Wednesday, July 9, 2014

ಕದಡಿದ ಸಲಿಲಂ ತಿಳಿವಂದದೆ - ನಾಗಚಂದ್ರ

ಪದ್ಯಭಾಗ
ಕದಡಿದ ಸಲಿಲಂ ತಿಳಿವಂದದೆ- ನಾಗಚಂದ್ರ

ಸಾರಾಂಶ : ರಾವಣನು ಚಂಚಲಚಿತ್ತವಾದ ಮನಸ್ಸನ್ನು ನಿಗ್ರಹಿಸಿ ದ್ರುವಮಂಡಲದಂತೆ ನಿಶ್ಚಲವಾಗಿಸಿಕೊಂಡು ದಿವ್ಯಮಂತ್ರಗಳಿಂದ ವಿದ್ಯೆಯ ಸಿದ್ಧಿಯನ್ನು ಸಾಧಿಸುತ್ತಾನೆ. ಆಗ ಮುಂಗಾರಿನ ಆವೇಶ ಆರ್ಭಟಗಳನ್ನು ತೋರುತ್ತಾ ತನ್ನ ಕೈಗಳನ್ನು ವಿಸ್ತರಿಸುತ್ತಾ ಪ್ರತ್ಯಕ್ಷವಾದ ಬಹುರೂಪಿಣಿವಿದ್ಯೆಯು  ಯಮಧರ್ಮನ ನಾಲಿಗೆಯೋ ಎಂಬಂತೆ ನುಡಿಯಿತು. ಚರಮದೇಹಿಯಾದ ರಾಮನನ್ನು ಮತ್ತು ಚಕ್ರಧರನಾದ ಲಕ್ಷ್ಮಣನನ್ನು ಕೊಲ್ಲದೆ ಉಳಿದವರನ್ನು ಬದುಕಲು ಬಿಡುವುದಿಲ್ಲ.ಎಂದು ಹೇಳಲು ರಾಮಲಕ್ಷ್ಮಣರನ್ನು ಕೊಲ್ಲದೆ ಉಳಿದವರನ್ನು ಕೊಂದರೆ ಏನು ಉಪಯೋಗ? ಎಂದು ಆ ವಿದ್ಯೆಗೆ ನಮಸ್ಕರಿಸಿ ಶಾಂತಿನಾಥ ಜಿನರ ದೇಗುಲವನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿ, ತನ್ನ ಅಂತಃಪುರಕ್ಕೆ ಬರುತ್ತಾನೆ. ಅಲ್ಲಿ ಅಂತಃಪುರಸ್ತ್ರೀಯರ ಬಾಡಿದ ಮುಖಗಳನ್ನು ಕಂಡು ಪೆಟ್ಟುತಿಂದ ಸಿಂಹದಂತೆ ಕೋಪಗೊಂಡು ನಿಮಗೆ ಇಂತಹ ನೋವು ಉಂಟುಮಾಡಿರುವ ರಾಮಲಕ್ಷ್ಮಣರನ್ನು ತನ್ನ ಹುಬ್ಬು ಗಂಟಿನಲ್ಲೇ ಕಟ್ಟಿತಂದು ನಿಮ್ಮ ಮುಂದೆ ಅವರಿಗೆ ಕಿರುಕುಳ ಕೊಡುತ್ತೇನೆ. ಎಂದು ಹೇಳುತ್ತಾನೆ. ಮತ್ತೊಮ್ಮೆ ವಿದ್ಯಾಸಿದ್ಧಿಯನ್ನು ಪರೀಕ್ಷಿಸಿಕೊಂಡು,ಶಕ್ತಿ-ಸಾಮರ್ಥ್ಯಗಳಲ್ಲಿ ಮೂರು ಲೋಕಗಳಲ್ಲಿ ನನಗೆ ಸಮನಾರು ಇದ್ದಾರೆ.  ಯುದ್ಧಭೂಮಿಗೆ ಹೋಗುವ ಮೊದಲು ಸೀತೆಯನ್ನು ಕಂಡು ಹೋಗಲು ಮನಮಾಡಿ ಹೂವಿನ ಬಿಲ್ಲುಬಾಣಗಳಿಲ್ಲದೆಯೇ ಬಂದ ಮನ್ಮಥನಂತೆ ಸೀತೆಯ ಸಮೀಪಕ್ಕೆ ಹೋಗುತ್ತಾನೆ. ಹೀಗೆ ಬರುತ್ತಿರುವ ರಾವಣನ ಪರಾಕ್ರಮ ಶೌರ್ಯವನ್ನು ಖಚರ ಸ್ತ್ರೀಯರು ಸೀತೆಗೆ ತೋರಿಸುತ್ತಾರೆ. ಸೀತೆಯು ರಾವಣನ ಆಗಮನ ಮತ್ತೆ ಯಾವ ಕೆಟ್ಟವಾರ್ತೆಯನ್ನು ತರುವುದೋ ಎಂದು ಕಳವಳಗೊಂಡಳು.  ಹೀಗೆ ತಲ್ಲಣಗೊಂಡ ಸೀತೆಯ ಬಳಿಗೆ ಬಂದ ರಾವಣನು ತನಗೆ ಬಹುರೂಪಿಣಿವಿದ್ಯೆ ಒಲಿದಿರುವುದಾಗಿಯೂ ತನಗೆ ಇನ್ನು ಅಸಾಧ್ಯವಾದು ಯಾವುದೂ ಇಲ್ಲವೆಂದೂ ನೀನು ರಾಮನನ್ನು ತೊರೆದು ನನ್ನನ್ನು ಒಪ್ಪಿಕೊಂಡು ಸಾಮ್ರಾಜ್ಯಸುಖವನ್ನು ಅನುಭವಿಸು ಎಂದು ಹೇಳಿದನು. ಈಮಾತುಗಳನ್ನು ಕೇಳುತ್ತಲೇ ಹೆದರಿದ ಸೀತೆ ರಾಮಚಂದ್ರನ ಪ್ರಾಣ ತೆಗೆಯುವ ಹಂತದವರೆಗೆ ಹೋಗಬೇಡ ಎಂದು ಪ್ರಾರ್ಥಿಸುತ್ತಲೇ ನೆಲಕ್ಕೆ ಕುಸಿಯುತ್ತಾಳೆ ಅವಳ ಆ ಸ್ಥಿತಿ ಕಂಡು ಅನುಕಂಪಗೊಂಡ ರಾವಣನು  ಕರ್ಮವಶದಿಂದ ಈ ಕೆಟ್ಟ ಪಾಪವನ್ನು ಮಾಡಿದ್ದೇನೆ. ಕದಡಿದ ನೀರು ತಿಳಿಯಾಗುವಂತೆ ತನ್ನಿಂದ ತಾನೇ ರಾವಣನ ಮನಸ್ಸು ತಿಳಿಯಾಯಿತು.  