Wednesday, July 30, 2014

ಮುಟ್ಟಿಸಿಕೊಂಡವನು ಪ್ರಶ್ನೋತ್ತರ.

ಮುಟ್ಟಿಸಿಕೊಂಡವನು 
ಪ್ರಶ್ನೋತ್ತರ.
೧. ಬಸಲಿಂಗನ ಹೆಂಡತಿಯ ಹೆಸರೇನು?
ಬಸಲಿಂಗನ ಹೆಂಡತಿಯ ಹೆಸರು ಸಿದ್ಲಿಂಗಿ

೨. ಬಸಲಿಂಗನಿಗೆ ಕಾಣಿಸಿಕೊಂಡ ತೊಂದರೆ ಯಾವುದು?
 ಬಸಲಿಂಗನಿಗೆ ಕಣ್ಣುನೋವು ಕಾಣಿಸಿಕೊಂಡಿತು.

೩. ಬಸಲಿಂಗನಿಗೆ ಮೊದಲು ಯಾವ ಕಣ್ಣಿನಲ್ಲಿ ನೋವು ಆರಂಭವಾಯಿತು?
ಬಸಲಿಂಗನಿಗೆ ಮೊದಲು ಎಡಗಣ್ಣಿನಲ್ಲಿ ನೋವು ಆರಂಭವಾಯಿತು

೪. ಮುಟ್ಟಿಸಿಕೊಂಡವನು ಕತೆಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಯ ವೈದ್ಯರ ಹೆಸರೇನು?
ಮುಟ್ಟಿಸಿಕೊಂಡವನು ಕತೆಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ|| ತಿಮ್ಮಪ್ಪ.

೫. ಸರ್ಕಾರಿ ಆಸ್ಪತ್ರೆಯ ಬಗ್ಗೆ ಬಸಲಿಂಗನಲ್ಲಿದ್ದ ಅಭಿಪ್ರಾಯವೇನು?
ಬಸಲಿಂಗನು ಸರ್ಕಾರಿ ಆಸ್ಪತ್ರೆ ಎಂದರೆ ದಿಕ್ಕು ದಿವಾಳಿ ಇಲ್ಲದವರು ಹೋಗುವ ಜಾಗ ಎಂಬ ಅಭಿಪ್ರಾಯ ಹೊಂದಿದ್ದನು.

೬. ಬಸಲಿಂಗನು ಡಾ||ತಿಮ್ಮಪ್ಪನಿಗೆ ಏನೆಂದು ಸುಳ್ಳು ಹೇಳಿದನು?
ಬಸಲಿಂಗನು ಡಾ||ತಿಮ್ಮಪ್ಪನಿಗೆ ತಲೆಗೆ ನೀರು ಸೋಕಿಸಲಿಲ್ಲ ಎಂದು ಸುಳ್ಳು ಹೇಳಿದನು.

೭. ಬಸಲಿಂಗ ವೈದ್ಯರಿಗಾಗಿ ಅಲೆದಾಗ ಜೊತೆಗಿದ್ದ ರಾಜಕಾರಣಿ ಯಾರು?
ಬಸಲಿಂಗ ವೈದ್ಯರಿಗಾಗಿ ಅಲೆದಾಗ ಜೊತೆಗಿದ್ದ ರಾಜಕಾರಣಿ ರುದ್ರಪ್ಪ.

೮. ಬಸಲಿಂಗನ ಕಾಯಿಲೆ ದೇಹದ ಮಟ್ಟದಿಂದ ಯಾವ ಸ್ತರವನ್ನು ತಲುಪತೊಡಗಿತ್ತು?
ಬಸಲಿಂಗನ ಕಾಯಿಲೆ ದೇಹದ ಮಟ್ಟದಿಂದ ಮಾನಸಿಕ ಸ್ತರವನ್ನು ತಲುಪತೊಡಗಿತ್ತು

೯. ಡಾ|| ತಿಮ್ಮಪ್ಪ ಬಸಲಿಂಗನಿಗೆ ಯಾವ ವೈದ್ಯರನ್ನು ಕಾಣಬೇಕೆಂದು ಸೂಚಿಸಿದರು?
ಡಾ|| ತಿಮ್ಮಪ್ಪ ಬಸಲಿಂಗನಿಗೆ ಡಾ||ಚಂದ್ರಪ್ಪ ಎಂಬ ಕಣ್ಣಿನ ವೈದ್ಯರನ್ನು ಕಾಣಬೇಕೆಂದು ಸೂಚಿಸಿದರು.

