ಗದ್ಯ ಭಾಗ ೭
ತಿರುಳ್ಗನ್ನಡದ
ಬೆಳ್ನುಡಿ – ಮುದ್ದಣ( ನಂದಳಿಕೆ ಲಕ್ಷ್ಮೀನಾರಾಯಣ)
ಅ. ಒಂದು ಅಂಕದ
ಪ್ರಶ್ನೆಗಳು
೧. ಮುದ್ದಣ
ಅರಮನೆಯಿಂದ ಬರುತ್ತಿರುವುದನ್ನು ನಿಂತು ನೋಡಿದವರಾರು?
ಮನೋರಮೆಯು ಮುದ್ದಣ
ಅರಮನೆಯಿಂದ ಬರುತ್ತಿರುವುದನ್ನು ನಿಂತು ನೋಡಿದಳು.
೨. ಯಾವ ಕತೆ
ಹೇಳಬೇಕೆಂದು ಮನೋರಮೆ ಕೇಳಿದಳು?
ಉಳಿದರೂ ಅಳಿದರೂ
ದಾರಿತೋರಿಸುವಂತಹ ಕಥೆ ಹೇಳಬೇಕು, ಶೇಷರಾಮಾಯಣ
೩. ಶೇಷನು ರಾಮಾಯಣದ
ಕತೆಯನ್ನು ಯಾರಿಗೆ ಹೇಳಿದನು?
ಶೇಷನು ಮೊದಲು
ಇದನ್ನು ವಾತ್ಸಾಯನನಿಗೆ ಹೇಳಿದನು.
೪. ಎಂತಹ ಗದ್ಯದಲ್ಲಿ
ಕತೆ ಹೇಳೆಂದು ಮನೋರಮೆ ಕೇಳುವಳು?
ಹೃದಯಕ್ಕೆ ಆನಂದ
ನೀಡುವಂತ ಗದ್ಯದಲ್ಲಿ ಹೇಳಬೇಕೆಂದು ಕೇಳಿದಳು.
೫. ಮನೋರಮೆ
ಬಹುಮಾನವಾಗಿ ಏನನ್ನು ಕೊಡುವೆನೆಂದಳು?
ಮನೋರಮೆ ಬಹುಮಾನವಾಗಿ
ತನ್ನನ್ನು ತಾನು ಅರ್ಪಿಸಿಕೊಳ್ಳುವೆನೆಂದಳು
೬. ವಸುಧೆಗೆ
ಒಡೆಯನೆನಿಸಿದವನು ಯಾರು?
ವಸುಧೆಗೆ
ಒಡೆಯನೆನಿಸಿದವನು ಶ್ರೀ ರಾಮಚಂದ್ರ
೭. ಕನ್ನಡವು
ಕಸ್ತೂರಿಯಲ್ಲವೇ! ಎಂದವರಾರು?
ಮನೋರಮೆಯು ಕನ್ನಡವು
ಕಸ್ತೂರಿಯಲ್ಲವೇ! ಎಂದು ಹೇಳಿದಳು.
ಎರಡು ಅಂಕದ
ಪ್ರಶ್ನೆಗಳು
೧. ಮುದ್ದಣನನ್ನು
ಮನೋರಮೆ ಹೇಗೆ ಉಪಚರಿಸಿದಳು?
ದೂರದಿಂದಲೇ
ಪತಿಬರುವುದನ್ನು ಕಂಡು ಎದ್ದು ಆತನನ್ನು ಎದುರುಗೊಂಡು ಕೈಕಾಲು ತೊಳೆದುಕೊಳ್ಳುವುದಕ್ಕೆ
ನೀರುಕೊಟ್ಟು ಮನೆಯೊಳಕ್ಕೆ ಕರೆದುಕೊಂಡು ಹೋಗಿ
ಮಣೆಯಿತ್ತು, ಕುಡಿಯಲು ಹಾಲನ್ನು ತಿನ್ನಲು ರುಚಿಕರವಾದ ಹಣ್ಣುಗಳನ್ನು ನೀಡಿ ಉಪಚರಿಸಿದಳು.
೨. ಮನೋರಮೆ ಕಥೆ
ಹೇಳೆಂದು ಕೇಳಲು ಕಾರಣವೇನು?