ಸೀತೆಯ ಬಗ್ಗೆ ವೈರಾಗ್ಯಮೂಡಿದ್ದನ್ನು ಕವಿಯು ಉದಾತ್ತರಾದವರಲ್ಲಿ ಈ ರೀತಿಯ ವೈರಾಗ್ಯ ಮೂಡುವುದು ಎಂದಿದ್ದಾನೆ.  ಸೂರ್ಯನು ಸಂಧ್ಯೆ ಮೇಲಿನ ಅನುರಾಗವನ್ನು ಹೇಗೆ ಬಿಡುತ್ತಾನೋ ಹಾಗೆ ಉತ್ತಮರು ಎಂದಾದರೂ ಕೆಟ್ಟದ್ದನ್ನು ಆಚರಿಸಿದ್ದರೆ ಅದನ್ನು ತೊರೆಯದೆ ಇರುವುದಿಲ್ಲ. ಎಂದು ಹೇಳುತ್ತಾ ಸೀತೆಯಮೇಲೆ ಉಂಟಾದ ಕರುಣಾರಸದಿಂದ ರಾವಣನ ಸ್ವಭಾವವು ಸ್ಥಿರಗೊಂಡಿತು. ತನ್ನ ಆಪ್ತ ಮಂತ್ರಿಜನರಲ್ಲಿ  ನನ್ನ ಗುಣ , ದಿವ್ಯವಾದ ಉಡುಗೆ-ತೊಡುಗೆಗಳೆಲ್ಲ ಅವಳಿಗೆ ಹುಲ್ಲುಕಡ್ಡಿಗೆ ಸಮವೆಂದು ಭಾಸವಾಯಿತು. ಅಂತಹ ಗುಣವತಿ ಸತಿಗೆ ಕೆಟ್ಟದ್ದನ್ನು ಮಾಡುವುದಿಲ್ಲ. ನಾನು ಪೌರುಷ ಪ್ರಣಯಿ ನನ್ನ ಪಾಪದಿಂದ ಗುಣಹಾನಿ ಬಯಸುತ್ತೇನೆಯೇ . ಕೇವಲ ಮನ್ಮಥನ ಕಾರಣದಿಂದ   ನನ್ನ ವಂಶದ ಹಿರಿಮೆಗೆ ಕುಂದು ತಂದೆ ಕಾಮನ ವ್ಯಾಮೋಹದಿಂದ ಅಪಕೀರ್ತಿಯ ನಗಾರಿ  ಧ್ವನಿಯು ದಿಗಂತದವರೆಗೂ ವ್ಯಾಪಿಸುವಂತೆ ಆಗಲು ರಾಮನನ್ನು ಅಗಲಿಸಿ ತಂದು ಈ ಮಾನಿನಿಗೆ ಇಷ್ಟೋಂದು ದುಃಖವನ್ನು ಉಂಟುಮಾಡಿದೆನು. ವಿಭೀಷಣನ ಹಿತವಚನವನ್ನು ದುರ್ವ್ಯಸನಿಯಾಗಿದ್ದ ನಾನು ಕೇಳದೆ ಗದರಿ ಗರ್ಜಿಸಿ ಬೈದು ಅವಿನವಂತ ಎಂದು ಅವನನ್ನು ಹೊಡೆದು ಓಡಿಸಿದ್ದೇನೆ. ವ್ಯಸನಗಳ ಹಿಡಿತಕ್ಕೆ ಸಿಲುಕಿದ ಮನುಷ್ಯ ಅನುರಾಗದ ಸೆಳವಿನಿಂದ ಹಿತ-ಅಹಿತಗಳ ಯೋಚನೆಯನ್ನು ಏಕೆ ಮಾಡುತ್ತಾನೆ.  ಯಶಸ್ಸು , ಅಭಿಮಾನ , ಹಿರಿತನ ಉತ್ತಮ ಜನ್ಮ / ಗತಿ ಆತ್ಮೀಯ ಗೆಳೆಯರು ಇವೆಲ್ಲವನ್ನು ವಿಷಯಲಾಲಸೆಗಳೆಂಬ ಮಧ್ಯದ ಅಮಲು ಏರಿಸಿಕೊಂಡವರು ಮನಸ್ಸಿನ ವ್ಯಸನಿಗಳಾದವರು ಅಪವಾದ, ವ್ಯಥೆಗೆ ಒಳಗಾದವರು ಹೇಗೆ ಬಲ್ಲರು. ಯುದ್ಧಕ್ಕೆ ಮೊದಲೇ ಸೀತೆಯನ್ನು ರಾಮಲಕ್ಷ್ಮಣರಿಗೆ ಒಪ್ಪಿಸಿದರೆ ನನ್ನ ಪರಾಕ್ರಮವೂ , ಸ್ಥೈರ್ಯವೂ , ಖ್ಯಾತಿಯೂ ನಾಶವಾಗುತ್ತದೆ. ಹಾಗಾಗಿ ರಾಮಲಕ್ಷ್ಮಣರನ್ನು ಯುದ್ಧದಲ್ಲಿ ಎದುರಿಸಿ, ರಥವಿಹೀನರನ್ನಾಗಿ ಮಾಡಿ ತನ್ನ ಪರಾಕ್ರಮದ ಪರಿಚಯ ಮಾಡಿಕೊಟ್ಟು ನಂತರ ಅವರಿಗೆ ಸೀತೆಯನ್ನು ಒಪ್ಪಿಸುತ್ತೇನೆ ಎಂಬ ಅಂತಿಮ ನಿರ್ಧಾರಕ್ಕೆ ಬರುತ್ತಾನೆ.


