯವನ್ನು ಎಚ್.ಆರ್. ರಾಮಕೃಷ್ಣರಾವ್ ಬರೆದಿರುವ ಬದುಕನ್ನು ಪ್ರೀತಿಸಿದ ಸಂತ ಎಂಬ ಗದ್ಯದಿಂದ ಆರಿಸಲಾಗಿದೆ

ಕಲಾಂ ಅವರು ರಾಷ್ಟ್ರಾಧ್ಯಕ್ಷರಾದ ನಂತರ ಲಕ್ಷಾಂತರ ಮಕ್ಕಳನ್ನು ಭೇಟಿಮಾಡಿದ್ದಾರೆ . ಬಡವರಾಗಲೀ ಅಥವಾ ಶ್ರೀಮಂತರಾಗಲೀ ಎಲ್ಲ ಮಕ್ಕಳ ಕನಸೂ ಒಂದೇ; ಅವರೆಲ್ಲರೂ ಶಾಂತಿ ಸಮೃದ್ಧಿ ಮತ್ತು ಸುಭದ್ರ ಭಾರತದಲ್ಲಿ ಬದುಕ ಬಯಸುತ್ತಾರೆ ಎಂದು ನುಡಿದರು.

5 comments:

  1. ಥಾಂಕ್ ಕ್ಯೂ ಸರ್ ತುಂಬ ಉಪಕರವಯಿತು

    ReplyDelete
  2. Thank you for helping students

    ReplyDelete
  3. ಸರ್ ೫ಅಂಕದ ಪ್ರಶ್ನೆ.. ಬೆಕ್ಕಿತ್ತು ಸಾರ್...

    ReplyDelete