ಹಗಲಿರುಳು ಒಂದೇಸಮನೆ
ಸುರಿಯುತ್ತಿರುವ ಈ ಜಡಿಮಳೆಯಿಂದಾಗಿ ಹಗಲು ಬಹಳ ದೀರ್ಘವಾಗಿ ಕಾಣಿಸುತ್ತಿದೆ, ಮನಸ್ಸಿಗೆ
ಬೇಸರವಾಗಿದೆ, ಆದ್ದರಿಂದ ಯಾವುದಾದರೂ ನಲ್ಗತೆಯನ್ನು ಹೇಳು ಎಂದು ಕೇಳಿದಳು.
೩. ಕಥೆಯನ್ನು
ಯಾವರಸಗಳಲ್ಲಿ ಹೇಳಲೆಂದು ಮುದ್ದಣ ಕೇಳಿದನು?
ನಿನಗೆ ಯಾವರಸ ಇಷ್ಟ
, ಶೃಂಗಾರ, ಹಾಸ್ಯ, ವೀರರಸಗಳೇ ಎಂದು ಮುದ್ದಣ ಕೇಳಿದನು.
೪. ಯಾವ ಧಾಟಿಯಲ್ಲಿ
ಕಥೆಯನ್ನು ಹೇಳೆಂದು ಮನೋರಮೆ ಕೇಳಿದಳು?
ಮುದ್ದಣನು
ಪದ್ಯದಲ್ಲಿ ಕಥೆ ಹೇಳಲೋ ಗದ್ಯದಲ್ಲಿ ಕಥೆ ಹೇಳಲೋ ಎಂದು ಕೇಳಿದಾಗ, ಪದ್ಯದಲ್ಲಿ ಬೇಡ, ಹೃದಯಕ್ಕೆ ಹತ್ತಿರವಾದ ಗದ್ಯದಲ್ಲೇ ಕಥೆ ಹೇಳು ಎಂದು
ಕೇಳಿದಳು.
೫. ಅರಮನೆಯಿಂದ ಎಂತಹ
ಬಹುಮಾನ ಸಿಗಬಹುದೆಂದು ಮುದ್ದಣ ಹೇಳಿದನು?
ಅರಮನೆಯಲ್ಲಿ
ಕಥೆಯನ್ನು ಕೇಳಿ ಮೆಚ್ಚಿ ರತ್ನದ ಕೈಗಡವನ್ನೂ, ಚಿನ್ನದ ಕಂಠೀಹಾರವನ್ನೂ ಬಹುಮಾನವಾಗಿ ನೀಡುತ್ತಾರೆ.
೬.‘ನೀರಿಳಿಯದ
ಗಂಟಲಲ್ಲಿ ಕಡುಬನ್ನು ತುರುಕಿದಂತಾಯ್ತು’ ಎಂದು ಮನೋರಮೆ
ಹೇಳಿದ್ದೇಕೆ?
ಮುದ್ದಣ ಕಥೆಯನ್ನು
ಸ್ವಸ್ತಿಶ್ರೀಮತ್ಸುರಾಸುರೇಂದ್ರನರೇಂದ್ರಮುನೀಂದ್ರ. . . ಎಂದು ಆರಂಭಿಸಿದಾಗ ಮನೋರಮೆಯು ಇದು
ಸಂಸ್ಕೃತದ ನುಡಿ ಕನ್ನಡದ ಸೊಗಸನ್ನೇ ತಿಳಿಯದ ನನಗೆ ಸಂಸ್ಕೃತದ ಸೊಗಸು ಅರ್ಥವಾಗುವುದೇ ಎಂದು
ಹೇಳುವಾಗ ‘ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕಿದಂತಾಯ್ತು’ ಎಂದು ಹೇಳಿದ್ದಾಳೆ.
೭. ಸಂಸ್ಕೃತ
ಕನ್ನಡಗಳು ಸೇರಿದರೆ ಹೇಗೆ ಸೊಗಯಿಸುತ್ತದೆ?
