Monday, January 5, 2015

2nd puc kannada question bank

ಪದ್ಯಭಾಗ 1
ಕದಡಿದ ಸಲಿಲಂ ತಿಳಿವಂದದೆ
ಒಂದು ವಾಕ್ಯ
೧. ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಯಾರು?
೨. ಮಯತನೂಜೆ ಎಂದರೆ ಯಾರು?

ಎರಡು ಮೂರು ವಾಕ್ಯ
೧. ಸೀತೆಯ ತಲ್ಲಣಕ್ಕೆ ಕಾರಣವೇನು?
೨. ರಾವಣನು ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ?

ಸಂದರ್ಭ
೧. ಕೃತಾಂತ ಜಿಹ್ವೆ ಪೊಡಕರಿಸುವವೋಲ್
೨. ಉದಾತ್ತನೊಳ್ ಪುಟ್ಟದಲ್ತೆ ನೀಲಿರಾಗಂ

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ರಾವಣನು ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಂಡ ಸಂದರ್ಭವನ್ನು ವಿವರವಾಗಿ ಬರೆಯಿರಿ.
೨. ರಾವಣನಲ್ಲಿ ಕಂಡುಬರುವ ಪಶ್ಚಾತ್ತಾಪವನ್ನು ಕವಿ ಹೇಗೆ ಚಿತ್ರಿಸಿದ್ದಾನೆ. ವಿವರಿಸಿ.

ಭಾವಾರ್ಥ
೧. ರಾವಣನ ರೂಪು ತೃಣಕಲ್ಪಮಾಯ್ತು
೨. ಕದಡಿದ ಸಲಿಲಂ ತಿಳಿವಂದದೆ
*******



ಪದ್ಯಭಾಗ 2
ವಚನಗಳು
ಒಂದು ವಾಕ್ಯ
೧. ಬಸವಣ್ಣನವರ ಅಂಕಿತ ಯಾವುದು?
೨. ತನು ಯಾವಾಗ ಕರಗಬೇಕು?
೩.ಉರಿಲಿಂಗಪೆದ್ದಿಯ ವಚನಗಳ ಅಂಕಿತ ಯಾವುದು?
೪.ಗುರು ಹೇಗೆ ವರ್ತಿಸಬಾರದು?

ಎರಡು ಮೂರು ವಾಕ್ಯ
೧.ಯಾವ ಗುಣಗಳಿಲ್ಲದವನು ಡಾಂಭಿಕನೆನಿಸುತ್ತಾನೆ?
೨. ಯಾವಾಗ ನಿಲಬಹುದು ಯಾವಾಗ ನಿಲಲಾಗದು?
೩. ಸೂರ್ಯ ಮತ್ತು ದೀಪಗಳಿಂದಾಗುವ ಉಪಯೋಗಗಳು ಯಾವುವು?
೪. ಗುರುವಿನ ಲಕ್ಷಣಗಳೇನು?

ಸಂದರ್ಭ
೧. ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು?
೨.ತಾಯ ಮೊಲೆವಾಲು ನಂಜಾಗಿ ಕೊಲುವಡೆ
೩.ಅನ್ಯಲಿಂಗಿಗಳ ನೆನೆವನೆ ನಿಮ್ಮ ಭಕ್ತನು

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ಮಂಗಳ ಲಿಂಗದ ಮಹತ್ವವನ್ನು ಉರಿಲಿಂಗ ಪೆದ್ದಿಯ ವಚನಗಳಲ್ಲಿ ಹೇಗೆ ವಿವರಿಸಲಾಗಿದೆ?
ಭಾವಾರ್ಥ
೧. ಅರ್ಥರೇಖೆ ಯಿದ್ದಲ್ಲಿ ಫಲವೇನು?
****

ಪದ್ಯಭಾಗ 3
ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು

ಒಂದು ವಾಕ್ಯ
೧.ಪಾಂಚಾಲನಂದನೆ ಎಂದರೆ ಯಾರು?
೨. ಧರ್ಮರಾಯನಿಗೆ ಎಂತಹ ಗರ ಹೊಡೆದಿದೆ?
೩.ಅಣ್ಣನಾಜ್ಞೆಯಲ್ಲಿ ಭ್ರಮಿತನಾಗಿರುವವರು ಯಾರು?

