Model 1 kannada question paper
1. ಒಂದುವಾಕ್ಯದಲ್ಲಿ ಉತ್ತರಿಸಿ
: 10X1=10
1.
ಉರಿಲಿಂಗಪೆದ್ದಿಯ
ಅಂಕಿತ ಯಾವುದು?
2.
ಜಾಲಿಯಮರದಂತೆ
ಇರುವವರು ಯಾರು?
3.ಶಿಲುಬೆ ಏರಿದವರು ಯಾರು?
4.ಎಣ್ಣೆಯಲ್ಲಿ ನೆನೆದ ಬತ್ತಿ ಹೇಗೆ
ಕಾಣುತ್ತದೆ?
5. ಬಸಲಿಂಗ ಯಾವುದರಿಂದ
ಮುಕ್ತನಾಗಿದ್ದ?
6.ಮನುಕುಲದ ಪತನಕ್ಕೆ ಕಾರಣ ಯಾವುದು?
7. ಕಲಿಯುಗದ ಅಮೃತ ಯಾವುದು?
8. ಕೊಡಲಿಯ ಆಕಾರ ಹೇಗಿತ್ತು?
9.ನಿರೂಪಕರ ಇಕಾಲಜಿಸ್ಟ್ ಗೆಳೆಯ ಯಾರು?
10. ಪೋಸ್ಟ್ ಮೆನ್ ಜಬ್ಬಾರನಿಗೆ ಒದಗಿದ
ತೊಂದರೆಗಳೇನು?
ಆ – ವಿಭಾಗ
1. ನಾಲ್ಕು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ 2X4=8
11.ರಾವಣ ತನ್ನ ಆಪ್ತರನ್ನು ಕುರಿತು
ಏನೆಂದು ಹೇಳಿದನು?
12.ಹಡೆದ ತಂದೆ –ತಾಯಿಯರ ಮಹತ್ವ ತಿಳಿಸಿರಿ.
13.ಕವಿ ಬೇಂದ್ರೆ ಮಕ್ಕಳಿಗೆ ಬಾಳಿನ ಬಗ್ಗೆ
ಕೊಡುವ ಸಂದೇಶವೇನು?
14.ಮುದುಕ ಏನೆಂದು ಗೋಗರೆಯುತ್ತಾನೆ?
15 ಜನರನ್ನು ಕವಯಿತ್ರಿ ಯಾವ
ಯಾವುದರಿಂದ ಪಾರು ಮಾಡುವುದಾಗಿ ಹೇಳಿದ್ದಾರೆ?
2. ಮೂರು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ 2X3=6
16. ಬಸಲಿಂಗನ ಕಣ್ಣನ್ನು ಪರೀಕ್ಷಿಸಿದ
ವೈದ್ಯರು ಏನೆಂದು ಹೇಳಿದರು?
17. ಕಮಲಾಮೇಡಂ ವೈದ್ಯರ ಯಾವ ಸಲಹೆಯನ್ನು
ರೂಢಿಸಿಕೊಂಡರು?
18. ತ್ರಿಭಾಷಾ ಸೂತ್ರದ ಬಳಕೆ ಹೇಗಿರಬೇಕು?
19. ಕಲಾಂ ಮೇಷ್ಟ್ರು ಹೇಳಿದ ಯಶಸ್ಸಿನ
ಪಂಚಾಕ್ಷರಿಮಂತ್ರ ಯಾವುದು?
3. ಮೂರು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ
2X3=6
20. ನಮ್ಮಕಡೆ ಕೆಮ್ಮುವುದು ಕಾಲಿಂಗ್
ಬೆಲ್ ಇದ್ದಹಾಗೆ ಎಂದು ನಿರೂಪಕರು ಹೇಳುವುದು ಏಕೆ?
21.ಕೃಷ್ಣೇಗೌಡರ ಆನೆ ಹುಟ್ಟಿಬೆಳೆದ ಬಗೆ
ಹೇಗೆ?
22.ಕಾಡಪ್ಪಶೆಟ್ಟರು ಯಾವ ವರ್ತಮಾನವನ್ನು
ಮುಟ್ಟಿಸಿದರು?
23. ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್
ಕೃಷ್ಣರ ಸಾವಿಗೆ ಕಾರಣವೇನು?
ಇ- ವಿಭಾಗ
1. ಎರಡನ್ನು
ಕುರಿತು ಸಂದರ್ಭ ಸೂಚಿಸಿ ವಿವರಿಸಿ. 2X3=6
24.ಅರ್ಥ ರೇಖೆಯಿದ್ದಲ್ಲಿ ಫಲವೇನು,
ಆಯುಷ್ಯರೇಖೆ ಇಲ್ಲದನ್ನಕ್ಕರ
25.ಲೋಕದೊಳ್ ಮಡಿಯೇ ನಿರ್ಮಲ ಚಿತ್ತವೈ
26. ಕುಳಿತು ಕೆಮ್ಮುವ ಪ್ರಾಣಿ
2. ಒಂದನ್ನು
ಕುರಿತು ಸಂದರ್ಭ ಸೂಚಿಸಿ ವಿವರಿಸಿ. 3X1=3
27. ನೀರಿಳಿಯದ ಗಂಟಲೊಳ್ ಕಡುಬಂ
ತುರುಕಿದಂತಾಯ್ತು
28. ಅನಕ್ಷರಸ್ಥರ ಪಾರ್ಲಿಮೆಂಟು
3. ಒಂದನ್ನು
ಕುರಿತು ಸಂದರ್ಭ ಸೂಚಿಸಿ ವಿವರಿಸಿ. 3X1=3
29. ನಂಗೇನು ನಾಯಿಗಳನ್ನು ಕಂಡ್ರೆ
ಪ್ರೀತಿನಾ ಸ್ವಾಮಿ
30.ಆನೆಜೊತೆ ಮಲಗ್ತಿಯಾ ನೀನ್ಯಾವ ಗಂಡಸು
ಈ – ವಿಭಾಗ
1. ಮೂರು
ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X3=12
31.ಉರಿಲಿಂಗಪೆದ್ದಿಯ ವಚನಗಳಲ್ಲಿನ
ಆಶಯವೇನು?
32. ಭೀಮ ದ್ರೌಪದಿಯನ್ನು ಹೇಗೆ
ಸಂತೈಸಿದನು?
33.ಮುದುಕಿಯ ತಳಮಳ ಒಂದು ಹೂ ಹೆಚ್ಚಿಗೆ ಇಡುತೀನಿ ಕವಿತೆಯಲ್ಲಿ ಹೇಗೆ
ವ್ಯಕ್ತವಾಗಿದೆ?
34.ಹತ್ತಿ...ಚಿತ್ತ...ಮತ್ತು...
ಕವಿತೆಯ ಸ್ವಾರಸ್ಯವನ್ನು ಚರ್ಚಿಸಿರಿ.
2. ಎರಡು
ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X2=8
35.ಅಂತರಾಷ್ಟ್ರೀಯ
ವಿದ್ಯಾಮಾನ್ಯಗಳಿಂದಾಗಿ ವಾಲ್ ಪರೈಗೆ ಒದಗಿದ ಸಮಸ್ಯೆಗಳೇನು?
36.ಕನ್ನಡಿಗರೆನ್ನಿಸಿಕೊಳ್ಳಲು ಯಾವ
ಯೋಗ್ಯತೆಯ ಪ್ರಶ್ನೆಗಳು ನಮ್ಮನ್ನು ಚುಚ್ಚಬೇಕು?
ವಿವರಿಸಿ.
37. ದಣಿ ಹಾಗೂ ಹೊಳೆಯ ನಡುವಿನ
ಸಮರವನ್ನು ಚಿತ್ರಿಸಿ
3. ಎರಡು
ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X2=8
38.ಅರಣ್ಯ ಇಲಾಖೆಯ ಶತ್ರುಗಳ
ಕಾರ್ಯಭಾರವನ್ನು ನಾಗರಾಜ ವಿವರಿಸಿದ್ದು ಹೇಗೆ?
39. ದುರ್ಗಪ್ಪನಿಗೆ ಲೈನ್ ಮೆನ್ ಕೆಲಸ
ರೋಸಿಹೋಗಲು ಕಾರಣವೇನು?