ಸಂಸ್ಕೃತ ಒಂದು
ಚಿನ್ನದಲ್ಲಿ ಪೋಣಿಸಿದ ರತ್ನದ ಮಣಿ. ಕರಿಮಣಿ ಸರದಲ್ಲಿ ಕೆಂಪುಹವಳವನ್ನು ಪೋಣಿಸಿದಂತೆ, ಸಂಸ್ಕೃತ
ಮತ್ತು ಕನ್ನಡವನ್ನು ರಸಂ ಒಸರುವಂತೆ, ಕಾವ್ಯಲಕ್ಷಣವಿರುವಂತೆ ಅಲ್ಲಲ್ಲಿ ಬೆರೆಸಿ ಹೇಳಿದಾಗ
ಚೆನ್ನಾಗಿರುತ್ತದೆ ಎಂದು ಮುದ್ದಣ ಹೇಳುತ್ತಾನೆ.
ಸಂದರ್ಭ(ಮೂರು ಅಂಕದ
ಪ್ರಶ್ನೆಗಳು)
೧. ಬಲ್ಸೋನೆಯ
ಜಿನುಂಗಿನತ್ತಣಿನೆನ್ನ ಬಗೆಯುಂ ಬೇಸರ್ತುದು
ಈ ಮಾತನ್ನು ತಿರುಳ್ಗನ್ನಡದ
ಬೆಳ್ನುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ ಇದು ಮುದ್ದಣನ ರಾಮಾಶ್ವಮೇಧಕೃತಿಯ ಕಥಾಮುಖದ
ಭಾಗವಾಗಿದೆ.
ಅರಮನೆಯಿಂದ ಒಂದು
ಸಂಜೆ ಮನೆಗೆ ಬಂದ ಮುದ್ದಣನಿಗೆ ಹಸಿವು ಬಳಲಿಕೆ ಹೋಗಲು ಹಾಲು ಹಣ್ಣು ತಾಂಬೂಲಗಳನ್ನೆಲ್ಲ ಕೊಟ್ಟು
ಉಪಚಾರಮಾಡುತ್ತಾ ಹಗಲಿರುಳು ಒಂದೇಸಮನೆ
ಸುರಿಯುತ್ತಿರುವ ಈ ಜಡಿಮಳೆಯಿಂದಾಗಿ ಹಗಲು ಬಹಳ ದೀರ್ಘವಾಗಿ ಕಾಣಿಸುತ್ತಿದೆ, ಮನಸ್ಸಿಗೆ
ಬೇಸರವಾಗಿದೆ, ಆದ್ದರಿಂದ ಯಾವುದಾದರೂ ನಲ್ಗತೆಯನ್ನು ಹೇಳು ಎಂದು ಮನೋರಮೆ ಕೇಳಿದಳು.
೨.
ನಿನಗಾವರಸದೊಳಿಷ್ಟಂ?
ಈ ಮಾತನ್ನು
ತಿರುಳ್ಗನ್ನಡದ ಬೆಳ್ನುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ ಇದು ಮುದ್ದಣನ
ರಾಮಾಶ್ವಮೇಧಕೃತಿಯ ಕಥಾಮುಖದ ಭಾಗವಾಗಿದೆ. ಹಗಲಿರುಳು ಒಂದೇಸಮನೆ ಸುರಿಯುತ್ತಿರುವ ಈ
ಜಡಿಮಳೆಯಿಂದಾಗಿ ಹಗಲು ಬಹಳ ದೀರ್ಘವಾಗಿ ಕಾಣಿಸುತ್ತಿದೆ, ಮನಸ್ಸಿಗೆ ಬೇಸರವಾಗಿದೆ, ಆದ್ದರಿಂದ
ಯಾವುದಾದರೂ ನಲ್ಗತೆಯನ್ನು ಹೇಳು ಎಂದು ಮನೋರಮೆ ಕೇಳಿದಾಗ ಮುದ್ದಣನು ನಿನಗೆ ಯಾವರಸ ಇಷ್ಟ ,
ಶೃಂಗಾರ, ಹಾಸ್ಯ, ವೀರರಸಗಳೇ ಕೇಳಿದನು.
೩.ಸೀತಾಪಹರಣದ
ಕಥನದೊಳ್ ಬಯಕೆಯೇ?