ಎರಡು ಮೂರು ವಾಕ್ಯ
೧.ಕೊಲಲಕ್ಷಮರು ಎಂದು ದ್ರೌಪದಿಯಾರನ್ನು ಕುರಿತು ಹೇಳಿದ್ದಾಳೆ?
೨.ಗಂಡರೈವರು ಮೂರುಲೋಕದ ಗಂಡರುಯಾರು ? ಹೆಸರಿಸಿ

ಸಂದರ್ಭ
೧. ಎನ್ನವೊಲು ಮುನ್ನಾರು ನವೆದವರುಂಟು
೨.ನಾಯಕೊಲಲಕ್ಷಮರು
೩. ಇನ್ನು ಹುಟ್ಟದೆ ಇರಲಿ ನಾರಿಯರೆನ್ನವೊಲು
೪. ಹಗೆಗಳನು ಹಿಂಡಿದನು ಮನದೊಳಗೆ

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ಭೀಮನು ದ್ರೌಪದಿಯನ್ನು ಹೇಗೆ ಸಂತೈಸಿದನು?
೨.ದ್ರೌಪದಿ ಅಪಮಾನಕ್ಕೆ ಒಳಗಾದ ಮೂರು ಪ್ರಸಂಗಗಳನ್ನು ವಿವರಿಸಿರಿ.

ಭಾವಾರ್ಥ
೧. ಯಮಸುತಂಗರಹುವೆನೆ...
೨. ಇನ್ನು ಹುಟ್ಟದೆಯಿರಲಿ ನಾರಿಯರು
೩. ಬಸುರ ಬಗೆವೆನು ಕೀಚಕನ

******

ಪದ್ಯಭಾಗ 4
ಪಗೆಯಂ ಬಾಲಕನೆಂಬರೇ

ಒಂದು ವಾಕ್ಯ
೧. ನಿಷ್ಪ್ರಯೋಜಕನಾದ ಮಗ ಯಾರು?
೨. ಹಲವು ಹಳ್ಳ ಸೇರಿ ಏನಾಗುತ್ತದೆ?

ಎರಡು ಮೂರು ವಾಕ್ಯ
೧. ಧನ ಮತ್ತು ಸುತನ ವಿಷಯದಲ್ಲಿ ಸೋಮನಾಥನ ಅಭಿಪ್ರಾಯವೇನು?

ಸಂದರ್ಭ
೧. ತೃಣವೇ ಪರ್ವತ ವಲ್ಲವೇ
೨. ಪಗೆಯಂ ಬಾಲಕನೆಂಬರೇ
ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ವೀರ ಮಂತ್ರಿ ರಾಜ ಮತ್ತು ಯೋಗಿಗಳಿಗೆ ಇರಬೇಕಾದ ಅರ್ಹತೆಗಳೇನು?

ಭಾವಾರ್ಥ
೧. ಕೆಲವಂ ಬಲ್ಲವರಿಂದ ಕಲ್ತು
೨. ಪೊಡೆಯೊಳ್ ತುಂಬಿರೆ ಪಂಕ
******

ಪದ್ಯಭಾಗ 5
ಜಾಲಿಯಮರದಂತೆ

ಒಂದು ವಾಕ್ಯ
೧. ಜಾಲಿಯ ಮರದಂತೆ ಇರುವವರು ಯಾರು?
೨. ತತ್ವಜ್ಞಾನ ಕೇಳದವರು ಯಾರು?

ಎರಡು ಮೂರು ವಾಕ್ಯ
೧. ಯಾರಿಗೆ ಷಡ್ರಸಾನ್ನವನ್ನಿಕ್ಕಿ ಉಪಯೋಗವಿಲ್ಲ? ಏಕೆ?

ಸಂದರ್ಭ
೧. ಬಿನ್ನಾಣದ ಮಾತಿಗೆ ಕೊನೆಯಿಲ್ಲ.

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ಜಾಲಿಮರವು ನಿರುಪಯುಕ್ತವೆಂಬುದನ್ನು ಪುರಂದರ ದಾಸರು ಹೇಗೆ ನಿರೂಪಿಸಿದ್ದಾರೆ?