ಒಂದು ಅಂಕದ ಪ್ರಶ್ನೆಗಳು.
೧. ರಾವಣ ಯಾವರೀತಿ ಚಲಿಸದೆ ಇದ್ದನು?
ರಾವಣ ಧ್ರುವಮಂಡಲದಂತೆ ಚಲಿಸದೆ ಇದ್ದನು

೨. ರಾವಣನ ಎದುರು ಪ್ರತ್ಯಕ್ಷ್ಯವಾದ ದೇವತೆ ಯಾರು?
ರಾವಣನ ಎದುರು ಪ್ರತ್ಯಕ್ಷ್ಯವಾದ ದೇವತೆ ಬಹುರೂಪಿಣಿ ವಿದ್ಯೆ.

೩. ಯಾರನ್ನು ಕೊಲ್ಲುವುದಿಲ್ಲ ಎಂದು ವಿದ್ಯಾದೇವತೆ ಹೇಳಿತು?
ರಾಮಲಕ್ಷ್ಮಣರನ್ನು ಕೊಲ್ಲುವುದಿಲ್ಲ ಎಂದು ವಿದ್ಯಾದೇವತೆ ಹೇಳಿತು.

೪. ಮಯತನೂಜೆ ಎಂದರೆ ಯಾರು?
ರಾವಣನ ಪತ್ನಿ ಮಂಡೋದರಿ.

. ರಾವಣನು ಮಹಾಪೂಜೆಯನ್ನು ಎಲ್ಲಿ ಸಲ್ಲಿಸಿದನು.
ರಾವಣನು ಮಹಾಪೂಜೆಯನ್ನು ಶಾಂತಿ ಜಿನಭವನದಲ್ಲಿ ಸಲ್ಲಿಸಿದನು.

೬. ಸೀತೆಯನ್ನು ರಾವಣ ಎಲ್ಲಿರಿಸಿದನು?
ಸೀತೆಯನ್ನು ರಾವಣ ಪ್ರಮದವನದಲ್ಲಿ ಇರಿಸಿದ್ದನು.

೭. ರಾವಣನ ಆಗಮನವನ್ನು ಸೀತೆಗೆ ತೋರಿಸಿದವರು ಯಾರು?
ರಾವಣನ ಆಗಮನವನ್ನು ಖಚರ ಸ್ತ್ರೀಯರು ಸೀತೆಗೆ ತೋರಿಸಿದರು

೮. ಸೀತೆ ಯಾವುದನ್ನು ಹುಲ್ಲಿಗೆ ಸಮಾನವೆಂದು ಭಾವಿಸಿದಳು
ಸೀತೆ ರಾವಣನ ರೂಪ ಹುಲ್ಲಿಗೆ ಸಮಾನವೆಂದು ಭಾವಿಸಿದಳು.

೯. ಸೀತೆ ರಾವಣನನ್ನು ಏನೆಂದು ಬೇಡಿಕೊಂಡಳು?
ಸೀತೆ ರಾವಣನನ್ನು ರಾಮ ಲಕ್ಷ್ಮಣರನ್ನು ಕೊಲ್ಲಬೇಡ ಎಂದು ಬೇಡಿಕೊಂಡಳು

೧೦. ರಾವಣನಿಗೆ ಯಾರ ಬಗ್ಗೆ ವೈರಾಗ್ಯ ಮೂಡಿತು?
ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿತು

೧೧. ವಿಭೀಷಣ ಯಾರು?
ವಿಭೀಷಣ ರಾವಣನ ತಮ್ಮ

೧೨. ಸೌಮಿತ್ರಿ ಎಂದರೆ ಯಾರು?
ಸೌಮಿತ್ರಿ ಎಂದರೆ ಲಕ್ಷ್ಮಣ

೧೩. ಯಾವಾಗ ಸೀತೆಯನ್ನು ರಾಮನಿಗೆ ಕೊಡುವೆನೆಂದು ರಾವಣನು ಯೋಚಿಸುತ್ತಾನೆ.
ರಾಮಲಕ್ಷ್ಮಣರನ್ನು ಯುದ್ಧದಲ್ಲಿ ಸೋಲಿಸಿ ರಥಹೀನರನ್ನಾಗಿ ಮಾಡಿ ಅವರನ್ನು ಕರೆತಂದು ಸೀತೆಯನ್ನು ಕೊಡುವುದಾಗಿ ರಾವಣ ಯೋಚಿಸುತ್ತಾನೆ.

(ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ)ಎರಡು ಅಂಕದ ಪ್ರಶ್ನೆಗಳು
೧. ಬಹುರೂಪಿಣಿ ವಿದ್ಯೆಯು ರಾವಣನಿಗೆ ಏನೆಂದು ಆಶ್ವಾಸನೆಯಿತ್ತಿತು?
ಬಹುರೂಪಿಣಿ ವಿದ್ಯೆಯು ರಾವಣನಿಗೆ  ಪ್ರತ್ಯಕ್ಷವಾಗಿ ಚಕ್ರಧರನಾದ ಲಕ್ಷ್ಮಣಸ್ವಾಮಿಯನ್ನು , ಚರಮದೇಹಧಾರಿಯಾದ ರಾಮನನ್ನು ಕೊಲ್ಲುವುದಿಲ್ಲ. ಅವರನ್ನು ಬಿಟ್ಟು ಉಳಿದವರನ್ನು ಬದುಕಲು ಉಳಿಯಗೊಡುವುದಿಲ್ಲ ಎಂದು ಆಶ್ವಾಸನೆಯಿತ್ತಿತು.

೨. ರಾವಣ ತನ್ನ ಅಂತಃಪುರದ ಸ್ತ್ರೀಯರನ್ನು ಹೇಗೆ ಸಂತೈಸಿದನು?
ರಾವಣನು ತನ್ನ ಅಂತಃಪುರದ ಸ್ತ್ರೀಯರ ಬಾಡಿದ ಮುಖಗಳನ್ನು ಕಂಡು ನಿಮಗೆ ಇಂತಹ ನೋವನ್ನು ತಂದ ಅವರನ್ನು ಹುಬ್ಬುಗಂಟಿನಿಂದಲೇ ಕಟ್ಟಿ ಸೆರೆಹಿಡಿದುತಂದು ಬಗೆಬಗೆಯಾಗಿ ಅವಮಾನಿಸುತ್ತೇನೆ ಎಂದು ಅವರನ್ನು ಸಂತೈಸಿದನು.