ಈ ಮಾತನ್ನು ತಿರುಳ್ಗನ್ನಡದ ಬೆಳ್ನುಡಿ ಎಂಬ
ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ ಇದು ಮುದ್ದಣನ ರಾಮಾಶ್ವಮೇಧಕೃತಿಯ ಕಥಾಮುಖದ ಭಾಗವಾಗಿದೆ.
ಮುದ್ದಣ ಮನೋರಮೆಯರು
ಸುಖಸಲ್ಲಾಪದಿಂದ ಮಾತನಾಡುತ್ತಿರುವಾಗ ಮನೋರಮೆಯು ರಾಮಾಯಣದ ಯಾವುದಾದರೊಂದು ಕಥೆ ಹೇಳು ಎಂದು
ಕೇಳಿದಾಗ ಮುದ್ದಣನು ಸೀತಾ ಸ್ವಯಂವರದ ಕಥೆ ಹೇಳಲೇ ಸೀತಾಪಹರಣದ ಕಥೆ ಹೇಳಲೇ ಎಂದಾಗ ಇವೆಲ್ಲವನ್ನು
ಮೊದಲೇ ಕೇಳಿದ್ದೇನೆ ಶ್ರೀರಾಮ ಅಶ್ವಮೇಧವನ್ನು
ಕೈಕೊಂಡ ಕಥೆ ಹೇಳು ಎಂದು ಹೇಳುತ್ತಾಳೆ.
೪. ಪದ್ಯಂ ವದ್ಯಂ ;
ಗದ್ಯಂ ಹೃದ್ಯಂ.
ಈ ಮಾತನ್ನು
ತಿರುಳ್ಗನ್ನಡದ ಬೆಳ್ನುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ ಇದು ಮುದ್ದಣನ
ರಾಮಾಶ್ವಮೇಧಕೃತಿಯ ಕಥಾಮುಖದ ಭಾಗವಾಗಿದೆ.
ಮನೋರಮೆಯ ಬಯಕೆಯಂತೆ
ಶ್ರೀರಾಮನು ಅಶ್ವಮೇಧ ಮಾಡಿದ ಕಥೆಯನ್ನು ಅಂದರೆ ಶೇಷರಾಮಾಯಣವನ್ನು ಹೇಳಲು ನಿರ್ಧರಿಸಿದ ಮುದ್ದಣ
ಪದ್ಯದಲ್ಲಿ ಹೇಳಲೋ ಗದ್ಯದಲ್ಲಿ ಹೇಳಲೋ ಎಂದು ಕೇಳಿದಾಗ ಮನೋರಮೆ ಈ ಮೇಲಿನಂತೆ ಹೇಳುತ್ತಾಳೆ.
ಪದ್ಯಧಾಟಿಗಿಂತಲೂ ಹೃದಯಕ್ಕೆ ಗದ್ಯಧಾಟಿ ಹತ್ತಿರ ಎಂಬುದು ಅವಳ ಭಾವನೆಯಾಗಿದೆ.
೫. ಕಬ್ಬಮಂ ಕಂಡಲ್ತೆ
ಕಚ್ಛೞಿಯನಿತ್ತರ್
ಈ ಮಾತನ್ನು
ತಿರುಳ್ಗನ್ನಡದ ಬೆಳ್ನುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ ಇದು ಮುದ್ದಣನ
ರಾಮಾಶ್ವಮೇಧಕೃತಿಯ ಕಥಾಮುಖದ ಭಾಗವಾಗಿದೆ.
ಕಥೆ ಹೇಳಲು
ಆರಂಭಿಸುವ ಮುನ್ನ ಮುದ್ದಣನು ಇಂಥ ನಲ್ಗತೆಯನ್ನು
ಹೇಳಿದರೆ ಅರಮನೆಯಲ್ಲಿ ರತ್ನದ ಕಡಗವನ್ನೋ ಚಿನ್ನದ
ಕಂಠೀಹಾರವನ್ನೋ ಕೊಡುತ್ತಾರೆ ನೀನೇನು ಕೊಡುವೆ ಎಂದೆಲ್ಲಾ ಕೇಳುತ್ತಿರುವಾಗ ಅರಮನೆಯವರೂ ಕಾವ್ಯವನ್ನು ಕೇಳಿಯೇ ಉಡುಗೊರೆ ನೀಡುವುದು
, ಅಂತೆಯೇ ನಾನು ಕಥೆಯನ್ನು ಕೇಳಿ, ಸೊಗಸಾಗಿದ್ದರೆ ಉಡುಗೊರೆ ನೀಡುತ್ತೇನೆ ಎಂದು ಹೇಳಿದಳು.