೧೦. ಕೊನೆಗೆ ಬಸಲಿಂಗ ಯಾವುದರಿಂದ ಮುಕ್ತನಾಗಿದ್ದ?
ಕೊನೆಗೆ ಬಸಲಿಂಗ ಸುಳ್ಳುಗಳಿಂದ ಮುಕ್ತನಾಗಿದ್ದ.

ಎರಡು ಅಂಕದ ಪ್ರಶ್ನೆಗಳು :
೧. ಬಸಲಿಂಗನಿಗೆ ಅದು ಪುರುಸೊತ್ತಿಲ್ಲದ ಕಾಲ ಯಾಕೆ?
ಗೇಯುವುದನ್ನು ನಾಲ್ಕುದಿನ ತಡಮಾಡಿದರೆ ನೆಲ ಊಳುವುದಕ್ಕೆ ಆಗುವುದಿಲ್ಲ, ಇರುವ ಎರಡು ಎತ್ತುಗಳಲ್ಲಿ ಒಂದು ನೊಗ ಇಟ್ಟೊಡನೆ ಮಲಗಿಬಿಡುತ್ತಿತ್ತು. ಎಷ್ಟು ಹೊಡೆದರೂ ಏಳುತ್ತಿರಲಿಲ್ಲ. ಅದರ ಜೊತೆಗಾರನೂ ಅದರಂತೆಯೇ ಆಗುವ ಸೂಚನೆಗಳಿದ್ದವು. ಮಗುವಿಗೆ ಮೈಯಲ್ಲಿ ಸರಿಯಿಲ್ಲ, ಮಗುವಿನ ಕೆಮ್ಮು ನಿಲ್ಲುತ್ತಿಲ್ಲ ಇದರ ಜೊತೆಗೆ ಕಣ್ಣು ನೋವು.ಇವೆಲ್ಲದರಿಂದ ಬಸಲಿಂಗನಿಗೆ ಪುರುಸೊತ್ತು ಇಲ್ಲದ ಕಾಲವಾಗಿತ್ತು.
 ೨. ಹೆಂಡ್ತಿ ಸಿದ್ಲಿಂಗಿ ಏನು ಹೇಳುತ್ತಲೇ ಇದ್ದಳು?
ಮಗುವಿಗೆ ಮೈಯಲ್ಲಿ ಸರಿಯಿಲ್ಲ, ಶಿವನೂರು ಸ್ವಾಮಿಗಳಿಗೆ ತೋರಿಸಬೇಕು, ಮಗುವಿನ ಕೆಮ್ಮು ನಿಲ್ಲುತ್ತಿಲ್ಲ ಎಂದು ಹೇಳುತ್ತಲೇ ಇದ್ದಳು.

೩. ಬಸಲಿಂಗನಿಗೆ ತನ್ನ ಕಷ್ಟದ ಮುಂದೆ ಯಾವುದು ಗೌಣವಾಗಿ ಕಾಣತೊಡಗಿದವು?
ಎತ್ತುಗಳು ನೊಗ ಇಟ್ಟೊಡನೆ ಮಲಗುತ್ತಿದ್ದುದು, ಹೊಲದ ಕೆಲಸ, ಮಗುವಿನ ಆರೋಗ್ಯ, ಎತ್ತುಗಳನ್ನು ಮಾರಲು ಬೇಕಾದ ಚಾಕಚಕ್ಯತೆ ಇಲ್ಲದಿರುವುದು ಇವೆಲ್ಲವು ಕಣ್ಣುನೋವಿನ ಮುಂದೆ ಗೌಣವಾದವು.