ಭಾವಾರ್ಥ
೧.ಊರಹಂದಿಗೆ ಷಡ್ರಸಾನ್ನವನ್ನಿಕ್ಕಲು

******

ಪದ್ಯಭಾಗ 6

ಒಂದು ವಾಕ್ಯ
೧. ಮಂದಿಮಕ್ಕಳೊಂದಿಗೆ ಹೇಗಿರಬೇಕು?
೨.ಬ್ಯಾಸಗಿ ದಿವಸಕ್ಕೆ ಯಾವ ಮರ ತಂಪು?
೩. ಗರತಿಯು ಹಾಲುಂಡ ತವರಿಗೆ ಏನೆಂದು ಹರಸುತ್ತಾಳೆ?

ಎರಡು ಮೂರು ವಾಕ್ಯ
೧. ಹಿತ್ತಾಳೆಗಿಂತ ಬಲು ಹೀನ ಯಾವುದು?
೨.ಹಡೆದ ತಂದೆಯಾಯಿಯರ ಮಹತ್ವ ತಿಳಿಸಿರಿ.

ಸಂದರ್ಭ
೧. ಬಂಗಾರ ನಿನಗೆ ಸ್ಥಿರವಲ್ಲ
೨. ಹಬ್ಬಲಿ ಅವರ ರಸಬಳ್ಳಿ

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ಬಂಗಾರ ನಿನಗೆ ಸ್ಥಿರವಲ್ಲ ಎಂಬ ಮಾತಿನ ಸ್ವಾರಸ್ಯವಿವರಿಸಿರಿ.

ಭಾವಾರ್ಥ
೧.ಮಂದಿ ಮಕ್ಕಳೊಳಗೆ ಛಂದಾಗೊಂದಿರಬೇಕ
೨.ಹುಟ್ಟುವಾಗ ತರಲಿಲ್ಲ ಹೋಗುವಾಗೊಯ್ಯಲಾರೆ

*******
  
ಪದ್ಯಭಾಗ 7
ಬೆಳಗು ಜಾವ

ಒಂದು ವಾಕ್ಯ
೧. ಹುಸಿನಿದ್ದೆಸಾಕು ಎಂದು ಕವಿ ಯಾರಿಗೆ ಹೇಳುತ್ತಾರೆ?
೨. ಜೇನ್ನೊಣದ ಹೆದೆಗೆ ಹೂಬಾಣ ಹೂಡಿದವರು ಯಾರು?

ಎರಡು ಮೂರು ವಾಕ್ಯ
೧. ಬೆಳಕು ಬೇಟೆಗಾರ ಹೇಗೆ ಬರುತ್ತಾನೆ?
೨. ಕವಿಯಪ್ರಕಾರ ಮುಪ್ಪು ಮತ್ತು ಹರಯದ ನಡುವಿನ ವ್ಯತ್ಯಾಸವೇನು?

ಸಂದರ್ಭ
೧. ತುಂಬಿರುವ ತನಕ ತುಂತುಂಬಿ ಕುಡಿಯಬೇಕು
೨. ಬರಲುಂಟೆ ಸುಗ್ಗಿ ಮತ್ತೆ

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ಬೆಳಗು ಜಾವ ಕವನದ ಮೂಲಕ ಕವಿ ಬೇಂದ್ರೆ ಹೇಳಿರುವ ವಿಚಾರಗಳಾವುವು?

ಭಾವಾರ್ಥ
೧. ಯಾವಾಗೋ ಕೋಳಿ ಕೂಗಿಹುದು ಏಳಿ

******** 

ಪದ್ಯಭಾಗ 8
ಮುಂಬೈ ಜಾತಕ

ಒಂದು ವಾಕ್ಯ
೧. ಮುಂಬೈಯಲ್ಲಿ ಬೆಳಗಿನಿಂದ ಸಂಜೆಯತನಕ ಕಾಣುವುದೇನು?

ಎರಡು ಮೂರು ವಾಕ್ಯ
೧. ಮಗು ಕಲಿತ ವಿದ್ಯೆಗಳಾವುವು?

ಸಂದರ್ಭ
೧. ಕುಳಿತು ಕೆಮ್ಮುವ ಪ್ರಾಣಿ

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ಮುಂಬೈ ಜಾತಕದಲ್ಲಿ ಮಕ್ಕಳ ಬಾಲ್ಯದ ಚಿತ್ರಣ ಹೇಗೆ ನಿರೂಪಿತವಾಗಿದೆ?
೨. ನಗರ ಜೀವನದ ಯಾಂತ್ರಿಕ ವಿವರಗಳು ಈ ಕವಿತೆಯಲ್ಲಿ ಹೇಗೆವ್ಯಕ್ತವಾಗಿದೆ?