೬.ನೀರಿೞಿಯದ
ಗಂಟಲೊಳ್ ಕಡುಬಂ ತುರುಕಿದಂತಾಯ್ತು.
ಈ ಮಾತನ್ನು
ತಿರುಳ್ಗನ್ನಡದ ಬೆಳ್ನುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ ಇದು ಮುದ್ದಣನ
ರಾಮಾಶ್ವಮೇಧಕೃತಿಯ ಕಥಾಮುಖದ ಭಾಗವಾಗಿದೆ.
ಮುದ್ದಣ ಕಥೆಯನ್ನು
ಸ್ವಸ್ತಿಶ್ರೀಮತ್ಸುರಾಸುರೇಂದ್ರನರೇಂದ್ರಮುನೀಂದ್ರ. . . ಎಂದು ಆರಂಭಿಸಿದಾಗ ಮನೋರಮೆಯು ಇದು
ಸಂಸ್ಕೃತದ ನುಡಿ ಕನ್ನಡದ ಸೊಗಸನ್ನೇ ಅರಿಯದ ನನಗೆ ಸಂಸ್ಕೃತದ ಸೊಗಸು ಅರ್ಥವಾಗುವುದೇ ಎಂದು
ಹೇಳುವಾಗ ‘ನೀರಿಳಿಯದ ಗಂಟಲಲ್ಲಿ ಕಡುಬನ್ನು
ತುರುಕಿದಂತಾಯ್ತು’ ಎಂದು ಹೇಳಿದ್ದಾಳೆ.
ಸರಳ ರೀತಿಯಲ್ಲಿ ಅರ್ಥವಾಗುವ ಹಾಗೆ ತಿಳಿಸು ಎಂಬ ಕೋರಿಕೆ
ಇಲ್ಲಿದೆ.
೭. ಕನ್ನಡಂ
ಕತ್ತುರಿಯಲ್ತೆ.
ಈ ಮಾತನ್ನು
ತಿರುಳ್ಗನ್ನಡದ ಬೆಳ್ನುಡಿ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ ಇದು ಮುದ್ದಣನ
ರಾಮಾಶ್ವಮೇಧಕೃತಿಯ ಕಥಾಮುಖದ ಭಾಗವಾಗಿದೆ.
ಸ್ವಸ್ತಿಶ್ರೀಮತ್ಸುರಾಸುರೇಂದ್ರನರೇಂದ್ರಮುನೀಂದ್ರ.
. . ಎಂದು ಆರಂಭಿಸಿದಾಗ ಮನೋರಮೆಯು ಇದು ಸಂಸ್ಕೃತದ ನುಡಿ ಕನ್ನಡದ ಸೊಗಸನ್ನೇ ಅರಿಯದ ನನಗೆ
ಸಂಸ್ಕೃತದ ಸೊಗಸು ಅರ್ಥವಾಗುವುದೇ ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕಿದಂತಾಗುತ್ತದೆ ಹಾಗಾಗಿ
ನನಗೆ ತಿರುಳ್ಗನ್ನಡದಲ್ಲಿಯೇ ಕಥೆಯನ್ನು ಹೇಳು ಎಂದು ಹೇಳುವಾಗ ಕನ್ನಡಂ ಕಸ್ತೂರಿಯಲ್ತೆ
ಎಂದಿದ್ದಾಳೆ.
ನಾಲ್ಕು ಅಂಕದ
ಪ್ರಶ್ನೆಗಳು
೧. ಮುದ್ದಣ
ಅರಮನೆಯಿಂದ ಬಂದ ಪರಿಯನ್ನೂ ಮನೋರಮೆಯ ಉಪಚಾರವನ್ನೂ ವಿವರಿಸಿ.