೩. ಸೀತೆಯ ತಲ್ಲಣಕ್ಕೆ ಕಾರಣವೇನು?
ಖಚರ ಚಕ್ರವರ್ತಿಯಾದ ರಾವಣನು ತನಗೆ ಬಹುರೂಪಿಣಿವಿದ್ಯಾಸಿದ್ಧಿಯು ಒಲಿದಿರುವುದರಿಂದ ಸಂತೋಷಭರಿತನಾಗಿ ಆ ಸಂದರ್ಭದಲ್ಲಿ ಸೀತೆಯನ್ನು ನೋಡಲು ಬರುತ್ತಿರುವಾಗ ಸೀತೆಯ ಬಳಿಯಲ್ಲಿದ್ದ ಖಚರ ಸ್ತ್ರೀಯರು ರಾವಣನನ್ನು ತೋರಿದಾಗ ಅವಳು ರಾಮಲಕ್ಷ್ಮಣರ ಬಗ್ಗೆ ಕೆಟ್ಟವಾರ್ತೆಯನ್ನು ಇನ್ನು ಯಾವ ತರುತ್ತಾನೋ ಎಂದು ತಲ್ಲಣಗೊಂಡಳು.

೪. ರಾವಣನನ್ನು ಸೊಕ್ಕಿನಿಂದ ಸೀತೆಯನ್ನು ಉದ್ದೇಶಿಸಿ ಆಡಿದ ಮಾತುಗಳಾವುವು?
ಖಚರ ಚಕ್ರವರ್ತಿಯಾದ ರಾವಣನು ಸೀತೆಯನ್ನು ಕುರಿತು ತನಗೆ ಬಹುರೂಪಿಣಿವಿದ್ಯಾಸಿದ್ಧಿಯು ಒಲಿದಿರುವುದರಿಂದ ಇನ್ನು ನನಗೆ ಪ್ರತಿಪಕ್ಷವೆಂಬುದು ಇರುವುದಿಲ್ಲ. ನನಗೆ ಅಸಾಧ್ಯವಾದುದು ಯಾವುದೂ ಇಲ್ಲ. ಹಾಗಾಗಿ ಆ ರಾಮನನ್ನು ಬಿಟ್ಟು ನನ್ನನ್ನು ಒಪ್ಪಿಕೊಂಡು ಈ ಅಪಾರ ಸಾಮ್ರಾಜ್ಯಸುಖವನ್ನು ಅನುಭವಿಸು ಎಂದು ನುಡಿದನು.

೫. ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿದ ಸಂದರ್ಭವನ್ನು ವಿವರಿಸಿ.
ನನಗೆ ಅಸಾಧ್ಯವಾದುದು ಯಾವುದೂ ಇಲ್ಲ. ಹಾಗಾಗಿ ಆ ರಾಮನನ್ನು ಬಿಟ್ಟು ನನ್ನನ್ನು ಒಪ್ಪಿಕೊಂಡು ಈ ಅಪಾರ ಸಾಮ್ರಾಜ್ಯಸುಖವನ್ನು ಅನುಭವಿಸು ಎಂದು ನುಡಿದಾಗ ಸೀತೆಯು ಕರುಣಿಸುವುದಾದರೆ ರಾಮಲಕ್ಷ್ಮಣರ ಪ್ರಾಣಕ್ಕೆ ಸಂಚಕಾರ ಮಾಡದಿರು ಎಂದು ಹೇಳುತ್ತಲೇ ಮೂರ್ಚಿತಳಾಗುತ್ತಾಳೆ.  ಅವಳ ದೀನಸ್ಥಿತಿಯನ್ನು ಕಂಡು ರಾವಣನಿಗೆ ವೈರಾಗ್ಯಮೂಡುತ್ತದೆ.

೬. ರಾವಣನು ತನ್ನ ಆಪ್ತರನ್ನು ಕುರಿತು ಏನೆಂದು ಹೇಳಿದನು?
ಸೀತೆಯ ಗಟ್ಟಿ ಮನಸ್ಸು ಮತ್ತು ದೀನಸ್ಥಿತಿಯನ್ನು ಕಂಡು ರಾವಣನಿಗೆ ವೈರಾಗ್ಯಮೂಡಿ ತನ್ನನ್ನು ತಾನು ಹಳಿದುಕೊಳ್ಳುತ್ತಾ, ತನ್ನ ಸುತ್ತ ಇದ್ದ ಸಚಿವಮಂಡಲ , ಪರಿವಾರದವರನ್ನು ಕುರಿತು ;  “ ದುರ್ವ್ಯಸನಿಯಾದ ನಾನು ನನ್ನ ತಮ್ಮ ವಿಭೀಷಣನನ್ನು ಅವಿನಯಿ ಎಂದು ಜರಿದು ಹೊಡೆದು ಓಡಿಸಿದೆ. ವಿಷಯ ಲಾಲಸೆಗಳ ಅಮಲು ಏರಿದವರಿಗೆ ಯಶಸ್ಸಿನ ನಾಶ, ಅಭಿಮಾನದ ಕೇಡು, ಆತ್ಮೀಯರ ಕಳೆದುಕೊಳ್ಳುವ ವ್ಯಥೆ ತಪ್ಪದು” ಎಂದು ಹೇಳಿದನು

೭. ಈಗಲೇ ಸೀತೆಯನ್ನು ರಾಮನಿಗೊಪ್ಪಿಸಲು ರಾವಣ ಬಯಸಲಿಲ್ಲವೇಕೆ?
ದೀನಸ್ಥಿತಿಯನ್ನು ಕಂಡು ರಾವಣನಿಗೆ ವೈರಾಗ್ಯಮೂಡುತ್ತದೆ ಆಗ ತನ್ನನ್ನು ತಾನು ಹಳಿದುಕೊಳ್ಳುತ್ತಿರುತ್ತಾನೆ. ಆದರೂ ಈ ಸಂದರ್ಭದಲ್ಲಿ ಸೀತೆಯನ್ನು ರಾಮಲಕ್ಷ್ಮಣರಿಗೆ ಒಪ್ಪಿಸಿದರೆ ನನ್ನ ಪರಾಕ್ರಮವೂ , ಸ್ಥೈರ್ಯವೂ , ಖ್ಯಾತಿಯೂ ನಾಶವಾಗುತ್ತದೆ ಎಂದು ಭಾವಿಸುತ್ತಾನೆ.