೪. ಕಣ್ಣನ್ನು ಪರೀಕ್ಷಿಸಿದ ಡಾ||ತಿಮ್ಮಪ್ಪ ಬಸಲಿಂಗನಿಗೆ ಏನೆಂದು ಹೇಳಿದರು?
ಕಣ್ಣುನೋವು ಎಂದು ತಮ್ಮ ಬಳಿ ಬಂದ ಬಸಲಿಂಗನನ್ನು ಚೆನ್ನಾಗಿ ಪರೀಕ್ಷಿಸಿ ನೋಡಿ, ನೋವಿನ ಕಾರಣ ತಿಳಿದ ಡಾ||ತಿಮ್ಮಪ್ಪನವರು ಬಸಲಿಂಗನಿಗೆ ನಿನ್ನಕಣ್ಣು ಸರಿಹೋಗುತ್ತೆ, ಆದರೆ ಆಪರೇಷನ್ ಆಗಬೇಕು ಪರವಾಗಿಲ್ಲವಾ ಎಂದು ಹೇಳಿದರು.
೫. ಸಿದ್ಲಿಂಗಿ ಏಕೆ ರಾದ್ಧಾಂತ ಮಾಡಿದಳು?
ಬಸಲಿಂಗನು ಡಾ||ತಿಮ್ಮಪ್ಪನವರ ಬಳಿ ಹೋಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬಂದಾಗ ಡಾ||ತಿಮ್ಮಪ್ಪನವರು “ಹೊಲೆಯ” ಜಾತಿಗೆ ಸೇರಿದವರು ಎಂಬುದನ್ನು ತಿಳಿದು ಸಿದ್ಲಿಂಗಿ ರಾದ್ಧಾಂತ ಮಾಡಿದಳು.

೬. ಅನ್ಯ ಡಾಕ್ಟರುಗಳು ಬಸಲಿಂಗನ ಕಾಯಿಲೆ ಬಗ್ಗೆ ಏನೆಂದು ಪ್ರತಿಕ್ರಿಯಿಸಿದರು?
ಕೆಲವು ಡಾಕ್ಟರ್ ಗಳು “ಇದಕ್ಕೆ ಆಪರೇಷನ್ನೇ ಬೇಕಿಲ್ಲ್. ಆ ಡಾ||ತಿಮ್ಮಪ್ಪನಿಗೆ ಬುದ್ದಿ ಇಲ್ಲ. ಅದಕ್ಕೇ ಆಪರೇಷನ್ ಮಾಡಿದ್ದಾರೆ ಎಂದು ಹೇಳಿ ಔಷಧಿನೀಡಿ ಹಿತವಚನ ಕೊಟ್ಟರು

೭. ಡಾ||ಚಂದ್ರಪ್ಪ ಬಸಲಿಂಗನಿಗೆ ಡಾ|| ತಿಮ್ಮಪ್ಪನ ಬಗ್ಗೆ ಕೊಟ್ಟ ಅಭಿಪ್ರಾಯವೇನು?
ಡಾ||ಚಂದ್ರಪ್ಪ ಬಸಲಿಂಗನಿಗೆ “ಡಾ||ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ. ವೈದ್ಯಲೋಕ ಬಲ್ಲ ಅತ್ಯಂತ ಪ್ರಾಮಾಣಿಕ , ಪ್ರತಿಭಾವಂತ ಡಾಕ್ಟರ್ ಅವರು. ಈ ಕಣ್ಣಿನ ರೋಗ ಅವರ ವಲಯಕ್ಕೆ ಸೇರಿದ್ದು. ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ” ಎಂದು ಹೇಳಿದರು.