40.ಆನೆಯು ಬಾಯಿಲ್ಲದ ಜನರ
ಸಂಕೇತವಾಗಿರುವುದನ್ನು ವಿಶ್ಲೇಷಿಸಿ,
ಉ – ವಿಭಾಗ
1. ಒಂದು
ಪದ್ಯಭಾಗದ ಭಾವಾರ್ಥ ಬರೆಯಿರಿ. 5X1=5
41. ಕದಡಿದ ಸಲಿಲಂ ತಿಳಿವಂ
ದದೆ
ತನ್ನಿಂ ತಾನೆ ತಿಳಿದ ದಶವದನಂಗಾ
ದುದು
ವೈರಾಗ್ಯಂ ಸೀತೆಯೊ
ಳುದಾತ್ತನೊಳ್
ಪುಟ್ಟದಲ್ತೆ ನೀಲಿರಾಗಂ
42. ಇರಿಯಲ್ಬಲ್ಲೊಡೆ ವೀರನಾಗು ಧರೆಯೊಳ್
ನಾನಾ ಚಮತ್ಕಾರಮಂ|
ಅರಿಯಲ್ಬಲ್ಲೊಡೆ
ಮಂತ್ರಿಯಾಗು ವಿಭುವಾಗಾರೆಂದೊಡಂ ಕೋಪಮಂ||
ತೊರೆಯಲ್ಬಲ್ಲೊಡೆ
ಯೋಗಿಯಪ್ಪುದರಿ ಷಡ್ವರ್ಗಂಗಳಂ ಗೆಲ್ವೊಡೇ|
ತೆರ
ಬಲ್ಲರ್ಪೊಣೆಯಪ್ಪುದೈ ಹರಹರಾ ಶ್ರೀ ಚನ್ನ ಸೋಮೇಶ್ವರಾ ||
2. ಆರು
ಪ್ರಶ್ನೆಗಳಿಗೆ ಸೂಚನೆಗೆ ಅನುಗುಣವಾಗಿ ಉತ್ತರಿಸಿ. 2X6=12
43. ಪದಗಳ ಅರ್ಥ ಬರೆಯಿರಿ : 1. ಮಕುಟ , 2. ಕುಸುಮ
44. ಈ ಪದಗಳ ನಾನಾರ್ಥ ಬರೆಯಿರಿ : 1. ಅಡಿ , 2. ಹಿಂಡು
45. ತತ್ಸಮ ತದ್ಭವಗಳನ್ನು ಬರೆಯಿರಿ : 1. ದೃಷ್ಟಿ, 2. ಆಕಾಶ
46. ಈ ಪದಗಳ ವಿಭಕ್ತಿಪ್ರತ್ಯಯಗಳನ್ನು
ಗುರುತಿಸಿ : 1. ಪರಿಸರದಲ್ಲಿ , 2. ಸಮರದ
47. ಈ ನುಡಿಗಟ್ಟುಗಳನ್ನು ವಾಕ್ಯದಲ್ಲಿ
ಬಳಸಿರಿ : 1.
ತಲೆತಿರುಗು, 2. ತಲೆಕೊಡವು
48.ಈ ಪದಗಳಲ್ಲಿರುವ ಗುಣವಾಚಕಗಳನ್ನು
ಗುರುತಿಸಿ : 1.
ಕಿರುಹಾದಿ
,
2.
ಶುದ್ಧನೀರು
49. ಈ ಪದಗಳ ಧಾತು ಗುರುತಿಸಿ ಬರೆಯಿರಿ.
: ಸೆಳೆದಿದೆ. ಹೋಯಿತು.
3. ಪ್ರಬಂಧ
ರಚನೆ : ಒಂದನ್ನು ಕುರಿತು ಪ್ರಬಂಧ ಬರೆಯಿರಿ 5X1=5
50.
ಜಾತಿ – ಭಾರತೀಯ ಸಮಾಜಕ್ಕೆ ಅಂಟಿದ ಶಾಪ.
51.ಕನ್ನಡ ನಾಡು –ನುಡಿ ಎದುರಿಸುತ್ತಿರುವ ಸಮಸ್ಯೆಗಳು
4. ಪತ್ರಲೇಖನ
: ಯಾವುದಾದರೂ ಒಂದು ಪತ್ರ 4X1=4
52. ನಿಮ್ಮ
ಹುಟ್ಟುಹಬ್ಬಕ್ಕೆ ಆಹ್ವಾನಿಸಿ ನಿಮ್ಮ ಗೆಳೆಯ/ಗೆಳತಿಗೆ ಒಂದು ಪತ್ರ ಬರೆಯಿರಿ.
53. ನಿಮ್ಮ ಊರಿಗೊಂದು
ಗ್ರಂಥಾಲಯ ನೀಡುವಂತೆ ಪುರಸಭೆ ಅಧಿಕಾರಿಗಳಿಗೆ ಪತ್ರ ಬರೆಯಿರಿ.
5. ಈ ಕೆಳಗಿನ
ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ. 4X1=4
54. ಕಾಸಿದ್ರೆ ಕೈಲಾಸ
55. ಬೆಳ್ಳಗಿರುವುದೆಲ್ಲಾ ಹಾಲಲ್ಲ
******
ಮಾದರಿ ಪ್ರಶ್ನೆಪತ್ರಿಕೆ
1. ಒಂದುವಾಕ್ಯದಲ್ಲಿ ಉತ್ತರಿಸಿ
: 10X1=10
1.
ರಾವಣನ
ಎದುರು ಪ್ರತ್ಯಕ್ಷವಾದ ದೇವತೆ ಯಾರು?
2.ಜಾಲಿಯ ಮುಳ್ಳು ಹೇಗೆ ಆವರಿಸುತ್ತದೆ?
3.ಕುಳಿತು ಕೆಮ್ಮುವ ಪ್ರಾಣಿ ಯಾರು?
4.ಜನರಿಗೆ ಯಾವುದಕ್ಕೆ ಗತಿಯಿಲ್ಲ?
5. ಕನ್ನಡದ ಮೂಲಕ ಕಲಿತು ಶ್ರೇಷ್ಠ
ವಿಜ್ಞಾನಿಯಾದವರು ಯಾರು?
6.ಧಣಿಗಲ ಮನೆಯ ಪಕ್ಕದಲ್ಲಿ ಯಾವ ಹೊಳೆ
ಹರಿಯುತ್ತಿತ್ತು?
7. ಕಲಿಯುಗದ ಅಮೃತ ಯಾವುದು?
8. ಕೊಡಲಿಯ ಆಕಾರ ಹೇಗಿತ್ತು?
9.ಕೃಷ್ಣೇಗೌಡರ ಆನೆ ಮೊದಲು ಯಾವ
ಮಠದಲ್ಲಿ ಇತ್ತು?
10. ಆನೆ ಶಾಸ್ತ್ರದವನು ಏನೆಂದು ಭವಿಷ್ಯ
ನುಡಿದಿದ್ದನು?
ಆ – ವಿಭಾಗ
1. ನಾಲ್ಕು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ 2X4=8
11.ತಾನು ಘೋರತರ ವಿಷ ಕುಡಿಯುವುದಾಗಿ
ದ್ರೌಪದಿ ಏಕೆ ಹೇಳುತ್ತಾಳೆ?
12.ಧನ ಮತ್ತು ಸುತನ ವಿಷಯದಲ್ಲಿ
ಸೋಮನಾಥನ ಅಭಿಪ್ರಾಯವೇನು?
13.ಮುಂಬೈನ ಅವಸರದ ಜೀವನ ಚಿತ್ರಕ್ಕೆ
ಎರಡು ಉದಾಹರಣೆ ಕೊಡಿ?
14.ಶಿಲುಬೆಗೆ ಏರಿಸಿದವರ ಗುಣಗಳು ಇಂದು
ಯಾವ ವೇಷ ತಾಳಿವೆ?
15. ಆತ್ಮಕ್ಕೆ ಕಮಟು ಹತ್ತುವುದು
ಎಂದರೇನು?
2. ಮೂರು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ 2X3=6
16. ಕೊನೆಯಲ್ಲಿ ಬಸಲಿಂಗನಿಗೆ ಏನೆಂದು
ನಿಶ್ಚಿತವಾಗತೊಡಗಿತು?
17. ಮಾರ್ಷ್ ನನ್ನು ಕಂಡು ಆದಿವಾಸಿಗಳು
ಹೇಗೆ ಪ್ರತಿಕ್ರಿಯಿಸಿದರು?
18. ಸೀತಾಳ ಬಯಕೆ ನಂಬಿಕೆಗಳು
ಹೇಗಿದ್ದವು?