೮. ರಾವಣನು ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ?
ಯುದ್ಧಕ್ಕೆ ಮೊದಲೇ ಸೀತೆಯನ್ನು ರಾಮಲಕ್ಷ್ಮಣರಿಗೆ ಒಪ್ಪಿಸಿದರೆ ನನ್ನ ಪರಾಕ್ರಮವೂ , ಸ್ಥೈರ್ಯವೂ , ಖ್ಯಾತಿಯೂ ನಾಶವಾಗುತ್ತದೆ ಹಾಗಾಗಿ ರಾಮಲಕ್ಷ್ಮಣರನ್ನು ಯುದ್ಧದಲ್ಲಿ ಎದುರಿಸಿ, ರಥವಿಹೀನರನ್ನಾಗಿ ಮಾಡಿ ತನ್ನ ಪರಾಕ್ರಮದ ಪರಿಚಯ ಮಾಡಿಕೊಟ್ಟು ನಂತರ ಅವರಿಗೆ ಸೀತೆಯನ್ನು ಒಪ್ಪಿಸುತ್ತೇನೆ ಎಂಬ ಅಂತಿಮ ನಿರ್ಧಾರಕ್ಕೆ ಬರುತ್ತಾನೆ.

ಮೂರು ಅಂಕದ ಪ್ರಶ್ನೆಗಳು
ಸಂದರ್ಭಸ್ವಾರಸ್ಯದೊಡನೆ ವಿವರಿಸಿ.
೧. ಕೃತಾಂತ ಜಿಹ್ವೆ ಪೊಡಕರಿಸುವವೋಲ್
ಪ್ರಸ್ತುತ ಈ ವಾಕ್ಯವನ್ನು ನಾಗಚಂದ್ರನು ರಚಿಸಿರುವರಾಮಚಂದ್ರ ಚರಿತ ಪುರಾಣ ಎಂಬ ಕಾವ್ಯಭಾಗದಿಂದ ಆರಿಸಿಕೊಳ್ಳಲಾದ  “ಕದಡಿದ ಸಲಿಲಂ ತಿಳಿವಂದದೆ” ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ರಾವಣನು ಚಂಚಲವಾದ ತನ್ನ ಮನಸ್ಸನ್ನು ದ್ರುವನಕ್ಷತ್ರದಂತೆ ನಿಶ್ಚಲವಾಗಿಸಿ ದಿವ್ಯಮಂತ್ರಗಳಿಂದ ಪ್ರಾರ್ಥಿಸಿದಾಗ ಪ್ರತ್ಯಕ್ಷವಾದ ಬಹುರೂಪಿಣಿ ವಿದ್ಯೆಯು ಮುಂಗಾರಿನ ಆರ್ಭಟವೆಂಬಂತೆ ತೋರುತ್ತಾ ರಾಮ ಲಕ್ಷಣರನ್ನು ಬಿಟ್ಟು ಉಳಿದವರನ್ನು ಬದುಕಲೀಯೆ ಎಂದು ನುಡಿದುದನ್ನು ಕವಿ ಸಾಕ್ಷಾತ್ ಯಮನ ನಾಲಿಗೆಯೇ ನುಡಿಯಿತು ಎಂದಿದ್ದಾನೆ.

೨. ಉಳಿದವರಳಿವೆನಗೇವುದೇಂ
ಪ್ರಸ್ತುತ ಈ ವಾಕ್ಯವನ್ನು ನಾಗಚಂದ್ರನು ರಚಿಸಿರುವರಾಮಚಂದ್ರ ಚರಿತ ಪುರಾಣ ಎಂಬ ಕಾವ್ಯಭಾಗದಿಂದ ಆರಿಸಿಕೊಳ್ಳಲಾದ  “ಕದಡಿದ ಸಲಿಲಂ ತಿಳಿವಂದದೆ” ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ. ಬಹುರೂಪಿಣಿ ವಿದ್ಯೆಯು ರಾಮಲಕ್ಷ್ಮಣರನ್ನು ಉಳಿದು ಮಿಕ್ಕವರನ್ನು ಉಳಿಯಲೀಯೆ ಎಂದು ಹೇಳಿದಾಗ ಉಳಿದವರ ಸಾವಿನಿಂದ ನನಗೇನು ಪ್ರಯೋಜನ ಎಂದು ಹೇಳುತ್ತಾ ವಿದ್ಯೆಗೆ ನಮಸ್ಕರಿಸಿ ಹೋಗುತ್ತಾನೆ.

೩. ಸಮಧಿಕರಾರ್ ಜಗತ್ರಯದೊಳಿನ್ನೆನಗೆ?
ಪ್ರಸ್ತುತ ಈ ವಾಕ್ಯವನ್ನು ನಾಗಚಂದ್ರನು ರಚಿಸಿರುವರಾಮಚಂದ್ರ ಚರಿತ ಪುರಾಣ ಎಂಬ ಕಾವ್ಯಭಾಗದಿಂದ ಆರಿಸಿಕೊಳ್ಳಲಾದ  “ಕದಡಿದ ಸಲಿಲಂ ತಿಳಿವಂದದೆ” ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಬಹುರೂಪಿಣೀ ವಿದ್ಯೆಯನ್ನು ಸಾಧಿಸಿದ ರಾವಣ ಸಂತೋಷದಿಂದ ತನ್ನ ಶಕ್ತಿಯನ್ನು ಪರೀಕ್ಷಿಸಿಕೊಳ್ಳುತ್ತಾ ಮೂರುಲೋಕಕಗಳಲ್ಲೂ ನನಗೆ ಸಮನಾದವರು ಯಾರಿದ್ದಾರೆ. ನನಗೆ ಪ್ರತಿಸ್ಪರ್ಧಿಗಳೇ ಇಲ್ಲದ ಹಾಗಾಯಿತು. ಎಂದು ತನ್ನ ತೋಳುಗಳನ್ನು ನೋಡುತ್ತಾ ಸೀತೆಯ ಮುಖಕಮಲವನ್ನು ಒಮ್ಮೆ ನೋಡಲು ಮನಸ್ಸುಮಾಡಿ ಪ್ರಮದವನಕ್ಕೆ ಬಂದನು. ಸೀತೆಯಮುಂದೆ  ಮೂರುಲೋಕಗಳಲ್ಲಿನಮ್ಮನ್ನು ಮೀರಿಸುವ ವೀರರು ಯಾರೂ ಇಲ್ಲ ನನ್ನನ್ನು ವರಿಸು  ಎಂಬ ಅಹಂಕಾರದ ಮಾತುಗಳು  ಇಲ್ಲಿಕಂಡುಬರುತ್ತದೆ.