೮. ಕೊನೆಯಲ್ಲಿ ಬಸಲಿಂಗನಿಗೆ ಏನೆಂದು ನಿಶ್ಚಿತವಾಗತೊಡಗಿತು?
ಕಣ್ಣು ನೋವು ಹೆಚ್ಚಾಗುತ್ತಾ , ದೃಷ್ಟಿ ಮಂದವಾಗುತ್ತಾ ಇದ್ದಾಗ ಬಸಲಿಂಗನಿಗೆ ತನ್ನ ಉಡಾಫೆ, ಸುಳ್ಳು, ಜಾತಿ, ಮಠದ ಗುರು ಯಾರೂ ತನ್ನ ಕಣ್ಣು ಉಳಿಸುವುದಿಲ್ಲ ಎಂಬುದು ನಿಶ್ಚಿತವಾಗತೊಡಗಿತು.

ಮೂರು ಅಂಕದ ಪ್ರಶ್ನೆಗಳು
೧. ಆಪರೇಷನ್  ಆಗಬೇಕು, ಪರವಾಗಿಲ್ಲವಾ?
ಈ ಮಾತನ್ನು ಪಿ.ಲಂಕೇಶ್ ಅವರ ಮುಟ್ಟಿಸಿಕೊಂಡವನು ಎಂಬ ಕಥೆಯಿಂದ ಆರಿಸಲಾಗಿದೆ.
ಕಣ್ಣುನೋವು ಎಂದು ತಮ್ಮ ಬಳಿ ಬಂದ ಬಸಲಿಂಗನನ್ನು ಚೆನ್ನಾಗಿ ಪರೀಕ್ಷಿಸಿ ನೋಡಿ, ನೋವಿನ ಕಾರಣ ತಿಳಿದ ಡಾ||ತಿಮ್ಮಪ್ಪನವರು ಬಸಲಿಂಗನಿಗೆ ಹೇಳಿದ ಮಾತು.
ವೈದ್ಯರಿಗಿರಬೇಕಾದ ರೋಗಿಗಳ ಬಗ್ಗೆ ಕಾಳಜಿ ಈ ಮಾತಿನಲ್ಲಿ ವ್ಯಕ್ತವಾಗಿದೆ.

೨. ನೀರು ಬಿದ್ದರೆ ಕಣ್ಣು ಹೋಗುವ ಅಪಾಯ ಇದೆ.
ಈ ಮಾತನ್ನು ಪಿ.ಲಂಕೇಶ್ ಅವರ ಮುಟ್ಟಿಸಿಕೊಂಡವನು ಎಂಬ ಕಥೆಯಿಂದ ಆರಿಸಲಾಗಿದೆ.
ಕಣ್ಣುನೋವು ಎಂದು ತಮ್ಮ ಬಳಿ ಬಂದ ಬಸಲಿಂಗನಿಗೆ ಆಪರೇಷನ್ ಮಾಡಿ ನೋಡು ಇದು ತುಂಬಾ ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ, ನೀನು ಎರಡುವಾರ ತಲೆಗೆ ನೀರನ್ನು ಸೋಂಕಿಸಬಾರದು ನೀರು ಬಿದ್ದರೆ ಕಣ್ಣು ಕೆಟ್ಟುಹೋಗುವ ಅಪಾಯವಿದೆ ಎಂದು ಡಾ||ತಿಮ್ಮಪ್ಪನವರು ಬಸಲಿಂಗನಿಗೆ ಹೇಳಿದರು
ವೈದ್ಯರಿಗಿರಬೇಕಾದ ರೋಗಿಗಳ ಬಗ್ಗೆ ಕಾಳಜಿ, ಎಚ್ಚರಿಕೆಯ ಮಾತುಗಳು ಈ ಮಾತಿನಲ್ಲಿ ವ್ಯಕ್ತವಾಗಿದೆ.