ಕಾಡು-ನಾಡುಗಳೆಲ್ಲ
ಸಂತಸಗೊಂಡಂತ ಮಳೆಗಾಲದ ಒಂದು ದಿನ ಸಂಜೆ ಮುದ್ದಣನು ಅರಮನೆಯ ಕೆಲಸಕಾರ್ಯಗಳನ್ನು ಮುಗಿಸಿಕೊಂಡು
ಮನೆಯಕಡೆ ಬರುತ್ತಿರುವಾಗ ದೂರದಿಂದಲೇ ತನ್ನ ಪತಿ ಬರುತ್ತಿರುವುದನ್ನು ಕಂಡು ಎದ್ದು ಬಾಗಿಲಿಗೆ
ಬಂದು ಕೈಕಾಲು ತೊಳೆದುಕೊಳ್ಳುವುದಕ್ಕೆ ನೀರನ್ನು
ಕೊಟ್ಟು ಕೈಹಿಡಿದು ಮನೆಯೊಳಕ್ಕೆ ಕರೆದೊಯ್ದು ಮಣೆಕೊಟ್ಟು ಕುಳ್ಳಿರಿಸಿ, ತಿನ್ನಲು ರುಚಿಕರವಾದ
ಹಣ್ಣನ್ನು ಕೊಟ್ಟು ಕುಡಿಯಲು ಕೆನೆಕಟ್ಟಿದ್ದ ಹಾಲನ್ನು ಕೊಟ್ಟು ಉಪಚಾರಮಾಡಿದಳು ಇದರಿಂದ ಮುದ್ದಣನ
ಹಸಿವು ಬಳಲಿಕೆಯು ನಿವಾರಣೆಯಾಯಿತು.
೨.ಒಳ್ಳೆಯದೊಂದು ಕತೆ
ಹೇಳಬೇಕೆಂದಾಗ ಮುದ್ದಣನ ಪ್ರತಿಕ್ರಿಯೆಯೇನು?
ಮುದ್ದಣನನ್ನು
ಉಪಚರಿಸುತ್ತಾ ತಾಂಬುಲವನ್ನು ನೀಡುತ್ತಾ ಮನೋರಮೆಯು ಹಗಲಿರುಳು ಒಂದೇ ಸಮನೆ ಸುರಿಯುತ್ತಿರುವ ಈ
ಜಡಿಮಳೆಯಿಂದಾಗಿ ಮನಸ್ಸಿಗೆ ಬೇಸರವಾಗಿದೆ. ಹಗಲು ಹಿರಿದಂತೆ ಕಾಣುತ್ತಿದೆ. ಯಾವುದಾದರೂ ಒಂದು
ಕಥೆಯನ್ನು ಹೇಳು ಎಂದಾಗ ಮುದ್ದಣನು ಅಷ್ಟೇತಾನೇ ಯಾವ ಕಥೆ ಹೇಳಲಿ ಭೋಜ ಪ್ರಬಂಧವೋ, ವಿಕ್ರಮ
ವಿಜಯವೋ, ಮಹವೀರ ಚರಿತೆಯೋ ಎಂದಾಗ
ಇವುಗಳಲ್ಲಿನನಗೆ ಆಸಕ್ತಿಯಿಲ್ಲ ಉಳಿದರೂ ಅಳಿದರೂ ದಾರಿತೋರಿಸುವಂತ ರಸಭರಿತವಾದ ಕಥೆ ಹೇಳು
ಎಂದು ಹೇಳುತ್ತಾಳೆ. ನಿನಗೆ ಯಾವರಸದಲ್ಲಿ ಕಥೆ ಹೇಳಲಿ ಎಂದಾಗ ನವರಸಗಳೂ ಒಂದಾಗಿರುವ ಕಥೆ ಹೇಳು
ಹಾಗಾದ್ರೆ ಯಾವಕಥೆ ಎಂದಾಗ ರಾಮಾಯಣದೊಳ್ ಏನಾನುಂ ಒಂದು ಎಂದು ರಾಮನು ಅಶ್ವಮೇಧ ಮಾಡಿದ ಕಥೆ ಕೇಳುವ
ಬಯಕೆ ತಿಳಿಸುತ್ತಾಳೆ.
