ಅಭ್ಯಾಸ
೧
೧
|
ಭವತಃ ನಾಮ ಕಿಮ್ ?
|
ನಿಮ್ಮ ಹೆಸರು ಏನು? (ಪುರುಷರಿಗೆ)
|
೨
|
ಭವತ್ಯಾಃ ನಾಮ ಕಿಮ್ ?
|
ನಿಮ್ಮ ಹೆಸರು ಏನು? ( ಸ್ತ್ರೀಯರಿಗೆ)
|
೩
|
ಮಮ ನಾಮ
|
ನನ್ನ ಹೆಸರು
|
೪
|
ಏಷ:
|
ಇವನು
|
೫
|
ಸಃ
|
ಅವನು
|
೬
|
ಏಷಾ
|
ಇವಳು
|
೭
|
ಸಾ
|
ಅವಳು
|
೮
|
ಏತತ್
|
ಇದು
|
೯
|
ತತ್
|
ಅದು
|
ಮಮನಾಮ
ಮಮನಾಮ ನರಸಿಂಹಃ / ಮಮನಾಮ ರಮೇಶಃ /
ಇದೇರೀತಿ ಕೃಷ್ಣಃ , ರಾಮಃ , ರಾಘವಃ,
ಸೋಮಶರ್ಮಃ , ಮಧುಸೂದನಃ , ವೆಂಕಟೇಶ್ವರಃ,
ನಾಗರಾಜಃ , ಗುರುರಾಜಃ ಎಂದು ಹೇಳಬಹುದು.
|
ಮಮನಾಮ ಸಾವಿತ್ರೀ/ ಮಮನಾಮ ಭಾರ್ಗವೀ /
ಇದೇರೀತಿ , ಲಕ್ಷ್ಮೀ , ದೇವೀ , ಲತಾ , ಸೀತಾ , ರಾಧಾ , ಎಂದು ಹೇಳಬಹುದು.
|
ಏಷಃ / ಸಃ
ಏಷಃ ಮಮ ಮಿತ್ರಮ್ – ಈತ/ ಇವನು ನನ್ನ ಗೆಳೆಯ/ಮಿತ್ರ
ಇದೇ ರೀತಿ ಏಷಃ ಕೃಷ್ಣಃ , ಏಷಃ ರಾಮಃ
, ಏಷಃ ರಾಘವಃ, ಏಷಃ ಸೋಮಶರ್ಮಃ , ಏಷಃ ಮಧುಸೂದನಃ ,
ಏಷಃ ವೆಂಕಟೇಶ್ವರಃ, ಏಷಃ ನಾಗರಾಜಃ ,
ಏಷಃ ಗುರುರಾಜಃ ಎಂದು ಹೇಳಬಹುದು.
|
ಸಃ ರಮೇಶಃ – ಅವನು ರಮೇಶ
ಇದೇ ರೀತಿ ಕೃಷ್ಣಃ , ರಾಮಃ , ರಾಘವಃ, ಸೋಮಶರ್ಮಃ , ಮಧುಸೂದನಃ
, ವೆಂಕಟೇಶ್ವರಃ, ನಾಗರಾಜಃ , ಗುರುರಾಜಃ ಎಂದು
ಹೇಳಬಹುದು.
|
ಏಷಾ / ಸಾ
ಏಷಾ ಮಮ ಸಖೀ – ಇವಳು ನನ್ನ ಗೆಳತಿ
ಇದೇ ರೀತಿ , ಏಷಾ ಲಕ್ಷ್ಮೀ , ಏಷಾ
ದೇವೀ , ಏಷಾ ಲತಾ , ಏಷಾ ಸೀತಾ , ಏಷಾ ರಾಧಾ , ಎಂದು ಹೇಳಬಹುದು.
|
ಸಾ ಸರಸ್ವತೀ –
ಅವಳು ಸರಸ್ವತೀ
ಇದೇ ರೀತಿ , ಸಾ ಲಕ್ಷ್ಮೀ , ಸಾ ದೇವೀ
, ಸಾ ಲತಾ , ಸಾ ಸೀತಾ , ಸಾ ರಾಧಾ , ಎಂದು ಹೇಳಬಹುದು.