೪. ಏನಿಂ ಕೇಳ್ದಪೆನೋ. . . ಪೊಲ್ಲವಾರ್ತೆಯನಿನ್
ಪ್ರಸ್ತುತ ಈ ವಾಕ್ಯವನ್ನು ನಾಗಚಂದ್ರನು ರಚಿಸಿರುವರಾಮಚಂದ್ರ ಚರಿತ ಪುರಾಣ ಎಂಬ ಕಾವ್ಯಭಾಗದಿಂದ ಆರಿಸಿಕೊಳ್ಳಲಾದ  “ಕದಡಿದ ಸಲಿಲಂ ತಿಳಿವಂದದೆ” ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಬಹುರೂಪಿಣಿ ವಿದ್ಯೆಯ ಸಹಾಯದಿಂದ  ಸೀತೆಯನ್ನು ಒಲಿಸಿಕೊಳ್ಳಲು ಪ್ರಮದವನಕ್ಕೆ ಬರುತ್ತಿರುವುದನ್ನು ಕಂಡು ಖಚರ ಸ್ತ್ರೀಯರು ಸೀತೆಯನ್ನು ಒಲಿಸಿಕೊಳ್ಳಲು ಸೂಚಿಸಿದಾಗ  ಸೀತೆಯು ಸಕಲ ವೈಭೋಗವೆಲ್ಲವೂ ಒಂದು ಹುಲ್ಲುಕಡ್ಡಿಗೆ ಸಮ  ಈ ರಾವಣ ಇನ್ನೆಂತಹ ಕೆಟ್ಟಾ ವಾರ್ತೆಯನ್ನು ಹೇಳಿಬಿಡಬಹುದು ಎಂದು ಭಯದಿಂದ ತಲ್ಲಣಗೊಂಡಳು.                                                                                                                                            

೫. ಅಸಾಧ್ಯಮಪ್ಪ ಮರುವಕ್ಕಮಿಲ್ಲ
ಪ್ರಸ್ತುತ ಈ ವಾಕ್ಯವನ್ನು ನಾಗಚಂದ್ರನು ರಚಿಸಿರುವರಾಮಚಂದ್ರ ಚರಿತ ಪುರಾಣ ಎಂಬ ಕಾವ್ಯಭಾಗದಿಂದ ಆರಿಸಿಕೊಳ್ಳಲಾದ  “ಕದಡಿದ ಸಲಿಲಂ ತಿಳಿವಂದದೆ” ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಬಹುರೂಪಿಣಿ ವಿದ್ಯೆ ಸಿದ್ದಿಸಿಕೊಂಡ ರಾವನನ ಅಹಂಕಾರದ ಮಾತು ಇಲ್ಲಿದೆ. ಪ್ರಮದವನಕ್ಕೆ ಸೀತೆಯನ್ನು ಕಾಣಲು ಬಂದ ರಾವಣನು ತನಗೆ ವಿದ್ಯಾಸಿದ್ಧಿಯಾಗಿರುವುದಾಗಿಯೂಇದರಿಂದಾಗಿ ನನ್ನನ್ನು ಎದುರಿಸುವಂತಹ ವೀರರು ಯಾರೂ ಇಲ್ಲವಾಗಿದೆ.  ನೀನು ನೆಚ್ಚಿರುವ ರಾಮನನ್ನು ಬಿಟ್ಟು ನನ್ನನ್ನು ಸೇರು . ನನ್ನ ಸಕಲ ಸಾಮ್ರಾಜ್ಯಕ್ಕೆ ರಾಣಿಯಾಗಿರು. ಎಂದಾಗ ಸೀತೆ ಮೂರ್ಚೆಹೋಗುತ್ತಾಳೆ.

೬. ರಘುತನೂಜನಾಯುಃಪ್ರಾಣಂಬರೆಗಂ ಬಾರದಿರು.
ಪ್ರಸ್ತುತ ಈ ವಾಕ್ಯವನ್ನು ನಾಗಚಂದ್ರನು ರಚಿಸಿರುವರಾಮಚಂದ್ರ ಚರಿತ ಪುರಾಣ ಎಂಬ ಕಾವ್ಯಭಾಗದಿಂದ ಆರಿಸಿಕೊಳ್ಳಲಾದ  “ಕದಡಿದ ಸಲಿಲಂ ತಿಳಿವಂದದೆ” ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸೀತೆ ರಾವಣನನ್ನು ಕುರಿತು ಹೇಳುವ ಮಾತಿದು. ರಾವಣ ಬಹುರೂಪಿಣಿ ವಿದ್ಯೆಯು ಸಿದ್ಧಿಸಿ ತನಗೆ ಇನ್ನು ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹೇಳಿದಾಗ  ನೀನು ಕರುಣಿಸುವುದಾದರೆ ರಾಮ ಲಕ್ಷ್ಮಣರ ಪ್ರಾಣ ತೆಗೆಯುವ ಹಂತಕ್ಕೆ ಹೋಗದಿರು ಎಂದು ಪ್ರಾರ್ಥಿಸುತ್ತಾ ಮೂರ್ಚಿತಳಾಗಿಭೂಮಿಯ ಮೇಲೆ ಬಿದ್ದಳು.