19. ಕಲಾಂ ಅವರ ಬದುಕಿನ ಮಂತ್ರ ಯಾವುದು?
3. ಮೂರು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ
2X3=6
20. ಸೊರಗಿದ್ದ ಆನೆಯನ್ನು
ಕೃಷ್ಣೇಗೌಡರು ಹೇಗೆ ಸಾಕಿದರು?
21.ಕೃಷ್ಣೇಗೌಡರ ಆನೆ ಹುಟ್ಟಿಬೆಳೆದ ಬಗೆ
ಹೇಗೆ?
22.ನಾಗರಾಜ ದುರ್ಗಪ್ಪನ ಮೇಲೆ ಏನೆಂದು
ರೇಗಿದನು?
23. ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್
ಕೃಷ್ಣರ ಸಾವಿಗೆ ಕಾರಣವೇನು?
ಇ- ವಿಭಾಗ
1. ಎರಡನ್ನು
ಕುರಿತು ಸಂದರ್ಭ ಸೂಚಿಸಿ ವಿವರಿಸಿ. 2X3=6
24.ಪುಷ್ಪವಿಲ್ಲದೆಪರಿಮಳವನರಿಯಬಹುದೆ
25.ಕೂಳುಗೇಡಿಂಗೊಡಲ ಹೊರುವಿರಿ
26. ತುಂಬಿರುವ ತನಕ ತುಂತುಂಬಿ
ಕುಡಿಯಬೇಕು.
2. ಒಂದನ್ನು
ಕುರಿತು ಸಂದರ್ಭ ಸೂಚಿಸಿ ವಿವರಿಸಿ. 3X1=3
27. ಅವರು ನನ್ನಷ್ಟೇ ಒಳ್ಳೆಯ ಡಾಕ್ಟರು
ಏನೂ ತಪ್ಪು ತಿಳಿಯಬೇಡ
28. ಪಾವಕ್ಕಿ ಕಮ್ಮಿ ಮಾಡಿದರೆ ಸುಮ್ಮನೆ
ಇರ್ತೀಯೇನೋ ನೀನು?
3. ಒಂದನ್ನು
ಕುರಿತು ಸಂದರ್ಭ ಸೂಚಿಸಿ ವಿವರಿಸಿ. 3X1=3
29. ನಮ್ಮಕಡೆ ಕೆಮ್ಮು ಕಾಲಿಂಗ್ ಬೆಲ್
ಇದ್ದ ಹಾಗೆ
30. ನಂಗೇನು ನಾಯಿಗಳನ್ನು ಕಂಡ್ರೆ
ಪ್ರೀತಿನಾ ಸ್ವಾಮಿ
ಈ – ವಿಭಾಗ
1. ಮೂರು
ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X3=12
31.ರಕ್ಷಿಸಬೇಕಾದವರೇ ಭಕ್ಷಕರಾದರೆ
ಒದಗುವ ವಿಘಟನೆಯನ್ನು ಬಸವಣ್ಣನವರು ಹೇಗೆ ಚಿತ್ರಿಸಿದ್ದಾರೆ?
32. ತನಗೊದಗಿದ ಸಂಕಟವನ್ನು
ಹೇಳಿಕೊಳ್ಳುವ ದ್ರೌಪದಿಯ ಸ್ವಗತದ ನುಡಿಗಳು ಯಾವುವು?
33.ಬೆಳಗು ಜಾವಕವನದ ಮೂಲಕ ಕವಿ ಬೇಂದ್ರೆ
ಹೇಳಿರುವ ವಿಚಾರಗಳಾವುವು?
34.ಮುಂಬೈ ಜಾತಕದಲ್ಲಿ ಮಕ್ಕಳ ಬಾಲ್ಯದ
ಚಿತ್ರಣ ಹೇಗೆ ನಿರೂಪಿತವಾಗಿದೆ?
2. ಎರಡು
ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X2=8
35.ಕನ್ನಡಿಗರೆನಿಸಿಕೊಳ್ಳಲು ಯಾವ
ಯೋಗ್ಯತೆಯ ಪ್ರಶ್ನೆಗಳು ನಮ್ಮನ್ನು ಚುಚ್ಚಬೇಕು ವಿವರಿಸಿ?
36.ಕಲಾಂ ಅವರು ಯಾವಾಗಲೂ ಸಾಧ್ಯತೆಯನ್ನು
ಅರಸುವ ಆಶಾಜೀವಿ ಹೇಗೆ ವಿವರಿಸಿ?
37. ಎಂತಹ ತಿರುಳ್ಗನ್ನಡದಲ್ಲಿ
ಕಥೆಯನ್ನು ಹೇಳುವುದಾಗಿ ಮುದ್ದಣ ಹೇಳುವನು?
3. ಎರಡು
ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X2=8
38. ನಿರೂಪಕರು ಕೊಡಲಿ ವಸೂಲಿ ಮಾಡಲು
ಹೋಗಲಿಲ್ಲವೇಕೆ ವಿವರಿಸಿ?
39. ಎಲ್ಲರ ನಿರೀಕ್ಷೆ ಸುಳ್ಳಾಗುವಂತೆ
ಕೃಷ್ಣೇಗೌಡರು ಆನೆಯನ್ನು ಹೇಗೆ ಸಾಕಿದರು?
40.ಆನೆಯು ಬಾಯಿಲ್ಲದ ಜನರ
ಸಂಕೇತವಾಗಿರುವುದನ್ನು ವಿಶ್ಲೇಷಿಸಿ,
ಉ – ವಿಭಾಗ
1. ಒಂದು
ಪದ್ಯಭಾಗದ ಭಾವಾರ್ಥ ಬರೆಯಿರಿ. 5X1=5
41. ಕದಡಿದ ಸಲಿಲಂ ತಿಳಿವಂ
ದದೆ
ತನ್ನಿಂ ತಾನೆ ತಿಳಿದ ದಶವದನಂಗಾ
ದುದು
ವೈರಾಗ್ಯಂ ಸೀತೆಯೊ
ಳುದಾತ್ತನೊಳ್
ಪುಟ್ಟದಲ್ತೆ ನೀಲಿರಾಗಂ
42. ಊರ ಹಂದಿಗೆ ಷಡ್ರಸಾನ್ನವನಿಕ್ಕಲು
ನಾರುವ
ದುರ್ಗಂಧ ಬಿಡಬಲ್ಲುದೆ
ಘೋರ
ಪಾಪಿಗೆ ತತ್ವಜ್ಞಾನವ ಪೇಳಲು
ಕ್ರೂರ
ಕರ್ಮವ ಬಿಟ್ಟು ಸುಜನನಾಗುವನೆ
2. ಆರು
ಪ್ರಶ್ನೆಗಳಿಗೆ ಸೂಚನೆಗೆ ಅನುಗುಣವಾಗಿ ಉತ್ತರಿಸಿ. 2X6=12
43. ಪದಗಳ ಅರ್ಥ ಬರೆಯಿರಿ : 1. ಸ್ವಾದ , 2. ಪಂಕ
44. ಈ ಪದಗಳ ನಾನಾರ್ಥ ಬರೆಯಿರಿ : 1. ಬಗೆ , 2. ರಾಗ
45. ತತ್ಸಮ ತದ್ಭವಗಳನ್ನು ಬರೆಯಿರಿ : 1. ಶ್ರೀ , 2. ಮನುಷ್ಯ
46. ಈ ಪದಗಳ ವಿಭಕ್ತಿಪ್ರತ್ಯಯಗಳನ್ನು
ಗುರುತಿಸಿ : 1. ಆಸ್ಪತ್ರೆಗೆ , 2. ಮನೆಯಲ್ಲಿ
47. ಈ ನುಡಿಗಟ್ಟುಗಳನ್ನು ವಾಕ್ಯದಲ್ಲಿ
ಬಳಸಿರಿ : 1.
ತಲೆಬಾಗು
, 2.
ಕಣ್ಣು
ಕೆಂಪಾಗು
48.ಈ ಪದಗಳಲ್ಲಿರುವ ಗುಣವಾಚಕಗಳನ್ನು
ಗುರುತಿಸಿ : 1.
ನಳಿನಾನನೆ
, 2.
ದೊಡ್ಡಮರ
49. ಈ ಪದಗಳ ಕಾಲರೂಪವನ್ನು ಬರೆಯಿರಿ. :
ತಿಕ್ಕುವೆನು , ಬಂದನು
3. ಪ್ರಬಂಧ
ರಚನೆ : ಒಂದನ್ನು ಕುರಿತು ಪ್ರಬಂಧ ಬರೆಯಿರಿ 5X1=5
50.
ತ್ಯಾಜ್ಯವಸ್ತುಗಳ
ಮರುಬಳಕೆ ಅಗತ್ಯ
51. ಮಾತೃಭಾಷೆಯಲ್ಲಿ ಶಿಕ್ಷಣದ ಮಹತ್ವ
4. ಪತ್ರಲೇಖನ
: ಯಾವುದಾದರೂ ಒಂದು ಪತ್ರ 4X1=4
52. ನಿಮ್ಮ ಕನಸನ್ನು
ಸ್ನೇಹಿತನೊಂದಿಗೆ ಹಂಚಿಕೊಳ್ಳುವ ಬಗೆಗೆ ಒಂದು ಪತ್ರ ಬರೆಯಿರಿ.
53. ಬ್ಯಾಂಕಿನಲ್ಲಿ ನಿಮ್ಮ ಹೆಸರಿನಲ್ಲಿ
ಉಳಿತಾಯ ಖಾತೆ ತೆರೆಯುವಂತೆ ಬ್ಯಾಂಕಿನ ವ್ಯವಸ್ಥಾಪಕರಿಗೊಂದು ಪತ್ರ ಬರೆಯಿರಿ.
5. ಈ ಕೆಳಗಿನ
ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ. 4X1=4
54. ತುಂಬಿದ ಕೊಡ ತುಳುಕುವುದಿಲ್ಲ
55. ಹಣಕ್ಕಿಂತ ಗುಣ ಮುಖ್ಯ
******
ಮಾದರಿ ಪ್ರಶ್ನೆಪತ್ರಿಕೆ
1. ಒಂದುವಾಕ್ಯದಲ್ಲಿ ಉತ್ತರಿಸಿ
: 10X1=10
1. ಮಯತನೂಜೆ ಎಂದರೆ ಯಾರು?
2. ಬಸವಣ್ಣನವರ ವಚನಗಳ ಅಂಕಿತ ಯಾವುದು?
3.ರಾಜಸಭೆಯೊಳಗೆ ದ್ರೌಪದಿಯನ್ನು
ಒದೆದವರು ಯಾರು?
4. ಜಾಲಿಯಮರದಂತೆ ಇರುವವರು ಯಾರು?
5. ಬಸಲಿಂಗ ಡಾ. ತಿಮ್ಮಪ್ಪನವರಿಗೆ
ಏನೆಂದು ಸುಳ್ಳು ಹೇಳಿದನು?
6. ಮನುಕುಲದ ಪತನಕ್ಕೆ ಕಾರಣ ಯಾವುದು?
7.
ಕಲಾಂ
ಅವರ ಕ್ರಿಯಾಶೀಲತೆಗೆ ಸಾಕ್ಷಿ ಯಾವುದು?
8. ಆನೆಶಾಸ್ತ್ರದವರು ಏನೆಂದು ಭವಿಷ್ಯ
ನುಡಿದಿದ್ದರು?
9. ಆನೆಯ ಮಾಹುತನ ಹೆಸರೇನು?
10. ನಾಗರಾಜ ಕೋವಿ ಹಿಡಿದು ಎಲ್ಲಿ
ಕುಳಿತಿದ್ದ?
ಆ – ವಿಭಾಗ
1. ನಾಲ್ಕು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ 2X4=8
11. ಶಿವಪಥವನ್ನು ಅರಿಯದವನನ್ನು ಹೇಗೆ
ವಿಡಂಬಿಸಲಾಗಿದೆ?
12.ಸೋದರರ ಬಗ್ಗೆ ಭೀಮನು ವ್ಯಕ್ತಪಡಿಸಿದ
ಅಭಿಪ್ರಾಯ ಯಾವುದು?
13.ಯಾರಿಗೆ ತತ್ವಜ್ಞಾನ ಹೇಳಿ ಪ್ರಯೋಜನ
ವಿಲ್ಲ?
14. ಮುದುಕ ಏನೆಂದು ಗೋಗರೆಯುತ್ತಾನೆ?
15. ಧನ ಮತ್ತು ಸುತನ ವಿಷಯದಲ್ಲಿ
ಸೋಮನಾಥನ ಅಭಿಪ್ರಾಯವೇನು?
2. ಮೂರು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ 2X3=6
16.ಕೊನೆಯಲ್ಲಿ ಬಸಲಿಂಗನಿಗೆ ಏನೆಂದು ನಿಶ್ಚಿತವಾಯಿತು?
17. ಕನ್ನಡದ ಸಮಸ್ಯೆಗಳು ಎಲ್ಲಿಯವರೆಗೆ
ಇದ್ದೇ ಇರುತ್ತವೆ?
18. ಸುದ್ದಿಯ ಸೂರಪ್ಪ ಗೊಂಬೆಯನ್ನು
ಹೇಗೆ ವರ್ಣಿಸುತ್ತಾನೆ?
19.ಕತೆಯನ್ನು ಯಾವ ಯಾವ ರಸಗಳಲ್ಲಿ
ಹೇಳಲಿ ಎಂದು ಮುದ್ದಣ ಕೇಳಿದನು?
3. ಮೂರು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ
2X3=6
20. ಕೃಷ್ಣೇಗೌಡನ ಆನೆ ಹುಟ್ಟಿಬೆಳೆದ
ಬಗೆ ಹೇಗೆ?
21.ಆನೆ ಸಾಕುವುದರ ಬಗ್ಗೆ ಜನರ ನಂಬಿಕೆ
ಏನಾಗಿತ್ತು?
22.ಕಾಡಪ್ಪ ಶೆಟ್ಟರು ಯಾವ ವರ್ತಮಾನ
ಕೊಟ್ಟರು?
23. ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್
ಕೃಷ್ಣರ ಸಾವಿಗೆ ಕಾರಣವೇನು?
ಇ- ವಿಭಾಗ
1. ಎರಡನ್ನು
ಕುರಿತು ಸಂದರ್ಭ ಸೂಚಿಸಿ ವಿವರಿಸಿ. 2X3=6
24. ಮಾನಿನಿಗಿನಿತು ದುಃಖಮಂ
ಪುಟ್ಟಿಸಿದೆ
25.ಕಲಿಭೀಮನೆ ಮಿಡುಕುಳ್ಳ ಗಂಡನು
26. ಮರಣ ಬಂದೀತು ಕ್ಷಣವು ಉರುಳಿ
2. ಒಂದನ್ನು
ಕುರಿತು ಸಂದರ್ಭ ಸೂಚಿಸಿ ವಿವರಿಸಿ. 3X1=3
27. ಆಪರೇಷನ್ ಆಗಬೇಕು ಪರವಾಗಿಲ್ಲವಾ
28. ಮಗುವೇ ಮೊದಲ ವಿಜ್ಞಾನಿ
3. ಒಂದನ್ನು
ಕುರಿತು ಸಂದರ್ಭ ಸೂಚಿಸಿ ವಿವರಿಸಿ. 3X1=3
29. ನಮ್ಮಕಡೆ ಕೆಮ್ಮು ಕಾಲಿಂಗ್ ಬೆಲ್
ಇದ್ದ ಹಾಗೆ
30. ಕೋವಿ ಸಿಕ್ಕಿದೆ ಆದರೆ ಹೆಣ
ಸಿಗಲಿಲ್ಲ
ಈ – ವಿಭಾಗ
1. ಮೂರು
ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X3=12
31.
ನಿರ್ಮಲ ಚಿತ್ತದ ಅಗತ್ಯವನ್ನು ಸೋಮನಾಥ ಹೇಗೆ
ನಿರೂಪಿಸಿದ್ದಾನೆ?
32. ಗರತಿ ತವರಿಗೆ ಏನೆಂದು
ಹರಸುತ್ತಾಳೆ?
33.
ಶಿಲುಬೆಗೇರಿದ
ಜೀಸಸ್ ನ ದೇಹ ಏನನ್ನು ಹೇಳುವಂತಿದೆ?
34. ವೃದ್ಧರ ತವಕ ತಲ್ಲಣಗಳನ್ನು
ಕವಯಿತ್ರಿ ಹೇಗೆ ಚಿತ್ರಿಸಿದ್ದಾರೆ?
2. ಎರಡು
ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X2=8
35.
ಬಸಲಿಂಗ
ಎದುರಿಸುತ್ತಿದ್ದ ಸಮಸ್ಯೆಗಳಾವುವು?
36.ಕನ್ನಡಿಗರೆನಿಸಿಕೊಳ್ಳಲು ಯಾವ ಯಾವ
ಯೋಗ್ಯತೆಯ ಪ್ರಶ್ನೆಗಳು ನಮ್ಮನ್ನು ಚುಚ್ಚಬೇಕು? ವಿವರಿಸಿ.
37. ಮುದ್ದಣ ಅರಮನೆಯಿಂದ ಬಂದ ಪರಿಯನ್ನು
ಮನೋರಮೆಯ ಉಪಚಾರವನ್ನು ವಿವರಿಸಿ.
3. ಎರಡು
ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X2=8
38.
ದುರ್ಗಪ್ಪ
ನಿರೂಪಕರ ಬಳಿ ಬಂದ ಸಂದರ್ಭವನ್ನು ವಿವರಿಸಿ.
39. ಕಾಡಾನೆಗಳ ಹಾವಳಿ ನಿರೂಪಕರ
ಅನುಭವಕ್ಕೆ ಬಂದುದು ಹೇಗೆ?
40.
ತನ್ನ
ಆನೆಬಗ್ಗೆ ಕೃಷ್ಣೇಗೌಡರಿಗೆ ಬೇಸರ ಮೂಡಲು ಕಾರಣಗಳೇನು?
ಉ – ವಿಭಾಗ
1. ಒಂದು
ಪದ್ಯಭಾಗದ ಭಾವಾರ್ಥ ಬರೆಯಿರಿ. 5X1=5
41. ರಾವಣನ ರೂಪು ಸೀತಾ
ದೇವಿಗೆ
ತೃಣಕ್ಕಲ್ಪಮಾಯ್ತು ಪತಿಭಕ್ತಿಯೊಳಾ
ರೀವನಿತೆಯ
ತೆರದಿ ಸ
ದ್ಭಾವಮನೊಳಕೊಂಡ
ಪುಣ್ಯವತಿಯರ್
42. ಶಿಲುಬೆಯೇರಿದ್ದಾನೆ ಜೀಸಸ್
ಗೋಡೆಯಲ್ಲಿ
ಬಾಗಿದ
ಶಿರ
ಕುತ್ತಿಗೆಯಲಿ
ಉಬ್ಬಿದೊಂದು ನರ,
ಯಾತನೆಗೋ
ನಲ್ವಾತನೆ ನುಡಿವ ಮುಖ ಮುದ್ರೆ
ತೆರೆದೆದೆ
ಎನ್ನುವಂತಿದೆ;
ಕೊಲೆಗಡುಕ
ಬರಬ್ಬನ ವಕಾಲತ್ತು ನಡೆಸಿದವರೆ,
ಎಡಕ್ಕೊಬ್ಬ
ಬಲಕ್ಕೊಬ್ಬ ಕಳ್ಳನ ತೂಗಿ ಸನ್ಮಾನಿಸಿದವರೆ,
ಮನ್ನಿಸಲಿ
ನಿಮ್ಮನ್ನ ಆ ದೇವರೇ!
2. ಆರು
ಪ್ರಶ್ನೆಗಳಿಗೆ ಸೂಚನೆಗೆ ಅನುಗುಣವಾಗಿ ಉತ್ತರಿಸಿ. 2X6=12
43. ಪದಗಳ ಅರ್ಥ ಬರೆಯಿರಿ : 1. ಕುಜನ , 2. ಇನ
44. ಈ ಪದಗಳ ಸಮಾನಾರ್ಥ ಬರೆಯಿರಿ : 1. ಸಲಿಲ, 2.ನಾರಿ
45. ತತ್ಸಮ ತದ್ಭವಗಳನ್ನು ಬರೆಯಿರಿ : 1.ಯಶ 2. ಮುಖ
46. ಈ ಪದಗಳ ಕಾಲಸೂಚಕಗಳನ್ನು ಬರೆಯಿರಿ
: 1.ಬಂದರು, 2.ಹೋಗುವಳು
47. ಈ ನುಡಿಗಟ್ಟುಗಳನ್ನು ವಾಕ್ಯದಲ್ಲಿ
ಬಳಸಿರಿ : 1.ಕಾಲುಕೀಳು, 2. ಎರಡುಬಗೆ
48.ಈ ಪದಗಳಲ್ಲಿರುವ ಗುಣವಾಚಕಗಳನ್ನು
ಗುರುತಿಸಿ : 1.
ಬಂಗಾರದಬಳೆ, 2. ಹಿತವಚನ
49. ಈ ದ್ವಿರುಕ್ತಿಗಳನ್ನು ವಾಕ್ಯದಲ್ಲಿ
ಬರೆಯಿರಿ. : 1.
ಬೇಗಬೇಗ 2,ಕುಣಿಕುಣಿಸು
3. ಪ್ರಬಂಧ
ರಚನೆ : ಒಂದನ್ನು ಕುರಿತು ಪ್ರಬಂಧ ಬರೆಯಿರಿ 5X1=5
50. ಸಾಮಾಜಿಕ ಸಮಸ್ಯೆಗಳು
51.ಕನ್ನಡ ಭಾಷೆಯ ಸರ್ವಾಗೀಣ
ಬೆಳವಣಿಗೆಗೆ ಇರುವ ಅಡ್ಡಿ-ಆತಂಕಗಳು.
4. ಪತ್ರಲೇಖನ : ಯಾವುದಾದರೂ ಒಂದು ಪತ್ರ 4X1=4
52. ಪರೀಕ್ಷಾ
ಸಿದ್ಧತೆಯಬಗ್ಗೆ ತಿಳಿಸುತ್ತಾ ನಿಮ್ಮ ಗೆಳೆಯ/ಗೆಳತಿಗೆ ಒಂದು ಪತ್ರ ಬರೆಯಿರಿ.
53. ಕುಡಿಯುವ ನೀರಿನ
ವ್ಯವಸ್ಥೆಮಾಡುವಂತೆ ಜಲಮಂಡಲಿ ಅಧಿಕಾರಿಗಳಿಗೆ ಪತ್ರ ಬರೆಯಿರಿ.
5. ಈ ಕೆಳಗಿನ
ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ. 4X1=4
54. ಕಷ್ಟಪಟ್ಟರೆ ಸುಖವುಂಟು
55. ಕೂತು ತಿನ್ನುವವರಿಗೆ ಕುಡಿಕೆ
ಹೊನ್ನು ಸಾಲದು.
******
MODEL
QUESTION PAPER
1. ಒಂದುವಾಕ್ಯದಲ್ಲಿ ಉತ್ತರಿಸಿ
: 10X1=10
1. ಸೀತೆ ರಾವಣನನ್ನು ಏನೆಂದು
ಬೇಡಿಕೊಂಡಳು?
2. ಬಸವಣ್ಣನವರ ವಚನಗಳ ಅಂಕಿತ ಯಾವುದು?
3. ಪಾಂಚಾಲ ನಂದನೆ ಯಾರು?
4. ನಿಷ್ಪ್ರಯೋಜಕನಾದ ಮಗ ಯಾರು?
5. ಬಸಲಿಂಗನಿಗೆ ಕಾಣಿಸಿಕೊಂಡ ತೊಂದರೆ ಯಾವುದು?
6. ವಾಲ್ ಪರೈಗೆ ಬಂದ ಬ್ರಿಟೀಷ್ ಪ್ರಜೆ
ಯಾರು?
7. ಕಿಡ್ನಿ ಸ್ಟೋನ್ ಬಗ್ಗೆ ತಿಳಿಯಲು
ಲೇಖಕಿಯು ಯಾರನ್ನು ಭೇಟಿಮಾಡಿದರು?
8. ನಿರೂಪಕರ ಇಕಾಲಜಿಸ್ಟ್ ಗೆಳೆಯ
ಯಾರು?
9. ನಿರೂಪಕರಿಗೆ ಇದ್ದ ಕೆಟ್ಟ ಕುತೂಹಲ
ಯಾವುದು?
10. ಟೆಲಿಫೋನ್ ಕಂಬದ ಮೇಲೆ ಮೃತನಾದ
ಲೈನ್ ಮೆನ್ ಯಾರು?
ಆ – ವಿಭಾಗ
1. ನಾಲ್ಕು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ 2X4=8
11. ಧನ ಮತ್ತು ಸುತನ ವಿಷಯದಲ್ಲಿ
ಸೋಮನಾಥನ ಅಭಿಪ್ರಾಯವೇನು?
12.ದುರ್ಜನರ ಕಾರ್ಯ ಯಾವಬಗೆಯದು?
13.ಹಡೆದ ತಂದೆ ತಾಯಿಯರ ಮಹತ್ವವನ್ನು
ತಿಳಿಸಿರಿ.
14.ಬೆಳಕು ಬೇಟೆಗಾರ ಹೇಗೆ ಬರುತ್ತಾನೆ?
15. ತಂದೆ ಮಗುವಿಗೆ ಕಾಣಿಸಿಕೊಳ್ಳುವ
ಬಗೆ ಹೇಗೆ?
2. ಮೂರು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ 2X3=6
16. ತ್ರಿಭಾಷಾ ಸೂತ್ರದ ಬಳಕೆ
ಹೇಗಿರಬೇಕು?
17. ಮುಂಜಾನೆ ಚಿನ್ನಮ್ಮ ಯಾವ
ಕೆಲಸದಲ್ಲಿ ತೊಡಗಿದ್ದಳು?
18. ಕಲಾಂ ಅವರ ಬದುಕಿನ ಮಂತ್ರ ಯಾವುದು?
19. ಯಾವ ಕಥೆ ಹೇಳಬೇಕೆಂದು ಮನೋರಮೆ
ಕೇಳಿದಳು?
3. ಮೂರು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ
2X3=6
20. ಡ್ರೈವರ್ ತಲೆ ಜಜ್ಜಿ ಹೋದದ್ದು
ಹೇಗೆ? ಅದಕ್ಕೆ ಆನೆ ಕಾರಣವೇ?
21. ನಾಗರಾಜ ದುರ್ಗಪ್ಪನ ಮೇಲೆ ಏನೆಂದು
ರೇಗಿದನು?
22. ಕಾಡಾನೆಗಳ ಹಾವಳಿಗೆ ಪ್ರಕಾಶ್
ನೀಡಿದ ಕಾರಣಗಳೇನು?
23. ಸೊರಗಿದ್ದ ಆನೆಯನ್ನು ಕೃಷ್ಣೇಗೌಡ
ಹೇಗೆ ಸಾಕಿದನು?
ಇ- ವಿಭಾಗ
1. ಎರಡನ್ನು
ಕುರಿತು ಸಂದರ್ಭ ಸೂಚಿಸಿ ವಿವರಿಸಿ. 2X3=6
24. ಕೃತಾಂತ ಜಿಹ್ವೆ ಪೊಡಕರಿಸುವ ವೋಲ್
25. ಮನ್ನಿಸಲಿ ನಿಮ್ಮನ್ನ ಆ ದೇವರೇ!
26. ಮಾತೇ ಮರೆತು ಹೋಗಿದೆ ಕಣೇ
2. ಒಂದನ್ನು
ಕುರಿತು ಸಂದರ್ಭ ಸೂಚಿಸಿ ವಿವರಿಸಿ. 3X1=3
27. ಕನ್ನಡಿಗರು ಮೊದಲು
ಕನ್ನಡಿಗರಾಗಬೇಕು.
28. ಮಗುವೇ ಮೊದಲ ವಿಜ್ಞಾನಿ
3. ಒಂದನ್ನು
ಕುರಿತು ಸಂದರ್ಭ ಸೂಚಿಸಿ ವಿವರಿಸಿ. 3X1=3
29. ಹೊರಗಡೆಯಿಂದ ಎಕ್ಸ್ ಪೋರ್ಟ್ ಆದವು
30. ಆನೆ ಬೇಲಿ ದಾಟಿ ಹೋಯ್ತು ಸಾರ್
ಈ – ವಿಭಾಗ
1. ಮೂರು
ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X3=12
31.
ದ್ರೌಪದಿ
ಅವಮಾನಕ್ಕೆ ಒಳಗಾದ ಮೂರು ಪ್ರಸಂಗಗಳನ್ನು ವಿವರಿಸಿ.
32. ವೀರ,ಮಂತ್ರಿ, ರಾಜ, ಯೋಗಿಗಳಿಗೆ
ಇರಬೇಕಾದ ಅರ್ಹತೆಗಳೇನು?
33.
ಬೆಳಗು
ಜಾವ ಕವನದ ಮೂಲಕ ವರಕವಿ ಬೇಂದ್ರೆಯವರು ಹೇಳಿರುವ ವಿಚಾರಗಳಾವುವು?
34. ಮುಂಬೈ ಜಾತಕ ಕವಿತೆಯಲ್ಲಿ ಮಕ್ಕಳ
ಬಾಲ್ಯದ ಚಿತ್ರಣ ಹೇಗೆ ನಿರೂಪಿತವಾಗಿದೆ?
2. ಎರಡು
ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X2=8
35.
ಕಮಲಾ
ಮೇಡಂಗೆ ಮೂತ್ರಪಿಂಡದಲ್ಲಿ ಕಲ್ಲು ಮೂಡಿದ್ದು ಏಕೆ?
36. ಬೆಳ್ಳಿಲೋಟ ಕಂಡಾಗ ಧಣಿಯಲ್ಲಿ
ಆತಂಕ,ಗಾಬರಿ,ಭಯ ಉಂಟಾಗಲು ಕಾರಣವೇನು?
37. ಹಳ್ಳಿಯ ಚಹಾದಂಗಡಿಯನ್ನು ಪರಿಚಯಿಸಿ.
3. ಎರಡು
ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X2=8
38.
ಲೈನ್
ಮೆನ್ ತಿಪ್ಪಣ್ಣನ ಸಾವಿನ ಸಂದರ್ಭವನ್ನು ವಿವರಿಸಿ.
39. ನಿರೂಪಕರು ಕೊಡಲಿಯನ್ನು ವಸೂಲಿ
ಮಾಡಲು ಹೋಗಲಿಲ್ಲವೇಕೆ?
40. ಕೃಷ್ಣೇಗೌಡರಿಗೆ ಆನೆಯ ಬಗ್ಗೆ ಬೇಸರ ಮೂಡಲು
ಕಾರಣಗಳೇನು?
ಉ – ವಿಭಾಗ
1. ಒಂದು
ಪದ್ಯಭಾಗದ ಭಾವಾರ್ಥ ಬರೆಯಿರಿ. 5X1=5
41. ಇವರಂ ಪ್ರಾಣಪ್ರಿಯರಂ
ನೆವಮಿಲ್ಲದೆ
ಕರ್ಮವಶಮೆ ನೆವಮೆನೆ ಕಂದ
ರ್ಪವಿಮೋಹದಿಂದಗಲ್ಚಿದೆ
ನವಿವೇಕಿಯೆನೆನ್ನ
ಕುಲದ ಪೆಂಪೞಿವಿನೆಗಂ
42. ಅರೆಯಂ ಸೀಳುವೊಡಾನೆ ಮೆಟ್ಟಲಹುದೆ
ಚಾಣಂಗಳಿಂದಲ್ಲದೆ |
ಕಿರುದಾಗಿರ್ದೊಡೇನುಪಾಯಪರನೋರ್ವಂ
ಕೋಟಿಗೀಡಕ್ಕು ಹೆ
ಮ್ಮರನಿರ್ದೇನದರಿಂದಲೆತ್ತಬಹುದೇ
ಬಲ್ಭಾರಮಂ ಸನ್ನೆ ಸಾ
ವಿರ
ಕಾಲಾಳಿನ ಸತ್ವವೈ ಹರಹರಾ ಶ್ರೀ ಚನ್ನ ಸೋಮೇಶ್ವರಾ ||
2. ಆರು
ಪ್ರಶ್ನೆಗಳಿಗೆ ಸೂಚನೆಗೆ ಅನುಗುಣವಾಗಿ ಉತ್ತರಿಸಿ. 2X6=12
43. ಪದಗಳ ಅರ್ಥ ಬರೆಯಿರಿ : 1. , 2. ಚಿಗುರು
44. ಈ ಪದಗಳ ನಾನಾರ್ಥ ಬರೆಯಿರಿ : 1. ರಾಗ , 2.
45. ತತ್ಸಮ ತದ್ಭವಗಳನ್ನು ಬರೆಯಿರಿ : 1 ಕಾರ್ಯ. 2. ಕಾವ್ಯ
46. ಈ ಪದಗಳ ವಿಭಕ್ತಿಪ್ರತ್ಯಯಗಳನ್ನು
ಗುರುತಿಸಿ : 1.ಮರದಲ್ಲಿ, 2. ಮನೆಯಿಂದ
47. ಈ ನುಡಿಗಟ್ಟುಗಳನ್ನು ವಾಕ್ಯದಲ್ಲಿ
ಬಳಸಿರಿ : 1. ಕಣ್ಣುಕೆಂಪಗಾಗು, 2. ಮೊರೆಯಿಡು
48.ಈ ಪದಗಳಲ್ಲಿರುವ ಗುಣವಾಚಕಗಳನ್ನು
ಗುರುತಿಸಿ : 1.ಹೆಮ್ಮರ , 2. ಕಡುಪಾಪ
49. ಈ ಪದಗಳ ಧಾತು ಗುರುತಿಸಿ ಬರೆಯಿರಿ.
: 1. ಮಾಡುವನು 2, ಬಂದಳು
3. ಪ್ರಬಂಧ
ರಚನೆ : ಒಂದನ್ನು ಕುರಿತು ಪ್ರಬಂಧ ಬರೆಯಿರಿ 5X1=5
50.
ನನ್ನ ಮೆಚ್ಚಿನ ವ್ಯಕ್ತಿ,
51 ಮಾತೃಭಾಷಾ ಶಿಕ್ಷಣದ ಅಗತ್ಯತೆ.
4. ಪತ್ರಲೇಖನ : ಯಾವುದಾದರೂ ಒಂದು ಪತ್ರ 4X1=4
52. ನಿಮ್ಮ ಕಾಲೇಜಿನಲ್ಲಿ ಏರ್ಪಡಿಸಲಾಗಿರುವ ವಿಜ್ಞಾನಪ್ರದರ್ಶನಕ್ಕೆ ಬರುವಂತೆ
ನಿಮ್ಮ ಗೆಳೆಯನಿಗೊಂದು ಪತ್ರಬರೆಯಿರಿ..
53. ನಿಮ್ಮ ಬಡಾವಣೆಯಲ್ಲಿ
ಆರೋಗ್ಯ ಕೇಂದ್ರ ಸ್ಥಾಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಆರೋಗ್ಯ ಇಲಾಖೆ ಬೆಂಗಳೂರು ಇವರಿಗೆ ಪತ್ರ
ಬರೆಯಿರಿ.
5. ಈ ಕೆಳಗಿನ
ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ. 4X1=4
54. ಅರ್ಥವಿಲ್ಲದ ಓದು ವ್ಯರ್ಥ
55. ಕಾಸಿದ್ದರೆ ಕೈಲಾಸ
****
Model
question paper
1. ಒಂದುವಾಕ್ಯದಲ್ಲಿ ಉತ್ತರಿಸಿ
: 10X1=10
1. ಸೀತೆಯನ್ನು ರಾವಣ ಎಲ್ಲಿ
ಇರಿಸಿದ್ದನು?
2. ಜಾಲಿಯ ರಸಾಸ್ವಾದ ಹೇಗಿರುತ್ತದೆ?
3. ಮುದುಕಿ ಯಾವ ದೇವರಿಗೆ ಹರಕೆ
ಹೊತ್ತಳು?
4. ಒಮ್ಮೆ ನಗುತ್ತೇವೆ ಕವಿತೆಯಲ್ಲಿ
ಕವಿಯತ್ರಿಯು ಯಾರಲ್ಲಿ ಮೊರಯಿಡುತ್ತಾರೆ?
5. ಕನ್ನಡದಲ್ಲಿಯೇ ಕಲಿತು ಶ್ರೇಷ್ಠ
ವಿಜ್ಞಾನಿಯಾದವರು ಯಾರು?
6.ಧಣಿಗಳ ಬೆಳ್ಳಿಲೋಟ ಕಥೆಯ ಧಣಿಗಳ
ಹೆಸರೇನು?
7.ವಸುಧೆಗೆ ಒಡೆಯನಂತೆ ಇರುವವನು ಯಾರು?
8.ದುರ್ಗಪ್ಪನ ಪ್ರಕಾರ ತರ್ಲೆ
ಡಿಪಾರ್ಟ್ಮೆಂಟ್ ಯಾವುದು?
9.ಪೋಸ್ಟ್ ಮೆನ್ ಜಬ್ಬಾರನಿಗೆ ಒದಗಿದ
ತೊಂದರೆ ಏನು?
10. ರಮೇಶ್ ಬಾಬು ಯಾರು?
ಆ – ವಿಭಾಗ
1. ನಾಲ್ಕು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ 2X4=8
11.ಮೂರು ಲೋಕದ ಗಂಡರೈವರು. ಅವರು ಯಾರು?
ಹೆಸರಿಸಿ.
12.ರಾಜ ಮಂತ್ರಿಗಳಿಗೆ ಯಾವ ಅರ್ಹತೆಗಳು
ಇರಬೇಕೆಂದು ಸೋಮನಾಥ ಹೇಳಿದ್ದಾನೆ?
13. ಮುಂಬೈ ಜಾತಕ ಕವಿತೆಯಲ್ಲಿ ಕವಿಯ ಪ್ರಕಾರ ಮಗು ಕಲಿತ ವಿದ್ಯೆಗಳು ಯಾವುವು
14.ಶಿಲುಬೆಗೇರಿದ ಏಸುವಿನ ದೇಹ ಯಾರಿಗೆ
ಏನನ್ನು ಹೇಳುವಂತೆ ಇದೆ?
15.ಎಣ್ಣೆ ತೀರಿದ ದೀಪಗಳು ಏನನ್ನು
ಸೂಚಿಸುತ್ತವೆ?
2. ಮೂರು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ 2X3=6
16.ಕಣ್ಣನ್ನು ಪರೀಕ್ಷಿಸಿದ ಡಾಕ್ಟರ್
ತಿಮ್ಮಪ್ಪ ಬಸಲಿಂಗನಿಗೆ ಏನು ಹೇಳಿದರು?
17.ಸಿಂಹಬಾಲದ ಕೋತಿಗಳಿಗೆ ಒದಗಿದ ತೊಂದರೆ
ಏನು?
18. ತಾನು ಅದೃಷ್ಟವಂತೆ ಎಂದು ಲೇಖಕಿ
ಭಾವಿಸಲು ಕಾರಣವೇನು?
19.ಕಲಾಂ ಮೇಷ್ಟ್ರು ಹೇಳಿದ ಯಶಸ್ಸಿನ
ಪಂಚಾಕ್ಷರಿ ಮಂತ್ರ ಯಾವುದು?
3. ಮೂರು
ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ
2X3=6
20.ಆನೆ ಸಾಕುವುದರ ಬಗ್ಗೆ ಜನರ
ನಂಬಿಕೆಗಳು ಏನಾಗಿತ್ತು?
21.ತನ್ನ ಕೆಲಸ ಅತ್ಯಂತ ಅಪಾಯಕಾರಿ ಎಂದು
ದುರ್ಗಪ್ಪ ವಿವರಿಸಿದ್ದು ಹೇಗೆ?
22.ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್
ಕೃಷ್ಣರ ಸಾವಿಗೆ ಆನೆ ಕಾರಣವಲ್ಲ ಎಂದು ಕೃಷ್ಣೇಗೌಡರಿಗೆ ಹೇಳಲು ಆಗಲಿಲ್ಲ ಏಕೆ?
23. ಕಾಡಾನೆಗಳ ಹಾವಳಿಗೆ ಪ್ರಕಾಶ್
ನೀಡಿದ ಕಾರಣಗಳೇನು?
ಇ- ವಿಭಾಗ
1. ಎರಡನ್ನು
ಕುರಿತು ಸಂದರ್ಭ ಸೂಚಿಸಿ ವಿವರಿಸಿ. 2X3=6
24.ಅನ್ಯಲಿಂಗಗಳ ನೆನವನೆ ನಿಮ್ಮ ಭಕ್ತನು
25.ನೀನಲ್ಲದುಳಿದವರುಚಿತ ಬಾಹಿರರು
26.ಮರಣ ಬಂದೀತು ಕ್ಷಣವು ಉರುಳಿ
2. ಒಂದನ್ನು
ಕುರಿತು ಸಂದರ್ಭ ಸೂಚಿಸಿ ವಿವರಿಸಿ. 3X1=3
27. ಈ ಮುಟ್ಟುವಿಕೆ ನಾನು ಊಹಿಸದೇ
ಇದ್ದುದನ್ನು ಮಾಡಿದೆ
28.ಮೂರು ಬೇಸಿಗೆಯವರೆಗೆ ಚಿನ್ನಮ್ಮನ
ದುಡಿತಕ್ಕೆ ಪಡಿಯಿಲ್ಲ.
3. ಒಂದನ್ನು
ಕುರಿತು ಸಂದರ್ಭ ಸೂಚಿಸಿ ವಿವರಿಸಿ. 3X1=3
29. ಅದನ್ನು ಸುತ್ತಿಗೆ ಎಂದೂ
ಕರೆಯಬಹುದಿತ್ತು
30. ಹೊರಗಡೆಯಿಂದ ಎಕ್ಸ್ ಪೋರ್ಟ್
ಈ – ವಿಭಾಗ
1. ಮೂರು
ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X3=12
31.
ರಾವಣನ
ಮನಃಪರಿವರ್ತನೆಯ ಸಂದರ್ಭವನ್ನು ಕವಿ ಹೇಗೆ ಚಿತ್ರಿಸಿದ್ದಾನೆ ವಿವರಿಸಿ.
32. ತನಗೊದಗಿದ ಸಂಕಟವನ್ನು
ಹೇಳಿಕೊಳ್ಳುವ ದ್ರೌಪದಿಯ ಸ್ವಗತದ ಮಾತುಗಳಾವುವು?
33.
ಮಾನವನ
ಜೀವನ ಸಾರ್ಥಕತೆ ಎಲ್ಲಿದೆಯೆಂದು ಕವಿ ಬೇಂದ್ರೆ ಹೇಳಿದ್ದಾರೆ?
34.ಹತ್ತಿಚಿತ್ತ ಮತ್ತು ಮಾನವಜೀವನದ
ಪಯಣವನ್ನು ಕವಿ ಹೇಗೆ ಸಮೀಕರಿಸಿದ್ದಾರೆ?
2. ಎರಡು
ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X2=8
35.
ಪೋಷಕರು ಖಾಸಗೀ ಶಾಲೆಗಳ ಕಡೆ ಹೊರಳಲು ಲೇಖಕರು ಯಾವ ಯಾವ
ಕಾರಣಗಳನ್ನು ಉದಾಹರಿಸುತ್ತಾರೆ?
36. ಕಲಾಂ ಯಾವಾಗಲೂ ಸಾಧ್ಯತೆಗಳನ್ನು
ಅರಸುವ ಆಶಾ ಜೀವಿ ಹೇಗೆ ವಿವರಿಸಿ.
37. ಮುದ್ದಣ ಮನೋರಮೆಯರ ಸಂವಾದದ
ಸ್ವಾರಸ್ಯವನ್ನು ವಿವರಿಸಿ.
3. ಎರಡು
ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 4X2=8
38.
ಕೃಷ್ಣೇಗೌಡರ
ಆನೆ ಹುಟ್ಟಿ ಬೆಳೆದ ಬಗೆಯನ್ನು ವಿವರಿಸಿ. ಅದು ಪೇಟೆಯಲ್ಲಿ ಏನು ಮಾಡುತ್ತಿತ್ತು?
39. ನಿದ್ರೆ ಮಂಪರಿನಲ್ಲಿದ್ದ ಡ್ರೈವರ್
ಪರಂಧಾಮಕ್ಕೆ ಹೋದ ಸಂದರ್ಭವನ್ನು ವಿವರಿಸಿ.
40.
ನಾಗರಾಜನ
ನಿಗೂಢ ಸಾವಿನ ಬಗ್ಗೆ ಜನರ ಅಭಿಪ್ರಾಯಗಳೇನು?
ಉ – ವಿಭಾಗ
1. ಒಂದು
ಪದ್ಯಭಾಗದ ಭಾವಾರ್ಥ ಬರೆಯಿರಿ. 5X1=5
41. ರಾಮನಿನಗಲ್ಚಿ ತಂದಾ
ನೀ
ಮಾನಿನಿಗಿನಿತು ದುಃಖಮಂ ಪುಟ್ಟಿಸಿದೆಂ
ಕಾಮವ್ಯಾಮೋಹದಿನಾ
ಶಾಮುಖಮಂ
ಪುದಿಯೆ ದುರ್ಯಶಃಪಟಹರವಂ ||
42. ಹೆಣ್ಣು ಹರಿಬಕೋಸುಗವೆ ತ
ಮ್ಮಣ್ಣನಾಜ್ಞೆಯ
ಮೀರಿ ಕುಂತಿಯ
ಚಿಣ್ಣ
ಬದುಕಿದನೆಂದು ನುಡಿವರು ಕುಜನರಾದವರು |
ಅಣ್ಣನವರಿಗೆ
ದೂರುವುದು ನಾ
ವುಣ್ಣದುರಿಯಿವು
ರಾಯನಾಜ್ಞೆಯ
ಕಣ್ಣಿಯಲಿ
ಬಿಗಿವಡೆದು ಕೆಡೆದೆವು ಕಾಂತೆ ಕೇಳೆಂದ ||
2. ಆರು
ಪ್ರಶ್ನೆಗಳಿಗೆ ಸೂಚನೆಗೆ ಅನುಗುಣವಾಗಿ ಉತ್ತರಿಸಿ. 2X6=12
43. ಪದಗಳ ಅರ್ಥ ಬರೆಯಿರಿ : 1. ಪೊಲ್ಲವಾರ್ತೆ , 2. ನಲ್ಮೆ
44. ಈ ಪದಗಳ ನಾನಾರ್ಥ ಬರೆಯಿರಿ : 1. ದೊರೆ, 2.ಏರಿ
45. ತತ್ಸಮ ತದ್ಭವಗಳನ್ನು ಬರೆಯಿರಿ : 1. ಅಜ್ಜ 2. ಕಾವ್ಯ
46. ಈ ಪದಗಳ ವಿಭಕ್ತಿಪ್ರತ್ಯಯಗಳನ್ನು
ಗುರುತಿಸಿ : 1. ಗದ್ಯದೊಳ್, 2. ರಾಮನಿಂ
47. ಈ ನುಡಿಗಟ್ಟುಗಳನ್ನು ವಾಕ್ಯದಲ್ಲಿ
ಬಳಸಿರಿ : 1.ಕೈಕೊಡು, 2. ಕೈಯೊಡ್ಡು
48.ಈ ಪದಗಳಲ್ಲಿರುವ ಗುಣವಾಚಕಗಳನ್ನು
ಗುರುತಿಸಿ : 1.
ಹೆಮ್ಮರ, 2.ಬೆಳ್ಳಿಲೋಟ
49. ಈ ಪದಗಳ ಧಾತು ಗುರುತಿಸಿ ಬರೆಯಿರಿ.
: 1. ಹೇಳಿದಾಗ. 2.ಬಂದರು
3. ಪ್ರಬಂಧ
ರಚನೆ : ಒಂದನ್ನು ಕುರಿತು ಪ್ರಬಂಧ ಬರೆಯಿರಿ 5X1=5
50.
ಜೈವಿಕ
ಇಂದನದ ಮಹತ್ವ
51. ಕನ್ನಡ ಭಾಷೆಯನ್ನು
ಅಭಿವೃದ್ಧಿಗೊಳಿಸುವ ಮಾರ್ಗಗಳು.
4. ಪತ್ರಲೇಖನ : ಯಾವುದಾದರೂ ಒಂದು ಪತ್ರ 4X1=4
52. ನಿಮ್ಮ ಕಾಲೇಜಿನಲ್ಲಿ
ಆಚರಿಸಿದ ನಾಡಹಬ್ಬವನ್ನು ಕುರಿತು ನಿಮ್ಮ ಗೆಳೆಯ/ಗೆಳತಿಗೆ ಒಂದು ಪತ್ರ ಬರೆಯಿರಿ.
53. ಶೈಕ್ಷಣಿಕ ಸಾಲ ಸೌಲಭ್ಯ
ಕೋರಿ ಬ್ಯಾಂಕ್ ವ್ಯವಸ್ಥಾಪಕರಿಗೆ ಒಂದು ಪತ್ರ ಬರೆಯಿರಿ.
5. ಈ ಕೆಳಗಿನ
ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ. 4X1=4
54. ತಾಳಿದವನು ಬಾಳಿಯಾನು
55. ಕೂತು ಉಂಡರೆ ಕುಡಿಕೆ ಹೊನ್ನು
ಸಾಲದು
******
No comments:
Post a Comment