೩. ಬಸಲಿಂಗಪ್ಪ, ನೀನು ತುಂಬಾ ಒಳ್ಳೆಯವನು.
ಈ ಮಾತನ್ನು ಪಿ.ಲಂಕೇಶ್ ಅವರ ಮುಟ್ಟಿಸಿಕೊಂಡವನು ಎಂಬ ಕಥೆಯಿಂದ ಆರಿಸಲಾಗಿದೆ. ಡಾ||ತಿಮ್ಮಪ್ಪನವರು ಬಸಲಿಂಗನಿಗೆ ಹೇಳಿದ ಮಾತು.  ತನಗೆ ಆಪರೇಷನ್ ಮಾಡಿದ ತಿಮ್ಮಪ್ಪ ಕೆಳವರ್ಗಕ್ಕೆ ಸೇರಿದವರು, ತನ್ನನ್ನು ಮುಟ್ಟಿದ್ದರಿಂದ ತನ್ನ ಆಳ್ತನದಲ್ಲಿ ಏನೋ ಕಡಿಮೆಯಾದಂತಾಗಿ ತಲೆಗೆ ಸ್ನಾನಮಾಡಿದ. ಇದರಿಂದಾಗಿ ಕಣ್ಣುನೋವು ಹೆಚ್ಚಾಯಿತು ಹಾಗಾಗಿ ತಿಮ್ಮಪ್ಪನವರ ಬಳಿ, ತಲೆಗೆ ನೀರು ಸೋಂಕಿಸಿ ತಾನು ನೀರು ಸೋಂಕಿಸಿಯೇ ಇಲ್ಲ ಎಂದು ತಮ್ಮ ಬಳಿ ಬಸವಲಿಂಗಪ್ಪ ಹೇಳುತ್ತಿರುವುದನ್ನು ಅರಿತ ಡಾ||ತಿಮ್ಮಪ್ಪ ಸಾವಕಾಶವಾಗಿಯೇ ಈ ರೀತಿ ಹೇಳಿದರು.

೪. ಅವನು ನನ್ನಷ್ಟೇ ಒಳ್ಳೆಯ ಡಾಕ್ಟರು. ಏನೂ ತಪ್ಪು ತಿಳಿಯಬೇಡ.
ಈ ಮಾತನ್ನು ಪಿ.ಲಂಕೇಶ್ ಅವರ ಮುಟ್ಟಿಸಿಕೊಂಡವನು ಎಂಬ ಕಥೆಯಿಂದ ಆರಿಸಲಾಗಿದೆ. ಡಾ||ತಿಮ್ಮಪ್ಪನವರು ಬಸಲಿಂಗನಿಗೆ ಹೇಳಿದ ಮಾತು. ಈ ಮುಟ್ಟುವಿಕೆ ನಾನು ಊಹಿಸದೇ ಇದ್ದುದನ್ನು ಮಾಡಿದೆ.  ತಪ್ಪು ತಿಳಿಯ ಬೇಡ , ಒಂದು ಕೆಲಸ ಮಾಡು ನನ್ನ ಹೆಸರು ಹೇಳೀ ಡಾ|| ಚಂದ್ರಪ್ಪನವರನ್ನು ಕಾಣು ಎಂದು ಡಾ||ಚಂದ್ರಪ್ಪನವರ ಬಗ್ಗೆ ಹೇಳುತ್ತಾ. ಬಸವಲಿಂಗನನ್ನು ಅವರ ಬಳಿ ಹೋಗಲು ಸೂಚಿಸಿದರು.

೫. ಈ ಮುಟ್ಟುವಿಕೆ ನಾನು ಊಹಿಸದೆ ಇದ್ದದ್ದನ್ನು ಮಾಡಿದೆ.
ಈ ಮಾತನ್ನು ಪಿ.ಲಂಕೇಶ್ ಅವರ ಮುಟ್ಟಿಸಿಕೊಂಡವನು ಎಂಬ ಕಥೆಯಿಂದ ಆರಿಸಲಾಗಿದೆ. ಡಾ||ತಿಮ್ಮಪ್ಪನವರು ಬಸಲಿಂಗನಿಗೆ ಹೇಳಿದ ಮಾತು. ಬಸವಲಿಂಗಪ್ಪ ನಿನ್ನನ್ನು ನಾನು ಮುಟ್ಟಿದ್ದು ಡಾಕ್ಟರಾಗಿ, ಆದರೆ ನಿನ್ನಂಥ ಮುಗ್ಧಮನುಷ್ಯನಲ್ಲಿ ಈ ಮುಟ್ಟುವಿಕೆ ನಾನು ಊಹಿಸದೇ ಇದ್ದದ್ದನ್ನು ಮಾಡಿದೆ. ಇದು ನಿನ್ನ ತಪ್ಪಲ್ಲ. ಅದಕ್ಕಾಗಿ ನಾನು ಯಾರನ್ನೂ ಬೈಯುವುದಿಲ್ಲ. ಎಂದು ಹೇಳಿದರು.