೭. ಕದಡಿದ ಸಲಿಲಂ ತಿಳಿವಂದದೆ.
ಪ್ರಸ್ತುತ ಈ ವಾಕ್ಯವನ್ನು ನಾಗಚಂದ್ರನು ರಚಿಸಿರುವರಾಮಚಂದ್ರ ಚರಿತ ಪುರಾಣ ಎಂಬ ಕಾವ್ಯಭಾಗದಿಂದ ಆರಿಸಿಕೊಳ್ಳಲಾದ  “ಕದಡಿದ ಸಲಿಲಂ ತಿಳಿವಂದದೆ” ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸೀತೆಯ ದೀನ ಸ್ಥಿತಿಯನ್ನು , ಮನಸ್ಸಿನ ಸ್ಥಿರತೆಯನ್ನು ಗಮನಿಸಿದಲ್ಲದೆ, ತನ್ನ ಗುಣ, ರೂಪ, ಸಂಪತ್ತುಗಳೆಲ್ಲ ಅವಳಿಗೆ ತೃಣಕ್ಕೆ ಸಮನಾದುದನ್ನು ಕಂಡು ಅವನ ಮನಸ್ಸು ತಿಳಿಗೊಂಡಿದ್ದನ್ನು ಕವಿ ಈ ಮೇಲಿನ ಮಾತಿನಲ್ಲಿ ಹೇಳುತ್ತಾನೆ. ರಾವಣನ ವೈರಾಗ್ಯಭಾವವನು ಕವಿ ಇಲ್ಲಿ ಹಿಡಿದಿಟ್ಟಿದ್ದಾನೆ.

೮. ಉದಾತ್ತನೊಳ್ ಪುಟ್ಟದಲ್ತೆ ನೀಲೀರಾಗಂ
ಪ್ರಸ್ತುತ ಈ ವಾಕ್ಯವನ್ನು ನಾಗಚಂದ್ರನು ರಚಿಸಿರುವರಾಮಚಂದ್ರ ಚರಿತ ಪುರಾಣ ಎಂಬ ಕಾವ್ಯಭಾಗದಿಂದ ಆರಿಸಿಕೊಳ್ಳಲಾದ  “ಕದಡಿದ ಸಲಿಲಂ ತಿಳಿವಂದದೆ” ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ತನ್ನ ವಿದ್ಯಾಸಿದ್ಧಿಯನ್ನು ಹೇಳಿಕೊಂಡು ಬಂದ ರಾವಣನಿಗೆ ರಾಮನನ್ನು ಕೊಲ್ಲದಿರು ಎಂದು ಬೇಡುತ್ತಾ ಮೂರ್ಚಿತಳಾದ ಸೀತೆಯ ದೀನಸ್ಥಿತಿಯನ್ನು ಕಂಡು ಅವನ ಮನ ತಿಳಿಗೊಂಡು ಪಶ್ಚಾತಾಪದಿಂದ ತನ್ನನ್ನು ತಾನು ಹಳಿದುಕೊಳ್ಳುತ್ತಾನೆ. ಇದನ್ನೇ ಕವಿಯು ಉದಾತ್ತರಲ್ಲಿ ಈರೀತಿಯ ವಿಶಾಲ ಮನೋಭಾವ ಉಂಟಾಗುತ್ತದೆ ಎಂದಿದ್ದಾನೆ ನೀಲಿರಾಗ( ವೈಶಾಲ್ಯತೆ)

೯. ಅಪೇಕ್ಷಿಸುವೆನೇ ಗುಣಹಾನಿಯನೆನ್ನ ಪಾಪದಿಂ
ಪ್ರಸ್ತುತ ಈ ವಾಕ್ಯವನ್ನು ನಾಗಚಂದ್ರನು ರಚಿಸಿರುವರಾಮಚಂದ್ರ ಚರಿತ ಪುರಾಣ ಎಂಬ ಕಾವ್ಯಭಾಗದಿಂದ ಆರಿಸಿಕೊಳ್ಳಲಾದ  “ಕದಡಿದ ಸಲಿಲಂ ತಿಳಿವಂದದೆ” ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ತಮ್ಮ ಮಂತ್ರಿ, ಪರಿವಾರದೊಡನೆ ರಾವನ ಹೇಳಿಕೊಳ್ಳುವುದು.ತನ್ನ ಸಂಪತ್ತು , ವೀರಸೌಂದರ್ಯವನ್ನು ತೃಣವಾಗಿ ಕಂಡ ಸೀತೆ ರಾಮನಿಗೆ ಅಪಾಯವಾಗುವುದೆಂದು ಮೂರ್ಚಿತಗೊಂಡಳು .ಪೌರುಷವನ್ನು ಗುಣವನ್ನು ಹಿರಿಮೆಯನ್ನು ಒಪ್ಪುವ ನಾನು  ಗುಣ ಹಾನಿಯನ್ನು ಬಯಸುತ್ತೇನೆಯೇ? ಎಂದಿದ್ದಾನೆ.

೧೦. ಕಂದರ್ಪ ವಿಮೋಹದಿಂದಗಲ್ಚಿದೆ
ಪ್ರಸ್ತುತ ಈ ವಾಕ್ಯವನ್ನು ನಾಗಚಂದ್ರನು ರಚಿಸಿರುವರಾಮಚಂದ್ರ ಚರಿತ ಪುರಾಣ ಎಂಬ ಕಾವ್ಯಭಾಗದಿಂದ ಆರಿಸಿಕೊಳ್ಳಲಾದ  “ಕದಡಿದ ಸಲಿಲಂ ತಿಳಿವಂದದೆ” ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ತನ್ನ ಮಂತ್ರಿಬಳದ ಮುಂದೆ ತನ್ನನ್ನು ತಾನು ಹಳಿದುಕೊಳ್ಳುತ್ತಿರುವ ರಾವಣ ಈ ರೀತಿ ಪಶ್ಚಾತಾಪದಿಂದ ನೋಯುತ್ತಾ ಸೀತೆಯನ್ನು ನಾನು ಬೇಕಾಗಿ ಅಪಹರಿಸಿಲ್ಲ ಮನ್ಮಥನು ನನ್ನಲ್ಲಿ ಉಂಟುಮಾಡಿದ ವ್ಯಾಮೋಹದಿಂದ ನಾನು ಅಪಹರಿಸಿದ್ದು ಇದೆಲ್ಲ ಕರ್ಮವಶದಿಂದ ಆದದ್ದು ನನ್ನ ವಂಶದ ಗೌರವಕ್ಕೆ ಮಸಿಬಳಿಯುವಂತೆ ನಡೆದುಕೊಂಡಿದ್ದೇನೆ ಎಂದು ಹಳಹಳಿಸುತ್ತಾನೆ.