೩. ಎಂತಹ ತಿರುಳು
ಕನ್ನಡದಲ್ಲಿ ಕತೆಯನ್ನು ಹೇಳುವುದಾಗಿ ಮುದ್ದಣ ಹೇಳುವನು?
ಸ್ವಸ್ತಿಶ್ರೀಮತ್ಸುರಾಸುರೇಂದ್ರನರೇಂದ್ರಮುನೀಂದ್ರ.
. . ಎಂದು ಆರಂಭಿಸಿದಾಗ ಮನೋರಮೆಯು ಇದು ಸಂಸ್ಕೃತದ ನುಡಿ ಕನ್ನಡದ ಸೊಗಸನ್ನೇ ಅರಿಯದ ನನಗೆ
ಸಂಸ್ಕೃತದ ಸೊಗಸು ಅರ್ಥವಾಗುವುದೇ ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕಿದಂತಾಗುತ್ತದೆ ಹಾಗಾಗಿ
ನನಗೆ ತಿರುಳ್ಗನ್ನಡದಲ್ಲಿಯೇ ಕಥೆಯನ್ನು ಹೇಳು ಎಂದು ಹೇಳುವಾಗ ಕನ್ನಡಂ ಕಸ್ತೂರಿಯಲ್ತೆ ಎಂದಾಗ
ಸಂಸ್ಕೃತ ಒಂದು ಚಿನ್ನದಲ್ಲಿ ಪೋಣಿಸಿದ ರತ್ನದ ಮಣಿ. ಕರಿಮಣಿ ಸರದಲ್ಲಿ ಕೆಂಪುಹವಳವನ್ನು
ಪೋಣಿಸಿದಂತೆ, ಸಂಸ್ಕೃತ ಮತ್ತು ಕನ್ನಡವನ್ನು ರಸಂ ಒಸರುವಂತೆ, ಕಾವ್ಯಲಕ್ಷಣವಿರುವಂತೆ ಅಲ್ಲಲ್ಲಿ
ಬೆರೆಸಿ ಹೇಳಿದಾಗ ಚೆನ್ನಾಗಿರುತ್ತದೆ ಎಂದು ಮುದ್ದಣ ಹೇಳುತ್ತಾನೆ.
೪.ಮುದ್ದಣ – ಮನೋರಮೆಯರ ಸಂವಾದದ ಸ್ವಾರಸ್ಯವನ್ನು ವಿವರಿಸಿ.
ಕನ್ನಡ ಸಾಹಿತ್ಯ
ಸೌರಭದಲ್ಲಿಯೇ ಮುದ್ದಣ-ಮನೋರಮೆಯರ ಸಂವಾದ ಬಹಳ ಸ್ವಾರಸ್ಯಕರವಾದ ಘಟ್ಟವಾಗಿದೆ.
ಅರಮನೆಯಿಂದ ಬಂದ
ಪತಿಯನ್ನು ಉಪಚರಿಸುತ್ತಾ ಬಗೆಯು ಬೇಸರ್ತುದು ಏನಾನುಂ ಒಂದು ನಲ್ಗತೆಯಂ ಪೇಳಾ ಎಂದರೆ ಪ್ರಾಣೇಶ್ವರೀ
ತಡೆಯೇಂ ಇನಿತೊಂದು ಬಯಕೆ ತಲೆದೋರೆ ಆವಗಹನಂ ಎಂದು ಹೇಳುವಾಗ, ಸೀತಾಪಹರಣದ ಕಥೆಯಕೇಳುವ ಬಯಕೆಯೇ
ಎಂದಾಗ ಉಃ ಆನೊಲ್ಲೆಂ ಎನ್ನುತ್ತಾಳೆ ಮೇಣ್ ಆವ ನಲ್ಗತೆಯಂ ಪೇಳೆನೋ ಎಂದು ಗೊಂದಲ ತೋರಿದರೆ ಇಂತೇಕೆ
ಉಸಿರ್ವಯ್ ನಾಡೊಳ್ ಎನಿತ್ತೋ ರಾಮಾಯಣಂಗಳ್ ಒಳವು ನೀ ಕೇಳ್ದುದರೊಳೇ ನಲ್ಮೆದೋರೆ ಕಂಡು ಪೇಳ್ವುದು
ಎಂದು ತನ್ನ ಗಂಡ ಜ್ಞಾನಿ ಎಷ್ಟೆಲ್ಲಾ ತಿಳಿದುಕೊಂಡಿದ್ದಾನೆ ಎಂಬಭಾವ ವ್ಯಕ್ತಪಡಿಸುತ್ತಾಳೆ,.