ಭಾವಾರ್ಥ
೧. ಶಾಲೆ ಕಾಲೇಜು ಕಲಿಸಿದ್ದು , ದಾರಿ ಬದಿ
*******


ಪದ್ಯಭಾಗ 9
ಶಿಲುಬೆ ಏರಿದ್ದಾನೆ

ಒಂದು ವಾಕ್ಯ
೧. ಶಿಲುಬೆ ಏರಿದವನು ಯಾರು?

ಎರಡು ಮೂರು ವಾಕ್ಯ
೧. ಶಿಲುಬೆಗೇರಿಸಿದವರ ಗುಣಗಳು ಇಂದು ಯಾವ ವೇಷ ತಾಳಿವೆ?

ಸಂದರ್ಭ
೧. ಯಾತನೆಗೂ ನಲ್ವಾತನೆ ನುಡಿವ ಮುಖಮುದ್ರೆ

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧.ಯಾವ ಸ್ಥಳಗಳಲ್ಲಿ ಜೀಸಸ್ ದಿನನಿತ್ಯ ಶಿಲುಬೆಗೆ ಏರಿದ್ದಾನೆ? ಚರ್ಚಿಸಿ

ಭಾವಾರ್ಥ
೧. ಕ್ರಿಸ್ಮಸ್ ಹೊತ್ತು ತಂದಿದೆ ಈ ಮನೆಗೆ

******
  

ಪದ್ಯಭಾಗ 10
ಒಂದು ಹೂ ಹೆಚ್ಚಿಗೆ ಇಡುತ್ತೇನೆ

ಒಂದು ವಾಕ್ಯ
೧. ಮುದುಕಿ ಯಾವ ದೇವರಿಗೆ ಹರಕೆ ಹೊತ್ತಳು?

ಎರಡು ಮೂರು ವಾಕ್ಯ
೧. ಮುದುಕ ಏನೆಂದು ಗೋಗರೆಯುತ್ತಾನೆ?

ಸಂದರ್ಭ
೧. ಮಾತೇ ಮರೆತು ಹೋಗಿದೆ ಕಣೆ
೨. ಒಂದು ಹೂ ಹೆಚ್ಚಿಗೆ ಇಡುತ್ತೇನೆ ನಿನ್ನ ಗಟ್ಟಿ ಪಾದಕ್ಕೆ

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ವೃದ್ಧರ ತವಕ ತಲ್ಲಣಗಳನ್ನು ಕವಯಿತ್ರಿ ಹೇಗೆ ಚಿತ್ರಿಸಿದ್ದಾರೆ?

********

  

ಪದ್ಯಭಾಗ 11
ಹತ್ತಿ... ಚಿತ್ತ... ಮತ್ತು ..
ಒಂದು ವಾಕ್ಯ
೧. ಎಣ್ಣೆಯಲ್ಲಿ ನೆನೆದ ಬತ್ತಿ ಹೇಗೆ ಕಾಣುತ್ತದೆ?

ಎರಡು ಮೂರು ವಾಕ್ಯ
೧. ಆತ್ಮಕ್ಕೆ ಕಮಟು ಹತ್ತುವುದು ಎಂದರೇನು?

ಸಂದರ್ಭ
೧. ಬೆಣ್ಣೆಯಾಗುವ ಕರ್ಮ ತಪ್ಪಿದ್ದಲ್ಲ

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
ಹತ್ತಿ ಚಿತ್ತ ಮತ್ತು ಕವಿತೆಯ ಸ್ವಾರಸ್ಯ ಚರ್ಚಿಸಿರಿ.

*******
  
ಪದ್ಯಭಾಗ 12
ಒಮ್ಮೆ ನಗುತ್ತೇವೆ

ಒಂದು ವಾಕ್ಯ
೧.  ಜನರಿಗೆ ಯಾವುದಕ್ಕೆ ಗತಿಯಿಲ್ಲ?
೨. ಕವಯಿತ್ರಿಯಾರಲ್ಲಿ ಮೊರೆ ಇಡುತ್ತಾರೆ?