೬. ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ.
 ಈ ಮಾತನ್ನು ಪಿ.ಲಂಕೇಶ್ ಅವರ ಮುಟ್ಟಿಸಿಕೊಂಡವನು ಎಂಬ ಕಥೆಯಿಂದ ಆರಿಸಲಾಗಿದೆ.
ಡಾ||ಚಂದ್ರಪ್ಪ ಬಸಲಿಂಗನಿಗೆ “ಡಾ||ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ. ವೈದ್ಯಲೋಕ ಬಲ್ಲ ಅತ್ಯಂತ ಪ್ರಾಮಾಣಿಕ, ಪ್ರತಿಭಾವಂತ ಡಾಕ್ಟರ್ ಅವರು. ಈ ಕಣ್ಣಿನ ರೋಗ ಅವರ ವಲಯಕ್ಕೆ ಸೇರಿದ್ದು. ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ” ಎಂದು ಹೇಳಿದರು.

ನಾಲ್ಕು ಅಂಕದ ಪ್ರಶ್ನೆಗಳು.
೧. ಬಸಲಿಂಗ ಎದುರಿಸುತ್ತಿದ್ದ ಸಮಸ್ಯೆಗಳು ಯಾವುವು?
ಗೇಯುವುದನ್ನು ನಾಲ್ಕುದಿನ ತಡಮಾಡಿದರೆ ನೆಲ ಊಳುವುದಕ್ಕೆ ಆಗುವುದಿಲ್ಲ, ಇರುವ ಎರಡು ಎತ್ತುಗಳಲ್ಲಿ ಒಂದು ನೊಗ ಇಟ್ಟೊಡನೆ ಮಲಗಿಬಿಡುತ್ತಿತ್ತು. ಎಷ್ಟು ಹೊಡೆದರೂ ಏಳುತ್ತಿರಲಿಲ್ಲ. ಅದರ ಜೊತೆಗಾರನೂ ಅದರಂತೆಯೇ ಆಗುವ ಸೂಚನೆಗಳಿದ್ದವು. ಮಗುವಿಗೆ ಮೈಯಲ್ಲಿ ಸರಿಯಿಲ್ಲ, ಮಗುವಿನ ಕೆಮ್ಮು ನಿಲ್ಲುತ್ತಿಲ್ಲ ಇದರ ಜೊತೆಗೆ ಕಣ್ಣು ನೋವು.ಇವೆಲ್ಲದರಿಂದ ಬಸಲಿಂಗನಿಗೆ ಪುರುಸೊತ್ತು ಇಲ್ಲದ ಕಾಲವಾಗಿತ್ತು.

೨. ಕಣ್ಣುನೋವು ಶುರುವಾದ ಆರಂಭದಲ್ಲಿ ಬಸಲಿಂಗ ಪಡೆದುಕೊಂಡ ಚಿಕಿತ್ಸೆ ಯಾವ ರೀತಿಯದು?
ಕಣ್ಣುನೋವು ಆರಂಭವಾದಾಗ ಇದು ಸಾಮಾನ್ಯ ಕಣ್ಣು ಬೇನೆ ಇರಬಹುದೆಂದು ಭಾವಿಸಿದ ಆದರೆ ಕಣ್ಣು ಕೆಂಪಾಗದೆ ಕಣ್ಣಿನ ಸುತ್ತ ಮಾತ್ರ ನೋವು ಕಡಿಮೆಯಾಗಲಿಲ್ಲ. ಹಾಗಾಗಿ ಎಂದಿನಂತೆ ನಗರದ ವೈದ್ಯರುಗಳಿಗೆ ತೋರಿಸಿದ. ಅವರು ನೋವಿನ ವಿವರಗಳನ್ನು ಕೇಳಿ ರೆಪ್ಪೆ ಅಗಲಿಸಿ  ನೋಡಿದರು. ಅವರಿಗೆ ಅರ್ಥವಾಗದಿದ್ದರೂಧೈರ್ಯತುಂಬಿ ಒಳ್ಳೆಯ ಮಾತನಾಡಿದರು. ಹಚ್ಚಿಕೊಳ್ಳಲು ಲೇಹ್ಯವನ್ನು ಕೊಟ್ಟು  ಉಪ್ಪಿನ ಕಾವು , ಬಟ್ಟೆಯ ಕಾವು ಕೊಡಲು ಸೂಚಿಸಿದರು. ಕಣ್ಣಿನ ನೋವುಮಾತ್ರ ಕಡಿಮೆಯಾಗಲಿಲ್ಲ.