ಅಂತೆಯೇ ಉಡುಗೊರೆಯ
ವಿಚಾರಬಂದಾಗ ಅರಮನೆಯಲ್ಲಿ ಈರೀತಿಯ ಕಥೆ ಹೇಳಿದರೆ ರತ್ನದ ಕಡಗವನ್ನೋ ಚಿನ್ನದ ಕಂಠೀಹಾರವನ್ನೋ
ಕೊಡುತ್ತಾರೆ ನೀನು ಏನು ಕೊಡುವೆ ಎಂದು ಛೇಡಿಸಿದರೆ ಅದಕ್ಕೆ ತಕ್ಕ ಉತ್ತರವಾಗಿ ಎನ್ನನೇ ಆನೀವೆಂ
ಎಂದು ಹೇಳುತ್ತಾಳೆ ಅವನು ಬಿಡದೆ ಮೊದಲೇ ನಿನ್ನತಂದೆ –ತಾಯಿಗಳು ನಿನ್ನನ್ನು ನನಗೆ ಅರ್ಪಿಸಿದ್ದಾರೆ , ಬೇರೆ ಏನು ಕೊಡುವೆ ಎಂದು ಕಿಟಲೆ
ಮಾಡುತ್ತಾನೆ. ಅವಳೋ ಮಹಾ ಜಾಣೆ ಅರಮನೆಯವರು ಕಥೆ ಕೇಳಿದನಂತರ ಉಡುಗೊರೆ ನೀಡುವರಲ್ಲವೇ ನಾನೂ
ಕಥೆಕೇಳಿ ಅದರ ಶಕ್ತಿಎಷ್ಟಿದೆ ನೋಡಿ ಅದಕ್ಕೆ ತಕ್ಕಂತೆ ಸನ್ಮಾನಿಸುತ್ತೇನೆ ಎಂಬ ಜಾಣ ಉತ್ತರ
ನೀಡುತ್ತಾಳೆ .
ಸಂಸ್ಕೃತದಲ್ಲಿ
ಕಥೆಯನ್ನು ಆರಂಭಿಸಿದೊಡೆ ಈರೀತಿ ಆರಂಭವಾಗುವ
ಕಥೆಗೆ ಎಂತು ಉಡುಗೊರೆ ಯೀವೆನೋ ಎಂದು ರೇಗಿಸುತ್ತಾಳೆ. ಅಲ್ಲದೆ ನೀರಿಳಿಯದ ಗಂಟಲಲಿ ಕಡುಬನ್ನು
ತುರುಕಿದಂತೆ ಆಯಿತು ಸರಳವಾಗಿ ತಿಳಿಕನ್ನಡದಲ್ಲಿ
ಕಥೆ ಹೇಳು ಎಂದು ಕನ್ನಡ ಪ್ರೇಮವ್ಯಕ್ತಪಡಿಸುತ್ತಾಳೆ. ಇವರಿಬ್ಬರ ಸಂವಾದದಲ್ಲಿ
ಪತಿಪತ್ನಿಯರನಡುವಿನ ಸಲ್ಲಾಪ, ಒಬ್ಬರನೂಬ್ಬರು ರೇಗಿಸುವ, ಕೆಣಕುವ, ಮೆಚ್ಚುವ ಭಾವಗಳು ಕಣ್ಣೆದುರು
ತೇಲಿಹೋಗುತ್ತದೆ,
@@@@ OM @@@@
Thanks sir
ReplyDeleteತುಂಬಾ ಚನ್ನಾಗಿದೇ ಸರ್
ReplyDeleteTumba danyavad thank you sir lackdown timenalli odalu sulbavagide😀
ReplyDelete