ಎರಡು ಮೂರು ವಾಕ್ಯ
೧. ಕವಿಯತ್ರಿ ನಗುವ ನಗು ಎಂತಹುದು

ಸಂದರ್ಭ
೧. ಒಮ್ಮೆ ನಕ್ಕೇ ನಗುತ್ತೇವೆ.

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ಒಮ್ಮೆ ನಗುತ್ತೇವೆ ಈ ಕವಿತೆಯಲ್ಲಿ ವ್ಯಕ್ತವಾಗುವ ನಗುವಿನ ವೈಶಿಷ್ಟ್ಯ ವಿವರಿಸಿ.

********



ಗದ್ಯಭಾಗ 1
ಮುಟ್ಟಿಸಿಕೊಂಡವನು
ಒಂದು ವಾಕ್ಯ
೧.ಮುಟ್ಟಿಸಿಕೊಂಡವನು ಕಥೆಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಯ ವೈದ್ಯರ ಹೆಸರೇನು?
೨. ಬಸಲಿಂಗನಿಗೆ ಕಾಣಿಸಿಕೊಂಡ ತೊಂದರೆ ಯಾವುದು?
೩. ಬಸಲಿಂಗ ಕೊನೆಗೆ ಯಾವುದರಿಂದ ಮುಕ್ತನಾಗಿದ್ದ?

ಎರಡು ಮೂರು ವಾಕ್ಯ
೧. ಕಣ್ಣನ್ನು ಪರೀಕ್ಷಿಸಿದ ಡಾ ತಿಮ್ಮಪ್ಪ ಬಸಲಿಂಗನಿಗೆ ಏನೆಂದು ಹೇಳಿದರು?
೨. ಡಾ ಚಂದ್ರಪ್ಪ ತಿಮ್ಮಪ್ಪನವರ ಬಗ್ಗೆ ಕೊಟ್ಟ ಅಭಿಪ್ರಾಯವೇನು?

ಸಂದರ್ಭ
೧. ಬಸಲಿಂಗಪ್ಪ ನೀನು ತುಂಬಾ ಒಳ್ಳೆಯವನು
೨. ಈ ಮುಟ್ಟುವಿಕೆ ನಾನು ಊಹಿಸದೇ ಇದ್ದುದ್ದನ್ನು ಮಾಡಿದೆ.

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ಬಸವಲಿಂಗ ಎದುರಿಸುತ್ತಿದ್ದ ಸಮಸ್ಯೆಗಳು ಯಾವುವು?
೨. ಬಸಲಿಂಗ ತನ್ನ ಸಿಟ್ಟನ್ನು ಹೇಗೆ ವ್ಯಕ್ತಪಡಿಸಿದನು?

******** 


ಗದ್ಯಭಾಗ 2
ವಾಲ್ ಪರೈ ಅಭಿವೃದ್ಧಿ ತಂದ ದುರಂತ
ಒಂದು ವಾಕ್ಯ
೧. ದುರಂತದ ಶಾಪಕ್ಕೆ ತುತ್ತಾಗುವವರು ಯಾರು?
೨. ಕೆಂಪು ಪಟ್ಟಿಗೆ ಸೇರಿದ ಪ್ರಾಣಿ ಯಾವುದು?
೩. ಮನುಕುಲದ ಪತನಕ್ಕೆ ಕಾರಣಯಾವುದು?

ಎರಡು ಮೂರು ವಾಕ್ಯ
೧. ಬ್ರಿಟೀಷರು ಬರುವ ಮೊದಲು ವಾಲ್ ಪರೈ ಹೇಗಿತ್ತು?
೨. ಸಿಂಹಬಾಲದ ಕೋತಿಗಳಿಗೆ ಒದಗಿದ ತೊಂದರೆ ಏನು?

ಸಂದರ್ಭ
೧. ದುರಂತದ ಮುಲ ಬೀಜಗಳು ಚಹಾಗಿಡದ ರೂಪದಲ್ಲಿ ಬಂದವು

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ಅಭಿವೃದ್ಧಿ ತರುವ ಪ್ರಾಕೃತಿಕ ನಾಶದ ಸ್ವರೂಪವನ್ನು ಪಠ್ಯದ ಹಿನ್ನೆಲೆಯಲ್ಲಿ ಚರ್ಚಿಸಿ.


****** 

ಗದ್ಯಭಾಗ 3
ಆಯ್ಕೆಯಿದೆ ನಮ್ಮ ಕೈಯಲ್ಲಿ
ಒಂದು ವಾಕ್ಯ
೧. ಲೇಖಕಿಗೆ ಯಾವಾಗ ರೇಗಿ ಹೋಗುತ್ತಿತ್ತು?
೨. ದುರಾಸೆಯ ಹುಡುಗನ ನಿರಾಕರಿಸಿದವರು ಯಾರು?

ಎರಡು ಮೂರು ವಾಕ್ಯ
೧. ಕಮಲಾ ಮೇಡಂ ವೈದ್ಯರ ಯಾವ ಸಲಹೆಯನ್ನು ರೂಢಿಸಿಕೊಂಡರು?

ಸಂದರ್ಭ
೧. ನೋಡು ನಿನ್ನ ಎದುರು ಎರಡು ಆಯ್ಕೆಗಳಿವೆ.
೨. ಈ ಅದೃಷ್ಟ ನಿನಗೂ ಇತ್ತಲ್ಲೇ?

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
ಬದುಕಿನಲ್ಲಿ ಆಯ್ಕೆಗಳು ಮುಖ್ಯ ಎಂಬುದನ್ನು ಲೇಖಕಿ ಹೇಗೆ ನಿರೂಪಿಸಿದ್ದಾರೆ?

***** 

ಗದ್ಯಭಾಗ 4
ಕನ್ನಡ ಕಟ್ಟುವ ಕೆಲಸ
ಒಂದು ವಾಕ್ಯ
೧. ಕನ್ನಡದ ಮೂಲಕ ಕಲಿತು ಶ್ರೇಷ್ಠವಿಜ್ಞಾನಿಯಾದವರು ಯಾರು?
೨. ಭಾಷೆಯಾವುದಕ್ಕಿಂತ ದೊಡ್ಡದು?

ಎರಡು ಮೂರು ವಾಕ್ಯ
೧.ತ್ರಿಭಾಷಾ ಸೂತ್ರದ ಬಳಕೆ ಹೇಗಿರಬೇಕು?
೨. ನಮ್ಮ ಸಾರ್ವಜನಿಕ ಶಾಲೆಗಳ ಬಗ್ಗೆ ಲೇಖಕರ ಅಭಿಪ್ರಾಯವೇನು?
೩. ಕನ್ನಡದ ಸಮಸ್ಯೆಗಳು ಎಲ್ಲಿಯವರೆಗೂ ಇದ್ದೇ ಇರುತ್ತದೆ?

ಸಂದರ್ಭ
೧. ಒಂದೊಂದು ಭಾಷೆಯೂ ಒಂದೊಂದು ವರ
೨. ಕನ್ನಡಿಗರು ಮೊದಲು ಕನ್ನಡಿಗರರಾಗಬೇಕು.

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ಹೊರನಾಡಿನಿಂದ ಬಂದು ಕನ್ನಡನಾಡಿನಲ್ಲಿ ನೆಲೆಸಿರುವವರ ಜವಾಬ್ದಾರಿಗಳನ್ನು ಲೇಖಕರು ಹೇಗೆ ವಿವರಿಸಿದ್ದಾರೆ?

********** 


ಗದ್ಯಭಾಗ 5
ಧಣಿಗಳ ಬೆಳ್ಳಿಲೋಟ
ಒಂದು ವಾಕ್ಯ
೧. ಬೆಳ್ಳಿಲೋಟ ಏನನ್ನು ಕಳೆದುಕೊಂಡಿತ್ತು?
೨. ಹೊಳೆಯಾವುದಕ್ಕೆ ಹೊಂಚುಹಾಕುತ್ತಿರುತ್ತದೆ?

ಎರಡು ಮೂರು ವಾಕ್ಯ
ದಣಿಗಳು ಹೊಳೆಯನ್ನು ಹೇಗೆ ಮೂದಲಿಸುತ್ತಿದ್ದರು
ಯಾವ ಯಾವ ವಸ್ತುಗಳು ನೀರು ಪಾಲಾದವು
ಸಂದರ್ಭ
೧. ಕಾವಿಗೆ ಕೂತ ಹೇಂಟೆಯಂತೆ ಒಡಲು ಯಾವತ್ತೂ ವ್ಯಗ್ರ - ಪ್ರಕ್ಷುಬ್ಧ
೨. ಇದೇಲೋಟವಲ್ಲವೇ---- ತನ್ನ ಬೆವರಿನ ಬೆಲೆ ಕಳೆದದ್ದು

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ಧಣಿ ಹಾಗೂ ಹೊಳೆಯ ನಡುವಿನ ಸಮರವನ್ನು ಚಿತ್ರಿಸಿ.

******

ಗದ್ಯಭಾಗ 6
ಬದುಕನ್ನು ಪ್ರೀತಿಸಿದ ಸಂತ
ಒಂದು ವಾಕ್ಯ
೧.ಭೂಮಿಯ ಮೇಲಿನ ಮೊದಲ ವಿಜ್ಞಾನಿ ಯಾರು?

ಎರಡು ಮೂರು ವಾಕ್ಯ
೧. ಕಲಾಂ ಅವರ ಬದುಕಿನ ಮಂತ್ರ ಯಾವುದು?
೨. ಕಲಾಂ ಮೇಷ್ಟ್ರು ಹೇಳಿದ ಯಶಸ್ಸಿನ ಪಂಚಾಕ್ಷರೀ ಮಂತ್ರ ಯಾವುದು?

ಸಂದರ್ಭ
೧. ವ್ಯಕ್ತಿಗಿಂತ ರಾಷ್ಟ್ರದೊಡ್ಡದು

********
ಗದ್ಯಭಾಗ 7
ತಿರುಳ್ಗನ್ನಡದ ಬೆಳ್ನುಡಿ

ಒಂದು ವಾಕ್ಯ
೧. ಯಾವ ಕತೆ ಹೇಳಬೇಕೆಂದು ಮನೋರಮೆ ಕೇಳಿದಳು?

ಎರಡು ಮೂರು ವಾಕ್ಯ
೧. ಮುದ್ದಣನನ್ನು ಮನೋರಮೆ ಹೇಗೆ ಉಪಚರಿಸಿದಳು?
೨.ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕಿದಂತಾಯಿತು ಎಂದು ಮನೋರಮೆ ಹೇಳಿದ್ದೇಕೆ?

ಸಂದರ್ಭ
೧. ಪದ್ಯಂ ವಧ್ಯಂ ಗದ್ಯಂ ಹೃದ್ಯಂ
೨. ಕನ್ನಡಂ ಕತ್ತುರಿಯಲ್ತೆ

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ಮುದ್ದಣ ಮನೋರಮೆಯರ ಸಂವಾದದ ಸ್ವಾರಸ್ಯವನ್ನು ವಿವರಿಸಿ.


ಗದ್ಯಭಾಗ 8
ಹಳ್ಳಿಯ ಚಹಾ ಹೋಟೇಲುಗಳು
ಒಂದು ವಾಕ್ಯ
೧. ಕಲಿಯುಗದ ಅಮೃತ ಯಾವುದು?

ಸಂದರ್ಭ
೧. ಅನಕ್ಷರಸ್ತರ ಪಾರ್ಲಿಮೆಂಟು
೨. ಬಾಯಿಚಪಲ ತಣಿಸುವ ಅಕ್ಷಯ ಪಾತ್ರೆ

ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ಹಳ್ಳಿಯ ಚಹಾದಂಗಡಿಯನ್ನು ಪರಿಚಯಿಸಿ.
೨. ಹಳ್ಳಿಗರು ಹೊತ್ತನ್ನು ಹೇಗೆ ಕಳೆಯುತ್ತಾರೆ? ವಿವರಿಸಿ.

ದೀರ್ಘಗದ್ಯ
ಕೃಷ್ಣೇ ಗೌಡನ ಆನೆ
ಒಂದು ವಾಕ್ಯ
೧. ನಿರೂಪಕರ ಪ್ರಕಾರ ಕೊಡಲಿಯ ಆಕಾರ ಹೇಗಿತ್ತು?
೨. ದುರ್ಗಪ್ಪನ ಪ್ರಕಾರ ತರ್ಲೆ ದಿಪಾರ್ಟ್ ಮೆಂಟ್ ಯಾವುದು?
೩.ನಿರೂಪಕರ ಇಕಾಲಜಿಸ್ಟ್ ಗೆಳೆಯ ಯಾರು?
೪. ನಿರೂಪಕರಿಗಿದ್ದ ಕೆಟ್ಟ ಕುತೂಹಲ ಯಾವುದು?
೫. ಪುಟ್ಟಯ್ಯ ಯಾರು?
೬. ಮುನ್ಸಿಪಾಲಿಟ್ ಪ್ರೆಸಿಡೆಂಟರ ಹೆಸರೇನು?
೭. ಜಬ್ಬಾರನಿಗೆ ಒದಗಿದ ತೊಂದರೆಗಳೇನು?

ಎರಡು ಮೂರು ವಾಕ್ಯ
೧. ಕೃಷ್ಣೇ ಗೌಡರ ಆನೆ ಹುಟ್ಟಿ ಬೆಳೆದ ಬಗೆ ಹೇಗೆ?
೨. ಫಾರೆಸ್ಟ್ ಡಿಪಾರ್ಟ್ ಮೆಂಟ್ ನವರ ನಂಬರ್ ಒನ್ ಎನಿಮಿಗಳು ಯಾರು ಯಾರು?
೩. ತನ್ನ ಕೆಲಸ ಅತ್ಯಂತ ಅಪಾಯಕಾರಿ ಎಂದು ದುರ್ಗಪ್ಪ ವಿವರಿಸಿದ್ದು ಹೇಗೆ?
೪. ಡ್ರೈವರ್ ಅಬ್ಬಾಸ್, ಕ್ಲೀನರ್ ಕೃಷ್ಣರ ಸಾವಿಗೆ ಕಾರಣಗಳೇನು?

ಸಂದರ್ಭ
೧. ನಮ್ಮಕಡೆಯ ಕಾಲಿಂಗ್ ಬೆಲ್ ಇದ್ದಹಾಗೆ
೨. ಆನೆ ಸಾಕುವುದು ಎಂದರೆ ಎಲೆಕ್ಷನ್ನಿಗೆ ನಿಂತ ಹಾಗೆ
೩. ವೆಪನ್ ಸಾರ್, ವೆಪನ್ ನಮಗೆ ಮುಖ್ಯ
೪. ಪೋಸ್ಟ್ ಬಾಕ್ಸ್ ಗಳನ್ನು ನೇತುಹಾಕುವುದು ಕಡಿಮೆ ಕರ್ಚಲ್ಲವೇ?
೫. ನಂಗೇನು ಈ ನಾಯಿಗಳನ್ನು ಕಂಡರೆ ಪ್ರೀತಿನಾ ಸ್ವಾಮಿ!
೬. ಆನೆ ಜೊತೆ ಮಲಗುತ್ತೀಯ ನೀನ್ಯಾವ ಗಂಡಸು
ಐದು ಆರು ವಾಕ್ಯಗಳಲ್ಲಿ ಉತ್ತರಿಸಿ
೧. ಕೃಷ್ಣೇಗೌಡರ ಆನೆ ಹುಟ್ಟಿ ಬೆಳೆದ ಬಗೆಯನ್ನು ವಿವರಿಸಿ, ಅದು ಪೇಟೆಯಲ್ಲಿ ಏನುಮಾಡುತ್ತಿತ್ತು?
೨. ಅರಣ್ಯ ಇಲಾಖೆಯ ಶತ್ರುಗಳ ಕಾರ್ಯಭಾರವನ್ನು ನಾಗರಾಜ ಹೇಗೆ ವಿವರಿಸಿದ್ದಾನೆ?
೩. ಜಬ್ಬಾರನ ಬವಣೆಗಳನ್ನು ನಿರೂಪಕರು ಹೇಗೆ ವಿವರಿಸಿದ್ದಾರೆ?
೪. ಲೈನ್ ಮೆನ್ ತಿಪ್ಪಣ್ಣನ ಸಾವಿನ ಸಂದರ್ಭವನ್ನು ವಿವರಿಸಿ.
೫. ಆನೆ ಬಾಯಿಲ್ಲದವರ ಸಂಕೇತವಾಗಿರುವುದನ್ನು ವಿಶ್ಲೇಷಿಸಿರಿ.

೬. ನಾಗರಾಜನ ನಿಗೂಢ ಸಾವಿನ ಬಗ್ಗೆ ಜನರ ಅಭಿಪ್ರಾಯಗಳೇನು?

No comments:

Post a Comment