೧೧. ಮಾನಿನಿಗಿನಿತು ದುಃಖಮಂ ಪುಟ್ಟಿಸಿದೆ.
ಪ್ರಸ್ತುತ ಈ ವಾಕ್ಯವನ್ನು ನಾಗಚಂದ್ರನು ರಚಿಸಿರುವ ರಾಮಚಂದ್ರ ಚರಿತ ಪುರಾಣ ಎಂಬ ಕಾವ್ಯಭಾಗದಿಂದ ಆರಿಸಿಕೊಳ್ಳಲಾದ  “ಕದಡಿದ ಸಲಿಲಂ ತಿಳಿವಂದದೆ” ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಮಂತ್ರಿಪರಿಷತ್ತಿನ ಮುಂದೆ ಪಶ್ಚಾತಾಪದಿಂದ ಬೇಯುತ್ತಿದ್ದ ರಾವಣ ಈ ರೀತಿ ಹೇಳಿಕೊಳ್ಳುತ್ತಾನೆ.
ಸೀತೆಯ ದೈನ್ಯಸ್ಥಿತಿಯನ್ನು ಕಂಡು ವಿಧಿಗೆ ವಶನಾಗಿ,  ಅವಿವೇಕಿಯಾಗಿ , ಸೀತೆಯನ್ನು ರಾಮನಿಂದ ಅಗಲಿಸಿ ತಂದು ಇಷ್ಟೋಂದು ದುಃಖ ಉಂಟುಮಾಡಿದೆ. ನನ್ನಕಾರಣದಿಂದ ಈಕೆ ಇಷ್ಟೋಂದು ದುಃಖ ಅನುಭವಿಸುವಂತೆ ಆಯಿತು.ಎಂದು ಹೇಳುತ್ತಾನೆ.

೧೨. ರಣಾಗ್ರದೊಳ್ ಹೊಡಿದು ತಂದಾಂ ಕೊಟ್ಟಪೆಂ
ಪ್ರಸ್ತುತ ಈ ವಾಕ್ಯವನ್ನು ನಾಗಚಂದ್ರನು ರಚಿಸಿರುವರಾಮಚಂದ್ರ ಚರಿತ ಪುರಾಣ ಎಂಬ ಕಾವ್ಯಭಾಗದಿಂದ ಆರಿಸಿಕೊಳ್ಳಲಾದ  “ಕದಡಿದ ಸಲಿಲಂ ತಿಳಿವಂದದೆ” ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸೀತೆಯ ಮನೋನಿಶ್ಚಲತೆ ಮತ್ತು ದೀನಸ್ಥಿತಿಯನ್ನು ಕಂಡು ಮನಃಕರಗಿ ತನ್ನನ್ನು ತಾನು ಹಳಿದುಕೊಳ್ಳುತ್ತಿದ್ದ ರಾವಣ ಮಂತ್ರಿಪರಿಷತ್ತಿನ ಮುಂದೆ ಈ ರೀತಿ ಹೇಳಿದನು. ಸೀತೆಯನ್ನು ಈ ಕೂಡಲೇ ರಾಮನಿಗೆ ಅರ್ಪಿಸಿದರೆ ನನ್ನ ಪರಾಕ್ರಮ, ಶೌರ್ಯ ನಾಶವಾಗಿ ಹೋಗುತ್ತದೆ. ಹಾಗೆ ಆಗದಂತೆ ಇರಬೇಕಾದರೆ ಎರಡು ಕಡೆಯ ಸೈನ್ಯವು ನನ್ನ ಬಾಹುಬಲವನ್ನು ಹೊಗಳುವಂತೆ ಯುದ್ಧಮಾಡಿ, ರಾಮಲಕ್ಷ್ಮಣರನ್ನು ರಥಹೀನರನ್ನಾಗಿ ಮಾಡಿ, ಅವರನ್ನು ಕರೆತಂದು,  ಅವರಿಗೆ ಸೀತೆಯನ್ನು ಒಪ್ಪಿಸುತ್ತೇನೆ ಎಂದನು.

***OM***

47 comments:

  1. ಧನ್ಯವಾದಗಳು ಸರ್

    ReplyDelete
  2. ನಿಮ್ಮ ಮಾಹಿತಿ ಉತ್ತಮವಾಗಿದೆ.

    ReplyDelete
  3. ಸೂಪರ್ ಮಗ ಚಿಂದಿ ಚಿಂದಿ

    ReplyDelete
  4. ಧನ್ಯವಾದಗಳು ಸರ್

    ReplyDelete
  5. Thanks sir but four marks answers

    ReplyDelete
  6. Thanks sir but four marks answers

    ReplyDelete
  7. Sir 4 marks answers naa kalsi please

    ReplyDelete
  8. ಧನ್ಯವಾದಗಳು ಗುರುಗಳೇ , ,

    ReplyDelete
  9. There is no 5-6 line answers can you update that sir please

    ReplyDelete
  10. Covid 19 nali online class ge upyog vagide Thank you sir /madam

    ReplyDelete
  11. Covid 19 nali online class ge upyog vagide Thank you sir /madam

    ReplyDelete
  12. Thankyou sir for your notes. E chapter na bhashabyasada answer sigbahuda sir please

    ReplyDelete
  13. Thankyou sir, it's very easy to understand and effective also

    ReplyDelete
  14. superb sir i like it there is no Difficult
    very Easiest way tq

    ReplyDelete
  15. ಪುಣ್ಯಾತ್ಮ 🙏

    ReplyDelete
  16. ಧನ್ಯವಾದಗಳು ಸರ್...

    ReplyDelete