|
ಏತತ್ / ತತ್
ಏತತ್ –
ಇದು , ಏತತ್ ವಿಮಾನಮ್ , ಏತತ್ ಪುಸ್ತಕಮ್ ಇದೇರೀತಿ ಏತತ್ ವಾಹನಮ್ , ಏತತ್
ಪತ್ರಮ್ , ಏತತ್ ವಾತಾಯನಮ್ , ಏತತ್ ದ್ವಾರಮ್, ಏತತ್ ಲೇಖನಮ್ , ಏತತ್ ಭವನಮ್ ಎಂದು ಹೇಳಬಹುದು.
|
ತತ್ –
ಅದು , ಇದೇರೀತಿ ತತ್ ವಾಹನಮ್ , ತತ್ ಪತ್ರಮ್ , ತತ್ ವಾತಾಯನಮ್ , ತತ್ ದ್ವಾರಮ್, ತತ್ ಲೇಖನಮ್ , ತತ್
ಭವನಮ್ ಎಂದು ಹೇಳಬಹುದು.
|
ಭವತಃ ಗ್ರಾಮಃ?
|
ನಿಮ್ಮ ಗ್ರಾಮ/ಹಳ್ಳಿಯಾವುದು?
|
ಮಮಗ್ರಾಮ
|
ನನ್ನ ಗ್ರಾಮ/ಹಳ್ಳಿ
|
ಭವತಿ (ಸ್ತ್ರೀ)/ಭವಾನ್ (ಪುರುಷ)
ಕುತಃ ಆಗತಾಃ
|
ತಾವು ಎಲ್ಲಿಂದ ಬಂದಿರಿ
|
ಅಹಂ ಗ್ರಾಮತಃ /ನಗರತಃ ಆಗತವಾನ್
|
ನಾನು ಹಳ್ಳಿಯಿಂದ/ ನಗರದಿಂದ ಬಂದೆನು
|
ಭವಾನ್/ಭವತೀ ಕುತ್ರ ಗಚ್ಛತೀ
|
ನೀವು ಎಲ್ಲಿಗೆ ಹೋಗುತ್ತೀರಿ?
|
ಭವಾನ್/ಭವತೀ ಕದಾ ಗಚ್ಛತೀ
|
ನೀವು ಯಾವಾಗ ಹೋಗುತ್ತೀರಿ?
|
ಕದಾ?
|
ಯಾವಾಗ?
|
ಕುತ್ರ?
|
ಎಲ್ಲಿ?
|
ಕಿಮರ್ಥಂ?
ಭವಾನ್ ಕಿಮರ್ಥಂ ನಾ ಆಗತವಾನ್?
|
ಏಕೇ/ ಏತಕ್ಕಾಗಿ?
ನೀವು ಏಕೆ ಬರಲಿಲ್ಲ?
|
ಕುತಃ?
|
ಎಲ್ಲಿಂದ?
|
ಕಿಂ?
|
ಏನು?
|
ಕತಿ? ಏತತ್ ಕತಿ ರೂಪ್ಯಕಾನಿ?
|
ಎಷ್ಟು? ಇದಕ್ಕೆ ಎಷ್ಟು ರೂಪಾಯಿ?
|
(ಪುರುಷ) ಕಃ?/ (ಸ್ತ್ರೀ) – ಕಾ
|
ಯಾರು?
|
ಕುತಃ –
ಎಲ್ಲಿಂದ
(ಪುರುಷರು) ಅಹಮ್
ಗ್ರಾಮತಃ ಆಗತವಾನ್, ನಗರತಃ ಆಗತವಾನ್, ಮಂದಿರತಃ ಆಗತವಾನ್, ಶಾಲಾತಃ ಆಗತವಾನ್, ಆಪಣತಃ
ಆಗತವಾನ್ , ಗೃಹತಃ ಆಗತವಾನ್
|
(ಸ್ತ್ರೀಯರು) ಅಹಮ್ ಗ್ರಾಮತಃ ಆಗತವತೀ, ನಗರತಃ ಆಗತವತೀ, ಮಂದಿರತಃ
ಆಗತವತೀ, ಶಾಲಾತಃ ಆಗತವತೀ, ಆಪಣತಃ ಆಗತವತೀ , ಗೃಹತಃ ಆಗತವತೀ
|
ಕುತ್ರ –
ಎಲ್ಲಿಗೆ
(ಸ್ತ್ರೀ/ಪುರುಷರಿಬ್ಬರಿಗೂ)
ಅಹಮ್ ಗ್ರಾಮಮ್ ಗಚ್ಛಾಮಿ , ಅಹಮ್ ನಗರಮ್ ಗಚ್ಛಾಮಿ , ಅಹಮ್
ಮಂದಿರಂ ಗಚ್ಛಾಮಿ , ಅಹಮ್ ಆಪಣಂ ಗಚ್ಛಾಮಿ,
ಅಹಮ್ ಶಾಲಾಂ ಗಚ್ಛಾಮಿ , ಅಹಮ್ ಗೃಹಂ ಗಚ್ಛಾಮಿ.
|
ಕದಾ –
ಯಾವಾಗ
(ಸ್ತ್ರೀ/ಪುರುಷರಿಬ್ಬರಿಗೂ)
ಅಹಂ ಪ್ರಾತಃ ಗಚ್ಛಾಮಿ , ಅಹಂ ಸಾಯಂ
ಗಚ್ಛಾಮಿ , ಅಹಂ ಆನಂತರಂ ಗಚ್ಛಾಮಿ , ಅಹಂ ಇದಾನೀಂ ಗಚ್ಛಾಮಿ, ಅಹಂ ಶ್ವಃ ಗಚ್ಛಾಮಿ, ಅಹಂ ಪರಶ್ವಃ
ಗಚ್ಛಾಮಿ, ಅಹಂ ಪ್ರಪರಶ್ವಃ ಗಚ್ಛಾಮಿ
|
ಕಿಂ –
ಏನು
ಏತತ್ ಕಿಂ ಇದು ಏನು? ಕಿಂ ಏಷಃ ರಮೇಶಃ
ವಾ? - ಇವನು ರಮೇಶನೇ?
ಕಿಂ ಏತತ್ ಪನಸ ಫಲಂ ವಾ? ಇದು
ಹಲಸಿನಹಣ್ಣೇ?
|
ಕಃ –
ಯಾರು? (ಪುರುಷರಿಗೆ)
ಏಷಃ ಕಃ? ಇವನು ಯಾರು?, ಕಃ
ಸುರೇಶಃ ? ಯಾರು ಸುರೇಶ?
|
ಕಾ –
ಯಾರು (ಸ್ತ್ರೀಯರಿಗೆ)
ಏಷಾ ಕಾ? - ಇವಳು ಯಾರು? ಕಾ ಸರಸ್ವತೀ? - ಯಾರು ಸರಸ್ವತೀ?
|
ಕತಿ –
ಎಷ್ಟು
ಏತಸ್ಯ ಮೂಲ್ಯಂ ಕತಿ? ಇದರ ಬೆಲೆ
ಎಷ್ಟು? ಕತಿ ಪತ್ರಿಕಾನಿ ಸಂತಿ ? ಎಷ್ಟು
ಪತ್ರಿಕೆಗಳು ಇವೆ?
ಕತಿ ಜನಾಃ ಸಂತಿ ? ಎಷ್ಟು ಜನರು ಇದ್ದಾರೆ?
|
ಇದಾನೀಂ
|
ಈಗ
|
ಅನಂತರಂ
|
ಆಮೇಲೆ
|
ಶ್ವಃ
|
ನಾಳೆ
|
ಪರಶ್ವಃ
|
ನಾಡಿದ್ದು
|
ಪ್ರ ಪರಶ್ವಃ
|
ಆಚೆ ನಾಡಿದ್ದು
|
ಅದ್ಯ
|
ಇವತ್ತು
|
ಹ್ಯಃ
|
ನಿನ್ನೆ
|
ಪರಹ್ಯಃ
|
ಮೊನ್ನೆ
|
ಪ್ರಪರಹ್ಯಃ
|
ಆಚೆಮೊನ್ನೆ
|
ತ್ವರಿತಃ
|
ತಕ್ಷಣ
|
ಸಂತಿ
|
ಇವೆ
|
ಅಸ್ತಿ
|
ಇದೆ
|
ಅಹಂ ನಾ ಜಾನಾಮಿ
|
ನನಗೆ ತಿಳಿದಿಲ್ಲ
|
ಕಿಮರ್ಥಂ ನ ಭವತಿ
|
ಏಕೆ ಆಗುವುದಿಲ್ಲ?
|
ಅಥಃ ಕಿಮ್
|
ಮತ್ತೇನು?
|
ನೈವ ಖಲು
|
ಇಲ್ಲ ಅಲ್ವಾ
|
ಆಗಚ್ಛತು
|
ಬನ್ನಿ
|
ಉಪವಿಷತು
|
ಕುಳಿತುಕೊಳ್ಳಿ
|
ಜ್ಞಾತಂ ವಾ
|
ತಿಳಿಯಿತೇ?
|
ಕಥಂ ಆಸೀತ್
|
ಹೇಗಿತ್ತು?
|
ತದ್ ವಾ ಹ್ಯಃ ಏವ ಸಮಾಪ್ತಂ
|
ಅದಾ? ನೆನ್ನೆಯೇ ಮುಗಿಯಿತು.
|
ಇದಾನೀಂ ಏವ
|
ಈಗತಾನೇ
|
ಆಮ್ ಇದಾನೀಂ
|
ಹೌದು ಈಗಲೇ
|
ಪ್ರಾಪ್ತಂ ಕಿಲ
|
ಸಿಕ್ಕಿತು ತಾನೇ?
|
ಕಸ್ಮಿನ್ ಸಮಯೇ
|
ಯಾವಸಮಯದಲ್ಲಿ?
|
ಪಂಚವಾದನೇ
|
ಐದು ಗಂಟೆಗೆ
|
ಅವಶ್ಯಕಂ ನ ಆಸೀತ್
|
ಅವಶ್ಯಕತೆ ಇರಲಿಲ್ಲ
|
ಮಹಾನ್ ಆನಂದಃ
|
ತುಂಬಾ ಸಂತೋಷ
|
ಪ್ರಯತ್ನಂ ಕರೋಮಿ
|
ಪ್ರಯತ್ನ ಮಾಡುತ್ತೇನೆ
|
ನ ಶಕ್ಯತೇ ಭೋ
|
ಸಾಧ್ಯವಿಲ್ಲ ಮಾರಾಯಾ
|
ತಥಾ ನಾ ವದತು
|
ಹಾಗೆ ಹೇಳಬೇಡಿ
|
ಕದಾ ದದಾತಿ
|
ಯಾವಾಗ ಕೊಡುತ್ತೀರಿ
|
ಅಹಂ ಕಿಂ ಕರೋಮಿ
|
ನಾನು ಏನು ಮಾಡಲಿ?
|
ಕತಿ ಜನಾಃ ಸಂತಿ
|
ಎಷ್ಟು ಜನ ಇದ್ದಾರೆ?
|
ಪುನಃ ಆಗಚ್ಛತು
|
ಮತ್ತೆ ಬನ್ನಿ
|
ಅವಶ್ಯಂ ಆಗಚ್ಛಾಮಿ
|
ಅವಶ್ಯವಾಗಿ ಬರುತ್ತೇನೆ
|
ಭವಾನ್/ಭವತಿ ಕಥಂ ಅಸ್ತಿ
|
ನೀವು ಹೇಗಿದ್ದೀರಿ?
|
ಗೃಹೇ ಸರ್ವಂ ಕುಶಲಂ ವಾ?
|
ಮನೆಯಲ್ಲಿ ಎಲ್ಲರೂ ಕ್ಷೇಮವೇ?
|
ಆಮ್ ಸರ್ವಂ ಕುಶಲಂ
|
ಹೌದು ಎಲ್ಲರೂ ಚೆನ್ನಾಗಿದ್ದಾರೆ/
ಕ್ಷೇಮ.
|
ಕಾ ವಾರ್ತಾ?
|
ಏನು ವಿಶೇಷ?
|
ಭವಾನೇವ ಶ್ರಾವಯತು
|
ನೀವೇ ಹೇಳಬೇಕು
|
ಕಿಂ ಮೇಲನಂ ಬಹು ವಿರಲಂ ಜಾತಮ್?
|
ಏನಪ್ಪ ಸಿಗೋದು ತುಂಬಾ ಕಡಿಮೆ ಆಗಿದೆ?
ಏನು ನಿಮ್ಮ ಭೇಟಿ ತುಂಬಾ
ವಿರಳವಾಗಿದೆ?
|
ಜಲಂ ಅವಶ್ಯಕಂ ವಾ
|
ನೀರು ಬೇಕೆ?
|
ಮಾಸ್ತು / ನೈವ
|
ಬೇಡ , ಅವಶ್ಯವಿಲ್ಲ
|
ಕಥಮ್ ಆಗಮನಮ್ ಅಭವತ್
|
ಹೇಗೆ ಬರೋಣವಾಯಿತು
|
ಮಾರ್ಗಃ ವಿಸ್ಮೃತಃ ಕಿಮ್?
|
ದಾರಿ ಮರೆತು ಹೋಯಿತೇ?
|
ಚಾಯಂ/ಜಲಂ ಪಿಬತಿ ಕಿಮ್
|
ಟೀ/ನೀರು ಕುಡಿಯುತ್ತೀರಾ?
|
ನೈವ ಇದಾನೀಮ್ ಏವ ಪೀತ್ವಾ ಆಗಚ್ಛಾಮಿ
|
ಬೇಡ ಈಗತಾನೇ ಕುಡಿದು ಬಂದೆ.
|
ಶೈತ್ಯಂ ಅಸ್ತಿ ಸ್ವಲ್ಪಂ ಚಾಯಂ ಪಿಬತು
|
ಚಳಿಯಿದೆ, ಸ್ವಲ್ಪ ಟೀ ಕುಡಿಯಿರಿ.
|
ಭವತು ಕಿಂಚಿತ್ ದದಾತು
|
ಆಗಲಿ ಸ್ವಲ್ಪ ಕೊಡಿ
|
ಇದಾನೀಂ ಮಯಾ ಗಂತವ್ಯಂ
|
ನಾನು ಈಗಲೇ ಹೋಗಬೇಕು
|
ತಿಷ್ಠತು, ಭೋಜನಂ ಕೃತ್ವಾ ಗಚ್ಛತು
|
ನಿಲ್ಲಿ, ಊಟಮಾಡಿಕೊಂಡು ಹೋಗಿರಿ
|
ನ ಇದಾನೀಂ ಭೋಜನಂ ನ ಕರೋಮಿ
|
ಇಲ್ಲ ಈಗ ಊಟ ಮಾಡುವುದಿಲ್ಲ
|
ನ ಪುನಃ ಕದಾಚಿತ್ ಖಾದಾಮಿ
|
ಬೇಡ, ಇನ್ನೊಮ್ಮೆ ಯಾವಾಗಲಾದರೂ
ಊಟಮಾಡುತ್ತೇನೆ
|
ಪುನಃ ಕದಾ ಮೇಲಿಷ್ಯಾಮಃ
|
ಮತ್ತೆ ಯಾವಾಗ ಸೇರೋಣ/ ಭೇಟಿಯಾಗೋಣ
|
|
|
ಭವಾನ್ ಕಿಮ್ ಕಾರ್ಯಂ ಕುರ್ವನ್
ಅಸ್ತಿ?
|
ನೀವು ಯಾವ ಕೆಲಸ ಮಾಡುತ್ತಿದ್ದೀರಿ
|
ಅಹಂ ಆಚಾರ್ಯಃ ಅಸ್ಮಿ
|
ನಾನು ಅಧ್ಯಾಪಕನಾಗಿದ್ದೇನೆ
|
ಅಹಂ ವೈದ್ಯಃ ಅಸ್ಮಿ
|
ನಾನು ವೈದ್ಯನಾಗಿದ್ದೇನೆ.
|
ಅಹಂ ತು ಯಂತ್ರಾಗಾರೆ ಕಾರ್ಯಮ್ ಕರೋಮಿ
|
ನಾನು ಕಾರ್ಖಾನೆಯಲ್ಲಿ ಕೆಲಸ
ಮಾಡುತ್ತೇನೆ
|
ಕೃಪಯಾ ಪುಸ್ತಕಂ ದದಾತು
|
ದಯಮಾಡಿ ಪುಸ್ತಕವನ್ನು ನೀಡಿರಿ/ಕೊಡಿ
|
ರಮೇಶಃ ಅಸ್ತಿ ಕಿಮ್?
|
ರಮೇಶ ಇದ್ದಾನೆಯೇ? / ಇದ್ದಾರೆಯೇ?
|
ಕಿಮರ್ಥಂ ಏತಾವಾನ್ ವಿಲಂಬಃ
|
ಏಕೆ ಇಷ್ಟೋಂದು ತಡವಾಯಿತು?
|
ಕಿಮಪಿ ನ ಭವತಿ
|
ಏನೂ ಆಗಲ್ಲ
|
ಸ್ವೀಕರೋತು
|
ತೆಗೆದುಕೊಳ್ಳಿ/ ಸ್ವೀಕರಿಸಿ
|
ಭೋಜನಂ ಸಿದ್ಧಂ
|
ಊಟ ಸಿದ್ಧವಾಗಿದೆ
|
ಪರಿವೇಷಯತು
|
ಬಡಿಸಿರಿ
|
ಪರ್ಯಾಪ್ತಮ್
|
ಸಾಕು
|
ಸ್ವಲ್ಪಂ ದದಾತು
|
ಸ್ವಲ್ಪ ನೀಡಿರಿ
|
ಅನ್ನಂ
|
ಅನ್ನ
|
ರೋಟಿಕಾ
|
ರೊಟ್ಟಿ
|
ಶಾಕಂ
|
ತರಕಾರಿ
|
ಸೂಪಃ
|
ತೊವ್ವೆ/ಸಾರು
|
ಲವಣಂ
|
ಉಪ್ಪು
|
ಓದನಂ
|
ಅನ್ನಂ
|
ದುಗ್ಧಮ್(ಕ್ಷೀರಂ)
|
ಹಾಲು
|
ದಧಿ
|
ಮೊಸರು
|
ಪಾಯಸಂ
|
ಪಾಯಸ
|
ಮಿಷ್ಟಾನ್ನಮ್
|
ಸಿಹಿ
|
ಭೋಜನಮ್ ಬಹು ಸ್ವಾದಿಷ್ಠಂ ಅಸ್ತಿ
|
ಊಟ ಬಹಳ ರುಚಿಯಾಗಿ ಇದೆ
|
ಕಿಮ್ ಅಭವತ್
|
ಏನಾಯಿತು?
|
ಜ್ವರಃ ಕಾಸಃ ಶಿರೋವೇದನಮ್
|
ಜ್ವರ, ಕೆಮ್ಮು, ತಲೆನೋವು.
|
ವೈದ್ಯಂ ದರ್ಶಯತು
|
ವೈದ್ಯರಿಗೆ ತೋರಿಸಿ
|
ಔಷಧಂ ಸ್ವೀಕೃತವಾನ್
|
ಔಷಧಿಯನ್ನು ತೆಗೆದುಕೊಂಡಿದ್ದೇನೆ.
|
ತತ್ರ ಸಮ್ಯಕ್ ಪಶ್ಯತ್
|
ಅಲ್ಲಿ ಸರಿಯಾಗಿ ನೋಡಿರಿ
|
ಸಾ ಕಿಮ್ ಪೃಚ್ಛತಿ
|
ಅವಳು/ಅವರು ಏನು ಕೇಳಿದ್ದು
|
ಅಹಂ ಭವಂತಂ ನ ತ್ಯಜಾಮಿ
|
ನಾನು ನಿಮ್ಮನ್ನು ಬಿಡುವುದಿಲ್ಲ.
|
ಫಲಂ ತು ಖಾದತು
|
ಹಣ್ಣಾದರು ತಿನ್ನು
|
ತಿಷ್ಠತು ಇದಾನೀಮೇವ ದದಾಮಿ
|
ನಿಲ್ಲು ಈಗಲೇ ಕೊಡುತ್ತೇನೆ.
|
ಅಹಂ ತಂ ಪ್ರೇಷಯುಷ್ಯಾಮಿ
|
ನಾನು ಅವರನ್ನು/ಅವನನ್ನು
ಕಳುಹಿಸುತ್ತೇನೆ
|
ಮಾತಾ ವಸ್ತ್ರಂ ಪ್ರಕ್ಷಾಲಯತಿ
|
ಅಮ್ಮ ಬಟ್ಟೆಗಳನ್ನು ಒಗೆಯುತ್ತಾಳೆ
|
ಭವಾನ್ ಪ್ರಾತಃ ಕದಾ ಉತ್ತಿಷ್ಠತಿ
|
ನೀನು/ನೀವು ಬೆಳಗ್ಗೆ ಎಷ್ಟೋತ್ತಿಗೆ
ಏಳುತ್ತೀರಿ
|
ಭವತಃ ನಾಮ ನ ಸ್ಮರಾಮಿ
|
ನಿಮ್ಮ ಹೆಸರು ನೆನಪಿಗೆ ಬರುತ್ತಿಲ್ಲ
|
This can be used for all learners
ReplyDeleteSir plz create in PDF file
ReplyDelete