೩. ಬಸಲಿಂಗ  ಡಾ||ತಿಮ್ಮಪ್ಪನವರ ಸೂಚನೆಗಳನ್ನು ಪಾಲಿಸದೆ ಇರಲು ಕಾರಣವೇನು?

ಕಣ್ಣು ನೋವು ಎಂದು ಬಂದ ಬಸವಲಿಂಗನಲ್ಲಿ ವಿಶ್ವಾಸದಿಂದಲೇ ಮಾತನಾಡಿದ ತಿಮ್ಮಪ್ಪನವರು ವಿಶೇಷ ಆಸಕ್ತಿ ವಹಿಸಿಆಪರೇಷನ್ ಮಾಡಿ, ಅವನ ಕೈ ಹಿಡಿದುಕೊಂಡು ನೋಡು ಇದು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ, ನೀನು ಎರಡುವಾರ ತಲೆಗೆ ನೀರನ್ನು ಸೋಂಕಿಸಬಾರದು. ನೀರು ಬಿದ್ದರೆ ಕಣ್ಣು ಕೆಟ್ಟು ಹೋಗುವ ಅಪಾಯವಿದೆ. ಇದನ್ನು ಸರಿಯಾಗಿ ನೆನಪಿಟ್ಟುಕೋ ಎಂದು ಹೇಳಿ ಕಳುಹಿಸಿದರು. ಆದರೆ ಮನೆಗೆ ಬಂದಕೂಡಲೇ ಅವನ ಹೆಂಡತಿ ಸಿದ್ಲಿಂಗಿ ದೊಡ್ಡ ರಾದ್ಧಾಂತವನ್ನೇ ಎಬ್ಬಿಸಿದಳು. ಡಾ|| ತಿಮ್ಮಪ್ಪ ಹೊಲೆಯ ಎಂಬ ವಿಷಯ ಬಸವಲಿಂಗನಿಗಿಂತ ಅವಳಿಗೆ ಮೊದಲು ತಿಳಿದಿತ್ತು. ತನ್ನ ಮತ್ತು ತಿಮ್ಮಪ್ಪನವರ ನಡುವಿನ ಸಂಬಂಧ ಬೇರೆ ಎರಕದಲ್ಲಿ ಹೊಯ್ದಂತೆ ಕಾಣಿಸಿಕೊಳ್ಳತೊಡಗಿತು. ತನ್ನನ್ನು ಮುಟ್ಟುವ ಮುನ್ನ ಅವರು ತಮ್ಮ ಜಾತಿಯಬಗ್ಗೆ ಹೇಳಿದ್ದರೆ ಒಳ್ಳೆಯದಿತ್ತು ಎಂದು ಭಾವಿಸಿದ. ತನ್ನ ಆಳ್ತನದಲ್ಲಿ ಏನೋ ಕಡಿಮೆಯಾದಂತೆ ಅನ್ನಿಸಿತು. ಸೂತಕ ಪರಿಹರಿಸಿಕೊಳ್ಳಲು ಬಸಲಿಂಗ ಡಾಕ್ಟರರ ಎಚ್ಚರಿಕೆಮಾತುಗಳನ್ನು ಬದಿಗಿಟ್ಟು ಸ್ನಾನಮಾಡಿದ.

7 comments: